ಜಾಹ್ನವಿಗೆ ವಿಶ್ವ ಜೋಡಿಯಾದ್ರೆ ನಾವು ಸೀರಿಯಲ್ ನೋಡ್ತೀವಿ, ಇಲ್ಲವಾದ್ರೆ ನೋಡಲ್ಲ ಎಂದ ಫ್ಯಾನ್ಸ್!

By Sathish Kumar KH  |  First Published Feb 7, 2024, 7:47 PM IST

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಜಾಹ್ನವಿಗೆ ವಿಶ್ವ ಜೋಡಿಯಾದರೆ ಮಾತ್ರ ಧಾರಾವಾಹಿ ನೋಡುತ್ತೇವೆ ಎಂದು ಅಭಿಮಾನಿಗಳು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.


ಬೆಂಗಳೂರು (ಫೆ.07): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕುಟುಂಬದ ಲಕ್ಷ್ಮೀ ಹಾಗೂ ಶ್ರೀನಿವಾಸ ದಂಪತಿಗೆ ಐದು ಜನ ಮಕ್ಕಳು. ಅದರಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳ ಮದುವೆಯಾಗಿದ್ದು, ಇನ್ನಿಬ್ಬರು ಹೆಣ್ಣು ಮಕ್ಕಳ ಮದುವೆ ಆಗುವುದು ಬಾಕಿಯಿದೆ. ಅದರಲ್ಲಿ, ಈಗ ಮದುವೆಯಾಗದ ಇಬ್ಬರು ಹೆಣ್ಣು ಮಕ್ಕಳ ಲವ್‌ ಸ್ಟೋರಿ ಮಾತ್ರ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಅದರಲ್ಲಿಯೂ ಕಿರಿಮಗಳು ಜಾಹ್ನವಿಗೆ ಯಾರು ಜೋಡಿ ಆಗುತ್ತಾರೆ ಎನ್ನುವುದೇ ಭರ್ಜರಿ ಕುತೂಹಲವನ್ನು ಮೂಡಿಸಿದೆ.

ಸಾಮಾನ್ಯವಾಗಿ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳನ್ನು ಪ್ರತಿನಿಧಿಸುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕುಟುಂಬದ ಆಗು-ಹೋಗು, ಕಷ್ಟ-ಸುಖ ಮಾತ್ರವಲ್ಲ, ಅಲ್ಲೊಂದೆರಡು ಬ್ಯೂಟಿಫುಲ್ ಲವ್ ಸ್ಟೋರಿ ಕೂಡ ಕಂಡುಬರುತ್ತಿದೆ. ಈ ಲವ್ ಸ್ಟೋರಿಗಳು ಸಕ್ಸಸ್ ಆಗುವುಕ್ಕೆ ಇನ್ನು ಧೀಘ್ ಸಮಯವೇ ಬೇಕಾಗುತ್ತದೆ. ಆದರೆ, ಡೈರೆಕ್ಟರ್ ಮದುವೆಯಾಗದ ಇಬ್ಬರು ಹೆಣ್ಣು ಮಕ್ಕಳಿಗೆ ಗಂಡು ಸಿಗುವುದೇ ಕಷ್ಟ ಎನ್ನುತ್ತಿರುವಾಗ ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವಂತೆ ಸಖತ್ ಲವ್‌ ಸ್ಟೋರಿಗಳು ಕೂಡ ಹೊರಗೆ ಬರುತ್ತಿವೆ.

Tap to resize

Latest Videos

ಬಿಗ್ ಬಾಸ್ ಮನೆಯಲ್ಲಿ 'ನಿಮ್ಮನ್ನ ತಪ್ಪು ತಿಳ್ಕೊಂಡಿದ್ವಿ sorry ವಿನಯ್' ನಿಮ್ಮನ್ನ ಗೆಲ್ಲಿಸಬೇಕಿತ್ತು ಎಂದ ಫ್ಯಾನ್ಸ್!

