ಪ್ರಭುದೇವ್ ಕನ್ನಡ ಮೆಚ್ಚಿದ ನೆಟ್ಟಿಗರು. ರಮ್ಯಾ ಸಮಸ್ಯೆ ಅಲ್ಲ ಇಂಗ್ಲಿಷ್ ಭಾಷೆ ಎಂದು ಮತ್ತೊಮ್ಮೆ ಕ್ಲಾರಿಟಿ ಕೊಟ್ಟಿದ್ದಾರೆ ರಮೇಶ್ ಅರವಿಂದ್.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಅದ್ಭುತವಾಗಿ ಮೂಡಿ ಬರುತ್ತಿದೆ. ಮೋಹಕ ತಾರೆ ರಮ್ಯಾ, ಪ್ರಭುದೇವ್, ಡಾಕ್ಟರ್ ಮಂಜುನಾಥ್ ಹಾಗೂ ಹಿರಿಯ ನಟ ದತ್ತಣ್ಣ ಸಾಧಕರ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಜೀವನದ ಜರ್ನಿಯನ್ನು ಹಂಚಿಕೊಂಡಿದ್ದಾರೆ. ರಮ್ಯಾ ಇಂಗ್ಲಿಷ್ ಮಾತನಾಡಬಾರದಿತ್ತು ಎನ್ನುತ್ತಿದ್ದವರು ಪ್ರಭುದೇವ್ ಅವರ ಚಾಮರಾಜನಗರ ಕನ್ನಡ ಕೇಳಿ ಫುಲ್ ಖುಷ್ ಆಗಿದ್ದಾರೆ. ಹೀಗಾಗಿ WWR ಕಾರ್ಯಕ್ರಮದಲ್ಲಿ ಭಾಷೆ ಎಷ್ಟು ಮುಖ್ಯವಾಗುತ್ತದೆ ಪರಿಣಾಮ ಬೀರುತ್ತದೆ ಎಂದು ರಮೇಶ್ ಮತ್ತೊಮ್ಮೆ ರಿಯಾಕ್ಟ್ ಮಾಡಿದ್ದಾರೆ.
'ಇಂಗ್ಲಿಷ್ ಮಾತನಾಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ ಅಷ್ಟೆ. ರಮ್ಯಾ ಬಗ್ಗೆ ಯಾರೂ ಏನೂ ಹೇಳುತ್ತಿಲ್ಲ. ಈ ವಿಚಾರದ ಬಗ್ಗೆ ರಮ್ಯಾ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಚಾರ ರಮ್ಯಾ ಅಲ್ಲ ವಿಚಾರ ಇರೋದು ಜನರು ಏನು ಹೇಳುತ್ತಿದ್ದಾರೆ ಅದರಲ್ಲಿ. ಜನರು ಹೇಳುತ್ತಿರುವುದು ಇಂಗ್ಲಿಷ್ ಬಳಕೆ ಹೆಚ್ಚಾಗಿದೆ ಅದನ್ನು ಕಡಿಮೆ ಮಾಡಿ, ಹೆಚ್ಚಿಗೆ ಕನ್ನಡ ಬಳಸಿದರೆ ನಮಗೂ ಅರ್ಥವಾಗುತ್ತೆ ಎಂದು. ನನಗೆ ಮುಖ್ಯವಾಗುವುದು ಈ ವಿಚಾರ. ನೀವು ಯಾವುದರಲ್ಲಿ ಯಾರ ಬಗ್ಗೆ ಹೇಳಿದ್ದೀರಿ ಅನ್ನೋದು ನನಗೆ ಮುಖ್ಯವಾಗುವುದಿಲ್ಲ. ಇದನ್ನು ನಾವು ಸರಿ ಮಾಡಿಕೊಂಡು ಮುಂದುವರೆಯಬೇಕ ಅಷ್ಟೆ. ಯಾರ ಬಗ್ಗೆ ಏನು ಹೇಳಿದ್ದಾರೆ ಅನ್ನೋದಕ್ಕಿಂತ ಹೇಳಿರುವುದರಲ್ಲಿ ಕೋರ್ ಪಾಯಿಂಟ್ ಏನಿದೆ? ಅದು ನಿಜಾನಾ? ಸುಮ್ಮನೆ ಎಷ್ಟೋ ವಿಚಾರಗಳು ಬರುತ್ತೆ ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಜನರು ಹೇಳುತ್ತಿರುವುದು ಸತ್ಯ ಅಂದ್ರೆ ನಾನು ಕೇಳಬೇಕು ಇದರಿಂದ ನನ್ನ ಶೋಗೆ ಉಪಯೋಗವಾಗುತ್ತದೆ ಅಂದ್ರೆ ತಿದ್ದುಕೊಳ್ಳಬೇಕು' ಎಂದು ಕನ್ನಡ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಟ್ರೋಲ್ ಆದ್ರೂ ವೀಕೆಂಡ್ ವಿತ್ ರಮೇಶ್ ರಮ್ಯಾ ಎಪಿಸೋಡ್‌ಗೆ TRP ಬಂದಿರೋದು ನೋಡಿ!
