ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಕಾರ್ ಅಪಘಾತ; ಎದೆ ಭಾಗಕ್ಕೆ ಪೆಟ್ಟು

By Mahmad Rafik  |  First Published Sep 11, 2024, 7:41 AM IST

ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರ್ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಅಪಘಾತಕ್ಕೊಳಗಾಗಿದೆ.


ಬೆಂಗಳೂರು: ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ಕಾರ್ (Kiran Raj Car Accident) ಅಪಘಾತಕ್ಕೊಳಗಾಗಿದೆ. ಬೆಳಗಿನ ಜಾವ ಕೆಂಗೇರಿ ಬಳಿ ಕಾರ್ ಅಪಘಾತಕ್ಕೊಳಗಾಗಿದ್ದು, ಎದೆ ಭಾಗಕ್ಕೆ ಪೆಟ್ಟು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡತಿ ಸೀರಿಯಲ್‌ ಹರ್ಷ ಪಾತ್ರ ಕಿರಣ್‌ ರಾಜ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತ್ತು. ಕನ್ನಡತಿ ಮುಕ್ತಾಯದ ಬಳಿಕ ರಾನಿ ಸಿನಿಮಾದಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಸದ್ಯ ಕಿರಣ್ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಕಿರಣ್ ರಾಜ್ ಕನ್ನಡ ಸೇರಿದಂತೆ ಹಿಂದಿ ಸೀರಿಯಲ್‌ ಗಳಲ್ಲಿಯೂ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕಿರಣ್ ರಾಜ್ ತಮ್ಮ ಪಂಚಿಂಗ್ ಡೈಲಾಗ್‌ಗಳಿಂದಲೇ ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ಕಿರಣ್ ರಾಜ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

ಅಪಘಾತ ಹೇಗಾಯ್ತು? ಕಾರಣ ಏನು? ಕಾರ್‌ ನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಕಿರಣ್ ರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

Tap to resize

Latest Videos

click me!