ಸೀತಾಳನ್ನು ಆ ಲಾಯರ್ ಕುತಂತ್ರದಿಂದ ಪಾರು ಮಾಡಬಲ್ಲ ಶಕ್ತಿ ಹಾಗೂ ಯುಕ್ತಿ ಇರುವುದು ಅಶೋಕ್‌ಗೆ ಮಾತ್ರ ಎಂಬುದು ಸೀರಿಯಲ್ ವೀಕ್ಷಕರ ಅಭಿಪ್ರಾಯ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬಂದಿವೆ. ಸೀತಾಳನ್ನು ಅಶೋಕ ಕಾಪಾಡುವುದಕ್ಕಿಂತ ಹೆಚ್ಚಾಗಿ ರಾಮನೇ ಕಾಪಾಡಬಲ್ಲ ಎಂಬುದೂ ಹಲವರ ಅಭಿಪ್ರಾಯ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾ ರಾಮ' ಸೀರಿಯಲ್ ವೀಕ್ಷಕರನ್ನು ಸೆಳೆಯುತ್ತಿದೆ. ಸದ್ಯ ರಾಮ ಸೀತಾಳನ್ನು ತನ್ನ ಮನದಲ್ಲೇ ಲವ್ ಮಾಡುತ್ತಿದ್ದಾನೆ, ಆದರೆ ಅದನ್ನು ಯಾರಿಗೂ ಹೇಳಕೊಳ್ಳಲಾರ. ಅತ್ತ ಸೀತಾ ಲಾಯರ್ ಕುತಂತ್ರಕ್ಕೆ ಬಲಿಯಾಗಿ ನೋವು-ಸಂಕಟ ಅನುಭವಿಸುತ್ತ ಒದ್ದಾಡುತ್ತಿದ್ದಾಳೆ. ರಾಮನ ಎದೆಯಲ್ಲಿ ಸೀತಾ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಆದರೆ, ಅದನ್ನು ಸೀತಾಳಿಗೆ ಇರಲಿ, ಯಾರಿಗೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ರಾಮ ಇಲ್ಲ.
ರಾಮ ತನ್ನ ತಾತನ ಬಳಿ ಏನೋ ಕೇಳಿದ್ದಾನೆ. ತಾತನಿಗೆ ತನ್ನ ಅನುಭವದ ಮೂಲಕ ರಾಮ ಲವ್‌ನಲ್ಲಿ ಬಿದ್ದಿದ್ದಾನೆ ಎಂಬುದು ಅರಿವಾಗಿದೆ. ರಾಮನಿಗೂ ಆ ಬಗ್ಗೆ ಅರಿವಿದೆ, ಆದರೆ ಹೇಳಿಕೊಳ್ಳಲಾರ. ಸೀತಾ ಲಾಯರ್ ಕುತಂತ್ರದಿಂದ ಬಳಲಿ ಬೆಂಡಾಗಿದ್ದಾಳೆ. ಸೀತಾ ಸಮಸ್ಯೆ ರಾಮನಸಮಸ್ಯೆಯೂ ಆಗಿದೆ. ಏಕೆಂದರೆ, ಸೀತಾಳನ್ನು ಎಲ್ಲಾ ದುರಂತಗಳಿಂದ ಪಾರು ಮಾಡಬಲ್ಲ ಸಾಮರ್ಥ್ಯ ಇರುವುದು ರಾಮನಿಗೆ ಮಾತ್ರ. ಸೀತಾ ಸಮಸ್ಯೆಗೆ ರಾಮ ಸ್ಪಂದಿಸುತ್ತಿರುವ ಮೂಲಕ ರಾಮ-ಸೀತಾ ಇಬ್ಬರೂ ಸಮಸ್ಯೆಯ ಸುಳಿಯಲ್ಲಿ ಸಿಕ್ಕಂತಾಗಿದೆ. ಸೀತಾ ಲಾಯರ್ ಕುತಂತ್ರಕ್ಕೆ ಬಲಿಯಾಗಿದ್ದಾಳೆ.
