ಕೊರೊನಾ ಹೋರಾಟಕ್ಕೆ ಸ್ಕಾಲರ್ಶಿಪ್ ಹಣ ನೀಡಿ ಮಾದರಿಯಾದ ಬಾಲಕ ಚನ್ನಬಸವ ಪಾಟೀಲ್. ತನ್ನಲ್ಲಿರುವ ಸ್ಕಾಲರ್‌ಶಿಪ್ ಹಾಗೂ ಕೂಡಿಟ್ಟ ಹಣವಾದ 5 ಸಾವಿರ ರೂ. ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾನೆ. ಎಷ್ಟೋ ಮಂದಿಯ ಬಳಿ ಕೊಳೆಯುವಷ್ಟು ಹಣವಿದ್ದರೂ ಸಂಕಷ್ಟಕ್ಕೆ ನೆರವಾಗದೇ ಇರುವವರ ಮಧ್ಯೆ ಚನ್ನಬಸವ ಪಾಟೀಲನ ನಡೆ ಆದರ್ಶಪ್ರಾಯವಾಗಿದೆ.
ಬೆಳಗಾವಿ(ಏ.24): ಕೊರೋನಾ ವೈರಸ್ ಹೋರಾಟಕ್ಕೆ ಹಲವರು ತಮ್ಮ ಕೈಲಾದ ಹಣ ಸಹಾಯ ಮಾಡುವ ಸಂಕಷ್ಟದ ಸಂದರ್ಭದಲ್ಲಿ ದೇಶದ ನೆರವಿಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲೇ ಬಾಲಕನೊಬ್ಬ ತನಗೆ ಬಂದ ಸ್ಕಾಲರ್‌ಶಿಪ್ ಹಾಗೂ ಕೂಡಿಟ್ಟ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸುವ ಮೂಲಕ ಮಾದರಿಯಾಗಿದ್ದಾನೆ.
ಕೊರೊನಾ ಹೋರಾಟಕ್ಕೆ ಸ್ಕಾಲರ್ಶಿಪ್ ಹಣ ನೀಡಿ ಮಾದರಿಯಾದ ಬಾಲಕ ಚನ್ನಬಸವ ಪಾಟೀಲ್. ತನ್ನಲ್ಲಿರುವ ಸ್ಕಾಲರ್‌ಶಿಪ್ ಹಾಗೂ ಕೂಡಿಟ್ಟ ಹಣವಾದ 5 ಸಾವಿರ ರೂ. ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾನೆ. ಎಷ್ಟೋ ಮಂದಿಯ ಬಳಿ ಕೊಳೆಯುವಷ್ಟು ಹಣವಿದ್ದರೂ ಸಂಕಷ್ಟಕ್ಕೆ ನೆರವಾಗದೇ ಇರುವವರ ಮಧ್ಯೆ ಚನ್ನಬಸವ ಪಾಟೀಲನ ನಡೆ ಆದರ್ಶಪ್ರಾಯವಾಗಿದೆ.
ತಾಯಿಯ ಜೊತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಬಸವ ಪಾಟೀಲ್ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸಾಧ್ವಿ ಮೂಲಕ 5 ಸಾವಿರ ರುಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಬಾಲಕನ ಸಾಮಾಜಿಕ ಕಳಕಳಿಗೆ ತಹಶೀಲ್ದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.