ಬಿಗ್‌ಬಾಸ್‌ನಲ್ಲಿ ತಲೆ ಬೋಳಿಸ್ಕೊಂಡ್ರೆ ಫಿನಾಲೆಗೆ ಹೋಗೋದು ಗ್ಯಾರಂಟೀನಾ? ಏನಿದರ ಲಾಜಿಕ್!

By Suvarna News  |  First Published Nov 29, 2023, 11:49 AM IST

ಬಿಗ್ ಬಾಸ್‌ ಕನ್ನಡ 10ನಲ್ಲಿ ತಲೆ ಬೋಳಿಸಿಕೊಳ್ಳೋ ಟಾಸ್ಕ್ ಸಖತ್ ಸಂಚಲನ ಸೃಷ್ಟಿಸಿದೆ. ಆದರೆ ಹೀಗೆ ತಲೆ ಬೋಳಿಸ್ಕೊಂಡ್ರೆ ಅಂಥವರು ಫಿನಾಲೆಗೆ ತಲುಪೋದು ಪಕ್ಕಾ ಅನ್ನುತ್ತೆ ಒಂದು ಲೆಕ್ಕಾಚಾರ. ಅದು ಹೇಗೆ?


ಬಿಗ್ ಬಾಸ್‌ ಕನ್ನಡ 10 ಆರಂಭದಿಂದಲೂ ಸಖತ್ ಸೌಂಡ್ ಮಾಡ್ತಿದೆ. ಟಿಆರ್‌ಪಿಯಲ್ಲೂ ಮುಂದಿದೆ. ಆದರೆ ಈ ಬಾರಿ ಹೆಡ್‌ ಶೇವ್ ಅನ್ನೋದು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿತ್ತು. ಹೆಡ್‌ ಶೇವ್ ಮಾಡ್ಕೊಂಡವರಿಗೆ ಅನುಕಂಪದ ಓಟುಗಳು ಹರಿದು ಬಂದರೆ, ಅವರ ಆ ಸ್ಥಿತಿಗೆ ಕಾರಣವಾದ ಸಂಗೀತಾ ಶೃಂಗೇರಿ ಫಾಲೋವರ್ಸ್ ಸಂಖ್ಯೆ ದಿಢೀರನೆ ಕುಸಿದುಬಿತ್ತು. ಅವರನ್ನು ಖಳನಾಯಕಿ ಲೆವೆಲ್‌ನಲ್ಲಿ ನೋಡೋ ಮೈಂಡ್‌ಸೆಟ್ ಬೆಳೀತಾ ಹೋಯ್ತು. ಕ್ರೀಡಾಪಟುವಾಗಿ ಲೈಫಲ್ಲಿ ಪ್ರತಿಯೊಂದು ಸ್ಟೆಪ್ಪನ್ನೂ ಕ್ರೀಡಾ ಮನೋಭಾವದಿಂದದ ನೋಡೋದು ಕೆಲವರಿಗೆ ಅಭ್ಯಾಸ. ಆದರೆ ಸಂಗೀತ ಈ ಮನೋಭಾವಕ್ಕೆ ಎಮೋಶನ್‌ ಅನ್ನೂ ಮಿಕ್ಸ್ ಮಾಡಿದರು. ಬಹುಶಃ ಅವರಿರೊ ಬಿಗ್‌ಬಾಸ್ ಮನೆಯ ವಾತಾವರಣವೂ ಇದಕ್ಕೆ ಕಾರಣ ಇರಬಹುದು. ಬಟ್ ಬಿಗ್‌ಬಾಸ್ ನೋಡೋರಲ್ಲಿ ಹಲವು ಮನೋಭಾವದ ಜನರಿರ್ತಾರೆ. ಅವರ ಬಿಗ್‌ಬಾಸ್ ಕಂಟೆಸ್ಟೆಂಟ್‌ಗಳು ಟಾಸ್ಕ್ ನಿಭಾಯಿಸೋದು, ಗೆಲುವು ಸಾಧಿಸೋದಕ್ಕಿಂತಲೂ ಹೆಚ್ಚಾಗಿ ಮೌಲ್ಯಗಳಿಗೆ, ಮಾನವೀಯತೆಗೆ ಹೆಚ್ಚು ಬೆಲೆ ಕೊಡ್ತಾರೆ.

