ಸೀತಾರಾಮದಲ್ಲಿ ಸಿಹಿಯ ಕೊನೆಯ ಕ್ಷಣಗಳು ಪ್ರಸಾರ ಆಗ್ತಿವೆ. ಇದರ ಜೊತೆಗೆ ಸೀತಾ ರಾಮರ ಜೊತೆಗಿನ ಚಿನಕುರುಳಿ ಸಿಹಿಯ ಎಪಿಸೋಡ್ ಕೊನೆಗೊಳ್ತಿದೆ. ವೀಕ್ಷಕರು ಕಣ್ಣೀರಾಗಿದ್ದಾರೆ.
ಸಿಹಿ!
ಇದು ಕೇವಲ ಹೆಸರಲ್ಲ, ಇದೊಂದು ಎಮೋಶನಲ್ ಆಗಿ ಎಷ್ಟೋ ಕಾಲದಿಂದ ಕನ್ನಡಿಗರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸೀತಾರಾಮ ಅನ್ನೋ ಸೀರಿಯಲ್ ಈ ಲೆವೆಲ್‌ನಲ್ಲಿ ಸಕ್ಸಸ್ ಸಾಧಿಸೋದಕ್ಕೆ ಸಿಹಿ ಎಂಬ ಪುಟಾಣಿ ಪಾತ್ರವೇ ಕಾರಣ ಅನ್ನೋದು ಸತ್ಯದಿಂದ ದೂರವಾದ ಮಾತು ಏನಲ್ಲ. ಸೀತಾರಾಮ ಸೀರಿಯಲ್ ಶುರುವಾದಾಗಿನಿಂದ ಈ ಸಿಹಿ ಸೀರಿಯಲ್‌ನ ಭಾಗವಾಗಿ ಇದ್ದಾಳೆ. ಈ ಪಾತ್ರ ವಿಶೇಷತೆ ಚೆನ್ನಾಗಿ ಐದಾರು ವರ್ಷದ ಈ ಪುಟ್ಟ ಹುಡುಗಿ ಹೆಸರೇನೋ ಸಿಹಿ. ಆದರೆ ಇವಳಿಗೆ ಶುಗರ್ ಇದೆ. ಈ ಕಾಲದಲ್ಲಿ ಮಕ್ಕಳಿಗೆ ಶುಗರ್ ಬರೋದು ಕಾಮನ್. ಹೀಗಾಗಿ ಈ ಕಾಲದ ಮಕ್ಕಳನ್ನು ಈ ಪುಟಾಣಿ ರೆಪ್ರೆಸೆಂಟ್ ಮಾಡ್ತಿದ್ದಾಳೆ. ಅದರ ಜೊತೆಗೆ ಮಕ್ಕಳಿಗೆ ಶುಗರ್ ಬಂದರೆ ಎಷ್ಟೆಲ್ಲ ಒದ್ದಾಟಗಳಿರುತ್ತೆ ಅನ್ನೋದನ್ನೂ ಈ ಪಾತ್ರ ವೀಕ್ಷಕರ ಮನ ಮುಟ್ಟೋ ಹಾಗೆ ಹೇಳ್ತಾ ಬಂದಿದೆ. ಜೊತೆಗೆ ದೊಡ್ಡವರಂತೆ ಆಡುವ ಆದರೆ ಕಲ್ಮಶವೇ ಇಲ್ಲದ ಈ ಪುಟ್ಟ ಮಗುವಿನ ಆಟಿಟ್ಯೂಡ್ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಜೊತೆಗೆ ಈಕೆ ಕಥೆಯ ಭಾಗವಾಗಿಯೂ ಎಲ್ಲೂ ಸಿಂಕ್ ಮಿಸ್ ಆಗದ ರೀತಿ ಬಂದಿದ್ದಾಳೆ.
ಸೀತಾ ಒಂಟಿಯಾಗಿದ್ದಾಗ ಆಕೆ ಬದುಕೇ ಆಗಿದ್ದವಳು ಸಿಹಿ. ರಾಮ ಆ ಬಳಿಕ ಸೀತಾ ಲೈಫಿಗೆ ಬಂದ. ಆಗಲೂ ಸಿಹಿಪುಟ್ಟ ಸೀತಾ ಬದುಕಿನಿಂದ ದೂರ ಆಗಲಿಲ್ಲ. ಸಿಹಿ ಅವಳ ಬಯಾಲಾಜಿಕಲ್ ಅಪ್ಪ ಅಮ್ಮನ ಹತ್ರ ಹೋದಾಗಲೇ ತಡ್ಕೊಳ್ಳಲಿಕ್ಕಾಗದ ಸೀತಾ ಅವಳು ತನ್ನ ಲೈಫಿನಿಂದಲೇ ದೂರಾಗ್ತಾಳೆ ಅಂತ ಗೊತ್ತಾದರೆ ಅವಳು ಹೇಗಿರ್ತಾಳೆ... ರಾಮನ ಕಥೆ ಏನು? ಭಾರ್ಗವಿ ಆ ಕ್ಷಣಕ್ಕೆ ಖುಷಿಯಾಗಿ ಏನೋ ಇರಬಹುದು. ಆದರೆ ಅವಳ ಮಗ ಕೇಳೋ ಪ್ರಶ್ನೆಗೆ ಅವಳಲ್ಲಿ ಉತ್ತರ ಇರುತ್ತಾ?
ಲಕ್ಷ್ಮೀ ನಿವಾಸ ಧಾರಾವಾಹಿಯ ಮುದ್ದು ಹುಡುಗಿ ಖುಷಿ ಪಾತ್ರಧಾರಿ ಬದಲಾವಣೆ… ಕಾರಣ ಏನು?
ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎಂದೂ ಮಾಧುರ್ಯ ಕಳೆದುಕೊಳ್ಳದ ಸಿಹಿ ಮುತ್ತಿನಂಥಾ ಪುಟ್ಟ ಕಂದಮ್ಮನ ಪಾತ್ರ ಸೀರಿಯಲ್‌ನಲ್ಲಿ ಕೊನೆಗೊಳ್ತಿದೆ. ಒಮ್ಮೆಲೇ ಸಿಹಿಯ ಸಾವನ್ನು ತೋರಿಸಿದರೆ ಅವಳನ್ನು ಎಮೋಶನಲ್ ಆಗಿ ಹಚ್ಚಿಕೊಂಡಿರೋ ವೀಕ್ಷಕರಿಗೆ ಸಹಿಸೋದಕ್ಕೆ ಕಷ್ಟ ಆಗಬಹುದು ಅನ್ನೋ ಕಾರಣಕ್ಕೆ ಒಂದು ತಿಂಗಳ ಹಿಂದಿನಿಂದಲೇ ಸಿಹಿ ಕಾರಿನಡಿಗೆ ಸಿಕ್ಕಿ ಸಾಯುವ, ಮತ್ತೆ ಪುಟ್ಟ ದೇವತೆಯಂತೆ ಕಾಣಿಸಿಕೊಳ್ಳುವ ಸೀನ್‌ಗಳನ್ನು ಸೀರಿಯಲ್ ಟೀಮ್ ತೋರಿಸುತ್ತಲೇ ಬಂದಿದೆ.
ಜೊತೆಗೆ ಸಿಹಿಯ ಟ್ವಿನ್ ಸುಬ್ಬಿ ಎಂಬ ಹೊಸ ಪಾತ್ರ ಇಂಟ್ರಡ್ಯೂಸ್ ಆಗ್ತಾ ಇದೆ. ಹೀಗಾಗಿ ಒಂದೇ ವೇಗದಲ್ಲಿ ಸಾಗ್ತಿರೋ ಸೀರಿಯಲ್‌ಗೆ ಟ್ವಿಸ್ಟ್ ಕೊಡೋದಕ್ಕಾಗಿ ಈ ರೀತಿ ಬದಲಾವಣೆಯನ್ನು ಸೀರಿಯಲ್ ಟೀಮ್ ಮಾಡಿಕೊಂಡ ಹಾಗಿದೆ. ಹಾಗಂತ ಸಿಹಿ ಬಿಟ್ಟರೆ ಸೀರಿಯಲ್ ಓಡೋದಿಲ್ಲ ಅಂತಲೂ ಅವರಿಗೆ ಗೊತ್ತಿದೆ. ಹೀಗಾಗಿ ಅವಳನ್ನೊಂದು ಪುಟ್ಟ ದೇವತೆಯಂತೆ ಮಾಡಿ ಅವಳಿಂದ ಅವಳ ಟ್ವಿನ್‌ನಂತಿರೋ ಸುಬ್ಬಿ ಸೀತಾ ರಾಮರಿಗೆ ಹತ್ತಿರವಾಗಿ ಅವರ ಮಗಳಾಗೋ ಕಥೆ ಇರಬಹುದು.
ಬನಾರಸ್’ನಲ್ಲಿ ಸಂಗೀತಾ ಶೃಂಗೇರಿ… ನೀವೆ ಸಾಕ್ಷಾತ್ ದೇವತೆ ಥರ ಕಾಣಿಸ್ತಿದ್ದೀರಾ ಎಂದ ಫ್ಯಾನ್ಸ್
ಸಿಹಿ ಪಾತ್ರಕ್ಕೆ ಜೀವ ತುಂಬಿದ ಬಾಲ ಕಲಾವಿದೆ ರೀತೂ ಸಿಂಗ್. ಈ ಪುಟಾಣಿ ನೇಪಾಳದವಳು. ಆದರೆ ಕನ್ನಡದವನ್ನು ಅರಳುಹುರಿದಂತೆ ಮಾತಾಡುವ ಈ ಕನ್ನಡ ಮಣ್ಣಿನ ಕೂಸೇ ಆಗಿರುವ ರೀತು ಇದೀಗ ಡಬ್ಬಲ್ ಆಕ್ಟಿಂಗ್ ಮಾಡಲೂ ಮುಂದಾಗಿದ್ದಾಳೆ. ಇಲ್ಲೀವರೆಗೆ ಅವಳು ಮಾಡ್ತಿದ್ದ ಪಾತ್ರ ಅವಳಿರೋ ಹಾಗೆ ಇರ್ತಿತ್ತು. ಆದರೆ ಇನ್ನು ಮೇಲೆ ಮಾಡೋ ಸುಬ್ಬಿ ಪಾತ್ರ ಹಾಗಲ್ಲ. ಅವಳು ಬೀದಿ ಬದಿ ಕಸರತ್ತು ಮಾಡೋ ಕುಟುಂಬದ ಮಗು. ಹಗ್ಗದ ಮೇಲೆ ನಡೀತಾಳೆ. ಏನೇನೋ ಕಸರತ್ತು ಮಾಡ್ತಾಳೆ. ಅವರ ಥರ ಕಚ್ಚಾ ಭಾಷೆ ಮಾತಾಡ್ತಾಳೆ. ಆದರೆ ಅಮ್ಮನಿಗಾಗಿ ಹಂಬಲಿಸ್ತಾಳೆ. ಅವಳ ಹಂಬಲವನ್ನು ಈಡೇರಿಸೋದಕ್ಕಾಗಿಯೇ ಬಹುಶಃ ಸಿಹಿಯನ್ನು ವಿಧಿ ಸೀತಾರಾಮರಿಂದ ದೂರ ಮಾಡಿತು ಅನ್ನಬಹುದು.