'ವೀಕೆಂಡ್ ವಿತ್ ರಮೇಶ್ ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚಾಗಿದೆ. ಇದು ನನ್ನ ಶೋ ಅಥವಾ ಜೀ ಕನ್ನಡ ವಾಹಿನಿಯವರ ಶೋ ಅಲ್ಲ ನಮ್ಮ ಶೋ ಎಂದು ಜನರು ಭಾವಿಸಿದ್ದಾರೆ. ಪ್ರಭುದೇವ ಅವರ ಎಪಿಸೋಡ್ ಮೊದಲು ಚಿತ್ರೀಕರಣ ಮಾಡಿದ್ದು ಆನಂತರ ರಮ್ಯಾ ಅವರದ್ದು ಮಾಡಿದ್ದು. ವಾರ ವಾರವೂ ಟಿಆರ್‌ಪಿ ಬರುತ್ತೆ ಅದನ್ನು ನೋಡಿ ಖುಷಿ ಆಯ್ತು. ಇನ್ನು 14 ಸಾಧಕರು ಬಂದು ತಮ್ಮ ಜರ್ನಿ ಹಂಚಿಕೊಳ್ಳಬೇಕು. ರಮ್ಯಾ ಮತ್ತು ಪ್ರಭುದೇವ ಅವರ ಭಾಷೆ ಬಗ್ಗೆ ನಾವು ವೈಯಕ್ತಿಕವಾಗಿ ಮಾತನಾಡುವುದು ಏನೂ ಇಲ್ಲ ಜನರು ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಮ್ಮ ಮನಸ್ಸಿನಲ್ಲಿ ಏನಿದೆ ಅದು ಪ್ರಾಮಾಣಿಕವಾಗಿ ಹೊರ ಬರಬೇಕು ಹೀಗಾಗಿ ಭಾಷೆ ಮಿತಿ ಇಲ್ಲ. ಅನೇಕರು ನಮಗೆ ಸಲಹೆ ಕೊಡುತ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದನ್ನು ಪರಿಗಣಿಸುತ್ತಿದ್ದೀವಿ. ಸಾಹಿತ್ಯ ವಿಭಾಗದಲ್ಲಿ ಭೈರಪ್ಪ ಬರಬೇಕು ಅಂತಾರೆ...ಸೀಸನ್ 1ರಿಂದ ಅವರ ಸಂಪರ್ಕ ಮಾಡುತ್ತಿದ್ದೀವಿ. ರಾಹುಲ್ ಡ್ರಾವಿಡ್ ಅವರನ್ನು ಕೇಳುತ್ತಿದ್ದೀವಿ...ಐಪಿಎಲ್ ಇದೆ ಬ್ಯುಸಿಯಾಗಿದ್ದಾರೆ ಅವರ ಫ್ಯಾಮಿಲಿ ಫ್ರೀ ಇರಬೇಕು ಅವರಿಬ್ಬರೂ ಫ್ರೀ ಇದ್ರೆ ನನ್ನ ಡೇಟ್ ಫುಲ್ ಅಗಿರುತ್ತದೆ' ಎಂದು ರಮೇಶ್ ಹೇಳಿದ್ದಾರೆ.
ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ; ರಮ್ಯಾ ಇಂಗ್ಲಿಷ್ ಎಪಿಸೋಡ್‌ಗೆ ರಮೇಶ್ ರಿಯಾಕ್ಷನ್ ವೈರಲ್
'ಸಾಧನೆ ಮಾಡಿದವರು ತಪ್ಪದೆ ಆ ಕೆಂಪು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾರೆ. ಜನರು ತಂದು ಕೂರಿಸುತ್ತಾರೆ. ದತ್ತಣ್ಣ ನನಗೆ ಅಮೆರಿಕಾ ಅಮೆರಿಕಾ ಸಿನಿಮಾ ಸಮಯದಿಂದ ದತ್ತಣ್ಣ ಚೆನ್ನಾಗಿ ಗೊತ್ತು ಶೋ ಚೆನ್ನಾಗಿ ನಡೆಯುತ್ತಿತ್ತು ಕೊನೆಯಲ್ಲಿ ಪಾಪ ಪ್ರಜ್ಞೆ ಕಾಡುತ್ತಿದ್ಯಾ ಎಂದು ಪ್ರಶ್ನೆ ಮಾಡಿದಾಗ ಚಿಕ್ಕ ವಯಸ್ಸಿನಲ್ಲಿ ಹಣ ಇರಲಿಲ್ಲ ತಂದೆ ತಾಯಿ ನೋಡಿಕೊಳ್ಳಲು ಆಗಲಿಲ್ಲ ಈಗ ಹಣ ಇದೆ ಯಾರನ್ನು ನೋಡಿಕೊಳ್ಳಿ ಎಂದಿದ್ದಾರೆ. ಆ ಒಂದು ಕ್ಷಣ ಅವರ ಮಾತು ಕೇಳಿ ಮೌನಿ ಆದೆ. ತುಂಬಾ ಭಾವುಕರಾದ ಕಾರಣ ನಾನು ಅಲ್ಲಿಗೆ ಮತ್ತೊಂದು ವಿಚಾರ ತೆಗೆದುಕೊಂಡು ಮನಸ್ಸು ಬದಲಾಯಿಸಿದೆ' ಎಂದಿದ್ದಾರೆ ರಮೇಶ್.