Sarala Vastu Shastra Tips in Kannada: ವಾಸ್ತು ಶಾಸ್ತ್ರದಲ್ಲಿ ವಾಸ್ತುದೋಷವನ್ನು ನಿವಾರಣೆ ಮಾಡಲು ಸರಳ ಉಪಾಯಗಳೂ ಇವೆ. ಅವುಗಳನ್ನು ಬಳಸಿ ದೋಷ ನಿವಾರಣೆ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ. ಹಾಗೆಯೇ ದಾಸವಾಳ ಹೂವು ಯಾವ ರೀತಿ ದೋಷ ನಿವಾರಣೆಗೆ ಸಹಾಯಕ ಎಂಬುದನ್ನು ತಿಳಿಯೋಣ..
ವಾಸ್ತುಶಾಸ್ತ್ರದಲ್ಲಿ (Vastu Shastra) ಮನೆಗೆ ಸಂಬಂಧಿಸಿದ, ವಾಸ್ತುವಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗವಾಗಿರುವ ವಾಸ್ತು ಶಾಸ್ತ್ರವು ಪುರಾತನ ಕಾಲದಿಂದ ಬಂದಿರುವ ಪರಂಪರೆಯಾಗಿದೆ. ಹಾಗಾಗಿ ವಾಸ್ತುಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ಹೂವಿನಿಂದ (Flower) ಸಹ ವಾಸ್ತುದೋಷ ನಿವಾರಣೆ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಲಾಗುತ್ತದೆ.
ಬೇರೆ ಬೇರೆ ದೇವರಿಗೆ ಬೇರೆಬೇರೆ ಹೂವು ಮತ್ತು ಪತ್ರೆಗಳು ಪ್ರಿಯವಾಗಿರುತ್ತವೆ. ಶಿವನಿಗೆ ಬಿಲ್ವಪತ್ರೆ, ವಿಷ್ಣುವಿಗೆ ತುಳಸಿ, ಪಾರ್ವತಿದೇವಿಗೆ ಮಂದಾರ, ಗಣಪತಿಗೆ ದೂರ್ವೆ ಹೀಗೆ ಬೇರೆ ಬೇರೆ ದೇವರಿಗೆ ವಿಶೇಷವಾದ ಪ್ರಿಯವಾದ ಹೂವುಗಳನ್ನು ಅರ್ಪಿಸಲಾಗುತ್ತದೆ. ಅದರ ಹಿಂದೆ ವಾಸ್ತುದೋಷ ನಿವಾರಣೆ ಮಾಡುವ ಉಪಾಯವೂ ಅಡಗಿರುತ್ತದೆ. ಹಾಗೆಯೇ ದಾಸವಾಳ ಹೂವು ಸಹ ಅನೇಕ ದೋಷಗಳಿಗೆ ನಿವಾರಣೆ ಮಾಡುವ ವಿಶೇಷ ಪುಷ್ಪವಾಗಿದೆ.
ದೇವರ ಪೂಜೆಗೆ (Pooja) ಶ್ರೇಷ್ಠವಾದ ದಾಸವಾಳ ಹೂವನ್ನು ಗುಡ್ ಲಕ್ ಫ್ಲವರ್ ಎಂದು ಸಹ ಕರೆಯುತ್ತಾರೆ. ದೇವರಿಗೆ (God) ಪ್ರಿಯವಾದ ಹೂಗಳನ್ನು ಅರ್ಪಿಸಿ ದೇವರ ಕೃಪೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ವಾಸ್ತುಶಾಸ್ತ್ರದಲ್ಲಿ ಸಹ ಹೂವಿನ್ನು ಬಳಸಿ ವಾಸ್ತು ದೋಷ ನಿವಾರಿಸಿಕೊಳ್ಳಬಹುದೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಜೀವನದ (Life) ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಹೂವು ಸಹಾಯಕವಾಗುತ್ತದೆ. ಮನೆಯ ಸುಖ ಸಮೃದ್ಧಿಗೆ ದಾಸವಾಳದ ಹೂವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ...
ಮಂಗಳವಾರದಂದು (Tuesday) ಹನುಮಂತನಿಗೆ ಕೆಂಪು (Red) ದಾಸವಾಳ (Hibiscus) ಹೂವನ್ನು ಅರ್ಪಿಸಬೇಕು. ಇದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಅಷ್ಟೆ ಅಲ್ಲದೆ ಶುಕ್ರವಾರದ (Friday) ದಿನ ಲಕ್ಷ್ಮೀ ದೇವಿಗೆ (Goddess lakshmi) ಈ ಹೂವನ್ನು ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳು (Economic problems) ನಿವಾರಣೆಯಾಗುತ್ತವೆ. ಹಾಗೂ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಇದನ್ನು ಓದಿ: Chanakya Neeti: ಹೊರಗಿನವರಿಗೆ ಈ ವಿಷಯಗಳ ಬಾಯಿ ಬಿಟ್ಟರೆ ಕೆಟ್ಟಂತೆ!
