ಗಂಟೆಗಳಿಂದ Negative Energy ತೆಗೀಬಹುದು.. ಆದರೆ ಈ ವಿಷಯಗಳ ಬಗ್ಗೆ ಇರಲಿ ಗಮನ!

By Suvarna News  |  First Published Apr 6, 2022, 10:32 AM IST

ಗಂಟೆಯ ಸದ್ದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಓಡಿಸಬಲ್ಲದು. ಆದರೆ, ಗಂಟೆಯನ್ನು ಬಳಸುವಾಗ ಕೆಲವೊಂದು ವಿಷಯಗಳು ಗಮನದಲ್ಲಿರಬೇಕು. 


ಗಂಟೆ(bell) ಅನುರಣಿಸುವ ಸದ್ದು ಕೇಳಿದರೆ ಮೆದುಳಿನ ಕಣಕಣವೂ ಜಾಗೃತವಾಗಿ ಮನಸ್ಸು ಚೇತೋಹಾರಿಯಾಗುತ್ತದೆ. ಗಂಟೆಯ ಸದ್ದಿಗೆ ದೇಹದ ಕಣಕಣವೂ ಎಚ್ಚರಗೊಳ್ಳುವಂತೆನಿಸುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಗಂಟೆಯ ಸದ್ದು ಸ್ಥಳದಲ್ಲಿರುವ ನೆಗೆಟಿವ್ ಎನರ್ಜಿ(negative energy)ಯನ್ನು ಓಡಿಸಿ ಅಲ್ಲಿ ಧನಾತ್ಮಕ ಶಕ್ತಿ(positive energy)ಯೊಂದೇ ತುಂಬಿರುವಂತೆ ನೋಡಿಕೊಳ್ಳುತ್ತದೆ. ಪೂಜಿಸುವಾಗ ಹೊರಡುವ ಗಂಟೆಯ ಸದ್ದಿಗೆ ವಾಸ್ತು ಶಾಸ್ತ್ರ(Vastu Shastra)ದಲ್ಲಿ ಪ್ರಾಮುಖ್ಯತೆ ಇದೆ. ಗಂಟೆಯ ನಾದವು ಸರ್ವವ್ಯಾಪಿಯಾಗಿದ್ದು, ಕೇವಲ ಭಾರತದಲ್ಲಲ್ಲ, ಚೀನಾದಲ್ಲಿ ಕೂಡಾ ಗಂಟೆಯ ಸದ್ದುಗಳು ನೆಗೆಟಿವ್ ಎನರ್ಜಿ ಓಡಿಸುವ ನಂಬಿಕೆ ಜೋರಾಗಿದೆ. ಅಲ್ಲಿ ಹೆಚ್ಚಾಗಿ ವಿಂಡ್ ಚೈಮ್‌ಗಳನ್ನು ಬಳಸಲಾಗುತ್ತದೆ. ಇದಲ್ಲದೆ, ಚರ್ಚ್‌ಗಳಲ್ಲಿಯೂ ಬೆಲ್ ಬಾರಿಸುವ ಸಂಪ್ರದಾಯವಿದೆ. 

ವಾಸ್ತುವಿಗೆ ಹಿಂದೂತ್ವದಲ್ಲಿ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರವೇ ಎಲ್ಲವನ್ನೂ ಮಾಡಿದಾಗ ಪಾಸಿಟಿವ್ ಎನರ್ಜಿ ಬರುವುದರೊಂದಿಗೆ ಮನೆಯಲ್ಲಿ ಸಂತೋಷ ನೆಮ್ಮದಿ ತುಂಬಿರುತ್ತದೆ. ಮತ್ತೊಂದೆಡೆ ವಾಸ್ತುವಿನ ನಿಯಮಕ್ಕೆ ವಿರುದ್ಧ ಹೋದಾಗ ನಕಾರಾತ್ಮಕ ಶಕ್ತಿ ತುಂಬುತ್ತದೆ. ಇಂದು ವಾಸ್ತು ಪ್ರಕಾರ ಮನೆಯಲ್ಲಿ ಗಂಟೆ ಅಳವಡಿಸುವ, ಬಳಸುವ ಕ್ರಮಗಳನ್ನು ನೋಡೋಣ. 

