ಸೀತಾರಾಮ ಸೀರಿಯಲ್‌: ವೀಕ್ಷಕರ ತಲೆಗೆ ಹುಳ ಬಿಡ್ತಿರೋ ಡಾ ಮೇಘಶ್ಯಾಮ್! ಇಲ್ಲೊಂದು ಸಮಸ್ಯೆ ಇದೆ ಅಂತಿರೋದ್ಯಾಕೆ ನೆಟ್ಟಿಗರು?

Published : Aug 22, 2024, 12:00 PM ISTUpdated : Aug 22, 2024, 12:22 PM IST
 ಸೀತಾರಾಮ ಸೀರಿಯಲ್‌: ವೀಕ್ಷಕರ ತಲೆಗೆ ಹುಳ ಬಿಡ್ತಿರೋ ಡಾ ಮೇಘಶ್ಯಾಮ್!  ಇಲ್ಲೊಂದು ಸಮಸ್ಯೆ ಇದೆ ಅಂತಿರೋದ್ಯಾಕೆ ನೆಟ್ಟಿಗರು?

ಸಾರಾಂಶ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗೆ ಹೊಸ ಆಪ್ತನಾಗಿ ಮೇಘಶ್ಯಾಮ್ ಎಂಟ್ರಿ ಕೊಟ್ಟಿದ್ದಾರೆ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಒಂಟಿತನ ಅನುಭವಿಸುತ್ತಿರುವ ಸಿಹಿಗೆ ಮೇಘಶ್ಯಾಮ್ ಆಸರೆಯಾಗಿದ್ದಾರೆ. ಈ ಮೂಲಕ ಧಾರಾವಾಹಿಯಲ್ಲಿ ಹೊಸ ತಿರುವು ಸೃಷ್ಟಿಯಾಗಿದೆ.

'ಸೀತಾರಾಮ' ಸೀರಿಯಲ್‌ನಲ್ಲಿ ಈಗ ಡಾ ಮೇಘ ಶ್ಯಾಮ್ ಪಾತ್ರ ಎಂಟ್ರಿಕೊಟ್ಟು ವೀಕ್ಷಕರ ತಲೆಗೆ ಹುಳ ಬಿಟ್ಟಂಗಾಗಿದೆ. ಪೀಡಿಯಾಟ್ರೀಶನ್ ಅಂತ ಎಂಟ್ರಿ ಏನೋ ಕೊಟ್ರು. ಆಮೇಲೆ 'ತಾರೆ ಜಮೀನ್ ಪರ್'ನ ಅಮೀರ್ ಖಾನ್ ಥರ ಸಿಹಿ ಅನ್ನೋ ಪುಟಾಣಿಗೆ ಹತ್ರ ಆದ್ರು. ಇಷ್ಟೇ ಆಗಿದ್ರೆ ಪರ್ವಾಗಿಲ್ಲ, ಈಗ ಈ ಮನುಷ್ಯನ ಪರ್ಸನಲ್ ಟ್ರ್ಯಾಕ್ ಓಪನ್ ಆಗಿದೆ. ಅದರಲ್ಲಿ ಈತ ಮಗುವಿಗಾಗಿ ಹಂಬಲಿಸೋದು, ಆದರೆ ಈತನ ಹೆಂಡ್ತಿ ಈತನಿಗೆ ಮಕ್ಕಳಾಗದಿರೋ ಬಗ್ಗೆ ಮಾತಾಡೋದು ಎಲ್ಲ ವೀಕ್ಷಕರಲ್ಲಿ ಕನ್‌ಫ್ಯೂಶನ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. 
ಈ ಧಾರಾವಾಹಿಯಲ್ಲಿ ಸಿಹಿಯನ್ನು ಬಿಟ್ಟಿರೋದು ರಾಮ್-ಸೀತಾಗೆ ತುಂಬ ಕಷ್ಟ ಆಗ್ತಿದೆ. ಇನ್ನೊಂದು ಕಡೆ ಅಪ್ಪ-ಅಮ್ಮನ ಖುಷಿಗೆ ಬೋರ್ಡಿಂಗ್ ಸ್ಕೂಲ್‌ಗೆ ಹೋಗಿರುವ ಸಿಹಿ ಕೂಡ ಅಲ್ಲಿ ತುಂಬ ದುಃಖದಲ್ಲಿದ್ದಾಳೆ. ಇದೀಗ ರಾಮ್‌ಗೆ ಗೊತ್ತಾಗಿದೆ.