ಸೂರ್ಯನಿಗೆ ಪ್ರಿಯ (Sun)
ದಾಸವಾಳ ಹೂವು ಸೂರ್ಯದೇವನಿಗೆ ಅತ್ಯಂತ ಪ್ರಿಯವಾದ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿನಿತ್ಯ ಸೂರ್ಯನಿಗೆ ಈ ಹೂವನ್ನು ಅರ್ಪಿಸುವುದರಿಂದ, ಕೆಲಸ ಕಾರ್ಯಗಳಲ್ಲಿ ಉತ್ಸಾಹ (Enthusiasm) ಮತ್ತು ಯಶಸ್ಸು (Success) ಲಭಿಸುತ್ತದೆ. ಹಾಗಾಗಿ ಸೂರ್ಯನಿಗೆ ಅರ್ಘ್ಯ ನೀಡುವುದರ ಜತೆಗೆ ದಾಸವಾಳ ಹೂವನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ.
ಸೂರ್ಯ ದೋಷ ನಿವಾರಣೆ (Sun planet problems)
ಸೂರ್ಯ ಗ್ರಹಕ್ಕೆ ಸಂಬಂಧಿಸಿದ ದೋಷಗಳ ನಿವಾರಣೆಗೆ ದಾಸವಾಳ ಹೂ ಅತ್ಯಂತ ಮುಖ್ಯವಾದದ್ದಾಗಿದೆ. ಹಾಗಾಗಿ ಮನೆಯ ಪೂರ್ವ ದಿಕ್ಕಿಗೆ ದಾಸವಾಳದ ಗಿಡವನ್ನು ಬೆಳೆಸಬೇಕು. ಇದರಿಂದ ಸಕಾರಾತ್ಮಕ ಶಕ್ತಿಯು (Positive energy) ಹೆಚ್ಚುವುದಲ್ಲದೆ. ಇದು ನಕಾರಾತ್ಮಕ (Negative) ಶಕ್ತಿಯ ಹರಿವನ್ನು ಕಡಿತಗೊಳಿಸುತ್ತದೆ. ಓದುವ ಮತ್ತು ಬರೆಯುವ ಜಾಗದಲ್ಲಿ ಈ ಹೂವನ್ನು ಇಟ್ಟುಕೊಂಡರೆ ಓದಿನ ಬಗ್ಗೆ ಹೆಚ್ಚು ಏಕಾಗ್ರತೆ (concentration ) ಮೂಡುತ್ತದೆ ಎಂದು ಸಹ ಹೇಳಲಾಗುತ್ತದೆ.
ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!
ಮಂಗಳ ದೋಷ ನಿವಾರಣೆಗೆ ರಾಮಬಾಣ
ಮಂಗಳ (Mars) ದೋಷ ನಿವಾರಣೆಗೆ ದಾಸವಾಳ ಹೂವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಕೆಂಪು ಬಣ್ಣದ ದಾಸವಾಳ ಮಂಗಳ (Mars) ಗ್ರಹಕ್ಕೆ (Planet) ಅತ್ಯಂತ ಪ್ರಿಯವಾದದ್ದಾಗಿದೆ. ಮನೆಯಲ್ಲಿ ದಾಸವಾಳದ ಗಿಡವನ್ನು (Plant) ಬೆಳೆಸುವುದರಿಂದ ಮಂಗಳ ದೋಷ (Dosha) ನಿವಾರಣೆ ಸ್ವಲ್ಪಮಟ್ಟಿಗೆ ಸಾಧ್ಯವಿದೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಮಂಗಳ ಗ್ರಹದ ಮಂತ್ರವನ್ನು ಜಪಿಸಿ ದಾಸವಾಳ ಹೂವನ್ನು ಅರ್ಪಿಸುವುದರಿಂದ ಕುಜ ದೋಷ ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತವಾಗುತ್ತವೆ. ಅಷ್ಟೆ ಅಲ್ಲದೆ ಎದುರಾಗುವ ಸಕಲ ಸಮಸ್ಯೆಗಳಿಗೆ (Problems) ಪರಿಹಾರವನ್ನು (Solution) ಒದಗಿಸುತ್ತವೆ.