ಸೀರಿಯಲ್‌ ನೋಡಿ ನೀನೇ ಬೇಕು ಎಂದು ಹಠ ಮಾಡಿದ ಗಂಡ,ಅತ್ತೆ; 'ಶ್ರಾವಣಿ ಸುಬ್ರಹ್ಮಣ್ಯ' ಸ್ನೇಹಾ ಬಿಚ್ಚಿಟ್ಟ ಮದುವೆ ಕಥೆ ವೈರಲ್!

By Vaishnavi Chandrashekar  |  First Published Jul 20, 2024, 3:32 PM IST

ಸೀರಿಯಲ್‌ನಲ್ಲಿ ವಿಚಿತ್ರ ಪಾತ್ರ ಮಾಡುತ್ತಿದ್ದರೂ ಗಂಡನ ಪ್ರೀತಿ ಗಿಟ್ಟಿಸಿಕೊಂಡ ಸ್ನೇಹಾ. ಮದುವೆ ಸ್ಟೋರಿ ವೈರಲ್.....
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವ ಸ್ನೇಹಾ ಉರ್ಫ್‌ ವಿಜಯಾಂಬಿಕಾ ರಿಯಲ್ ಲೈಫ್‌ ಮ್ಯಾರೇಜ್‌ ಸ್ಟೋರಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನೋಡಲು ಸದಾ ಗರಂ ಆಗಿರುವ ವಿಜಯಾಂಬಿಕಾ ರಿಯಲ್‌ ಲೈಫ್‌ನಲ್ಲಿ ಸಖತ್ ಕೂಲ್ ಹಾಗೂ ನಗುತ್ತಲೇ ಇರುತ್ತಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸ್ನೇಹಾ ಭಾಗವಹಿಸಿದ್ದು ತಮ್ಮ ಮದುವೆ ಸ್ಟೋರಿ ಹಂಚಿಕೊಂಡಿದ್ದಾರೆ.

'ನಾನು ಮದುವೆಯಾಗಿ 19 ವರ್ಷಗಳಾಗಿದೆ ಆಗ ಯಾವ ಪ್ರೀ- ವೆಡ್ಡಿಂಗ್ ಶೂಟ್‌ಗಳು ಇರಲಿಲ್ಲ. ಮದುವೆ ರಿಸೆಪ್ಶನ್‌ನಲ್ಲಿ ಫೋಟೋ ತೆಗೆಸಿಕೊಂಡಾಗ ಸುಸ್ತಾಗುತ್ತಿದ್ವಿ. ಸೀರಿಯಲ್‌ ನೋಡಿ ನನ್ನ ಮದುವೆ ಆಗಿರುವುದರಿಂದ ನನ್ನ ಮದುವೆ ವಿಭಿನ್ನ ಅಂತ ನನಗೆ ಖುಷಿ ಇದೆ. ನಾನು ಮಾಡುತ್ತಿದ್ದ ಮೊದಲ ತಮಿಳು ಸೀರಿಯಲ್‌ನ ನನ್ನ ಅತ್ತಿ ಪ್ರತಿ ದಿನ ನೋಡುತ್ತಿದ್ದರು ಆ ಸಮಯದಲ್ಲಿ ನನ್ನ ಗಂಡನಿಗೆ ಹುಡುಗಿ ಹುಡುಕುತ್ತಿದ್ದರು ಅಂದು ರಜೆ ಇದ್ದ ಕಾರಣ ಅವರು ಕೂಡ ಸೀರಿಯಲ್ ನೋಡುತ್ತಿದ್ದರು. ತಾಯಿಯಿಂದ ಮದುವೆ ವಿಚಾರದಲ್ಲಿ ತಪ್ಪಿಸಿಕೊಳ್ಳಬೇಕು ಎಂದು ಸುಮ್ಮನೆ ನೋಡು ಈ ರೀತಿ ಹುಡುಗಿ ಇದ್ದರೆ ನನಗೆ ಓಕೆ ಎಂದುಬಿಟ್ಟಿದ್ದಾರೆ' ಎಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸ್ನೇಹಾ ಮಾತನಾಡಿದ್ದಾರೆ.

