Vastu tips: ಮರೆತೂ ಈ ಹೂವುಗಳನ್ನು ದೇವರ ಪೂಜೆಗೆ ಬಳಸಬೇಡಿ!

By Suvarna News  |  First Published Apr 5, 2022, 10:35 AM IST

ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವಿರಬಹುದು. ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿರಬಹುದು, ಆದರೆ ದೇವರ ಪೂಜೆಗೆ ಎಲ್ಲ ಹೂಗಳೂ ಸಲ್ಲುವುದಿಲ್ಲ. ಕೆಲ ಹೂಗಳನ್ನು ದೇವರಿಗೆ ಏರಿಸುವುದು ದೋಷಕ್ಕೆ ಕಾರಣವಾಗುತ್ತದೆ. 


ಹೂವುಗಳು ದೇವಲೋಕದ ಅಪ್ಸರೆಯಂತೆ ಈ ಲೋಕದ ಸೌಂದರ್ಯ ಹೆಚ್ಚಿಸುತ್ತವೆ. ಅವುಗಳು ಮೌನವಾಗಿಯೇ ಈ ಲೋಕದಲ್ಲಿ ನಮ್ಮ ಬದುಕನ್ನು ಚೆಂದಗೊಳಿಸಿವೆ. ಈ ಹೂವುಗಳನ್ನು ನಮ್ಮ ಅಂದ ಚೆಂದ ಹೆಚ್ಚಿಸಿಕೊಳ್ಳಲು, ಶುಭ ಕಾರ್ಯಗಳಲ್ಲಿ ಡೆಕೋರೇಶನ್‌ ಆಗಿ, ದೇವರ ಪೂಜೆಗೆ ಸೇರಿದಂತೆ ಸಾಕಷ್ಟು ಕಡೆ ಬಳಸುತ್ತೇವೆ. ಹೂವುಗಳಿಗೆ ನಾವು ನೀಡುವ ಅತ್ಯುನ್ನತ ಸ್ಥಾನವೆಂದರೆ ದೇವರ ಮುಡಿ. ಈ ಹೂವುಗಳ ಪರಿಮಳ ಹಾಗೂ ಬಣ್ಣದ ಶಕ್ತಿಯ ಮಟ್ಟವು ವಿಶೇಷವಾಗಿ ಕೆಲ ದೇವರ ಶಕ್ತಿಯೊಂದಿಗೆ ಮಿಳಿತವಾದರೆ, ಮತ್ತೆ ಕೆಲ ದೇವರಿಗೆ ಆಗುವುದಿಲ್ಲ. ಈ ಬಗ್ಗೆ ವಾಸ್ತು ಶಾಸ್ತ್ರ ಎಚ್ಚರಿಕೆ ನೀಡುತ್ತದೆ.

ಹೌದು, ಎಲ್ಲ ಹೂವುಗಳನ್ನು ಎಲ್ಲ ದೇವರ ಮುಡಿಗೆ ಇಡಲಾಗುವುದಿಲ್ಲ. ಎಲ್ಲ ಹೂವುಗಳೂ ದೇವರ ಪೂಜೆಗೆ ಯೋಗ್ಯವಲ್ಲ. ದೇವರ ಪೂಜೆ ಮಾಡುವ ಮುನ್ನ ಯಾವ ಹೂಗಳನ್ನು ಬಳಸಬೇಕು, ಯಾವ ಹೂಗಳನ್ನು ಬಳಸಬಾರದು, ಯಾವ ದೇವರಿಗೆ ಯಾವ ಹೂವು ಇಷ್ಟವಾಗುವುದಿಲ್ಲ ಎಲ್ಲವನ್ನೂ ತಿಳಿದಿರುವುದು ಮುಖ್ಯ. 

Tap to resize

Latest Videos

ವಿಷ್ಣುವಿಗೆ ಹಳದಿ ಬಣ್ಣದ ಹೂಗಳು(yellow flowers) ಇಷ್ಟವಾದರೆ, ಸೂರ್ಯನಿಗೆ ಕೆಂಪು(red) ಹೂಗಳೆಂದರೆ ಪ್ರೀತಿ. ಗಣೇಶ, ಭೈರವ, ಶಿವನಿಗೆ ಬಿಳಿಯ(white) ಹೂಗಳು ಇಷ್ಟ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಯಾವ ಹೂವಿನ ಯಾವ ಶಕ್ತಿ ವಿನ್ಯಾಸ(energy pattern) ದೇವರಿಗೆ ಇಷ್ಟವಾಗುವುದಿಲ್ಲ, ಯಾವ ಹೂವಿನ ಪರಿಮಳ, ಬಣ್ಣ ಇಷ್ಟವಾಗುವುದಿಲ್ಲ ಎಂಬುದನ್ನು ಅರಿತಿರಬೇಕು. 

