
ಟ್ರಂಪ್ ತೆರಿಗೆ ನೀತಿಗೆ ಹೈರಾಣಾದ ಜಗತ್ತು, ಭಾರತದ ಷೇರುಮಾರುಕಟ್ಟೆಯಲ್ಲಿ ಭಾರಿ ಕುಸಿತ, ಬೆಲೆ ಏರಿಕೆ, ಮುಸ್ಲಿಮ್ ಮೀಸಲಾತಿ ವಿರೋಧಿಸಿ ಬಿಜೆಪಿ ಜನಾಕ್ರೋಶ, ಹಿಂದುತ್ವದ ಪಕ್ಷ ಕಟ್ತಾರ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಅಮೆರಿಕ ತೆರಿಗೆ ನೀತಿಯಿಂದ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಷೇರು ಮಾರುಕಟ್ಟೆ ಆರಂಭಗೊಂಡ ಬೆನ್ನಲ್ಲೇ ಪಾತಾಳಕ್ಕೆ ಕುಸಿದಿದೆ. ಒಂದೇ ದಿನ ಬರೋಬ್ಬರಿ 13 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ ವಿರುದ್ದ ಹಲವು ದೇಶಗಳು ಗರಂ ಆಗಿದೆ. ಇದರ ವಿರುದ್ಧ ಹೋರಾಟ ತೀವ್ರಗೊಂಡಿದೆ. ಆದರ ಷೇರುಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಏನಿದು ಟ್ರಂಪ್ ತೆರಿಗೆ ನೀತಿ?