Tap to resize

Latest Videos

2 ವರ್ಷ ಕೈ ಕಟ್ಟಾಕಿದ್ದಂತೆ ಆಗಿತ್ತು, ಯಾರಾದರೂ ನನ್ನನ್ನು ಸೇವ್ ಮಾಡಲಿ ಎಂದು ಕಾಯುತ್ತಿದ್ದೆ: ಚೈತ್ರಾ ವಾಸುದೇವನ್ ಕಣ್ಣೀರು

'ಆಗ ಸೀರಿಯಲ್ ಕೊನೆಯಲ್ಲಿ ಕಂಪನಿ ವಿಳಾಸ ಹಾಕುತ್ತಿದ್ದರು ಅದನ್ನು ನೋಡಿ ನಮ್ಮ ಅತ್ತೆ ಸಂಪರ್ಕ ಮಾಡಿದಾಗ ಕಲಾವಿದರ ನಂಬರ್ ಕೊಡುವುದಿಲ್ಲ ಪೋಷಕರ ನಂಬರ್ ಕೊಡುತ್ತೀವಿ ಎಂದು ಹೇಳಿದ್ದಕ್ಕೆ ಸರಿ ಅಂತ ಹೇಳಿ ನಮ್ಮ ತಂದೆ ತಾಯಿ ಜೊತೆ ಮಾತನಾಡಿದ್ದರು. ಅವರೇ ಬೇರೆ ಭಾಷೆ ನಾವೇ ಬೇರೆ ಭಾಷೆ ನಮ್ಮ ಮನೆಗೆ ಬಂದು ಹೆಣ್ಣು ನೋಡುವ ಶಾಸ್ತ್ರಿ ಮಾಡಿ ಆಮೇಲೆ ಮದುವೆ ಆಗಿದ್ದು' ಎಂದು ಸ್ನೇಹಾ ಹೇಳಿದ್ದಾರೆ.

ಪುಷ್ಪ 2 ರಿಲೀಸ್‌ ದಿನವೇ ಗೇಮ್‌ ಚೇಂಜರ್‌ ರಿಲೀಸ್; ಅಲ್ಲು ಅರ್ಜುನ್ - ರಾಮ್‌ ಚರಣ್ ಜಟಾಪಟಿ?

'ನನ್ನ ತಂದೆಗೆ  ಅವರ ಫ್ಯಾಮಿಲಿ ಕೂಡ ತುಂಬಾ ಇಷ್ಟ. ನನಗೆ ಆಗ ಮದುವೆ ಬಗ್ಗೆ ಏನೂ ಗೊತ್ತಗುತ್ತಿರಲಿಲ್ಲ ಹುಡುಗ ಚೆನ್ನಾಗಿದ್ದಾನೆ ಅಂತ ಹೇಳಿ ಹೇಳಿ ಒಪ್ಪಿಸಿಬಿಟ್ಟರು ಮದುವೆ ಮಾಡಿಕೊಂಡೆ ಆದರೆ ನಿಜ ಹೇಳಬೇಕು ನಾನು ಖುಷಿಯಾಗಿರುವೆ. ಮದುವೆಯಲ್ಲಿ ಹ್ಯಾಪಿ ಆಗಿ ಇರಬಹುದು ಇಲ್ಲದೆ ಇರಬಹುದು ಅದು ವೈಯಕ್ತಿಕವಾಗಿ ಬಿಟ್ಟಿದ್ದು ಆದರೆ ನನ್ನ ಗಂಡ ಮತ್ತು ಮಕ್ಕಳ ಜೊತೆ ಖುಷಿಯಾಗಿರುವೆ. ನನ್ನ ಮದುವೆ ಇಡೀ ಸೀರಿಯಲ್ ಟೀಂಗೆ ಸರ್ಪ್ರೈಸಿಂಗ್ ಆಗಿತ್ತು' ಎಂದಿದ್ದಾರೆ ಸ್ನೇಹಾ. 

 

click me!