ಸೀತಾರಾಮ: ಸಿಹಿಗೆ ಮೇಘಶ್ಯಾಮ್ ಯಾರು? ನಿಜ ತಂದೆಯ ಎಂಟ್ರಿಯೇ?

ಪಾಲಕರ ಜೊತೆ ಮಾತನಾಡುವ ಅವಕಾಶ ಇತ್ತು. ಆಗ ಸಿಹಿ ಮನೆಗೆ ಫೋನ್ ಮಾಡಿದ್ದಾಳೆ. ಆಗ ಸಿಹಿ “ಡಾಕ್ಟರ್ ಅಂಕಲ್ ಸ್ವೀಟ್, ನನಗೆ ಇನ್ಸುಲಿನ್ ಕೊಟ್ರು. ಆದರೆ ನನಗೆ ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ. ನನ್ನ ಜೊತೆ ಯಾರೂ ಫ್ರೆಂಡ್ಸ್ ಇಲ್ಲ” ಅಂತ ತಂದೆ-ತಾಯಿಗೆ ಹೇಳಿದ್ದಳು. ಇದನ್ನು ಕೇಳಿ ರಾಮ್ ಬೇಸರ ಮಾಡಿಕೊಂಡಿದ್ದಾನೆ. ಹೀಗಾಗಿ ಅವನು ಏಕಾಏಕಿ ಬೋರ್ಡಿಂಗ್ ಸ್ಕೂಲ್‌ಗೆ ಹೊರಟಿದ್ದಾನೆ. ಸೀತಾ ಎಷ್ಟೇ ತಡೆದರೂ ಅವನು ಕೇಳಲು ರೆಡಿ ಇಲ್ಲ.
ತಾತ ಸೂರ್ಯಪ್ರಕಾಶ್ ಬಳಿ ಬಂದು, 'ನಮಗೆ ಬೋರ್ಡಿಂಗ್ ಸ್ಕೂಲ್ ವರ್ಕ್ ಆಗ್ತಿಲ್ಲ, ಸಿಹಿ ತೊಂದರೆಯಲ್ಲಿದ್ದಾಳೆ' ಅಂತ ಹೇಳಿ ರಾಮ್ ಅಲ್ಲಿಂದ ಬೋರ್ಡಿಂಗ್ ಸ್ಕೂಲ್‌ನತ್ತ ಹೊರಟಿದ್ದಾನೆ. 'ನನ್ನ ಮೊಮ್ಮಗ ಹೀಗೆ ಇರೋದು ಇಷ್ಟ ಇಲ್ಲ' ಅಂತ ತಾತ ಬೇಸರ ಮಾಡಿಕೊಂಡು ಊಟ ಮಾಡದೆ ಎದ್ದು ಹೊರಟಿದ್ದಾರೆ.
ಸೂರ್ಯಪ್ರಕಾಶ್‌ಗೆ ಅವನ ಕುಟುಂಬದ ಕುಡಿ ಬೇಕಂತೆ. ಈ ಮೊದಲೇ ಅವನು ಸೀತಾಗೆ ಹೇಳಿದ್ದನು. ರಾಮ್‌ಗೂ ಈ ವಿಷಯ ಗೊತ್ತಿತ್ತು. ಸೀತಾಗೆ ನನಗೆ ಸಿಹಿ ಒಬ್ಬಳೇ ಸಾಕು, ಇನ್ಯಾರೂ ಬೇಡ ಎನ್ನೋ ಹಠ. ನಾನು ತಾತನಿಗೆ ಎಲ್ಲ ವಿಷಯ ಹೇಳಿದ್ದೇನೆ, ಅವರು ಒಪ್ಪಿದ್ದಾರೆ ಅಂತ ಭಾರ್ಗವಿಯೇ ಸೀತಾ ಬಳಿ ಸುಳ್ಳು ಹೇಳಿದ್ದರು. ಸಿಹಿ ಇದ್ರೆ ಸೀತಾ-ರಾಮ್ ಒಂದಾಗೋದಿಲ್ಲ, ಅವರಿಬ್ಬರು ಅವಳ ಕಡೆಗೆ ಗಮನ ಕೊಡ್ತಾರೆ ಅನ್ನೋದು ತಾತನ ಪ್ಲ್ಯಾನ್ ಆಗಿತ್ತು, ಹೀಗಾಗಿ ಅವರೇ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸಲು ಬೆಂಬಲ ಕೊಟ್ಟಿದ್ದರು. ಇದೀಗ ಸಿಹಿ ಮತ್ತೆ ಮನೆಗೆ ಬಂದರೆ ಅವರಿಗೆ ಬೇಸರ ಆಗೋ ಚಾನ್ಸಸ್ ಇದೆ. 

