ಅವಮಾನಿಸಿದವರ ಮಾನ ಉಳಿಸಿದ್ದ ಹೃದಯವಂತ ರತನ್: ಟಾಟಾ ಸಾಮ್ರಾಟ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದು ಹೇಗೆ?

Oct 12, 2024, 11:57 AM IST

ಬೆಂಗಳೂರು(ಅ.12):  21 ವರ್ಷಗಳಲ್ಲಿ ವಿಶ್ವವನ್ನೇ ಆವರಿಸಿತ್ತು ಅವರ ಯಶಸ್ಸು. ಅವರು ಅವಮಾನಿಸಿದವರ ಮಾನ ಉಳಿಸಿದ್ದ ಹೃದಯವಂತ.ಕೋಟಿ ಕೋಟಿ ಒಡೆಯ ಆದ್ರೂ ಅವರ ಹೆಸರು ಶ್ರೀಮಂತರ ಪಟ್ಟಿ ಸೇರಲೇ ಇಲ್ಲ. ಯಾಕೆ ಗೊತ್ತಾ? ನಿಮಗೆ ಗೊತ್ತಿಲ್ಲದೇ ಇರೋ ಸಂಗತಿಗಳನ್ನ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ. ಟಾಟಾ ಸಾಮ್ರಾಟ

ರತನ್ ಟಾಟಾ ಅಸಾಧ್ಯವನ್ನೆಲ್ಲಾ ಸಾಧಿಸಿದ್ರು. ಯಾವುದನ್ನ ಜನ ತಮ್ಮಿಂದ ಮಾಡೋಕೆ ಆಗೋದೇ ಇಲ್ಲ ಅಂತಿದ್ರೋ, ಅದನ್ನೇ ಮೊದಲಿಗೆ ಸಾಧಿಸಿ ತೋರಿಸ್ತಾ ಇದ್ರು. ಅವರ ಅವಧಿಯಲ್ಲಿ ಟಾಟಾ ಸನ್ಸ್, ಟಾಟಾ ಸಮೂಹ ಆಲದ ಮರದ ಹಾಗೆ ಬೆಳೆದಿತ್ತು. ಅದರ ಜೊತೆಗೆ, ಭಾರತವೂ ಬೆಳೀತು. 

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಜಟಾಪಟಿ: ಸರ್ಕಾರದ ಈ ನಡೆ ಹಿಂದಿದ್ಯಾ ಸಿದ್ದು ಸೇಫ್ ಗೇಮ್?

ರತನ್ ಟಾಟಾ ಅವರ ನಿರ್ಗಮನ, ದೇಶಕ್ಕೆ ಬರಸಿಡಿಲು ಬಡಿದ ಹಾಗಾಗಿದೆ. ದೇಶಕ್ಕೆ ಸ್ಪೂರ್ತಿಯ ಚಿಲುಮೆಯಂತಿದ್ದ ರತನ್ ಟಾಟಾ ಅವರು, ಸಾಮ್ರಾಜ್ಯ ಸ್ಥಾಪನೆಯ ಹಾದಿಯಲ್ಲಿ ಸಾಗುವಾಗ, ಹೆಜ್ಜೆ ಹೆಜ್ಜೆಗೂ ಅವರನ್ನ ಸ್ವಾಗತಿಸಿದ್ದು ಸಮಸ್ಯೆಗಳು, ಸವಾಲುಗಳು, ಅದನ್ನೆಲದಲಾ ಮೀರಿ, ಅವರು ಸಾಧನೆಯ ಸರದಾರನಾಗಿದ್ದು ಹೇಗೆ? ಟಾಟಾ ಸಾಮ್ರಾಜ್ಯದ ಅಸಲಿ ಕಥಾನಕ ಏನು? ಇಲ್ಲಿದೆ ನೋಡಿ, ಅದರ ಕಂಪ್ಲೀಟ್ ಡೀಟೇಲ್ಸ್..

ಈ ಎಲ್ಲಾ ಕಾರಣಗಳಿಂದಾಗಿ, ಜನಕ್ಕೆ ರತನ್ ಟಾಟಾ ಅವರ ಮೇಲಿದ್ದ ಗೌರವ ನೂರು ಪಟ್ಟು ಹೆಚ್ಚಾಗೋದು.. ದೇಶದ ಜನಕ್ಕೆ ಅನುಕೂಲ ಮಾಡಿಕೊಡೋ ಒಂದೇ ಒಂದು ಅವಕಾಶವನ್ನೂ ರತನ್ ಟಾಟಾ ಕಳ್ಕೊಳ್ತಿರ್ಲಿಲ್ಲ.. ಅಷ್ಟೇ ಅಲ್ಲ, ಅವರ ಸಮಾಜಸೇವೆ ಬರೀ ಒಂದು ವರ್ಗಕ್ಕೆ ಮಾತ್ರವೇ ಮೀಸಲಾಗಿರ್ಲಿಲ್ಲ.

ರತನ್ ಟಾಟಾ ಅನ್ನೋದು ಈ ದೇಶದ ಉದ್ಯಮಿಯೊಬ್ಬರ ಹೆಸರಷ್ಟೇ ಅಲ್ಲ, ಅದೊಂದು ಕಂಪನಿ ಮಾತ್ರವೇ ಅಲ್ಲ.. ಅದೆಲ್ಲವನ್ನೂ ಮೀರಿದ ಒಂದು ಎಮೋಷನ್.