Money loss: ಈ ವಸ್ತುಗಳು ಮನೆಯಲ್ಲಿದ್ದರೆ ಧನ ನಷ್ಟ ಗ್ಯಾರಂಟಿ, ದೂರವಿಟ್ಟುಬಿಡಿ..!

By Suvarna News  |  First Published Nov 30, 2021, 6:07 PM IST

ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಧನಲಾಭ ತರುತ್ತವೆ. ಮತ್ತೆ ಕೆಲವು ಮನೆಯಲ್ಲಿದ್ದರೆ ಧನನಷ್ಟಕ್ಕೆ ಕಾರಣವಾಗುತ್ತವೆ. ಅಂಥ ವಸ್ತುಗಳು ಯಾವುವು ಗೊತ್ತಾ?


ಯಾರಿಗೆ ಬೇಡ ಹಣ ಹೇಳಿ.. ಎಲ್ಲರಿಗೂ ಜೀವನದ (Life) ಅವಶ್ಯಕತೆಗನುಗುಣವಾಗಿ ಹಣ (Money ) ಬೇಕೇ ಬೇಕು. ಹಣದ ಕೊರತೆ (Lack) ಎಂದೂ ಆಗದಿರಲಿ ಎಂದೂ ಸಹ ಬಯಸುತ್ತಾರೆ. ಆದರೆ, ಇದಕ್ಕೆ ಎಷ್ಟೇ ಪರಿಶ್ರಮ (Effort) ಪಟ್ಟರೂ ಸಹ ಕೈಯಲ್ಲಿ ಕಾಸು ಉಳಿಯೋಲ್ಲ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ವಾಸ್ತುದೋಷವೂ (Vastu dosha) ಒಂದು ಕಾರಣವಾಗಿರಲಿಕ್ಕೆ ಸಾಕು. ವಾಸ್ತುಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗವಾಗಿದೆ. ಇದನ್ನು ಸರಿಯಾಗಿ ಪಾಲಿಸಿದರೆ ನೆಮ್ಮದಿ ಸುಖ (Happiness) – ಸಂಪತ್ತು (Wealth) ನೆಲೆಸುತ್ತದೆ. ಅದೇ ಸ್ವಲ್ಪ ಎಡವಟ್ಟಾದರೂ ಒಂದಲ್ಲಾ ಒಂದು ತೊಂದರೆಗಳು ಎದುರಾಗುತ್ತವೆ. ಮನೆಯಲ್ಲಿರುವ (Home) ಕೆಲವು ವಸ್ತುಗಳು (Things), ಫೋಟೋಗಳು (Photo), ದೇವರ ಪ್ರತಿಮೆಗಳು ಸೇರಿದಂತೆ ಹಲವು ವಿಶೇಷ ರೀತಿಯ ಚಿತ್ರಗಳು ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ನಕಾರಾತ್ಮಕ ಶಕ್ತಿಯನ್ನು (Negative energy) ಬೀರುತ್ತವೆ. ಹೀಗಾಗಿ ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರುವುದು (Careful) ಅವಶ್ಯಕ. 

ಇದನ್ನು ಓದಿ: Nature and December Born: ಸ್ವಭಾವ ಹೇಗಿರುತ್ತೆ?

ಸಮಾಜದಲ್ಲಿ (Society) ಜೀವನ ಮಟ್ಟವನ್ನು ಹೆಚ್ಚಿಸಲು ಹಣದ ಅಗತ್ಯವಿದೆ. ಹಲವರು ಹಣ ಸಂಪಾದನೆಗಾಗಿ (Earning) ಹಗಲಿರುಳು ಶ್ರಮಿಸುತ್ತಾರೆ. ಇಷ್ಟಾದರೂ ಅವರಿಗೆ ಹಣದ ಕೊರತೆ ಎದುರಾಗುತ್ತಿರುತ್ತದೆ. ಮನೆಯಲ್ಲಿ ಇಟ್ಟಿರುವ ಅನೇಕ ವಸ್ತುಗಳು ಕೂಡ ಇದಕ್ಕೆ ಕಾರಣವಾಗುತ್ತವೆ. 
ವಾಸ್ತು ಪ್ರಕಾರ ಮನೆಯಲ್ಲಿ ನಾವು ಹೆಚ್ಚು ಗಮನ ಹರಿಸದ ಅನೇಕ ಸಂಗತಿಗಳಿವೆ. ಇವುಗಳೇ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಇಂಥವುಗಳ ಬಗ್ಗೆ ಗಮನಹರಿಸಿ, ಮನೆಯಿಂದ ದೂರವಿಡಿ. ಅವುಗಳ ಬಗ್ಗೆ ನೋಡೋಣ ಬನ್ನಿ...

