ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಇದು ನಿಜಾನಾ?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ-ಮಾಧವ್ ಕುಟುಂಬ ಒಂದಾಗಿದೆ. ಇನ್ನೇನಿದ್ರೂ ಶಾರ್ವರಿಯ ನಿಜವಾದ ಮುಖ ಬಯಲಾಗಬೇಕು ಅಷ್ಟೇ. ಬಹುಬೇಗ ಈ ಧಾರಾವಾಹಿ ಮುಕ್ತಾಯ ಆಗಲಿದೆ ಎನ್ನಲಾಗುತ್ತಿದೆ. ಹೀಗೊಂದು ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಿಜಕ್ಕೂ ಈ ಸೀರಿಯಲ್ ಮುಗಿಯತ್ತಾ?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಕಥೆ ನೋಡಿದರೆ ಈ ಸೀರಿಯಲ್ ಮುಗಿಯಲಿದೆ ಎಂಬ ಮಾತು ಶುರುವಾಗಿದೆ. ಈ ಧಾರಾವಾಹಿ ಯಾವಾಗ ಮುಗಿಯತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಈ ಬಗ್ಗೆ ಕಲಾವಿದರಾಗಲೀ, ವಾಹಿನಿಯಾಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಅಂತ್ಯ!
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯ ಟಿಆರ್‌ಪಿ ಚೆನ್ನಾಗಿದ್ದರೂ ಕೂಡ, ಈ ಸೀರಿಯಲ್ ಅಂತ್ಯ ಆಗಲಿದೆ. ವಾಹಿನಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. ಈ ಜಾಗಕ್ಕೆ ʼಬಿಗ್ ಬಾಸ್ʼ ಖ್ಯಾತಿಯ ತ್ರಿವಿಕ್ರಮ್, ಪ್ರತಿಮಾ ನಟನೆಯ ಈ ಧಾರಾವಾಹಿ ಎಂಟ್ರಿ ಕೊಡಲಿದೆ. ಏಪ್ರಿಲ್ 14ರಿಂದ ಸಂಜೆ 7.30ಗೆ ಈ ಧಾರಾವಾಹಿ ಪ್ರಸಾರ ಆಗಲಿದೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ: ಅತ್ತ ಶಾರ್ವರಿ ಪಾಪ ಬಯಲಾಗ್ತಿದ್ರೆ, ಇತ್ತ ತುಳಸಿ ಜೀವ ಹೋಗೋ ನ್ಯೂಸ್ ಬಂತು!
ಹೊಸ ಧಾರಾವಾಹಿಗೆ ಜಾಗ ಮಾಡಿಕೊಡ್ತಿದ್ಯಾ?
ʼಕರ್ಣʼ ಎನ್ನುವ ಧಾರಾವಾಹಿ ಶುರುವಾಗುತ್ತಿದೆ. ಅಷ್ಟೇ ಅಲ್ಲದೆ ʼರಾಘವೇಂದ್ರ ಸ್ವಾಮಿ ಮಹಾತ್ಮೆʼ ಧಾರಾವಾಹಿ ಪ್ರಸಾರ ಆಗಲಿದೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯು ಸಂಜೆ ಆರು ಗಂಟೆಗೆ ಪ್ರಸಾರ ಆಗುವುದು. ʼಕರ್ಣʼ ಧಾರಾವಾಹಿಯು ಈ ಜಾಗದಲ್ಲಿ ಪ್ರಸಾರ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಕಥೆ ಏನಾಗಿತ್ತು?
ಮಾಧವ್ ಹಾಗೂ ತುಳಸಿ ಇಬ್ಬರೂ ಸಂಗಾತಿಗಳನ್ನು ಕಳೆದುಕೊಂಡಿದ್ದರು. ಇವರಿಬ್ಬರ ಮಕ್ಕಳಿಗೂ ಮದುವೆ ಆಗಿತ್ತು. ಈ ವಯಸ್ಸಿನಲ್ಲಿ ಇವರಿಬ್ಬರು ಒಂಟಿಯಾಗಿದ್ದರು. ಇಬ್ಬರಿಗೂ ಪರಿಚಯ ಆಗಿ ಮದುವೆಯಾಗುವುದು. ಈ ಮದುವೆಯನ್ನು ಇವರಿಬ್ಬರ ಮಕ್ಕಳು ಕೂಡ ವಿರೋಧ ಮಾಡ್ತಾರೆ. ಎಲ್ಲ ಸವಾಲುಗಳನ್ನು ಎದುರಿಸಿ ತುಳಸಿ ಮಾಧವ್ ಮನೆಗೆ ಒಳ್ಳೆಯ ಸೊಸೆ ಆಗ್ತಾಳೆ. ಆ ನಂತರದಲ್ಲಿ ಮಕ್ಕಳು ಕೂಡ ಈ ಮದುವೆಯನ್ನು ಒಪ್ಪುತ್ತಾರೆ. ಅಷ್ಟೇ ಅಲ್ಲದೆ ತುಳಸಿ ಗರ್ಭಿಣಿ ಆಗುತ್ತಾಳೆ. ಮಾಧವ್ ಮಗ ಅವಿನಾಶ್‌ಗೆ ಮಕ್ಕಳಿರಲಿಲ್ಲ. ಆಗಲೇ ತುಳಸಿಯು ತನ್ನ ಮಗುವನ್ನು ಅವಿನಾಶ್ ದಂಪತಿಗೆ ಕೊಡಬೇಕು ಎಂದುಕೊಂಡಿದ್ದಳು. ಅದರಂತೆ ಮಗುವನ್ನು ಕೊಟ್ಟಿದ್ದಾಳೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ: ಅತ್ತ ಶಾರ್ವರಿ ಪಾಪ ಬಯಲಾಗ್ತಿದ್ರೆ, ಇತ್ತ ತುಳಸಿ ಜೀವ ಹೋಗೋ ನ್ಯೂಸ್ ಬಂತು!
ಈಗ ಎಲ್ಲರೂ ಚೆನ್ನಾಗಿ ಖುಷಿಯಲ್ಲಿದ್ದಾರೆ. ಶಾರ್ವರಿ ಈ ಮನೆ ಹಾಳು ಮಾಡಲು ಏನು ಮಾಡಿದ್ದಾಳೆ? ಇಲ್ಲಿಯವರೆಗೆ ಅವಳು ಮಾಡಿದ ಮೋಸ ಏನು ಎನ್ನೋದು ರಿವೀಲ್ ಆಗಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿವೆ.
ಪಾತ್ರಧಾರಿಗಳು
ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವ್ ಪಾತ್ರದಲ್ಲಿ ಅಜಿತ್ ಹಂದೆ, ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್ ಅವರು ನಟಿಸುತ್ತಿದ್ದಾರೆ.