ಸಾಲ ಪಡೆಯಲು ಅಗತ್ಯ ಕ್ರೆಡಿಟ್ ಸ್ಕೋರ್, ತಿಳಿದುಕೊಳ್ಳಲೇಬೇಕು ಈ 7 ಪಾಂಯಿಟ್ಸ್!

Nov 21, 2020, 10:54 AM IST

ಬೆಂಗಳೂರು(ನ.21) ಕ್ರೆಡಿಟ್ ಸ್ಕೋರ್ ಯಾವ ಆಧಾರದಲ್ಲಿ ನಿರ್ಧಾರವಾಗುತ್ತದೆ? ಹೇಗೆ ಇದು ಜಾಸ್ತಿಯಾಗುತ್ತದೆ ಹಾಗೂ ಕಡಿಮೆಯಾಗುತ್ತದೆ? ಭಾರತದಲ್ಲಿ ಬಹಳಷ್ಟು ಜನರಿಗೆ ಸಾಲ ಸಿಗೋದೇ ಕಷ್ಟ. ಇದಕ್ಕೆ ಕಾರಣ ಒಂದೋ ಅವರಿಗೆ ಅಷ್ಟೊಂದು ಆದಾಯವಿರುವುದಿಲ್ಲ, ಅಥವಾ ಸಾಲವನ್ನು ಕಟ್ಟುವ ಕ್ಷಮತೆ ಇರುವುದಿಲ್ಲ. ಹೀಗಾಗಿ ಬ್ಯಾಂಕ್ ಸಾಲ ಸಿಗುವುದಿಲ್ಲ.

ಕ್ರೆಡಿಟ್ ಸ್ಕೋರ್ ಗಳಿಸಲು ರಾಜಮಾರ್ಗ: ಇಲ್ಲಿದೆ ಸರಳ ವಿಧಾನ!

ಇನ್ನು ಯಾರಿಗೆ ಸಾಲ ಕಟ್ಟುವ ಶಕ್ತಿ ಇರುತ್ತದೋ ಅವರು ಸರಿಯಾದ ಸಮಯಕ್ಕೆ ಹಣ ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಘುತ್ತದೆ. ಈ ಸ್ಕೋರ್ ಕಡಿಮೆಯಾದರೆ ಮುಂದೆ ಯಾವತ್ತೂ ಸಾಲ ಸಿಗುವುದಿಲ್ಲ. ಹೀಗಾಗಿ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಹೇಗೆ ನಿರ್ಧಾರವಾಗುತ್ತದೆ ಎಂಬ ಕುರಿತಾಗಿ ಏಳು ವಿಚಾರಗಳು ಇಲ್ಲಿವೆ ನೋಡಿ.