Positive Energy at home: ಮನೆಗೆ ತನ್ನಿ ಶುಭ ಕಳೆ

By Suvarna NewsFirst Published Nov 29, 2021, 8:46 PM IST
Highlights

ಮನೆಯಲ್ಲಿ ಯಾವೊಂದೂ ಸರಿಯಾಗಿ ಕೂಡಿ ಬರುತ್ತಿಲ್ಲ, ಅಂದುಕೊಂಡ ವಿಷಯಗಳೊಂದೂ ಘಟಿಸುತ್ತಿಲ್ಲ, ಅದೇನೋ ಮನೆಯಲ್ಲಿ ಕಳೆಯೇ ಇಲ್ಲ ಎನಿಸುತ್ತಿದೆಯಾ? ಸರಳವಾದ ಸಾಂಪ್ರದಾಯಿಕ ವಿಧಾನಗಳಲ್ಲಿ ಮನೆಯ ಕಳೆ ಹೆಚ್ಚಿಸಿ, ಮತ್ತು ಪಾಸಿಟಿವ್ ಎನರ್ಜಿಯನ್ನು ನೀವೇ ಫೀಲ್ ಮಾಡಿ ನೋಡಿ.

ಮನೆಯಲ್ಲಿ ಕಳೆಯಿಲ್ಲವಾದರೆ, ಪಾಸಿಟಿವ್ ಎನರ್ಜಿ(positive energy) ಇಲ್ಲವಾದರೆ ಯಾವೊಂದು ಒಳ್ಳೆಯ ವಿಷಯಗಳು ಕೂಡಾ ಘಟಿಸುವುದು ಸಾಧ್ಯವಿಲ್ಲ. ಮನೆ(home)ಯ ಸದ್ಲಕ್ಷಣವು ಮನೆಗೆ ಹೊಸತನವನ್ನೂ, ಹೊಸ ಸಂಗತಿಗಳನ್ನೂ, ಹೊಸ ವ್ಯಕ್ತಿಗಳನ್ನೂ ಆಕರ್ಷಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಮನೆಯ ಪಾಸಿಟಿವ್ ಎನರ್ಜಿ ಹೆಚ್ಚಿಸಲು ಬಹಳ ಹಿಂದಿನಿಂದ ಕಂಡುಕೊಂಡ ಹಲವು ಅಭ್ಯಾಸಗಳಿವೆ. ಅವನ್ನು ನೀವೂ ಫಾಲೋ ಮಾಡಿ, ಬದಲಾವಣೆಯನ್ನು ಸ್ವತಃ ಕಂಡುಕೊಳ್ಳಿ. 

ಅಗರ್‌ಬತ್ತಿ(inscence)
ಧೂಪ ಇತ್ಯಾದಿ ಅಗರ್‌ಬತ್ತಿ ಹಚ್ಚುವ ಅಭ್ಯಾಸ ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯಲ್ಲಿ ಬೆಳೆದು  ಬಂದಿದೆ. ಈ ಅಗರ್‌ಬತ್ತಿಯು ಮನೆಯಲ್ಲಿರುವ ಕೆಟ್ಟ ಶಕ್ತಿ(bad energy) ಓಡಿಸುತ್ತದೆ ಎಂಬ ನಂಬಿಕೆ ಇದೆ. ಪ್ರತಿದಿನ ಮನೆಯಲ್ಲಿ ಅಗರ್‌ಬತ್ತಿ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ಗಂಧ, ಧೂಪವನ್ನೂ ಬಳಸಬಹುದು. 

ಮೀನು(fish)
ನಿಮ್ಮ ಅದೃಷ್ಟ ಬದಲಿಸುವ ಶಕ್ತಿ ಕೆಲ ಪುಟ್ಟ ಮೀನುಗಳಿಗಿದೆ. ಮೀನುಗಳು ಗುಡ್ ಲಕ್(good luck) ತರುತ್ತವೆ ಎಂಬ  ನಂಬಿಕೆ ಇದ್ದು, ಫೆಂಗ್‌ಶುಯ್‌(feng shui)ನಲ್ಲಿ ಮನೆಯಲ್ಲಿ ಫಿಶ್ ಟ್ಯಾಂಕ್(fish tank) ಇಡಲು ಸಲಹೆ ಮಾಡಲಾಗುತ್ತದೆ. ಈ ಮೀನುಗಳು ಮನೆಯಲ್ಲಿರುವ ನೆಗೆಟಿವ್ ಎನರ್ಜಿ(negative energy) ಎಳೆದುಕೊಳ್ಳುತ್ತವೆ. ಅಲ್ಲದೆ ಅವು ಆರೋಗ್ಯ, ಸಂತೋಷ, ಸಮೃದ್ಧಿಯ ಪ್ರತೀಕವಾಗಿವೆ. ಅದರಲ್ಲೂ ಡ್ರ್ಯಾಗನ್ ಫಿಶ್ ಹಾಗೂ ಗೋಲ್ಡ್ ಫಿಶ್ ಮನೆಗೆ ಸಮೃದ್ಧಿ ಹಾಗೂ ಸಂಪತ್ತನ್ನು ತರುತ್ತವೆ ಎನ್ನಲಾಗುತ್ತದೆ. ಸಾಮಾನ್ಯವಾಗಿ 8 ಅಥವಾ 9 ಮೀನುಗಳನ್ನು ಅಕ್ವೇರಿಯಂನಲ್ಲಿಡಲು ಫೆಂಗ್‌ಶುಯ್ ಸಲಹೆ ನೀಡುತ್ತದೆ.  