Tap to resize

Latest Videos

Vastu Tips : ಹಣ,ಆರೋಗ್ಯ ನಷ್ಟಕ್ಕೆ ಬೆಡ್ ರೂಮಿನಲ್ಲಿರೋ ಬಾತ್ ರೂಮ್ ಕಾರಣ…

ಸೂರ್ಯ ದೇವಾಲಯದಲ್ಲಿ ಶಂಖ(conch)ವನ್ನೂ, ದುರ್ಗೆಯ ದೇವಾಲಯದಲ್ಲಿ ಕೊಳಲು(flute) ಮತ್ತು ಮಾಧುರಿಯನ್ನೂ, ಶಿವನ ದೇವಾಲಯಗಲ್ಲಿ ಭಲ್ಲಕವನ್ನೂ ಬಳಸಬಾರದು ಎಂದು ಯೋಗಿನಿ ತಂತ್ರದಲ್ಲಿ ಹೇಳಲಾಗಿದೆ. ಆದರೆ, ಗಂಟೆಯನ್ನು ಎಲ್ಲ ದೇವಾಲಯಗಳಲ್ಲಿಯೂ ಬಳಸಬಹುದು. ದೇವಾಲಯದಲ್ಲಿ ಗಂಟೆಯ ಸದ್ದು ಕೇಳಿಯೇ ಪೂಜೆ ನಡೆಯುತ್ತಿದೆ ಎಂಬುದು ತಿಳಿದು ಹೋಗುತ್ತದೆ. ಆ ಸದ್ದಿಗೆ ಮನಸ್ಸಿನಲ್ಲಿ ದೇವರ ಚಿಂತನೆಗಳೇ ತುಂಬುತ್ತವೆ. ಹೊರಗಿನ ಹಾಗೂ ಒಳಗಿನ ಗದ್ದಲಗಳು ಸುಮ್ಮನಾಗುತ್ತವೆ. ಸ್ಕಂದ ಪುರಾಣ(Skanda puran)ದ ಪ್ರಕಾರ, ಗಂಟೆ ಬಾರಿಸಿದಾಗ ಹೊರಬರುವ ಶಬ್ದವು ಓಂ ಶಬ್ದಕ್ಕೆ ಹೋಲುತ್ತದೆ.  ಗಂಟೆಯ ಸದ್ದು ವಾತಾವರಣದಲ್ಲಿ ಕಂಪನವನ್ನು ಸೃಷ್ಟಿಸುತ್ತದೆ. ಈ ಕಂಪನಗಳು ಸುತ್ತಲಿನ ಕೆಟ್ಟ ಶಕ್ತಿಗಳನ್ನು ಓಡಿಸುತ್ತವೆ. ವಾತಾವರಣವನ್ನು ಶುದ್ಧೀಕರಿಸುತ್ತವೆ. ಇದಲ್ಲದೆ, ಮನೆಯಲ್ಲಿಯೂ ಸಣ್ಣ ಗಂಟೆಯಾದರೂ ಇದ್ದೇ ಇರುತ್ತದೆ. ಪೂಜೆ ಮಾಡುವಾಗ ಗಂಟೆ ಬಾರಿಸುವ ಕ್ರಮ ಎಲ್ಲ ಹಿಂದೂಗಳೂ ಆಚರಿಸಿಕೊಂಡು ಬರುತ್ತಾರೆ. ಗಂಟೆ ಇಲ್ಲದೆ ಮಾಡಿದ ಆರತಿ ಅಪೂರ್ಣವಾಗಿರುತ್ತದೆ. 

ಪುರಾಣಗಳಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ವಾಸ್ತುವಿನಲ್ಲಿ ಹೇಳಿರುವಂತೆ, ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದು ಬಹಳ ಶುಭವಾಗಿದೆ. ಗಂಟೆಯ ನಾಲಗೆಯಲ್ಲಿ ಸರಸ್ವತಿ ದೇವಿ, ಉದರದಲ್ಲಿ ಮಹಾರುದ್ರ, ಮುಖದಲ್ಲಿ ಸೃಷ್ಟಿಕರ್ತ ಬ್ರಹ್ಮ(Brahma), ಹಿಡಿಯ ಭಾಗದಲ್ಲಿ ಪ್ರಾಣ ಶಕ್ತಿ ಇರುತ್ತದೆ ಎನ್ನಲಾಗುತ್ತದೆ. ಸ್ಕಂದ ಪುರಾಣದ ಪ್ರಕಾರ, ಗಂಟೆಯು ವಿಷ್ಣುವಿನ ವಾಹನ ಗರುಡನೇ ಆಗಿದ್ದಾನೆ. 

Foods And Zodiac: ನಿಮ್ಮ ರಾಶಿಗೆ ಈ ಆಹಾರ ತಿಂದ್ರೆ ಅಜೀರ್ಣ ಗ್ಯಾರಂಟಿ!

ಮನೆಯಲ್ಲಿ ಪೂಜೆ ಸಂದರ್ಭದಲ್ಲಿ ಈ ವಿಷಯ ಗಮನದಲ್ಲಿಡಿ

  • ಮನೆಯಲ್ಲಿ ಪೂಜೆ ನಡೆವಾಗ ಗಂಟೆಯನ್ನು ಯಾವಾಗಲೂ ನಿಮ್ಮ ಎಡಬದಿಯಲ್ಲಿಡಬೇಕು.
  • ಗರುಡ ಚಿಹ್ನೆ ಇರುವ ಗಂಟೆಯು ಉತ್ತಮವಾದುದಾಗಿದೆ. ಅದರಲ್ಲೂ ವಿಷ್ಣುವಿನ ಪೂಜೆಗೆ ಇದೇ ಶ್ರೇಷ್ಠ.
  • ಮೊದಲು ಗಂಟೆಗೆ ಅಕ್ಷತೆ, ಗಂಧ ಹಾಗೂ ಹೂವುಗಳಿಂದ ಪೂಜೆ ಮಾಡಬೇಕು. 
  • ಈ ಸಂದರ್ಭದಲ್ಲಿ 'ಓಂ ಭೂರ್ಭುವ ಸ್ವಾಃ ಗರುಡಾಯ ನಮಃ' ಎಂಬ ಶ್ಲೋಕವನ್ನು ಹೇಳಿಕೊಳ್ಳಬೇಕು. 
  • ಧೂಪಾರತಿ ಹಾಗೂ ದೀಪಾರತಿ ಮಾಡುವ ಸಂದರ್ಭದಲ್ಲಿ ಗಂಟೆ ಬಾರಿಸಬೇಕು. 
  • ಪೂಜೆಯ ಬಳಿಕ ಗಂಟೆಯನ್ನು ದೇವರ ಸ್ಥಾನದಲ್ಲೇ ಇರಿಸಬೇಕು. ನೆಲದ ಮೇಲೆ ಇಡಕೂಡದು.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!