ರಷ್ಯಾ-ಉಕ್ರೇನ್ ನಡುವೆ ಮುಂದುವರಿದ ಯುದ್ಧ
ಚಿನಿವಾರ ಪೇಟೆಯಲ್ಲೂ ಏರಿಳಿತದ ಹಾದಿ
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರದಲ್ಲಿ ಕೊಂಚ ಇಳಿಕೆ
ಬೆಂಗಳೂರು (ಫೆ.25): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 2ನೇ ದಿನಕ್ಕೆ ಕಾಲಿಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾದ ಬೆನ್ನಲ್ಲಿಯೇ ಕೊಂಚ ಇಳಿಕೆಯೂ ಕಂಡುಬಂದಿದೆ. ಒಟ್ಟಾರೆಯಾಗಿ ಯುದ್ಧ ಮುಗಿಯುವವರೆಗೂ ಚಿನ್ನದ ಬೆಲೆ ಹಾವೇಣಿ ಆಟ ಆಡುವಂತೆ ಕಾಣುತ್ತಿದೆ.
ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ನಿರಂತರವಾಗಿ ಏರಿಳಿತ ಕಾಣುತ್ತಲೇ ಇರುವ ಚಿನ್ನ ಬೆಳ್ಳಿ ದರದ (Price) ಮೇಲೆ ಅಂತಾರಾಷ್ಟ್ರೀಯ ವಿಚಾರಗಳು ಸಾಕಷ್ಟು ಪ್ರಭಾವ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಲ್ಲುದು.
Russia Ukraine Crisis: ಸ್ಮಾರ್ಟ್ ಫೋನ್ ಗಳು ದುಬಾರಿ ಆಗುವ ಸಾಧ್ಯತೆ ಅಧಿಕ, ಇದು ಕಾರಣ!
ಚಿನ್ನ ಹಾಗೂ ಬೆಳ್ಳಿ ಮೇಲೆ ಖರೀದಿಸೋದು ಅಥವಾ ಹೂಡಿಕೆ ಮಾಡೋದು ಅಂದ್ರೆ ಲಕ್ಷಾಂತರ ರೂಪಾಯಿ ವ್ಯವಹಾರವಾಗಿರೋ ಕಾರಣ ಯಾವುದೇ ನಿರ್ಧಾರ ಕೈಗೊಳ್ಳೋ ಮುನ್ನ ಮಾರುಕಟ್ಟೆ ದರ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ (ಫೆ.25) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವುದರ ವಿವರ ಇಲ್ಲಿದೆ.