
ಬೆಂಗಳೂರು (ಸೆ.10): ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಗ್ ಬಾಸ್ ಕನ್ನಡ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಕಲರ್ಸ್ ಕನ್ನಡ ರಿಯಾಲಿಟಿ ಶೋ ಕುರಿತಾದ ಅಪ್‌ಡೇಟ್‌ಗಳನ್ನು ನೀಡಲು ಆರಂಭಿಸಿದೆ. ಅದರ ನಡುವೆ ಬಿಗ್‌ಬಾಸ್ ಆಂಕರ್ ಬದಲಾಗಲಿದ್ದಾರೆ ಅನ್ನೋ ಸೂಚನೆಗಳು ದಟ್ಟವಾಗಿದೆ. ಇಲ್ಲಿಯವರೆಗೂ ಬಿಗ್ ಬಾಸ್ ಕನ್ನಡ ಶೋಗೆ ಕಿಚ್ಚ ಸುದೀಪ್ ಆಂಕರ್ ಆಗಿ ಕೆಲಸ ಮಾಡಿದ್ದರು. ಕಿಚ್ಚನ ವಾಯ್ಸ್ ಇಲ್ಲದೆ ಬಿಗ್ ಬಾಸ್ ಕನ್ನಡ ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ. ಇದರ ನಡುವೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್ ಬಿಗ್ ಬಾಸ್‌ನಲ್ಲಿ ಆಂಕರ್ ಆಗಿ ಮುಂದುವರಿಯುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಆ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11ನ ಮೊದಲ ಪ್ರೋಮೋ ಹಂಚಿಕೊಂಡಿದ್ದ ಕಲರ್ಸ್ ಕನ್ನಡ, ಅದರಲ್ಲಿ ಕಿಚ್ಚ ಸುದೀಪ್ ಅವರ ಹ್ಯಾಶ್‌ಟ್ಯಾಗ್‌ಅನ್ನು ಬಳಕೆ ಮಾಡಿತ್ತು. ಇದರಿಂದಾಗಿ ಈ ಬಾರಿಯೂ ಸುದೀಪ್ ಅವರೇ ಶೋನ ನಿರೂಪಕರಾಗಿ ಮುಂದುವರಿಯಲಿದ್ದಾರೆ ಎನ್ನುವುದು ಖಚಿತವಾಗಿತ್ತು. ಇತ್ತೀಚೆಗೆ ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಹ್ಯಾಶ್‌ಟ್ಯಾಗ್‌ಅನ್ನು ಕಲರ್ಸ್ ಕನ್ನಡ ತೆಗೆದ ಕಾರಣಕ್ಕೆ ಸುದೀಪ್ ಅವರು ಆಂಕರ್ ಆಗುವ ಬಗ್ಗೆ ಮತ್ತೆ ಅನುಮಾನಗಳೆದ್ದಿದ್ದವು.
ಮಂಗಳವಾರ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ' ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ; ಬಿಗ್ ಬಾಸ್ ಕನ್ನಡ ಸೀಸನ್ 11' ಎಂದು 34 ಸೆಕೆಂಡ್‌ನ ಪ್ರೋಮೋ ರಿಲೀಸ್ ಮಾಡಿದೆ. ಇದರಲ್ಲಿ ಬಿಗ್ ಬಾಸ್‌ನ ಹೊಸ ವಾಯ್ಸ್ ಇದ್ದು ಆಂಕರ್ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 'ನಮಸ್ಕಾರ ಕರ್ನಾಟಕ, ಹೇಗಿದ್ದೀರಾ? 10 ವರ್ಷದಿಂದ ನೋಡ್ತಾನೆ ಇದ್ದೀರಾ? ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕಂದ್ರೆ ಇದು ಹೊಸ ದಶಕ. ಹೊಸ ಆಟ, ಹೊಸ ಅಧ್ಯಾಯ' ಎಂದು ಹೇಳುವುದರೊಂದಿಗೆ ಅರ್ಧಕ್ಕೆ ನಿಲ್ಲುತ್ತದೆ. 'ಹಾಗಾದರೆ ಆಂಕರ್ ಕೂಡ ಹೊಸಬ್ರಾ..' ಎಂದು ಮಗು ಪ್ರಶ್ನೆ ಮಾಡುತ್ತದೆ. ಈ ಪ್ರಶ್ನೆ ಕೇಳಿದ ಬೆನ್ನಲ್ಲೇ ವ್ಯಕ್ತಿಯೊಬ್ಬರು ನಗುವ ಸದ್ದು ಕೇಳುತ್ತದೆ. ಅಲ್ಲಿಗೆ ಪ್ರೋಮೋ ಮುಕ್ತಾಯ ಕಂಡಿದೆ.