ಮನೆ ಅಸ್ತವ್ಯಸ್ತ ಆಗಿರಬಾರದು (Mess at Home)
ಮನೆಯು ಸ್ವಚ್ಛವಾಗಿರಬೇಕು (Clean). ನೋಡಿದರೆ ಅಂದವಾಗಿ (Beautiful) ಕಾಣಿಸಬೇಕು. ಆದರೆ, ಹಲವು ಬಾರಿ ಮನೆಯಲ್ಲಿ ಎಲ್ಲಾ ವಸ್ತುಗಳೂ ಚೆಲ್ಲಾಪಿಲ್ಲಿಯಾಗಿರುತ್ತವೆ. ಬಟ್ಟೆಗಳು (Clothes), ಶೂ-ಚಪ್ಪಲಿಗಳು (Shoe - Slipper), ಡಬ್ಬಿಗಳು (Bottle), ಬಾಚಣಿಗೆ (Comb), ಟವೆಲ್ (Towel), ಮಾತ್ರೆ ಔಷಧಿಗಳು (Medicine) ಸೇರಿದಂತೆ ಕೆಲವು ಸಣ್ಣ ಸಣ್ಣ ವಸ್ತುಗಳನ್ನು ನಾವು ನಿರ್ಲಕ್ಷ ವಹಿಸಿ ಎಲ್ಲೆಂದರಲ್ಲಿ ಇಟ್ಟುಬಿಟ್ಟಿರುತ್ತೇವೆ. ವಾಸ್ತು ಪ್ರಕಾರ ಪ್ರತಿಯೊಂದಕ್ಕೂ ಅದರದೇ ಆದ ಶಕ್ತಿ ಇದೆ. ಮನೆಯ ಸುತ್ತಲೂ ಹರಡಿರುವ ವಸ್ತುಗಳು ಮನೆಗೆ ಧನಾತ್ಮಕ ಶಕ್ತಿಯ (Positive energy) ಹರಿವಿಗೆ ಅಡ್ಡಿಪಡಿಸುತ್ತವೆ. ಇದರಿಂದ ಮನೆಯಲ್ಲಿ ಕಲಹಗಳು ಹೆಚ್ಚುವುದಲ್ಲದೆ, ಹಣವನ್ನೂ ಸಹ ಕಳೆದುಕೊಳ್ಳುವಂತಾಗುತ್ತದೆ. ಹಾಗಾಗಿ ಪ್ರತಿಯೊಂದು ವಸ್ತುಗಳಿಗೆ ಅದರದ್ದೇ ಆದ ಜಾಗ ಮಾಡಿಡಬೇಕು. 

ಇದನ್ನು ಓದಿ: Palmistry Lines: ಸಂತಾನ ಭವಿಷ್ಯ ತಿಳಿಸುವ ರೇಖೆ ಯಾವುದು ನಿಮ್ಮ ಕೈಯಲ್ಲಿ!

ಒಣಗಿದ ಸಸ್ಯಗಳು (Dry plants)
ಮನೆಗಳಲ್ಲಿ ಸಾಮಾನ್ಯವಾಗಿ ಗಿಡಗಳನ್ನು ನೆಟ್ಟಿರಲಾಗುತ್ತದೆ (Planting). ಮನೆಯಲ್ಲಿ ಹಸಿರು ಸಸ್ಯಗಳಿದ್ದರೆ (Greenery) ಮನಸ್ಸು ಪ್ರಶಾಂತವಾಗಿರುತ್ತದೆ. ಆದರೆ ಒಣಗಿದ ಮತ್ತು ಬಾಡಿದ ಸಸ್ಯಗಳು ಇದ್ದರೆ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಗಿಡಗಳನ್ನು ಒಣಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ, ಗಿಡಗಳು ಒಣಗಿದರೆ ಅಂಥವುಗಳನ್ನು ತೆಗೆದಿಡಬೇಕು. 

