ಇನ್ನೆರಡೇಟು…ಭಾಗ್ಯಾ ಕಪಾಳಮೋಕ್ಷಕ್ಕೆ ವೀಕ್ಷಕಕರ ಚಪ್ಪಾಳೆ

By Roopa Hegde  |  First Published Nov 30, 2024, 11:35 AM IST

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯಾ ರೆಬೆಲ್ ಆಗಿದ್ದಾಳೆ. ತಾಳಿ ಎಸೆದ ತಾಂಡವ್ ಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ತಗ್ಗಿ ಬಗ್ಗಿ ನಡೆಯುತ್ತಿದ್ದ ಭಾಗ್ಯಾ ಹೊಸ ಅವತಾರ ಮಜಾ ನೀಡ್ತಿದೆ.
 


ಕಲರ್ಸ್ ಕನ್ನಡ (Colors Kannada) ದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ (Bhagyalakshmi serial) ಯಲ್ಲಿ ಭಾಗ್ಯ ನಡೆ ಏನು ಎಂಬುದೇ, ಸತ್ಯ ವೀಕ್ಷಕರಿಗೆ ಇರುವ ಕುತೂಹಲ. ತಾಂಡವ್ ಮತ್ತು ಶ್ರೇಷ್ಠಾ ಪ್ರೀತಿ ವಿಷ್ಯ ಭಾಗ್ಯಾಗೆ ಯಾವಾಗ ತಿಳಿಯುತ್ತೆ ಎಂದು ಇಷ್ಟು ದಿನ ಅಭಿಮಾನಿಗಳು ಕಾಯ್ತಾ ಇದ್ರು. ಈಗ ಅದೆಲ್ಲ ಗೊತ್ತಾಗಿದೆ. ಸತ್ಯ ಗೊತ್ತಾದ ಮರುದಿನವೇ ಭಾಗ್ಯಾ ವೆಡ್ಡಿಂಗ್ ಆನಿವರ್ಸರಿ ಕೂಡ ಬಂದಿದೆ. ಹಾಗಾಗಿ ಕಥೆ ಮತ್ತಷ್ಟು ಟ್ವಿಸ್ಟ್ ಪಡೆದುಕೊಂಡಿದೆ. ಈ ಬಾರಿ ವೆಡ್ಡಿಂಗ್ ಆನಿವರ್ಸರಿ ವಿಶೇಷ ಎನ್ನುತ್ತಲೇ ಎಲ್ಲ ತಯಾರಿ ಮಾಡಿಕೊಂಡು ಮಂಟಪಕ್ಕೆ ಬಂದ ಭಾಗ್ಯಾ, ತಾಂಡವ್ಗೆ ಕಪಾಳಮೋಕ್ಷ ಮಾಡಿದ್ದಾಳೆ.

ಕಲರ್ಸ್ ಕನ್ನಡ ತನ್ನ ಪ್ರೋಮೋ (promo) ರಿಲೀಸ್ ಮಾಡಿದೆ. ಅದ್ರಲ್ಲಿ ಭಾಗ್ಯಾ ತಾಂಡವ್ಗೆ ಕಪಾಳಮೋಕ್ಷ ಮಾಡೋದನ್ನು ತೋರಿಸಲಾಗಿದೆ. ತಾಳಿ ನೋಡ್ತಿದ್ದಂತೆ ತಾಂಡವ್ ಕೆಂಡಮಂಡಲವಾಗ್ತಾನೆ. ನಾನು ಭಾಗ್ಯಾಗೆ ತಾಳಿ ಕಟ್ಟೋದಿಲ್ಲ ಎನ್ನುತ್ತಾನೆ. ಹೋಟೆಲ್ನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಲು ಆತುರ ಇತ್ತು. ಕೂಗಿ ಐ ಲವ್ ಯು ಅಂದಿದ್ರಿ. ಆದ್ರೆ ಹೆಂಡತಿಗೆ ಯಾಕೆ ತಾಳಿ ಕಟ್ಟಲ್ಲ ಎನ್ನುತ್ತಿದ್ದೀರಿ ಅಂತಾಳೆ ಭಾಗ್ಯಾ. ಅದಕ್ಕೆ ತಾಂಡವ್, ನಾನು ನಿನ್ನನ್ನು ಪ್ರೀತಿ ಮಾಡ್ತಿಲ್ಲ. ಈ ಕಿತ್ತೋಗಿರೋ ತಾಳಿಗೆ ನನ್ನ ಪ್ರಕಾರ ಬೆಲೆ ಇಲ್ಲ. ಇದು ಕೇವಲ ಕಸ ಅಂತ ನೆಲಕ್ಕೆ ಹಾಕ್ತಾನೆ. ಇದನ್ನು ನೋಡಿದ ಭಾಗ್ಯ ತಾಳ್ಮೆ ಕಳೆದುಕೊಳ್ತಾಳೆ. ತಾಂಡವ್ ಗೆ ಕಪಾಳಮೋಕ್ಷ ಮಾಡ್ತಾಳೆ. 

