ಬಿಗ್‌ಬಾಸ್‌ನಲ್ಲಿ ಬೆಡ್‌ರೂಮ್‌ ವಿಡಿಯೋ ಲೀಕ್‌ ಆಗ್ತಿದ್ದಂತೆಯೇ ಅರ್ಮಾನ್‌ ಮಲಿಕ್‌ಗೆ ಪತ್ನಿ ಡಿವೋರ್ಸ್?

By Suchethana D  |  First Published Jul 20, 2024, 2:19 PM IST

 ಬಿಗ್‌ಬಾಸ್‌ ಸ್ಪರ್ಧಿ ಅನು ಮಲಿಕ್‌ ಅವರ ಬೆಡ್‌ರೂಮ್‌ ರೊಮಾನ್ಸ್‌ ವಿಡಿಯೋ ಲೀಕ್‌ ಆಗ್ತಿದ್ದಂತೆಯೇ ಅರ್ಮಾನ್‌ ಮಲಿಕ್‌ ಪತ್ನಿ ಪಾಯಲ್‌ ಡಿವೋರ್ಸ್‌ಗೆ ಮುಂದಾಗಿದ್ದಾರೆ! ಏನಿದರ ಹಕೀಕತು?
 


ಇಬ್ಬರನ್ನು ಮದುವೆಯಾಗಿ, ಇಬ್ಬರನ್ನೂ ಒಟ್ಟಿಗೇ ಗರ್ಭಿಣಿ ಮಾಡುವ ಮೂಲಕವೂ ಫೇಮಸ್​ ಆದವರ ಯುಟ್ಯೂಬ್‌ ಖ್ಯಾತಿಯ  ಅರ್ಮಾನ್​ ಮಲಿಕ್‌. ಅಂದಹಾಗೆ ಇವರ ಪತ್ನಿಯರ ಹೆಸರು ಪಾಯಲ್​ ಮಲಿಕ್​ ಮತ್ತು ಕೃತಿಕಾ ಮಲಿಕ್​. ಖ್ಯಾತ ಗಾಯಕ ಅರ್ಮಾನ್​ ಮಲಿಕ್​ ಅವರ ಹೆಸರನ್ನೇ ಇಟ್ಟುಕೊಂಡು ಸಾಕಷ್ಟು ಹಲ್​ಚಲ್​ ಕೂಡ ಸೃಷ್ಟಿಸಿದ್ದಾರೆ ಈ ಅರ್ಮಾನ್​. ಅಸಲಿಗೆ ಇವರ ಹೆಸರು ಸಂದೀಪ್‌. ಆದರೆ ಅರ್ಮಾನ್‌ ಎನ್ನುವ ಹೆಸರಿಟ್ಟುಕೊಂಡು ಎರಡು ಮದುವೆಯಾಗಿದ್ದಾರೆ. ಇದೇ ಕಾರಣಕ್ಕೆ ಗಾಯಕ ಅರ್ಮಾನ್​ ಒಮ್ಮೆ ಸಕತ್​ ಗರಂ ಆಗಿ ಬಾಯಿಗೆ ಬಂದ ಹಾಗೆ ಬೈದದ್ದೂ ಉಂಟು. ಒಟ್ಟಿನಲ್ಲಿ ಕಾಂಟ್ರವರ್ಸಿ ಮಾಡುತ್ತಲೇ ಇದೀಗ ಬಿಗ್​ಬಾಸ್​ನಿಂದ ಫೇಮಸ್​ ಆಗ್ತಿದ್ದಾರೆ ಯೂಟ್ಯೂಬರ್​ ಅರ್ಮಾನ್​. 

ಅಷ್ಟಕ್ಕೂ ಬಿಗ್​ಬಾಸ್​ ಎಂದರೇನೇ ಕಾಂಟ್ರವರ್ಸಿ ತಾಣವೇ ಬಿಡಿ.  . ಖುಲ್ಲಂಖುಲ್ಲಾ  ಆಗಿ ರೊಮಾನ್ಸ್​ ಮಾಡುವುದು ಇಲ್ಲಿ ಮಾಮೂಲು. ಟಿಆರ್‌ಪಿಗೋಸ್ಕರ ಈ ದೃಶ್ಯವನ್ನು ಹೇಳಿಯೇ ಮಾಡಿಸಲಾಗುತ್ತದೆ.  ಕಾಂಟ್ರವರ್ಸಿ ಹೆಚ್ಚಿದ್ದಷ್ಟೂ ಟಿಆರ್​ಪಿ ರೇಟೂ ಜಾಸ್ತಿ ಬರುತ್ತದೆ... ಇಲ್ಲಿ ಹೋಗುವ ಸ್ಪರ್ಧಿಗಳು ಹಲವಾರು ರೀತಿಯಲ್ಲಿ ವಿವಾದಕ್ಕೆ ಸಿಲುಕಿದವರೇ ಆಗಿರುತ್ತಾರೆ. ಅಂಥವರಲ್ಲಿ ಒಬ್ಬರು, ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್​. 

Tap to resize

Latest Videos

ಬಿಗ್​ಬಾಸ್​ ಮಂಚದ ಮೇಲೆ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೊಮಾನ್ಸ್​! ವೈರಲ್​ ಆಯ್ತು ವಿಡಿಯೋ...