ಹುಡುಗನೊಬ್ಬ ನನ್ನ ಜೀನ್ಸ್ ಪ್ಯಾಂಟ್ ಕದ್ಬಿಟ್ಟ; ಇನ್ಮುಂದೆ ಅದೆಲ್ಲ ಹಾಕ್ಬೇಡ ಅಂದ್ಬಿಟ್ಟ ನನ್ನಪ್ಪ: ಪ್ರಿಯಾಂಕಾ ಚೋಪ್ರಾ
ಸೀತಾಳನ್ನು ಆ ಲಾಯರ್ ಕುತಂತ್ರದಿಂದ ಪಾರು ಮಾಡಬಲ್ಲ ಶಕ್ತಿ ಹಾಗೂ ಯುಕ್ತಿ ಇರುವುದು ಅಶೋಕ್‌ಗೆ ಮಾತ್ರ ಎಂಬುದು ಸೀರಿಯಲ್ ವೀಕ್ಷಕರ ಅಭಿಪ್ರಾಯ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬಂದಿವೆ. ಸೀತಾಳನ್ನು ಅಶೋಕ ಕಾಪಾಡುವುದಕ್ಕಿಂತ ಹೆಚ್ಚಾಗಿ ರಾಮನೇ ಕಾಪಾಡಬಲ್ಲ ಎಂಬುದೂ ಹಲವರ ಅಭಿಪ್ರಾಯ. ಏನೇ ಆದರೂ ನಾಯಕಿಯನ್ನು ಕಾಪಾಡುವುದು ನಾಯಕನ ಕರ್ತವ್ಯ ಎಂಬುದು ಎಲ್ಲಾ ಸಿನಿಮಾ-ಸೀರಿಯಲ್‌ಗಳ ಫಾರ್ಮುಲಾ ತಾನೇ? ಅದೇ ಆಗುತ್ತೆ ಅಲ್ಲವೇ? ಸೋಷಿಯಲ್ ಮೀಡಿಯಾಗಳಲ್ಲಿ ಸೀತಾ ರಾಮ ಸೀರಿಯಲ್ ಪ್ರೊಮೋ ಕೆಳಗೆ ಸಾಕಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ; ಯುವಜನತೆಗೆ ನಟ ಶಾರುಖ್ ಟಿಪ್ಸ್
'ಅಶೋಕ್ ಮೊದ್ಲು ಆ ಲಾಯರ್ ಬಗ್ಗೆ ತಿಳ್ಕೊಬೇಕು, ಇದು ನೀನ್ ಕೈಲಿ ಮಾತ್ರ ಸಾಧ್ಯ. ಈ ರಾಮ್ ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತ ನಂಬ್ತಾನೆ' ಎಂದು ಕಾಮೆಂಟ್ ಬರೆದಿದ್ದಾರೆ ಒಬ್ಬರು. 'ರಾಮಪ್ಪ,ಆ ಲಾಯರ್‌ನ ಎಕ್ಸ್‌ಪೋಸ್ ಮಾಡಿ, ಲಾಯರ್ ಮೋಸದಿಂದ ಸೀತಾನ ಕಾಪಾಡಿ.' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹಳಷ್ಟು ಕಾಮೆಂಟ್‌ಗಳು ಸೀತಾಳನ್ನು ಕಾಪಾಡುವ ಕೆಲಸ ರಾಮನದ್ದೇ ಎಂಬಂತೆ ಇದೆ. ಅಂದಹಾಗೆ, 'ಸೀತಾ ರಾಮ' ಸೀರಿಯಲ್ ಜೀ ಕನ್ನಡದಲ್ಲಿ ರಾತ್ರಿ 9.30ಕ್ಕೆ ಸೋಮವಾರದಿಂದ ಶುಕ್ರವಾರ ಪ್ರಸಾರ ಕಾಣುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ; ನವೆಂಬರ್ 14 ಎಂದು ಕಿರುಚಿದ ಅವಿನಾಶ್ ಶೆಟ್ಟಿಗೆ ಮುಖಭಂಗ!