Puttakkana makkalu: ಸಹನಾ ಮುಟ್ಟಲು ಬಂದವನಿಗೆ ಬಿತ್ತು ಗೂಸಾ! ಸೂಪರ್ ಹೀರೋ ರೇಂಜಲ್ಲಿ ಬಿಲ್ಡಪ್ ಕೊಟ್ಟ ಕಾಳಿ

Published : Sep 11, 2024, 01:03 PM ISTUpdated : Sep 11, 2024, 01:12 PM IST
Puttakkana makkalu: ಸಹನಾ ಮುಟ್ಟಲು ಬಂದವನಿಗೆ ಬಿತ್ತು ಗೂಸಾ! ಸೂಪರ್ ಹೀರೋ ರೇಂಜಲ್ಲಿ ಬಿಲ್ಡಪ್ ಕೊಟ್ಟ ಕಾಳಿ

ಸಾರಾಂಶ

 ಸಹನಾ ಕಾಳಿ ಪೇರ್ ಸಖತ್ತಾಗಿದೆ ಅಂತಿದ್ದೋರಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೀಮ್ ಮತ್ತಷ್ಟು ಬಲ ನೀಡ್ತಿದೆ. ಸಹನಾ ಟಚ್ ಮಾಡೋಕೆ ಬಂದ ರೌಡಿಗೆ ಗೂಸಾ ನೀಡೋ ಮೂಲಕ ಕಾಳಿ ಹೀರೋ ರೇಂಜ್‌ಗೆ ಬಿಲ್ಡಪ್ಪು ತಗೊಂಡಿದ್ದಾನೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್. ಇಲ್ಲೀವರೆಗೆ ಕಂಠಮಟ್ಟ ಕುಡ್ಕೊಂಡು ಓಡಾಡ್ತಿದ್ದ ಕಾಳಿ ಫಾರ್ ದಿ ಫಸ್ಟ್ ಟೈಮ್ ಹೀರೋ ಲೆವೆಲ್‌ಗೆ ಬಿಲ್ಡಪ್ ತಗೊಂಡಿದ್ದಾನೆ. ಸಹನಾ ಮೈ ಮುಟ್ಟೋಕೆ ಬಂದಿರೋ ರೌಡಿಗೆ ಕೈ ಮುರಿಯೋ ಹಂಗೆ ಏಟು ಕೊಟ್ಟು ಕಳ್ಸಿದ್ದಾನೆ. ಈ ಸೀರಿಯಲ್ ವೀಕ್ಷಕರಿಗೆ ಕಾಳಿಯ ಹೊಸ ನಡೆ ಕಂಡು ಭಾಳ ಖುಷಿ ಆಗಿದೆ. ಈ ಹಿಂದೆಯೇ ಸಹನಾಗೆ ಮೇಷ್ಟ್ರಿಗಿಂತ ಕಾಳಿಯೇ ಪಾರ್ಟನರ್‌ ಆಗಿ ಹೆಚ್ಚು ಸೂಟ್ ಆಗ್ತಾನೆ ಅಂತ ಸಾಕಷ್ಟು ಜನ ಅಭಿಪ್ರಾಯಪಟ್ಟಿದ್ದರು. ಇದೀಗ ಆ ಮಾತಿಗೆ ಪುಷ್ಠಿ ಕೊಡೋ ಹಾಗೆ ಸೀರಿಯಲ್ ಟೀಮ್ ಕಾಳಿಯನ್ನು ಮುನ್ನೆಲೆ ತಂದಿದೆ. ಈ ಪುಣ್ಯಾತ್ಮ ನಮ್ ಸಹನಾಗೆ ಬೆಂಬಲವಾಗಿ ನಿಂತು ಅವಳನ್ನು ಗುರಿ ಮುಟ್ಟಲು ಸಹಾಯ ಮಾಡ್ತಾನೆ ಅನ್ನೋದನ್ನು ತೋರಿಸೋ ಪ್ರಯತ್ನ ಮಾಡ್ತಿದೆ.

ಈ ಗುಡ್‌ ಮೂವ್‌ಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. 'ಇದು ಕಾಳಿನ.. ಅಬ್ಬಬ್ಬಾ ನಂಬೋಕೆ ಆಗ್ತಿಲ್ಲ. ಅಂತೂ ಕಾಳಿ ಸೂಪರ್ ಹೀರೋ ಆಗ್ಬಿಟ್ಟ' ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಸೂಪರ್ಬ್. ಕಾಳಿ ಪಾತ್ರವನ್ನು ಬಹಳ ಚೆನ್ನಾಗಿ ತಗೊಂಡು ಹೋಗ್ತಿದ್ದಾರೆ' ಅಂತೆಲ್ಲ ಜನ ಕಾಮೆಂಟ್ ಮಾಡ್ತಿದ್ದಾರೆ. ಅಲ್ಲಿಗೆ ಕಾಳಿಯ ಹೊಸ ಶೇಡ್ ನೋಡಲು ಜನ ತುದಿಗಾಲಲ್ಲಿ ನಿಂತಿರೋದು ಸ್ಪಷ್ಟ.