Tap to resize

Latest Videos

ಅಳಿಯನ ಮುಂದೆ ಇದೆಂಥ ಮಾತನಾಡಿದ್ರು ಸೋನಾಕ್ಷಿ ತಾಯಿ? ಪೂನಂ ಸಿನ್ಹಾ ವಿಡಿಯೋ

ಭಾಗ್ಯಾಗೆ ವಿಷ್ಯ ಗೊತ್ತಾಗಿದೆ ಎನ್ನುವ ಶಾಕ್ ನಲ್ಲಿ ಮನೆಯವರಿರೋವಾಗ್ಲೇ ತಾಂಡವ್ ಭಾಗ್ಯಾ ನೀಡಿದ ಏಟು ಮತ್ತೊಂದು ಶಾಕ್. ಭಾಗ್ಯಾ ಮುಂದೇನು ಮಾಡ್ತಾಳೆ ಕಾದು ನೋಡ್ಬೇಕು. ಗಂಡನಿಗಾಗಿ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡಿದ್ದ, ಪ್ರತಿ ಕ್ಷಣ ಗಂಡನಿಗಾಗಿ ಬದುಕಿದ್ದ, ಗಂಡನ ಪ್ರೀತಿಗೆ ಹಾತೊರೆಯುತ್ತಿದ್ದ ಭಾಗ್ಯಾಗೆ, ತಾಂಡವ್ ಇಷ್ಟೆಲ್ಲ ಮೋಸ ಮಾಡ್ತಾನೆ ಎಂಬುದು ಗೊತ್ತೇ ಇರಲಿಲ್ಲ. ಆರಂಭದಲ್ಲಿ ಆಘಾತಕ್ಕೊಳಗಾಗಿದ್ರೂ ಸುಧಾರಿಸಿಕೊಂಡ ಭಾಗ್ಯಾ ತನ್ನದೇ ಆಟ ಶುರು ಮಾಡಿದ್ದಾಳೆ. ಹೋಟೆಲ್ ನಿಂದ ಬಂದ್ಮೇಲೆ ಭಾಗ್ಯಾ ವರ್ತನೆ ಸಂಪೂರ್ಣ ಬದಲಾಗಿದೆ. ವೆಡ್ಡಿಂಗ್ ಆನಿವರ್ಸರಿಗೆ ಎಷ್ಟೆಲ್ಲ ತಯಾರಿ ಮಾಡ್ಕೊಂಡು, ಸುಂದರವಾಗಿ ಸಿದ್ಧವಾಗಿದ್ದಲ್ಲದೆ, ಶ್ರೇಷ್ಠಾಗೆ ವಿಶೇಷ ಆಹ್ವಾನ ನೀಡಿರುವ ಭಾಗ್ಯಾ, ತಾಂಡವ್ ಪ್ರೀತಿಗೆ ಮಹತ್ವ ನೀಡ್ತಾಳಾ, ತಾಂಡವ್ ಶ್ರೇಷ್ಠಾ ಮದುವೆ ಮಾಡಿಸ್ತಾಳಾ ಇಲ್ಲ ತಾಂಡವ್ ಜೊತೆ ಬಾಳಿ ತೋರಿಸುವ ಸಾಹಸಕ್ಕೆ ಕೈ ಹಾಕ್ತಾಳಾ ಎಂಬುದು ಮುಂದಿರುವ ಪ್ರಶ್ನೆ.

ಇನ್ಸ್ಟಾದಲ್ಲಿ ಈ ಪೋಸ್ಟ್ ನೋಡಿದ ವೀಕ್ಷಕರು ಭಾಗ್ಯಾ ಬೆನ್ನು ತಟ್ಟುತ್ತಿದ್ದಾರೆ. ಸರಿಯಾಗಿ ಮಾಡಿದ್ದೀರಿ, ತಾಂಡವ್ಗೆ ಬುದ್ಧಿ ಕಲಿಸಿ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. ಪ್ರೋಮೋ ನೋಡೋಕೇ ಖುಷಿ ಆಗ್ತಿದೆ, ಇನ್ನೆಡರು ಬಾರಿಸು, ಮೊದಲೇ ಈ ಕೆಲಸ ಮಾಡ್ಬೇಕಿತ್ತು ಭಾಗ್ಯಾ ಅಂತ ವೀಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ತಾಳಿ ಎಷ್ಟು ಮುಖ್ಯ ಎಂಬುದನ್ನು ಇವತ್ತು ಭಾಗ್ಯಾ ತಾಂಡವ್ ಗೆ ಹೇಳ್ತಾಳೆ ಎನ್ನುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ. 

ಬ್ರೇಕ್ ಅಪ್ ನಂತ್ರ ಗಳಿಕೆಗೆ ಹೊಸ ದಾರಿ ಹುಡುಕಿದ ಮಲೈಕಾ ಅರೋರಾ!

ಮತ್ತೆ ಕೆಲವರಿಗೆ ತಾಳಿ ಕೆಳಗೆ ಬೀಸಾಕಿದ್ದು ಇಷ್ಟವಾಗಿಲ್ಲ. ತಾಳಿಯನ್ನು ಹೀಗೆ ಕೆಳಗೆ ಎಸೆಯೋದು, ಭಾಗ್ಯಾ ಹೊಡೆಯೋದು ಯಾಕೆ ಇದೆಲ್ಲ, ಏನು ಹೇಳೋಕೆ ಹೊರಟಿದ್ದೀರಿ ಅಂತ ನಿರ್ದೇಶಕರನ್ನು ಪ್ರಶ್ನೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಕಾರ ಗಂಡನಿಗೆ ಹೊಡೆಯೋದು ತಪ್ಪಾದ್ರೂ ಭಾಗ್ಯ ಮಾಡಿದ್ದು ಸರಿ ಇದೆ. ಇನ್ನೆರಡು ಏಟು ಹಾಕು ಭಾಗ್ಯಾ ಎಂದೇ ಬಹುತೇಕ ವೀಕ್ಷಕರು ಭಾಗ್ಯಾ ಪರ ನಿಂತಿದ್ದಾರೆ. 
 

click me!