ʼಅಮೃತಧಾರೆʼ ಧಾರಾವಾಹಿಯಲ್ಲಿ ಜಯದೇವ್-ದಿಯಾ ಮದುವೆಗೆ ಕಲ್ಲು ಬಿದ್ದಿದ್ದು, ದೊಡ್ಡ ಸತ್ಯ ಹೊರಗಡೆ ಬಂದಿದೆ. ಏನದು?
ʼಅಮೃತಧಾರೆʼ ಧಾರಾವಾಹಿಯಲ್ಲಿ ಜಯದೇವ್-ದಿಯಾ ಮದುವೆ ನಡೆಯುತ್ತಿತ್ತು. ಭೂಮಿಕಾಗೆ ಗೊತ್ತಾಗದಂತೆ ಈ ಮದುವೆ ತಡೆಯಲು ಮಲ್ಲಿ ಪ್ಲ್ಯಾನ್ ಮಾಡಿದ್ದಳು. ಕೊನೆಗೂ ಈ ಮದುವೆ ನಿಂತಿದೆ. ಅಷ್ಟೇ ಅಲ್ಲದೆ ದೊಡ್ಡ ಅಪಾಯದಿಂದ ಜಯದೇವ್ ಬಚಾವ್ ಆಗಿದ್ದಾನೆ.
ಭೂಮಿಗೆ ವಿಷಯ ತಿಳಿಸಲೇ ಇಲ್ಲ!
ದಿಯಾ ಕಾಟದಿಂದ ಜಯದೇವ್ ಮದುವೆ ಆಗೋಕೆ ಒಪ್ಪಿದ್ದನು. ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಇನ್ನೇನು ಜಯದೇವ್ ದಿಯಾಗೆ ತಾಳಿ ಕಟ್ಟಬೇಕಿತ್ತು. ದೇವರ ದರ್ಶನ ಮಾಡೋಣ ಅಂತ ಭೂಮಿ, ಮಲ್ಲಿ ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದರು. ಆಗ ಜಯದೇವ್ ಮತ್ತೊಂದು ಮದುವೆ ಆಗ್ತೊರೋದನ್ನು ಮಲ್ಲಿ ನೋಡಿದ್ದಳು. ಭೂಮಿಕಾಗೆ ಈ ವಿಷಯ ಗೊತ್ತಾದರೆ ದೊಡ್ಡದಾಗತ್ತೆ, ಸುಮ್ಮನೆ ಚಿಂತೆ ಎಂದು ಅವಳು ತಾನೇ ಹ್ಯಾಂಡಲ್ ಮಾಡಲು ನೋಡಿದ್ದಳು.
'ಅಮೃತಧಾರೆ' ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು! ಆಗರ್ಭ ಶ್ರೀಮಂತೆ ಪ್ರತಿದಿನ ಸ್ನಾನನೇ ಮಾಡಲ್ವಾ?
ದಿಯಾ ಅಸಲಿ ರೂಪ ಏನು?
ಏನೋ ಒಂದು ನೆಪ ಹೇಳಿ ಭೂಮಿಯನ್ನು ಮನೆಗೆ ಕಳಿಸಿ, ದೇವಸ್ಥಾನದಲ್ಲಿ ತಾನು ಉಳಿದುಕೊಂಡ ಮಲ್ಲಿ, ತಕ್ಷಣವೇ ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶ್ರಾವಣಿಗೆ ಫೋನ್ ಮಾಡಿ ನಡೆದ ವಿಷಯವನ್ನು ಹೇಳಿದಳು. ತಕ್ಷಣವೇ ಶ್ರಾವಣಿ ಅಲ್ಲಿಗೆ ಬಂದಳು. ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದು, “ಜಯದೇವ್ ಸುಮಾರು ಜನರಿಗೆ ಮೋಸ ಮಾಡಿದ್ದಾರೆ. ಅದರಂತೆ ದಿಯಾ ಕೂಡ ಮೋಸ ಮಾಡಿದ್ದಾಳೆ. ದೊಡ್ಡ ಮನೆತನದ ಹುಡುಗರನ್ನು ಪ್ರೀತಿಸೋದು, ಮದುವೆ ಆದ ದಿನವೇ ಬಂಗಾರ, ದುಡ್ಡು ತಗೊಂಡು ಎಸ್ಕೇಪ್ ಆಗೋದು ಅವಳ ಪ್ಲ್ಯಾನ್” ಎಂದು ಹೇಳಿದ್ದಲ್ಲದೆ ಪೊಲೀಸರಿಗೆ ಒಪ್ಪಿಸಿದ್ದಾಳೆ. ತಾನು ಮೋಸ ಹೋಗೋದರಿಂದ ಬಚಾವ್ ಆದೆ ಅಂತ ಜಯದೇವ್ ನಿಟ್ಟುಸಿರು ಬಿಟ್ಟಿದ್ದಾನೆ.