Vaastu Tips : ಮದುವೆಗೆ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ವಾಸ್ತು ಸಲಹೆ ಪಾಲಿಸಿ

ಬಿದಿರು(bamboo)
ಬಿದಿರಿನ ಗಿಡವು ಮನೆಯ ಅದೃಷ್ಟ ಬದಲಾಯಿಸುವಲ್ಲಿ ಬೆಸ್ಟ್ ಎನಿಸಿಕೊಂಡಿದೆ. ಈ ಗಿಡ ಮನೆಗೆ ಡೆಕೋರೇಟಿವಾಗಿ ಕಾಣಿಸುವುದಷ್ಟೇ ಅಲ್ಲ, ಮನೆ ಸದಸ್ಯರ ಮೂಡ್ ಉತ್ತಮಗೊಳಿಸುತ್ತದೆ. ಮನಸ್ಸಿಗೆ ಶಾಂತಿ, ಹಾಗೂ ನೆಮ್ಮದಿ ತರುತ್ತದೆ. ಪಾಮ್ಸ್, ಆರ್ಕಿಡ್ಸ್ ಹಾಗೂ ಮನಿ ಪ್ಲ್ಯಾಂಟ್(money plant) ಕೂಡಾ ಅದೃಷ್ಟದ ಸಸ್ಯಗಳು. 

ಪೀಠೋಪಕರಣಗಳು(Furniture)
ಮನೆಯ ಫರ್ನಿಚರ್‌ಗಳನ್ನಿಟ್ಟ ರೀತಿಯಿಂದಾಗಿಯೂ ಮನೆಯ ಕಳೆ ಕಡಿಮೆಯಾಗಿರಬಹುದು. ಪೀಠೋಪಕರಣಗಳನ್ನು ಮರುಜೋಡಿಸುವಂಥ ಸರಳ ವಿಧಾನ ಕೂಡಾ ಮನೆಯ ಕಳೆ ಹೆಚ್ಚಿಸಿ ಪಾಸಿಟಿವ್ ಎನರ್ಜಿ ತರುತ್ತದೆ. ಸೋಫಾ ಯಾವಾಗಲೂ ಗೋಡೆಗೆ ಒರಗಿ ಇಡಬೇಕು. ಓಡಾಡುವಾಗ ಯಾವುದೇ ಫರ್ನಿಚರ್ ಅಡ್ಡ ಬರಬಾರದು. ಅದರಲ್ಲೂ ಬಾಗಿಲು, ಮುಖ್ಯ ದ್ವಾರಕ್ಕೆ ಪೀಠೋಪಕರಣ ಅಡ್ಡ ಇರಕೂಡದು. ಆದಷ್ಟು ಹೊರಗಿನ ಬೆಳಕು, ಗಾಳಿ ಮನೆಗೆ ಬರುವಂತೆ ನೋಡಿಕೊಳ್ಳಬೇಕು. ಕೋಣೆಯ ಮೂಲೆಯಲ್ಲಿ, ಬಾಗಿಲಿಗೆ ಓರೆಯಾಗಿ ಎದುರಲ್ಲಿ ದೀಪವನ್ನಿಡಬೇಕು. ಇದು ಸಂಪತ್ತಿನ ಶಕ್ತಿ ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಇಷ್ಟು ಸರಳ ಇರುವಾಗ ಟ್ರೈ ಮಾಡದೇ ಏನು ಅಲ್ಲವೇ?

Power around you: ನಿಮ್ಮ ಸುತ್ತ ಇರೋ ಪ್ರಭಾವಳಿಯನ್ನು ತಿಳಿಯುವುದು ಹೇಗೆ?