ಸದ್ಯಕ್ಕೀಗ ಆಗಿರೋದೂ ಹಾಗೆ. ಅವರ ಕಣ್ಣಿಗೆ ತಲೆ ಬೋಳಿಸ್ಕೊಂಡ ಕಾರ್ತಿಕ್ ಬಗ್ಗೆ ಫೇವರ್ ಬೆಳೆದಂತಿದೆ. ಹಾಗಂತ ಬಿಗ್ ಬಾಸ್‌ ಮನೆಯಲ್ಲಿ ತಲೆ ಬೋಳಿಸ್ಕೊಂಡಿರೋದು ಇದೇ ಮೊದಲು ಅಂದರೆ ನಿಮ್ಮ ಊಹೆ ತಪ್ಪು. ಈ ಹಿಂದೆಯೂ ಹೆಡ್‌ ಶೇವ್ ಮಾಡಿಕೊಂಡ ಸ್ಪರ್ಧಿಗಳಿದ್ದರು. ಆದರೆ ಯಾವುದೋ ಒಂದು ವಿಚಾರಕ್ಕೆ ಬಿಗ್‌ಬಾಸ್‌ ಮನೆಯೊಳಗೆ ಈ ಹಿಂದೆ ಹೆಡ್‌ ಶೇವ್‌ ಮಾಡಿಕೊಂಡ ಇಬ್ಬರೂ ಸ್ಪರ್ಧಿಗಳು ಮೊದಲನೇ ರನ್ನರ್‌ ಅಪ್‌ ಸ್ಥಾನ ಪಡೆದಿದ್ದಾರೆ. ನಿರೂಪಕ, ನಿರ್ಮಾಪಕ, ನಟ ಸೃಜನ್ ಲೋಕೇಶ್‌ ತಲೆ ಬೋಳಿಸಿಕೊಂಡಿದ್ದರು. ಬಿಗ್ ಬಾಸ್‌ ಕನ್ನಡ 3 ಕಾರ್ಯಕ್ರಮದಲ್ಲಿ ಟಾಸ್ಕ್‌ ಸಲುವಾಗಿ ನಟ ಚಂದನ್ ಕುಮಾರ್‌ ಕೂಡ ಹೆಡ್ ಶೇವ್ ಮಾಡಿಸಿಕೊಂಡರು. ಅಚ್ಚರಿಯ ವಿಚಾರ ಅಂದರೆ ಸೃಜನ್ ಲೋಕೇಶ್ ಹಾಗೂ ಚಂದನ್ ಕುಮಾರ್‌.. ಇಬ್ಬರೂ ಫಿನಾಲೆ ಹಂತ ತಲುಪಿದ್ದರು.

Tap to resize

Latest Videos

ಫಸ್ಟ್‌ ಟೈಮ್‌ನಿಂದಲೂ ಪೀರಿಯಡ್ಸ್‌ ರೆಗ್ಯೂಲರ್ ಇಲ್ಲ, ಸೊಸೈಟಿಯಲ್ಲಿ ಪಾಠ ಮಾಡೋರಿಲ್ಲ: ಬಿಗ್ ಬಾಸ್ ಸಂಗೀತಾ ಶೃಂಗೇರಿ

ಬಿಗ್ ಬಾಸ್ ಕನ್ನಡ 2’ ಕಾರ್ಯಕ್ರಮದಲ್ಲಿ ‘ಧಮ್’ ಎಂಬ ಟಾಸ್ಕ್ (task) ಅನ್ನು ‘ಬಿಗ್ ಬಾಸ್‌’ ನೀಡಿದ್ದರು. ಈ ಟಾಸ್ಕ್ ಪ್ರಕಾರ ಒಂದು ತಂಡ ಎದುರಾಳಿ ತಂಡಕ್ಕೆ ಸವಾಲುಗಳನ್ನ ನೀಡಬೇಕಿತ್ತು. ಸವಾಲು (challenge) ಪೂರ್ಣಗೊಳಿಸಿದರೆ, ಪೂರ್ಣಗೊಳಿಸಿದ ತಂಡಕ್ಕೆ ಅಂಕ. ಇಲ್ಲವಾದರೆ ಸವಾಲು ನೀಡಿದ ತಂಡಕ್ಕೆ ಅಂಕ. ಎದುರಾಳಿ ತಂಡ 30 ಪಾಯಿಂಟ್‌ಗಳಿಗಾಗಿ ಹೆಡ್‌ ಶೇವ್‌ ಸವಾಲನ್ನು ನೀಡಿದರು. ಆಗ, ತಂಡಕ್ಕಾಗಿ ತಲೆ ಬೋಳಿಸಿಕೊಳ್ಳಲು ನಿರ್ದೇಶಕ ಗುರುಪ್ರಸಾದ್‌ ಮುಂದಾದರು. ಈ ವೇಳೆ 'ನಮ್ಮ ಸಂಪ್ರದಾಯದಲ್ಲಿ ತಂದೆ - ತಾಯಿ ಇರುವಾಗ ತಲೆ ಬೋಳಿಸುವ ಹಾಗಿಲ್ಲ. ಆದರೆ, ತಂಡಕ್ಕಾಗಿ ಮಾಡುತ್ತಿದ್ದೇನೆ. ಅಪ್ಪ - ಅಮ್ಮನ ಕ್ಷಮೆ ಇರಲಿ' ಎಂದು ಗುರುಪ್ರಸಾದ್‌ ಹೇಳಿದ್ದರು. ಆನಂತರ ಗುರುಪ್ರಸಾದ್‌ ಬದಲು ತಾವು ಹೆಡ್‌ಶೇವ್‌ (head shave) ಮಾಡಿಸಿಕೊಳ್ಳಲು ಸೃಜನ್ ಲೋಕೇಶ್ ಮುಂದೆ ಬಂದರು.