ಕರ್ಮ ಯಾರನ್ನೂ ಬಿಡೋದಿಲ್ಲ ಅಂತ ಇದಕ್ಕೆ ಹೇಳೋದು. ಜಯದೇವ್ ಬೇರೆಯವರಿಗೆ ಮೋಸ ಮಾಡಿದ್ರೆ, ಅವನಿಗೆ ಮೋಸ ಮಾಡೋದಿಕ್ಕೆ ದಿಯಾ ರೆಡಿಯಾಗಿದ್ದಳು. ಆದರೆ ಮಲ್ಲಿ ದಯೆಯಿಂದ ಅವನು ಬಚಾವ್ ಆದನು.
ಮಲ್ಲಿಗೆ ಈಗ ಇರುವ ಚಿಂತೆ ಏನು?
“ನನ್ನ ಮಗು ಸತ್ತು ಹೋಯ್ತು. ಈಗ ಸಂಸಾರ ಹಳಿತಪ್ಪಿದೆ, ದಯವಿಟ್ಟು ಸರಿ ಮಾಡು” ಎಂದು ಮಲ್ಲಿ ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾಳೆ. ಯಾವಾಗ ಜಯದೇವ್ ಸರಿ ಹೋಗ್ತಾನೋ? ಯಾವಾಗ ಬುದ್ಧಿ ಬರತ್ತೋ ಏನೋ!
ಅಮೃತಧಾರೆ ಧಾರಾವಾಹಿ: ಭೂಮಿಕಾಗೆ ಮೋಸಗಾತಿ ಎಂದ ಗೌತಮ್; ತ್ಯಾಗಮಯಿ ಪತ್ನಿಗೆ ಇಂಥ ಮಾತು ಹೇಳೋದಾ?
ಧಾರಾವಾಹಿ ಕತೆ ಏನು?
ಗೌತಮ್‌ಗೆ 45 ವರ್ಷ ಆದಾಗ, ಭೂಮಿಕಾಗೆ 35 ಆಗಿದ್ದಾಗ ಇವರಿಬ್ಬರೂ ಮನೆಯವರ ಖುಷಿಗೋಸ್ಕರ ಮದುವೆಯಾಗಿದ್ದರು. ಗೌತಮ್‌ಗೆ ಮದುವೆಯಾಗಿ, ಅವನಿಗೆ ಮಕ್ಕಳಾಗೋದು, ಆಮೇಲೆ ಅವನ ಆಸ್ತಿ ಮಗುವಿನ ಪಾಲಾಗೋದು ಮಲತಾಯಿ ಶಕುಂತಲಾಗೆ ಇಷ್ಟ ಇರಲಿಲ್ಲ. ಆದರೆ ವಿಧಿಯು ಗೌತಮ್-ಭೂಮಿಯನ್ನು ಸಿಕ್ಕಾಪಟ್ಟೆ ಹತ್ತಿರ ಮಾಡಿತ್ತು. ಆದರೆ ಶಕುಂತಲಾಳ ಮಗ ಜಯದೇವ್ ಮಾತ್ರ ಅಣ್ಣ ಗೌತಮ್ ಆಸ್ತಿಯನ್ನು ಹೊಡೆಯೋಕೆ ನಿತ್ಯವೂ ಒಂದಲ್ಲ ಒಂದು ಯತ್ನ ಮಾಡುತ್ತಿದ್ದಾನೆ. ಇವೆಲ್ಲವೂ ಯಾವಾಗ ಗೌತಮ್ ಮುಂದೆ ಹೊರಬರಲಿದೆ? ಶಕುಂತಲಾಳ ನಾಟಕ ಬಯಲಾಗತ್ತಾ ಎಂಬ ಪ್ರಶ್ನೆ ಎದ್ದಿದೆ. ಗೌತಮ್ ತಾಯಿ ಭಾಗ್ಯಗೆ ಶಕುಂತಲಾ ಏನು ಮಾಡಿದ್ದಳು? ನಿಜಕ್ಕೂ ಈ ಹಿಂದೆ ಏನಾಗಿತ್ತು ಎನ್ನೋದು ಕೂಡ ರಿವೀಲ್ ಆಗಬೇಕಿದೆ. ಈಗಾಗಲೇ ಮಲ್ಲಿಯನ್ನು ಮದುವೆ ಆಗಿರೋ ಜಯದೇವ್ ಅಕ್ರಮ ಸಂಬಂಧ ಇಟ್ಟುಕೊಳ್ಳಲು ನೋಡುತ್ತಿರುತ್ತಾನೆ. ಅವನಿಗೆ ಯಾವಾಗ ಬುದ್ಧಿ ಬರತ್ತೋ ಏನೋ!
ಪಾತ್ರಧಾರಿಗಳು
ಗೌತಮ್ ದಿವಾನ್ ಪಾತ್ರದಲ್ಲಿ ನಟ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ನಟಿ ಛಾಯಾ ಸಿಂಗ್, ಶಕುಂತಲಾ ದಿವಾನ್ ಪಾತ್ರದಲ್ಲಿ ಹಿರಿಯ ನಟಿ ವನಿತಾ ವಾಸು, ಮಲ್ಲಿ ಜಯದೇವ್ ಪಾತ್ರದಲ್ಲಿ ಅನ್ವಿತಾ ಸಾಗರ್, ಜಯದೇವ್ ಪಾತ್ರದಲ್ಲಿ ನಟ ರಾಣವ್ ಅವರು ಅಭಿನಯಿಸುತ್ತಿದ್ದಾರೆ.