
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್‌ನ ನಾಲ್ಕನೇ ಅತಿಥಿಯಾಗಿ ಏರ್ಫೋರ್ಸ್ನಲ್ಲಿ ವಿಂಗ್ ಕಮಾಂಡರ್, ರಂಗಭೂಮಿ ಕಲಾವಿದ ಹಾಗೂ ಹಿರಿಯ ನಟ ದತ್ತಣ್ಣ ಆಗಮಿಸಿದ್ದರು. ಈ ವೇಳೆ ತಮ್ಮ ಪಿಂಚಣಿ, ಮದುವೆ, ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
'ನಾನು ರಿಟೈಯರ್ ಆಗುವ ಸಮಯದಲ್ಲಿ ನನ್ನ ಪೇ 10 ಸಾವಿರ ರೂಪಾಯಿ ಇತ್ತು. ಪ್ರತಿ ತಿಂಗಳು ಪಾಸ್ ಬುಕ್ ನೋಡಿ ಚೆಕ್ ಸಹಿ ಮಾಡಬೇಕಿತ್ತು. ಇವತ್ತು ನಮ್ಮ ಪಿಂಚಣಿ 130 ಅಥವಾ 140 ಬರುತ್ತೆ ..ಇದೇನಾದ್ರೂ ಅವತ್ತು ಇದ್ದಿದ್ರೆ ನಮ್ಮ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬಹುದಿತ್ತು. ಪ್ರತಿಯೊಬ್ಬರಿಗೂ ಜೀವನದಲ್ಲಿ ಅನಿಸುತ್ತದೆ ನರಳುವ ಸಮಯದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನಿಸುತ್ತದೆ. ಕಷ್ಟ ಆದ್ರೂ ಪರ್ವಾಗಿಲ್ಲ ಅವ್ರು ಇರ್ಬೇಕಾದ್ರೆ ನೋಡಿಕೊಳ್ಳಬೇಕು ಅನಿಸುತ್ತದೆ' ಎಂದು ದತ್ತಣ್ಣ ಭಾವುಕರಾಗುತ್ತಾರೆ.
ಟ್ರೋಲ್ ಆದ್ರೂ ವೀಕೆಂಡ್ ವಿತ್ ರಮೇಶ್ ರಮ್ಯಾ ಎಪಿಸೋಡ್‌ಗೆ TRP ಬಂದಿರೋದು ನೋಡಿ!
'ದತ್ತಣ್ಣ ಯಾಕೆ ಮದುವೆ ಮಾಡಿಕೊಂಡಿಲ್ಲ ಎಂದು ಅನೇಕು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರವನ್ನು ದತ್ತಣ್ಣ ಸ್ನೇಹಿತರು ಕೊಟ್ಟಿದ್ದಾರೆ. ದತ್ತಣ್ಣ ಓದಿನಲ್ಲಿ ಚುರುಕಕಿದ್ದರು. ಜೀವನದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಆದರೆ ಮದುವೆ ಆಗಲೇ ಇಲ್ಲ. ಯಾವಾಗಲೂ ಫ್ರೀ ಆಗಿರಬೇಕು ಎಲ್ಲರೂ ಒಂದು ಸಂಸಾರದ ಗೋಳು ಹೇಳಿಕೊಳ್ತಾರೆ ಅದಕ್ಕೆ ನಾನು ಮದುವೆ ಆಗಲ್ಲ. ಮದುವೆ, ಸಂಸಾರ ಅನ್ನೋದು ಒಂದು ದೊಡ್ಡ ಗೋಳು' ಎಂದು ದತ್ತಣ್ಣ ಹೇಳುತ್ತಿದ್ದ ಮಾತುಗಳನ್ನು ಅವರ ಸ್ನೇಹಿತರು ವೀಕೆಂಡ್ ಕಾರ್ಯಕ್ರಮದ ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ.