ಇನ್ನು ಲಕ್ಷ್ಮೀ ಹಾಗೂ ಶ್ರೀನಿವಾಸ ದಂಪತಿಗೆ ಐದು ಜನ ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಮದುವೆಯಾಗಿ ಅದೇ ಮನೆಯಲ್ಲಿದ್ದರೂ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಅಧಿಕಾರ ಚಲಾಯಿಸುವುದರಲ್ಲಿ, ಕೊಂಕು ಮಾತಾಡುವುದರಲ್ಲಿ ಗಂಡು ಮಕ್ಕಳು ಮತ್ತು ಅವರ ಹೆಂಡತಿಯರು ಮುಲಾಜೇ ನೋಡುವುದಿಲ್ಲ. ಇನ್ನು ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬಳಿಗೆ ಆತ್ರ ಮದುವೆಯಾಗಿದೆ. ಹಿರಿ ಮಗಳು ಹಾಗೂ ಆಕೆಯ ಗಂಡನಿಗೆ ಅಪ್ಪನ ಪೆನ್ಷನ್ ಹಣದ ಮೇಲೆ ಕಣ್ಣು ಬಿದ್ದಿದೆ. ಕೊನೆಯದಾಗಿ ಇನ್ನಿಬ್ಬರು ಹೆಣ್ಣು ಮಕ್ಕಳಿಗೆ ಲವ್‌ ಸ್ಟೋರಿಗಳು ಆರಂಭವಾಗಿದ್ದು, ವೀಕ್ಷಕರು ಕೂಡ ರೊಚ್ಚಿಗೆದ್ದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಜಾಹ್ನವಿಗೆ ವಿಶ್ವನೇ ಜೋಡಿಯಾಗಬೇಕು ಎಂದ ಫ್ಯಾನ್ಸ್:
ಲಕ್ಷ್ಮೀ ಶ್ರೀನಿವಾಸ ದಂಪತಿಯ ಕಿರಿಮಗಳು ಜಾಹ್ನವಿಯ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದೆ. ಇದಕ್ಕೆ ವಿಶೇಷ ಅತಿಥಿಯಾಗಿ ಯಶಸ್ವಿ ಬಿಸಿನೆಸ್‌ಮನ್ ಒಬ್ಬರನ್ನ ಕರೆಸಿದ್ದಾರೆ. ಸ್ನೇಹಿತರ ಜೊತೆಗೆ ಕೈ ಹಿಡಿದುಕೊಂಡು ಕಾಲೇಜು ಆವರಣದೊಳಗೆ ಬರುತ್ತಿದ್ದ ಜಾಹ್ನವಿಗೆ ಫ್ರೆಂಡ್ಸ್ ಕೈ ಮಿಸ್ ಆಗಿದ್ದು, ಕಾರ್ಯಕ್ರಮದ ವಿಶೇಷ ಅತಿಥಿಯ ಕೈ ಜಾಹ್ನವಿಯ ಕೈಗೆ ಜೊತೆಯಾಗಿದೆ. ಆದರೆ, ಆತನ ಬಗ್ಗೆ ಜಾಹ್ನವಿ ಗುಣಗಾನ ಮಾಡುತ್ತಾ ಕೈ ಹಿಡಿದುಕೊಂಡು ಹೋಗುತ್ತಿದ್ದಾಳೆ. 'ಒಂದು ರೇಂಜಿಗೆ ಮುಖ ಚೆನ್ನಾಗಿದೆ. ಅದೇನು ಕಡಿದು ದಬ್ಬಾಕಿದ್ದಾನೆ ಗೊತ್ತಿಲ್ಲ' ಅಂತ ತಿರುಗಿದರೆ ಪೋಸ್ಟರ್‌ನಲ್ಲಿದ್ದ ವ್ಯಕ್ತಿಯೇ ಎದುರಿಗಿದ್ದಾನೆ. ಜಾಹ್ನವಿ ಫುಲ್ ಶಾಕ್‌ಗೆ ಒಳಗಾಗಿದ್ದಾಳೆ.

'ಹೊಕ್ಕಳು ಮುಚ್ಚಿಕೊಳ್ಳಲು ಪ್ರಯತ್ನಿಸಿದೆ, ಅಷ್ಟರಲ್ಲಿ ಸೀರೆ ಜಾರಿತು..' ಟ್ರೋಲ್‌ಗೆ ಉತ್ತರಿಸಿದ ನಟಿ ಚೈತ್ರಾ ಪ್ರವೀಣ್‌!

ಧಾರಾವಾಹಿಯಲ್ಲಿ ಇಬ್ಬರು ಹೀರೋಯಿನ್ಸ್ ಇದ್ದರೂ, ಒಬ್ಬ ಹೀರೋ ಕೂಡ ಫಿಕ್ಸ್ ಆಗಿಲ್ಲ. ಇನ್ನು ರಘು ಮುಖರ್ಜಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರೂ ಅವರನ್ನು ಕೊಲೆ ಮಾಡಿಸಿ ಹೊರಗೆ ಕಳುಹಿಸಲಾಗಿದೆ. ಹೀಗಾಗಿ, ಧಾರಾವಾಹಿ ವೀಕ್ಷಕರು ಕನ್ಫೂಸ್ ಆಗಿದ್ದಾರೆ. ಭಾವನಾಗೆ ಶ್ರೀಕಾಂತ್ ಜೋಡಿ ಎಂದುಕೊಂಡಾಗ ಅವನು ಕೊಲೆಯಾಗಿ, ಸಿದ್ದೇಗೌಡ  ಎಂಟ್ರಿ ಕೊಟ್ಟಿದ್ದಾನೆ. ಈಗ ಜಾಹ್ನವಿಯನ್ನು ಕ್ಲೋಸ್ ಫ್ರೆಂಡ್ ಪ್ರೀತಿಯಲ್ಲಿ ಬೀಳುತ್ತಾಳೆ ಎನ್ನುವಾಗ ಇನ್ನೊಬ್ಬನ ಎಂಟ್ರಿಯಾಗಿದೆ. ಹೀಗಾಗಿ ಯಾರು ಹೀರೋ ಎಂದು ಕೆಲವು ಅಭಿಮಾನಿಗಳು ಕೇಳಿದರೆ, ಅದರಲ್ಲಿ ಕೆಲವರು ವಿಶ್ವನೇ ಜಾಹ್ನವಿ ಜೋಡಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

click me!