ಕನ್ನಡ ಸೀರಿಯಲ್‌ ಬೇಡ್ವೇ ಬೇಡ, ಒಂದು ಚಮಚ ಪಾಯಸ ತಿಂದಿದ್ದಕ್ಕೆ ಅನ್ನಬಾರದ್ದೆಲ್ಲ ಅನ್ನಿಸಿಕೊಂಡೆ: ನಟಿ ಸೌಮ್ಯ ರಾವ್‌

ಆದರೆ ಇದೆಲ್ಲದರ ನಡುವೆ ಡಾ ಮೇಘಶ್ಯಾಮ್ ಪಾತ್ರ ಎಂಟ್ರಿ ಆಗಿರೋದು ಈ ಸೀರಿಯಲ್‌ಗೆ ಒಂದೊಳ್ಳೆ ಟ್ವಿಸ್ಟ್ ಕೊಟ್ಟಿದೆ. ಸಿಹಿಗೆ ಒಬ್ಬ ರಿಯಲ್‌ ಫ್ರೆಂಡ್ ಸಿಕ್ಕಂಗಾಗಿದೆ. ಇವರಿಬ್ಬರ ನಡುವೆ ಸಾಮಾನ್ಯವಲ್ಲದ ಯಾವುದೋ ಬಂಧ ಇರೋದು ವೀಕ್ಷಕರಿಗೆ ಗೊತ್ತಾಗ್ತಿದೆ. ಅವರು ಇವರಿಬ್ಬರ ಪಾತ್ರವನ್ನು ಚೆನ್ನಾಗಿ ಎನ್‌ಜಾಯ್ ಮಾಡ್ತಿದ್ದಾರೆ. ಬಹುಶಃ ರಾಮ್ ಸಿಹಿಯನ್ನು ಕರ್ಕೊಂಡು ಹೋಗೋದಕ್ಕೆ ಬಂದರೂ ಸಿಹಿ ಮತ್ತೆ ಬೋರ್ಡಿಂಗ್‌ ಸ್ಕೂಲಿಗೆ ಸೇರೋ ಸ್ಥಿತಿ ಸೃಷ್ಟಿಯಾಗಬಹುದು. ಈ ಮೇಘಶ್ಯಾಮ್ ಜೊತೆಗೆ ಅವಳ ಬಂಧ ಬೆಳೆಯಬಹುದು. ಮುಂದೆ ಇದು ಮತ್ತೆಲ್ಲೋ ಹೋಗಿ ಇವರಿಬ್ಬರು ಅಪ್ಪ ಮಗಳು ಅನ್ನೋ ಸತ್ಯ ಜಗತ್ತಿನ ಮುಂದೆ ಓಪನ್‌ಅಪ್ ಆಗಬಹುದೇನೋ ಅನ್ನೋ ಗುಮಾನಿಯಲ್ಲಿದ್ದಾರೆ ವೀಕ್ಷಕರು. ಆದರೆ ಡಾ ಮೇಘಶ್ಯಾಮ್ ಎಂಟ್ರಿ, ಈ ಸ್ಟೋರಿ ಲೈನ್‌ಗೆ ಒಳ್ಳೆ ಮೆಚ್ಚುಗೆ ಹರಿದುಬಂದಿದೆ. ಸೀತಾ ಮತ್ತು ರಾಮ್ ಜೊತೆಗೆ ಸಿಹಿಯ ಅದದೇ ಸೀನ್ ನೋಡಿ ವೀಕ್ಷಕರಿಗೂ ಬೇಜಾರಾಗಿತ್ತು ಅಂತ ಕಾಣುತ್ತೆ. ಈಗ ಪ್ರೆಶ್‌ಫೇಸ್ ನೋಡಿ ಅವರು ಖುಷಿ ಪಡೋಹಾಗಾಗಿದೆ. ಇನ್ಮೇಲೆ ಖುಷಿ ಮತ್ತು ಮೇಘಶ್ಯಾಮ್ ಎಪಿಸೋಡ್‌ಗಳಿಗೆ ಅವರು ಎದುರು ನೋಡ್ತಿದ್ದಾರೆ. 
 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?