ದತ್ತಣ್ಣ ಅವರ ಹೆದರು ದತ್ತಾತ್ರೇಯ. ಮೂಲತಃ ಚಿತ್ರದುರ್ಗದವರಾಗಿದ್ದ ದತ್ತಣ್ಣ ವಿದ್ಯಾಭ್ಯಾಸದಲ್ಲಿ ಸದಾ ಮುಂದು. ಫಸ್ಟ್ ರ್ಯಾಂಕ್ ಪಡೆದು ಏರ್‌ಪೋರ್ಟ್‌ನಲ್ಲಿ ವಿಂಹ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಾರೆ. 45ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಚಂಡೀಗಢ, ದೆಹಲಿ, ಅಂಡಮಾನ್ ಸೇರಿದಂತೆ ಮುಂತಾದ ಕಡೆ ಸೇವೆ ಅಲ್ಲಿಸಿದ್ದಾರೆ 1987ರಲ್ಲಿ ಬೆಂಗಳೂರಿನ ಎಚ್‌ಎಎಲ್‌ಗೆ ವರ್ಗವಾಗಿ ಬಂದರು. ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಆನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಪುಣ್ಯಾತ್ಮ, ಕನ್ನಡಿಗರ ಹೆಮ್ಮೆ, ಸೂಪರ್ ಗೆಸ್ಟ್: ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್
'ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದಾರೆ. ನನಗೆ 82 ವರ್ಷ ಆಗಿದೆ ಬೇಡ ಎಂದು ಹೇಳಿದರೂ ಕೇಳಲಿಲ್ಲ. ನನ್ನ ಬಗ್ಗೆ ಮಾಹಿತಿ ಕೊಡಲು ನನ್ನ ಕಾಲದವರು ಯಾರೂ ಇಲ್ಲ ಯಾಕೆ ಸುಮ್ಮನೆ ವ್ಯರ್ಥ ಪ್ರಯತ್ನ ಎಂದು ಹೇಳಿದೆ. ಇವತ್ತು ಇಷ್ಟು ಮಾಹಿತಿ ಪಡೆದು ನನ್ನನ್ನು ಕರೆಸಿರುವುದಕ್ಕೆ ಹ್ಯಾಟ್ಸ್ ಆಫ್. ಇರುವವರು ಇಲ್ಲದೇ ಇರುವವರನ್ನು ಒಟ್ಟಾಗಿಸಿ ಒಂದು ಸರಮಾಳೆಯನ್ನು ಮಾಡಿ ಅದನ್ನು ನನ್ನ ಕೊರಳಿಗೆ ಹಾಕಿದ್ದಾರೆ' ಎಂದು ದತ್ತಣ್ಣ ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಆಗಮಿಸಿದ್ದರು, ಎರಡನೇ ಅತಿಥಿ ಪ್ರಭುದೇವ, ಮೂರನೇ ಅತಿಥಿ ಜಯದೇವ ಡಾಕ್ಟರ್ ಮಂಜುನಾಥ್ ಹಾಗೂ ನಾಲ್ಕನೇ ಅತಿಥಿಯಾಗಿ ದತ್ತಣ್ಣ ಆಗಮಿಸಿದ್ದಾರೆ. ಡಾಕ್ಟರ್ ಬ್ರೋ ಬರಬೇಕು ಅನ್ನೋದು ನೆಟ್ಟಿಗರ ಆಸೆ...ಹೀಗಾಗಿ ಯಾರೆಲ್ಲಾ ಲಿಸ್ಟ್‌ನಲ್ಲಿದ್ದಾರೆ ಎಂದು ಇನ್ನು ರಿವೀಲ್ ಆಗಿಲ್ಲ. ಒಟ್ಟಾರೆ 15 ಸಾಧಕರನ್ನು ಸೀಸನ್ 5 ಕೆಂಪು ಕುರ್ಚಿಯಲ್ಲಿ ಕಾಣಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.