ಇದರ ಬೆನ್ನಲ್ಲಿಯೇ ಆಂಕರ್ ಬದಲಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಹೆಚ್ಚಿನವರು ಕೊನೆಯ ನಗು ನೋಡಿದರೆ, ರಿಷಬ್ ಶೆಟ್ಟಿ ಹೊಸ ಆಂಕರ್ ಆಗಬಹುದು ಎನ್ನುವ ಮಾತನ್ನಾಡಿದ್ದಾರೆ. ಕಿಚ್ಚ ಸುದೀಪ್ ಅವರ ಟ್ಯಾಗ್ ಇಲ್ಲದೇ ಇರೋದನ್ನ ಕೂಡ ಗಮನವಹಿಸಿದ್ದಾರೆ.
ಬಿಗ್ ಬಾಸ್ ನಿರೂಪಣೆಗೆ ಗುಡ್‌ಬೈ ಎಂದ ಸ್ಟಾರ್ ನಟ, ಕಂಚಿನ ಕಂಠ ಇನ್ನು ಕೇಳೋಕೆ ಸಿಗದು!!
ಕಿಚ್ಚ ಸುದೀಪ್ ಇರ್ತಾರಾ: ಮೂಲಗಳ ಪ್ರಕಾರ, ಕಿಚ್ಚ ಸುದೀಪ್ ಅವರ 10 ವರ್ಷಗಳ ಬಿಗ್ ಬಾಸ್ ಒಪ್ಪಂದ ಮುಕ್ತಾಯವಾಗಿದೆ. ಆದರೆ, ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಅವರನ್ನು ಸುಮ್ಮನೆ ಬಿಟ್ಟುಕೊಡುವ ಹಾಗಿಲ್ಲ. ಹಾಗಾಗಿ ಇನ್ನೊಂದಷ್ಟು ವರ್ಷಗಳ ಕಾಲ ಬಿಗ್ ಬಾಸ್‌ನ ಆಂಕರ್ ಆಗಿ ಸುದೀಪ್ ಅವರೇ ಮುಂದುವರಿಯುವ ಸಾಧ್ಯತೆ ಇದೆ. ಹಾಗೇನಾದರೂ ಸುದೀಪ್ ಬಿಗ್ ಬಾಸ್‌ನ ಆಂಕರಿಂಗ್ ಮುಕ್ತಾಯ ಮಾಡುತ್ತಾರೆ ಎಂದಾದಲ್ಲಿ ಕಲರ್ಸ್ ಕನ್ನಡ ಇಷ್ಟೆಲ್ಲಾ ಸಸ್ಪೆನ್ಸ್ ಅನ್ನು ಮಾಡೋದೇ ಇಲ್ಲ. ಬಿಗ್ ಬಾಸ್‌ನಲ್ಲಿ ಸುದೀಪ್ ಅವರೇ ಆಂಕರ್ ಆಗಿ ಮುಂದುವರಿಯಲಿದ್ದು, ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವ ದೃಷ್ಟಿಯಲ್ಲಿ ಇಂಥದ್ದೊಂದು ಪ್ರೋಮೋ ರಿಲೀಸ್ ಮಾಡಿರಬಹುದು ಎನ್ನಲಾಗಿದೆ. ಬಿಗ್ ಬಾಸ್ ವಿಚಾರದಲ್ಲಿ ಕಲರ್ಸ್ ಕನ್ನಡ ಇಂಥ ಸಸ್ಪೆನ್ಸ್‌ಗಳನ್ನು ಕ್ರಿಯೇಟ್ ಮಾಡಿದ್ದು ಇದು ಮೊದಲೇನೂ ಅಲ್ಲ, ಕೊನೆಯೂ ಅಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.