ಸದ್ಯ ಇವರು ಬಿಗ್​ಬಾಸ್​ ಮನೆಯಲ್ಲಿ ರೊಮಾನ್ಸ್​ ಮಾಡುತ್ತಾ  ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಅವರು ರೊಮಾನ್ಸ್​  ಮಾಡಿರುವುದು ಪತ್ನಿಯ ಜೊತೆಗೆನೇ. ಏಕೆಂದರೆ ಇಬ್ಬರು ಪತ್ನಿಯರ ಜೊತೆಗೆ ಇವರಿಗೆ ಬಿಗ್​ಬಾಸ್​ಗೆ ಎಂಟ್ರಿ ಕೊಡಲಾಗಿತ್ತು.  ಆದರೆ ಇದಾಗಲೇ ಪಾಯಲ್​ ಎಲಿಮಿನೇಟ್​ ಆಗಿದ್ದು, ಕೃತಿಕಾ ಮತ್ತು ಅರ್ಮಾನ್​ ಬಿಗ್​ಬಾಸ್​ ಮನೆಯಲ್ಲಿ ಇದ್ದಾರೆ. ಅತ್ತ ಲೈಟ್​ ಆಫ್​ ಆಗುತ್ತಿದ್ದಂತೆಯೇ ಮಂಚದ ಮೇಲೆ ಪತ್ನಿ ಜೊತೆ ರೊಮಾನ್ಸ್​ನಲ್ಲಿ ತೊಡಗಿದ್ದಾರೆ. ಇದು ಬಿಗ್​ಬಾಸ್​ನ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಬೆಡ್​ಷೀಟ್​ ಹೊದ್ದುಕೊಂಡು ರೊಮಾನ್ಸ್​ನಲ್ಲಿ ತೊಡಗಿರುವುದು ಅವರ ಚಟುವಟಿಕೆಯಲ್ಲಿಯೇ ತಿಳಿಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಎಲಿಮಿನೇಟ್‌ ಆಗಿರುವ ಇನ್ನೋರ್ವ ಪತ್ನಿ ಪಾಯಲ್‌ ಅರ್ಮಾನ್‌ಗೆ ಡಿವೋರ್ಸ್‌ ಕೊಡುವುದಾಗಿ ಹೇಳಿದ್ದಾರೆ. ತಮ್ಮ ಮಗುವಿನ ಜೊತೆ ನಾನು ಪ್ರತ್ಯೇಕ ಆಗುತ್ತಿದ್ದೇನೆ ಎಂದಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಅಷ್ಟಕ್ಕೂ ಇದು ಪಬ್ಲಿಸಿಟಿ ಸ್ಟಂಟ್‌ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಅರ್ಮಾನ್‌ ಮಲಿಕ್‌ ಮತ್ತು ಅವರ ಇಬ್ಬರೂ ಪತ್ನಿಯನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು ಇದನ್ನೇ. ಅಷ್ಟಕ್ಕೂ, ಇಬ್ಬರು ಪತ್ನಿಯರನ್ನು ಹೊಂದಿರುವ ಅರ್ಮಾನ್​, ಪತ್ನಿಯರ ಜೊತೆಗೇ ಹೊಡೆದಾಡುವಂತೆ ಮಾಡಿ, ಇಬ್ಬರು ಪತ್ನಿಯರ ನಡುವೆ ಜಗಳವಾಡಿಸಿ ಅದನ್ನು ನಿಜ ಎಂಬಂತೆ ಬಿಂಬಿಸಿ... ಹೀಗೆ  ಥಹರೇವಾರಿ ರೀತಿಯಲ್ಲಿ ವೀಕ್ಷಕರನ್ನು ಮೂರ್ಖರನ್ನಾಗಿಸುವಲ್ಲಿ ನಿಸ್ಸೀಮರು. ಅವರ ಪತ್ನಿಯರು ಕೂಡ ಜುಟ್ಟು ಜುಟ್ಟು ಹಿಡಿದು ಹೊಡೆದಾಡುವುದು ಇದೆ. ಅಸಲಿಗೆ ಇದು ಯೂಟ್ಯೂಬ್​ ವಿಡಿಯೋಗಾಗಿ ನಡೆಸುವ ಕಾದಾಟ ಎನ್ನುವುದು ಹಲವರಿಗೆ ತಿಳಿಯುವುದೇ ಇಲ್ಲ. ಇದೇ ಕಾರಣಕ್ಕೆ, ಅರ್ಮಾನ್​ ಫೇಮಸ್​ ಕೂಡ ಆಗಿದ್ದು, ಪತ್ನಿಯರ ಜೊತೆ ಹಿಂದಿಯ ಬಿಗ್​ಬಾಸ್​ ಓಟಿಟಿ-03ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಈಗ ಡಿವೋರ್ಸ್ ಕೊಡುವುದಾಗಿ ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. 
 

ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್​ ದೇಹ ಹೊತ್ತು ಅಂಬಾನಿ ಮದ್ವೆಗೆ ಓಲಾಡುತ್ತಾ ಬಂದ ನಟಿ ಕಿಮ್​!

click me!