ಪುಟ್ಟ ತಂಗಿಗೆ ಮೊದಲ ಪೀರಿಯೆಡ್ಸ್, ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿರೋ ಅಣ್ಣಯ್ಯ ಇದೀಗ ಹೆಣ್ಮಕ್ಕಳ ಫೇವರಿಟ್

ಇನ್ನು ಕಥೆ ವಿಚಾರಕ್ಕೆ ಬಂದೆ ತಾನು ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಮನೆಯಿಂದ ಹೊರ ಬಂದ ಸಹನಾಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಹನಾ ಕೇವಲ ಸಾಲ ಕೊಟ್ಟವರಿಂದ ಮಾತ್ರವಲ್ಲ, ಕಸ್ಟಮರ್‌ಗಳಿಂದಲೂ ಸಮಸ್ಯೆ ಎದುರಿಸುತ್ತಿದ್ದಾಳೆ. ಇಂಥಾ ಸಾಹಸಕ್ಕೆ ಹೊರಟಾಗ ಒಂಟಿ ಹೆಣ್ಣು ಮಗಳಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಅದನ್ನು ಮೀರಿ ಹೇಗೆ ಮುನ್ನಡೆಯಬೇಕು ಅನ್ನುವುದಕ್ಕೆ ಉದಾಹರಣೆಯಾಗಿ ಸಹನಾ ನಿಲ್ತಿದ್ದಾಳೆ.

ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಮನೆಯಿಂದ ಹೊರಗೆ ಬಂದ ಸಹನಾ , ಸಾಲ ಪಡೆದು ಸಣ್ಣದಾಗಿ ಗಾಡಿ ಹೊಟೇಲ್ ಇಟ್ಟುಕೊಂಡು ಬ್ಯುಸಿನೆಸ್‌ ಏನೋ ಮಾಡುತ್ತಿದ್ದಾಳೆ. ಸಹನಾ ಕೈ ಅಡುಗೆ ರುಚಿಗೆ ಗ್ರಾಹಕರು ಕೂಡ ಫಿದಾ ಆಗ್ತಿದ್ದಾರೆ. ಇದರ ಜತೆಗೆ ಕೆಲವರು ಸಹನಾ ಒಂಟಿ ಆಗಿದ್ದರಿಂದ ಕೆಟ್ಟ ದೃಷ್ಟಿಯಿಂದ ನೋಡಲು ಶುರು ಮಾಡಿದ್ದಾರೆ. ಈ ಎಲ್ಲ ಅಡೆ ತಡೆಗಳ ಮಧ್ಯೆ ಸಹನಾ ಮಾತ್ರ ಭಯ ಪಡದೇ ಮುನ್ನುಗುತ್ತಿದ್ದಾಳೆ . ಇದರ ಬೆನ್ನಲ್ಲೇ ಸಾಲ ಕೊಟ್ಟವನ ಕಾಟ ಕೂಡ ಜೋರಾಗಿದೆ.

ಭಾಗ್ಯಲಕ್ಷ್ಮಿ ಆದರ್ಶ ಕುಸುಮತ್ತೆಗೆ ಹುಟ್ಟುಹಬ್ಬದ ಸಂಭ್ರಮ: ಜೈಲುಪಾಲಾಗದಿರಲಿ ಎಂದು ಹಾರೈಸ್ತಿರೋ ಫ್ಯಾನ್ಸ್​

ಸಹನಾ ತನ್ನ ತಿಂಡಿ ಗಾಡಿ ನಡೆಸುವ ಮೂಲಕ ಪುಟ್ಟ ಬ್ಯುಸಿನೆಸ್‌ ನಡೆಸಲು ಮುಂದಾಗಿದ್ದಾಳೆ. ಇದಕ್ಕಾಗಿ ಸಾಲ ಪಡೆದಿರುತ್ತಾಳೆ. ಆತನೋ ಪರಮ ಲಫಂಗ. ಸಾಲ ಕೊಟ್ಟವನ ಆಪ್ತನೊಬ್ಬ ಬಂದು ಬಡ್ಡಿ ಕೇಳಲು ಬರುತ್ತಾನೆ. ಆದರೆ ಕಡಿಮೆ ಬಡ್ಡಿ ಎಂದು ಅಂದುಕೊಂಡಿದ್ದ ಸಹನಾಗೆ ಶಾಕ್‌ ಆಗುತ್ತೆ. ಆರು ಸಾವಿರ ರೂ. ಕೊಡಲು ಮುಂದಾದಾಗ 30 ಸಾವಿರೂ. ಬಡ್ಡಿ ಆಗಿದೆ ಎಂದು ತಿಳಿದು ಶಾಕ್‌ ಅಗಿದ್ದಾಳೆ. ಬಂದಾತ ಕೂಡ ಒಂಟಿ ಹೆಣ್ಣು ಮಗಳು ಬೇರೆ. ಸಂಜೆ ಒಳಗೆ ಬಡ್ಡಿ ಕೊಟ್ಟಿಲ್ಲ ಅಂದರೆ ನಮ್ಮ ಬಾಸ್‌ ನಿಮಗೆ ಗತಿ ಕಾಣಿಸುತ್ತಾರೆ ಎಂದು ವಾರ್ನ್‌ ಮಾಡಿ ಹೋಗಿದ್ದಾನೆ. ಇದರಿಂದ ಸಹನಾ ಕಂಗಲಾಗಿದ್ದಾಳೆ. ಆತ ಹೇಳಿದಂತೆ ರೌಡಿ ಬಂದಿದ್ದಾನೆ. ಇದನ್ನೇ ನೆವವಾಗಿಟ್ಟುಕೊಂಡು ಅವಳ ಮೈ ಮುಟ್ಟಲು ಬಂದಿದ್ದಾನೆ. ಆ ಹೊತ್ತಿಗೆ ಅವಳನ್ನು ಕಾಪಾಡುವುದು ಕಾಳಿ. ಈ ಮೂಲಕ ಕಾಳಿ ಸಹನಾ ಬದುಕಿಗೆ ಹತ್ತಿರವಾಗುತ್ತಿರುವುದು ವೀಕ್ಷಕರಿಗೆ ತೃಪ್ತಿ ತಂದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್