ಎನೋ ಸೀಕ್ರೆಟ್ ಹೇಳ್ಬಿಟ್ರು ಬಿಗ್ ಬಾಸ್ ಖ್ಯಾತಿ ಚೈತ್ರಾ ವಾಸುದೇವನ್; ಚಿಕ್ಕ ವಯಸ್ಸಲ್ಲೇ ಇಷ್ಟೊಂದ್ ಅನುಭವ?

By Shriram Bhat  |  First Published Jul 20, 2024, 12:57 PM IST

ಸದ್ಯ ವಿಷಯ ಅದಲ್ಲ, ಬೇರೆನೇ ಇದೆ. ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ವಾಸುದೇವನ್ ಅವರನ್ನು ನಿರೂಪಕಿ ರಾಪಿಡ್ ರಶ್ಮಿ ಕರೆಸಿ ಮಾತನಾಡಿಸಿದ್ದಾರೆ. ಇಂಟರ್‌ವ್ಯೂದಲ್ಲಿ ಮಾತನಾಡಿರುವ ಚೈತ್ರಾ ವಾಸುದೇವನ್ ಅವರು ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ..


ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ವಾಸುದೇವನ್ (Chaitra Vasudevan) ಬಹುತೇಕ ಎಲ್ಲರಿಗೂ ಗೊತ್ತು. ಚೈತ್ರಾ ಕೇವಲ ನಟಿ ಮಾತ್ರವಲ್ಲ, ನಿರ್ಮಾಪಕಿ, ಬಿಸಿನೆಸ್ ವೂಮನ್ ಕೂಡ. ಚೈತ್ರಾ ವಾಸುದೇವನ್ ಅವರು ಬಿಗ್ ಬಾಸ್ ಸೀಸನ್ 7ರಲ್ಲಿ ಬೇಗನೇ ಮನೆಯಿಂದ ನಿರ್ಗಮಿಸಿದಾಗ ಹಲವರಿಗೆ ತುಂಬಾ ಬೇಸರವಾಗಿದೆ. ಕಾರಣ, ಅವರನ್ನೂ ಆಟವನ್ನೇ ಶುರು ಮಾಡಿರಲಿಲ್ಲ. ಅಷ್ಟರಲ್ಲೇ ಮನೆಯಿಂದ ನಿರ್ಗಮಿಸಿಬಿಟ್ಟಿದ್ದರು. 

ಅಂದರೆ, ಆಟವನ್ನು ಶುರು ಮಾಡಲಿಕ್ಕೇ ಲೇಟ್ ಮಾಡಿಕೊಂಡ್ರು ಎನ್ನಬಹುದಾ? ಗೊತ್ತಿಲ್ಲ. ಯಾಕೆ ಅಂದ್ರೆ, ಬಿಗ್ ಬಾಸ್ ಮನೆಯಲ್ಲಿ ಯಾವಾಗ ತಮ್ಮ ನಿಜವಾದ ಆಟ ಆರಂಭಿಸಬೇಕು, ಯಾವಾಗ ಯಾವ ಸ್ಟ್ರಾಟಜಿ ಶುರು ಮಾಡಬೇಕು, ಯಾವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ನಿರ್ಧರಿಸಬೇಕಾಗಿದ್ದು ಸ್ಪರ್ಧಿಯೇ ಹೊರತೂ ಅಭಿಮಾನಿಗಳಲ್ಲ. ಕೆಲವನ್ನು ಬಿಗ್ ಬಾಸ್ ಪ್ರಾಯೋಜಕರು ಡಿಸೈಡ್ ಮಾಡುತ್ತಾರೆ ಎನ್ನುವ ಮಾಹಿತಿಯಿದೆ. ಆ ಬಗ್ಗೆ ಅವರೇ ಹೇಳಬೇಕು ಅಷ್ಟೇ!

Tap to resize

Latest Videos

undefined

ವಿಷ್ಣುವರ್ಧನ್-ಶಿವರಾಜ್‌ಕುಮಾರ್ ಜೋಡಿ ಚಿತ್ರ ಸೆಟ್ಟೇರಿ ನಿಂತೇ ಹೋಯ್ತು; ಕಾಣದ ಕೈ ಕೆಲಸ ಮಾಡಿತ್ತಾ?

ಸದ್ಯ ವಿಷಯ ಅದಲ್ಲ, ಬೇರೆನೇ ಇದೆ. ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ವಾಸುದೇವನ್ ಅವರನ್ನು ನಿರೂಪಕಿ ರಾಪಿಡ್ ರಶ್ಮಿ ಕರೆಸಿ ಮಾತನಾಡಿಸಿದ್ದಾರೆ. ಇಂಟರ್‌ವ್ಯೂದಲ್ಲಿ ಮಾತನಾಡಿರುವ ಚೈತ್ರಾ ವಾಸುದೇವನ್ ಅವರು ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಮ್ಯಾನಿಫೆಸ್ಟೇಶನ್, ಆದ್ಯಾತ್ಮ, ಅದೂ ಇದೂ ಸಂಗತಿಗಳು ಬಂದು ಹೋಗಿವೆ. ಹಾಗಿದ್ರೆ, ಚೈತ್ರಾ ವಾಸುದೇವನ್ ರಾಪಿಡ್ ರಶ್ಮಿ ಜತೆ ಮಾತನಾಡುತ್ತ ಅದೇನು ಹೇಳಿದರು ಎಂಬುದನ್ನು ನೋಡಿ.. 