ತಂಡಕ್ಕಾಗಿ, ಪಾಯಿಂಟ್‌ಗಾಗಿ ಸೃಜನ್ ಲೋಕೇಶ್‌ ಅಂದು ಹೆಡ್‌ ಶೇವ್ ಮಾಡಿಸಿಕೊಂಡಿದ್ದರು. ಸೃಜನ್ ಲೋಕೇಶ್ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಕೊನೆಗೆ ‘ಬಿಗ್ ಬಾಸ್ ಕನ್ನಡ 2’ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್‌ ಮೊದಲ ರನ್ನರ್ ಅಪ್ ಸ್ಥಾನ ಪಡೆದರು.

ತಂಡ ಬದಲಾಯಿಸಿ ಕಣ್ಣೀರಿಟ್ಟ ನಮ್ರತಾ ಗೌಡ; ಚಮಚಗಳಿಗೆ ಸರಿಯಾದ ಪಾಠ ಕಲಿಸಿದ ಡ್ರೋನ್ ಪ್ರತಾಪ್?

ಈ ಬಾರಿಯ ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮ ನೋಡಿದರೆ ಇಲ್ಲಿ ಕಾರ್ತಿಕ್‌ ಮಹೇಶ್ ಹಾಗೂ ತುಕಾಲಿ ಸಂತು ಹೆಡ್‌ ಶೇವ್ ಮಾಡಿಸಿಕೊಂಡಿದ್ದಾರೆ. ಟಾಸ್ಕ್‌ ವೇಳೆ ಎದುರಾದ ಸವಾಲಿನಿಂದಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದಾರೆ. ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ವಿನಯ್ ಗೌಡ ಗಡ್ಡ, ಮೀಸೆ ಬೋಳಿಸಿಕೊಂಡಿದ್ದಾರೆ. ಈ ಹಿಂದೆ ‘ಬಿಗ್ ಬಾಸ್ ಕನ್ನಡ 7’ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ ಕ್ಲೀನ್‌ ಶೇವ್ ಮಾಡಿಕೊಂಡಿದ್ದರು. ಅದಾದ ಬಳಿಕ, ಶೈನ್ ಶೆಟ್ಟಿ ವಿನ್ನರ್‌ (winner) ಆಗಿಬಿಟ್ಟರು. ಆದರೆ ಈ ಬಾರಿ ವಿನಯ್ ವಿನ್ನರ್ ಆಗೋದರ ಒಂದಿಷ್ಟು ಜನರಿಗೆ ಅನುಮಾನಗಳಿವೆ.

ಸದ್ಯದ ಸ್ಥಿತಿ ನೋಡಿದರೆ ಫಿನಾಲೆ ಹಂತಕ್ಕೆ ಹೋಗುವ ಸ್ಪರ್ಧಿಗಳಲ್ಲಿ ತಲೆ ಬೋಳಿಸ್ಕೊಂಡವರು, ಕ್ಲೀನ್ ಶೇವ್ (Clean Shave) ಮಾಡಿದವರೆಲ್ಲ ಇರಬಹುದು ಅನಿಸುತ್ತೆ. ಏಕೆಂದರೆ ಅವರೆಲ್ಲ ಸ್ಟ್ರಾಂಗ್ ಕಂಟೆಸ್ಟೆಂಟ್ಸ್.

 

click me!