ಭಾಗ್ಯ ಜೊತೆ ಮಾತಾಡಬೇಕಾ? ಫೋಟೋ ಕ್ಲಿಕ್ಕಿಸಿಕೊಳ್ಳೋ ಆಸೆನಾ? ಹಾಗಿದ್ರೆ ಇನ್ನೇಕೆ ತಡ... ಡಿಟೇಲ್ಸ್‌ ಇಲ್ಲಿದೆ

By Suchethana D  |  First Published Aug 21, 2024, 5:15 PM IST

ಭಾಗ್ಯ ಉರ್ಫ್‌ ಸುಷ್ಮಾ ಕೆ.ರಾವ್‌ ಜೊತೆ ಮಾತಾಡಬೇಕಾ? ಫೋಟೋ ಕ್ಲಿಕ್ಕಿಸಿಕೊಳ್ಳೋ ಆಸೆನಾ? ಹಾಗಿದ್ರೆ ಇನ್ನೇಕೆ ತಡ... ಮೊಬೈಲ್‌ ಎತ್ತಿಕೊಳ್ಳಿ... ಟೈಪ್‌ ಮಾಡಿ...
 


ಭಾಗ್ಯ ಎಂದ್ರೆ ಸಾಕು, ಕಲರ್ಸ್​ ಕನ್ನಡ ಚಾನೆಲ್​ನ ಭಾಗ್ಯಲಕ್ಷ್ಮಿ ಸೀರಿಯಲ್‌ ನಾಯಕಿ ಥಟ್​ ಅಂತ ಕಣ್ಣೆದುರು ಪ್ರತ್ಯಕ್ಷ ಆಗಿ ಬಿಡುತ್ತಾಳೆ. ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಭಾಗ್ಯಳದ್ದೇ ಹವಾ. ಅಳುಮುಂಜಿ ಭಾಗ್ಯ ಬದಲಾಗಿದ್ದಾಳೆ.  ಅಳುಮುಂಜಿ ಭಾಗ್ಯಳನ್ನು ನೋಡಿ ನೋಡಿ ಸುಸ್ತಾಗಿ ಹೋಗಿ ಸೀರಿಯಲ್​  ನೋಡುವುದನ್ನೇ ನಿಲ್ಲಿಸುತ್ತೇನೆ ಎಂದು ಒಂದೇ ಸಮನೆ ಗೋಳಾಡುತ್ತಿದ್ದ ವೀಕ್ಷಕರ ಮನಸ್ಥಿತಿಯೂ ಈಗ ಬದಲಾಗಿ ಹೋಗಿದೆ. ನಮಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಸಿಕ್ಕಾಪಟ್ಟೆ ಇಷ್ಟ ಆಗ್ತಿದೆ ಎನ್ನುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಸದ್ಯ ಗಂಡ ತಾಂಡವ್​ನ ಕಾಲವೂ ಹೋಗಿದೆ, ಇಟ್ಟುಕೊಂಡಿರೋ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಈಗ ಏನಿದ್ರೂ ಪತ್ನಿ ಭಾಗ್ಯಳದ್ದೇ ಕಾಲವಾಗಿದೆ. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವಳ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್​ ಹೋಟೆಲ್​ನ ಚೀಫ್​ ಶೆಫ್​. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್​  ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು  ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್​ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ.

ಅಂದಹಾಗೆ ಭಾಗ್ಯ ಪಾತ್ರಧಾರಿಯ ಹೆಸರು ಸುಷ್ಮಾ ಕೆ.ರಾವ್‌.  ಸುಷ್ಮಾ ಅವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ. ನಿಮಗೆ ಭಾಗ್ಯ ಉರ್ಫ್ ಸುಷ್ಮಾ ಅವರನ್ನು ಭೇಟಿಯಾಗಲು ಒಂದೊಳ್ಳೆ ಅವಕಾಶವನ್ನು ಕಲರ್ಸ್ ಕನ್ನಡ ವಾಹಿನಿ ನೀಡುತ್ತಿದೆ. ಸದ್ಯದಲ್ಲಿಯೇ ಅನುಬಂಧ ಅವಾರ್ಡ್ ಫಂಕ್ಷನ್‌ ನಡೆಯಲಿರುವ ಇದರ ಅಂಗವಾಗಿ ವಾಹಿನಿಯು ಸುಷ್ಮಾ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದೆ. 

Tap to resize

Latest Videos

ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು

ಹಾಗಿದ್ದರೆ ನೀವು ಮಾಡಬೇಕಿರುವುದು ಇಷ್ಟೆ. ಮೊಬೈಲ್‌ ಎತ್ತಿಕೊಳ್ಳಿ. BHAGYA ಎಂದು ಟೈಪ್‌ ಮಾಡಿ 936401518ಕ್ಕೆ ಕಳುಹಿಸಿ. ಇಷ್ಟು ಮಾಡಿದರೆ ಸಾಕು. ಲಕ್ಕಿ ವಿಜೇತರು ನೀವಾದರೆ ಸುಷ್ಮಾ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಅಂದಹಾಗೆ ಒಂದೇ ಒಂದು ಷರತ್ತು ಇದೆ. ಅದೇನೆಂದರೆ, ಈ ಅವಕಾಶ ಸಿಗುವುದು ಹೆಣ್ಣುಮಕ್ಕಳಿಗೆ ಮಾತ್ರ. ಆದ್ದರಿಂದ ಪುರುಷರು ಮೆಸೇಜ್‌ ಕಳುಹಿಸಿದರೆ ಪ್ರಯೋಜನವಿಲ್ಲ. ಇನ್ನೇಕೆ ತಡ, ಮೆಸೇಜ್‌ ಮಾಡಲು ಶುರು ಮಾಡಿ...

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  

ವೀಳ್ಯದೆಲೆ ವ್ಯಾಪಾರಕ್ಕಿಳಿದುಬಿಟ್ಟಳಾ ಭಾಗ್ಯ? ಕಮೆಂಟ್ಸ್​ಗೆಲ್ಲಾ ಉತ್ತರ ಕೊಡುತ್ತಲೇ ಹೃದಯ ಕದ್ದ ನಟಿ...

 

click me!