'ಮ್ಯಾನಿಫೆಸ್ಟೇಶನ್ ಅಂದ್ರೆ, ನಿಮ್ಮನ್ನ ನೀವು ಕನ್ನಡಿನಲ್ಲಿ ನೋಡಿಕೊಂಡಾಗ ನಿಮಗೆ ಆ ಪರ್ಸನ್ ಇಷ್ಟ ಆಗ್ತಾರೋ ಇಲ್ವೋ ಅಂತ ನೋಡ್ಕೊಳ್ಳಿ, ಅರ್ಥ ಮಾಡ್ಕೊಳ್ಳಿ.. ಲೈಕ್ ಆಗ್ತಿಲ್ವಾ? ಏನ್ ಬೇಕು ನಿಮ್ಗೆ,  ಏನ್ ಚೇಂಜಸ್ ಆಗ್ಬೇಕು? ಅದನ್ನು ವಿಸ್ಯುವಲೈಸ್ ಮಾಡ್ಕೋಬೇಕು. ಅದು ಮೆನಿಫೆಸ್ಟೇಶನ್. ಅಂದ್ರೆ ಮುಂಚೆಯಿಂದಾನೂ ಇದು ಹೇಗಿತ್ತು ಹೇಳ್ತೀನಿ ನೋಡಿ.. ಮೆಡಿಟೇಶನ್, ದೇವ್ರು, ಪ್ರೇಯರ್ ಎಲ್ಲವೂ ಮ್ಯಾನಿಫೆಸ್ಟೇಶನ್. ಅದು, ಯಾವುದೋ ಪವರ್ ಇದೆ ಅಂತ ನಾವು ಬಿಲೀವ್ ಮಾಡ್ಕೊಂಡು ಅದಕ್ಕೆ ಕೆಲವರು ದೇವ್ರು ಅಂತ ಹೇಳ್ತಾರೆ. 

ನಾನು ಏನ್ ಹೇಳೋಕೆ ಇಷ್ಟಪಡ್ತೀನಿ ಅಂದ್ರೆ, ನೀವು ಹುಟ್ಟಿದಾಗಿನಿಂದ ಸಾಯುವಲ್ಲಿವರೆಗೂ ನಿಮ್ಮ ಸುತ್ತಲೂ ಒಂದು ಎನರ್ಜಿ ಕೆಲಸ ಮಾಡುತ್ತಲೇ ಇರುತ್ತದೆ. ಅಲ್ವಾ? ನೀವೂ ಒಂದು ವೈಬ್ರೇಶನ್‌ನಲ್ಲಿ ಇರ್ತಿರಾ. ನೀವು ಖುಷಿಖುಷಿಯಾಗಿದ್ರೆ ಎಲ್ರೂ ನಿಮ್ ಜೊತೆ ಖುಷಿಖುಷಿಯಾಗಿರ್ತಾರೆ. ನೀವು, ನಾನು ಇದು ಆಗ್ಬೇಕು, ಅದು ಆಗ್ಬೇಕು ಅಂತ ಒಂದು ಗೋಲ್ ಇಟ್ಕೊಂಡು ಕೆಲಸ ಮಾಡ್ತಾ ಇದ್ರೆ ನಿಮ್ಮ ಬಳಿ ಅದು ಬರುತ್ತೆ.. ಏನೇ ಇರ್ಬಹುದು. 

ರೀಲ್ಸ್‌ನಲ್ಲಿ ರಿಯಲ್ಲಾಗಿ ಬಿದ್ದಿದ್ದ ನಟಿ ದೀಪಿಕಾ ದಾಸ್ ಮುಖ ಹೇಗಾಗಿದೆ ನೋಡಿ; ಬೇಕಿತ್ತಾ ಶಿವನೇ..!

ಉದಾಹರಣೆಗೆ - ನಂಗೆ ಎಕ್ಸಾಂನಲ್ಲಿ ಒಳ್ಳೇ ಅಂಕ ಬರ್ಬೇಕು ಅಂತ ಥಿಂಕ್ ಮಾಡ್ತಾ ಇದ್ರೆ, ಅದು ನಿಮ್ಮ ಹತ್ರ ನಿಜವಾಗಿಯೂ ಬರುತ್ತೆ' ಎಂದಿದ್ದಾರೆ ನಟಿ, ಬಿಗ್ ಬಾಸ್ ಫೇಮ್ ಆರ್ಟಿಸ್ಟ್ ಚೈತ್ರಾ ವಾಸುದೇವನ್. ಒಟ್ಟಿನಲ್ಲಿ, ನಟಿ, ನಿರೂಪಕಿ ಹಾಗೂ ವ್ಯಾಪಾರಸ್ಥೆ ಚೈತ್ರಾ ವಾಸುದೇವನ್ ಅವರು ತಮಗೆ ಗೊತ್ತಿರುವ ಸಂಗತಿಯನ್ನು ತಮ್ಮದೇ ಆದ ರೀತಿಯಲ್ಲಿ ಹೇಳಿದ್ದಾರೆ. ಅದು ಸರಿಯೋ ತಪ್ಪೋ ಅಂತೆಲ್ಲಾ ಚರ್ಚೆ ಮಾಡುವುದಕ್ಕಿಂತ ಅದು ಅವರ ನಂಬಿಕೆ, ಅನಿಸಿಕೆ ಎನ್ನಬಹುದು. ಅದು ಅವರ ಅನುಭವವೂ ಇರಬಹುದು. ಏಕೆಂದರೆ, ಜಗತ್ತಿನಲ್ಲಿ ಇಬ್ಬರ ಅನುಭವ ಒಂದೇ ಆಗಿರುವುದಿಲ್ಲ ಅಂತಾರೆ.

click me!