ಋಷಿಮೂಲಿಕೆ(sage leaves)
ಶತಮಾನಗಳಿಂದಲೂ ಋಷಿಮೂಲಿಕೆಯ ಹೊಗೆ ಕೆಟ್ಟ ಶಕ್ತಿಗಳಿಗೆ ರಾಮಬಾಣವಾಗಿದೆ. ಋಷಿಮೂಲಿಕೆಯನ್ನು ಸುಟ್ಟು ಹೊಗೆಯನ್ನು ಮನೆಗೆ ಹರಡುವುದರಿಂದ ಮನೆಗೆ ಬೇಡದ, ದುರ್ಯೋಚನೆಯ ವ್ಯಕ್ತಿಗಳು ಬರದಂತೆ ತಡೆಯುತ್ತದೆ. ಅದೂ ಅಲ್ಲದೆ, ಈ ಹೊಗೆಯಲ್ಲಿ ಧನಾತ್ಮಕ ಶಕ್ತಿಗಳಿದ್ದು ಆರೋಗ್ಯಕ್ಕೂ ಒಳ್ಳೆಯದನ್ನೆಲಾಗುತ್ತದೆ. ಇವು ನರವನ್ನು ತಣಿಸುತ್ತವೆ. ಗಾಳಿಯನ್ನು ಶುದ್ಧೀಕರಿಸುತ್ತವೆ. ವಿಜ್ಞಾನಿಗಳು ಕೂಡಾ ಈ ಋಷಿಮೂಲಿಕೆಯ ಹೊಗೆಯು ಗಾಳಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಮಟ್ಟ ಹಾಕುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಈ ಹೊಗೆಯ ಜೊತೆಗೆ ಜೋರಾದ ಮಂತ್ರಪಠಣ ಒಳ್ಳೆಯದು.

ಹಣ್ಣುಗಳು(fruits) ತುಂಬಿರಲಿ
ಫೆಂಗ್‌ಶುಯ್‌ನಲ್ಲಿ ಬೇರೆ ಬೇರೆ ಹಣ್ಣುಗಳಿಗೆ ಬೇರೆ ಬೇರೆ ಅರ್ಥಗಳಿವೆ. ಉದಾಹರಣೆಗೆ ಸೇಬು ಶಾಂತಿಯ ಪ್ರತೀಕವಾದರೆ, ಪೀಚ್ ಶಾಶ್ವತತೆಯ ಸಂಕೇತ. ದಾಳಿಂಬೆ ಫಲವತ್ತತೆ ತಂದರೆ, 9 ಕಿತ್ತಳೆಗಳು ದುರದೃಷ್ಟ ಹೋಗಿಸುತ್ತದೆ. ಹಾಗಾಗಿ, ಮನೆಯ ಹಣ್ಣಿನ ಬುಟ್ಟಿ ಸದಾ ತುಂಬಿರಬೇಕು. 

ಕ್ರಿಸ್ಟಲ್ಸ್(crystals)
ಕ್ರಿಸ್ಟಲ್‌ಗಳು  ಮನೆಯಲ್ಲಿ ಒಳ್ಳೆಯ ವೈಬ್ರೇಶನ್ ಹೆಚ್ಚಿಸುತ್ತವೆ. 

ಡ್ರೀಮ್ ಕ್ಯಾಚರ್ (dream catcher)
ಡ್ರೀಮ್ ಕ್ಯಾಚರ್‌ಗಳನ್ನು ನೇಯುವುದೇ ಅವು ಕೆಟ್ಟ ಕನಸನ್ನು ಎಳೆದುಕೊಳ್ಳುತ್ತವೆ ಎಂದು. ಆ ಮೂಲಕ ಸುತ್ತ ಹರಡಿದ ಕೆಟ್ಟ ಶಕ್ತಿಗಳನ್ನು ಕೂಡಾ ಸೆಳೆದುಕೊಳ್ಳುತ್ತವೆ. ಇದರಿಂದ ಮನೆಯ ಮಾಲೀಕ ಹೆಚ್ಚು ಸಂತೋಷದಿಂದಲೂ, ಬ್ಯಾಲೆನ್ಸ್ಡ್ ಆಗಿಯೂ ಇರಬಹುದು. ಇವು ಕಣ್ಣಿಗೂ ಹಬ್ಬ, ಮೂಡಿಗೂ ಒಳ್ಳೆಯದು. 

ಗೋಡೆಯ ಬಣ್ಣ(wall colour)
ಬಣ್ಣಗಳು ಮನೆಯ ಮೂಡನ್ನೂ, ಮನೆ ಸದಸ್ಯರ ಮೂಡನ್ನೂ ಹೆಚ್ಚಿಸುತ್ತವೆ. ಕೋಣೆ ಶಾಂತತೆಯಿಂದ ಕೂಡಿರಬೇಕೆಂದರೆ ತಿಳಿ ನೀಲಿ ಬಣ್ಣ ಬಳಸಬೇಕು. ಹಸಿರು ಏಕಾಗ್ರತೆಗೆ ಒಳ್ಳೆಯದು. ಆಫೀಸ್ ರೂಂ ಹಾಗೂ ಮಕ್ಕಳ ಕೋಣೆಯಲ್ಲಿ ಹಸಿರನ್ನು ಬಳಸುವುದೊಳಿತು. ತೀರಾ ಕಣ್ಣಿಗೆ ರಾಚುವ ಬಣ್ಣಗಳು ಸ್ಟ್ರೆಸ್ ಹೆಚ್ಚಿಸುತ್ತವೆ.

click me!