ಹೀಗಿದೆ ನೋಡಿ ಕತ್ನಳ್ಳಿ ಸ್ವಾಮೀಜಿಯ ಯುಗಾದಿ ಭವಿಷ್ಯ

ಈ ಹೂಗಳು ದೇವರ ಪೂಜೆಗೆ ಯೋಗ್ಯವಲ್ಲ

  • ವಿಷ್ಣು(Lord Vishnu)ವಿಗೆ ಅಕ್ಕಿಯ ಹೂವಾದ ಅಕ್ಷತೆಯನ್ನು ಅರ್ಪಿಸಬಾರದು. ಇದಷ್ಟೇ ಅಲ್ಲ, ಕೇದಗೆ, ದತುರಾ ಹಾಗೂ ಅರ್ಕದ ಹೂಗಳನ್ನು ಕೂಡಾ ವಿಷ್ಣುವಿಗೆ ಬಳಸಬಾರದು.  ಈ ಹೂಗಳ ಬಣ್ಣ, ಸುವಾಸನೆ, ಶಕ್ತಿಯು ವಿಷ್ಣುವಿನ ಎನರ್ಜಿಯೊಂದಿಗೆ ಹೊಂದುವುದಿಲ್ಲ ಎನ್ನುತ್ತದೆ ವಾಸ್ತು. 
  • ಇನ್ನು ದೂಬ್, ಅರ್ಕ, ಪಾರಿಜಾತ, ಬೇಲ ಮತ್ತು ಸುಗಂಧಬಾಲ ಹೂಗಳನ್ನು ಲಕ್ಷ್ಮೀ ಪೂಜೆಯಲ್ಲಿ ಬಳಸಬಾರದು. ಚಂಪಾ ಮತ್ತು ಕಮಲ(Champa and lotus)ದ ಹೂಗಳನ್ನು ಬಿಟ್ಟರೆ, ಯಾವುದೇ ಹೂವಿನ ಮೊಗ್ಗುಗಳನ್ನು ತಾಯಿಯ ಪೂಜೆಗೆ ಬಳಸಬಾರದು.  ಇನ್ನು ನಾಗಚಂಪಾ, ಬ್ರಿಹತಿ, ವಜ್ರದಂತಿ ಹೂಗಳನ್ನು ಯಾವುದೇ ಕಾರಣಕ್ಕೂ ಅಮ್ಮನವರ ಪೂಜೆಯಲ್ಲಿ ಬಳಸಬಾರದು. 
  • ಕೇದಿಗೆ ಹೂಗಳನ್ನು ಶಿವನ ಪೂಜೆಯಲ್ಲಿ ಬಳಸಬಾರದು. ಇದಲ್ಲದೆ, ಹಳದಿ ಚಂಪಕವನ್ನು ಕೂಡಾ ಶಿವನಿಗೆ ಅರ್ಪಿಸಬಾರದು. 
  • ತಾಯಿ ಪಾರ್ವತಿ(Goddess Parvati)ಯ ಪೂಜೆಯಲ್ಲಿ ನೆಲ್ಲಿಕಾಯಿ ಹಾಗೂ ಅರ್ಕವನ್ನು ಬಳಸಬಾರದು. 
  • ಇನ್ನು ಚೆಂಡು ಹೂವ(Marigold)ನ್ನು ಇಡಿಯಾಗಿ ದೇವರ ಪೂಜೆಗೆ ಬಳಸಲಾಗುವುದಿಲ್ಲ. ಆದರೆ ದಳಗಳನ್ನು ತೆಗೆದು ಅರ್ಪಿಸಬಹುದು. ದಳಗಳನ್ನು ಕಿತ್ತು ದೇವರಿಗೆ ಏರಿಸಬಹುದಾದ ಏಕೈಕ ಹೂವು ಇದಾಗಿದೆ. 
  • ಸೂರ್ಯ ದೇವರ ಪೂಜೆಯ ಸಮಯದಲ್ಲಿ ಬಿಲ್ವಪತ್ರೆ ಬಳಸಬಾರದು. ಇದರಿಂದ ಭಗವಾನ್ ಸೂರ್ಯನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. 
  • ರಾಮನ ಆರಾಧನೆಯಲ್ಲಿ ಗಂಟೆ ಹೂವುಗಳನ್ನು ಬಳಸಬಾರದು. ಆದರೆ ದುರ್ಗಾ ದೇವಿಯ ಪೂಜೆಯಲ್ಲಿ ಗಂಟೆ ಹೂವುಗಳನ್ನು ಬಳಸಬಹುದು.

Saturn Effect: ಶನಿ ಸಾಡೇಸಾತಿ ಈ ರಾಶಿಯವರಿಗೆ ಕಷ್ಟಕಾಲ!

ಇವಲ್ಲದೆ ಇನ್ನೊಂದಿಷ್ಟು ನಿಮಯಗಳಿವೆ..

  • ಯಾವುದೇ ಹೂವಾದರೂ ಸರಿ, ಪರಿಮಳವಿಲ್ಲವೆಂದರೆ ಅದು ದೇವರ ಪೂಜೆಗೆ ಯೋಗ್ಯವಲ್ಲ.
  • ಪೂರ್ತಿ ಅರಳಿರದ ಹೂವನ್ನು ಪೂಜೆಗೆ ಬಳಸಕೂಡದು. 
  • ಕದ್ದು ತಂದ ಹೂವನ್ನು, ಸ್ವಚ್ಛ ಸ್ಥಳದಲ್ಲಿ ಬೆಳೆದಿಲ್ಲದ ಹೂವನ್ನು ದೇವರಿಗೆ ಅರ್ಪಿಸಬಾರದು. 
  • ಖಾಲಿ ನೆಲದ ಮೇಲೆ ಹೂಗಳನ್ನಿರಿಸಬಾರದು. ಹಾಗೊಂದು ವೇಳೆ ಇರಿಸಿದರೆ, ಅವನ್ನು ಪೂಜೆಗೆ ಬಳಸಬಾರದು. 
  • ಎಡಗೈಯ್ಯಲ್ಲಿ ಹೂಗಳನ್ನು ಏರಿಸಬಾರದು. 

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!