ಕಿಟಕಿ-ಬಾಗಿಲಲ್ಲಿ ಧೂಳು ಇರಬಾರದು (Dust)
ಮನೆಯಲ್ಲಿರುವ ಕಿಟಕಿಗಳು (Window) ಮತ್ತು ಬಾಗಿಲುಗಳು (Door) ಧನಾತ್ಮಕ ಶಕ್ತಿಯ ಮುಖ್ಯ ಸ್ಥಳವಾಗಿದೆ. ಕಿಟಕಿ - ಬಾಗಿಲುಗಳಲ್ಲಿ ಧೂಳು ನಿಲ್ಲದಂತೆ ಎಚ್ಚರವಹಿಸಬೇಕು (Careful). ಆಗಾಗ ಇವುಗಳನ್ನ ಸ್ವಚ್ಛಗೊಳಿಸಬೇಕು (Cleaning). ಆಗ ಮನೆಯೊಳಗೆ ಧನಾತ್ಮಕ ಶಕ್ತಿ ಹರಿಯುತ್ತದೆ. 

ಹಳೆಯ ವಸ್ತುಗಳು ಬೇಡ (Old things and Papers)
ಮನೆಯಲ್ಲಿ ಬಹಳಷ್ಟು ನಿಷ್ಪ್ರಯೋಜಕ ವಸ್ತುಗಳು ಇರುತ್ತವೆ. ಆದರೆ, ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಅವುಗಳು ಇದ್ದಷ್ಟೂ ಮನೆಗೇ ತೊಡಕು. ಇನ್ನು ಮನೆಯಲ್ಲಿ ಹಳೆಯ ಬಿಲ್‌ಗಳು(Bill), ಸ್ಲಿಪ್‌ಗಳು ಇತ್ಯಾದಿಗಳು ತುಂಬಿರುತ್ತವೆ. ಈ ವಸ್ತುಗಳನ್ನು ಸಹ ಮನೆಯಿಂದ ಹೊರಗೆ ಹಾಕಿಬಿಡಬೇಕು. ಇಲ್ಲವೇ ಸರಿಯಾದ ಸ್ಥಳದಲ್ಲಿ ತೆಗೆದಿಡಬೇಕು. 

ಇದನ್ನು ಓದಿ: Interpretation of Dreams: ಸ್ವಪ್ನಕ್ಕೇನು ಅರ್ಥ?

ಕಸದ ಬುಟ್ಟಿ ಇಲ್ಲಿರಲಿ (Dust bin)
ಮನೆಯೊಳಗೆ ಕಸದ ಬುಟ್ಟಿಯನ್ನು ಇಡಬೇಡಿ. ಒಳಾಂಗಣದಲ್ಲಿ ಯಾವುದೇ ಕಾರಣಕ್ಕೂ ಇಡಬಾರದು. ಕಸದ ಬುಟ್ಟಿ ಇಡಲು ಪ್ರತ್ಯೇಕ (Specific) ಸ್ಥಳ (Place) ಮಾಡಿಡಬೇಕು. ಇನ್ನೂ ಮುಖ್ಯ ದ್ವಾರದ (Main door) ಬಳಿ ಕಸದ ತೊಟ್ಟಿಗಳನ್ನು ಇಡಲೇಬಾರದು. ಇದೇ ವೇಳೆ, ಮಹಡಿಯಲ್ಲಿಯೂ (Terrace) ಕಸ ಸಂಗ್ರಹಣೆಯಾಗದಂತೆ ನೋಡಿಕೊಳ್ಳಿ. 

Tap to resize

Latest Videos

click me!