ಎಲ್ರೂ ಬಾರ್ಬಿ ಆಡ್ತಿದ್ರೆ, ನಾನು ಮಾಡ್ತಿದ್ದಿದ್ದೇ ಬೇರೆ- ನನ್ನದು ರೆಬಲಿಯಸ್​ ಆ್ಯಟಿಡ್ಯೂಟ್​: ಬಾಲ್ಯ ನೆನಪಿಸಿದ ಸಂಗೀತಾ

By Suvarna NewsFirst Published Feb 7, 2024, 4:06 PM IST
Highlights

ಬಿಗ್​ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ ಎಮೋಷನ್​ ಬೇಗ ಕಂಟ್ರೋಲ್​  ಮಾಡಿಕೊಳ್ತಿರೋ ಹಿಂದಿನ ರಹಸ್ಯ ಏನು? ಅವರ ಬಾಯಲ್ಲೇ ಕೇಳಿ...
 

ಚಾರ್ಲಿ ಬೆಡಗಿ, ಸಂಗೀತಾ ಶೃಂಗೇರಿ  ಇದೀಗ ಕನ್ನಡಿಗರೆಲ್ಲಾ ಪರಿಚಯವಾದವರು. ಬಿಗ್​ಬಾಸ್​ ಸೀಸನ್​ 10ನಲ್ಲಿ ಸ್ಟ್ರಾಂಗೆಸ್ಟ್​ ಸ್ಪರ್ಧಿ ಎನಿಸಿಕೊಂಡು ಗ್ರ್ಯಾಂಡ್​ ಫಿನಾಲೆಯವರೆಗೂ ತಲುಪಿದವರು. ಇವರು 2ನೇ ರನ್ನರ್​ ಅಪ್​ ಆದರೂ ವಿಶೇಷವೆಂದರೆ,  ಈ ಸೀಸನ್‌ನಲ್ಲಿ ಫೈನಲಿಸ್ಟ್ ಎನಿಸಿಕೊಂಡ ಏಕೈಕ ಮಹಿಳಾ ಸ್ಪರ್ಧಿ ಇವರೇ. ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ಅವರ ಜೊತೆ ಕಿರಿಕ್ ಬೇಡ, ಇವರ ಜೊತೆಗೆ ಜಾಸ್ತಿ ಜನ ಇದ್ದಾರೆ, ನಾಮಿನೇಟ್ ಮಾಡಿಬಿಡ್ತಾರೆ ಹೀಗೆ ಒಂದಷ್ಟು ಸಹಜವಾದ ಭಯಗಳಿದ್ದವು. ಇದೆಲ್ಲಾ ಸ್ಟ್ರಾಟೆಜಿ. ಆದರೆ ನಾನು ಯಾವುದೇ ಸ್ಟ್ರಾಟೆಜಿ ಮಾಡದೇ ನೇರವಾಗಿ ಆಡಿದ್ದಕ್ಕೆ ಇವನ್ನೆಲ್ಲ ನಾನು ಎದುರಿಸಬೇಕಾಯ್ತು ಎಂದು ಸಂಗೀತಾ ಹೇಳುವ ಮೂಲಕವೇ ಫಿನಾಲೆಯವರೆಗೂ ತಲುಪಿದವರು. ಬಿಗ್ ಬಾಸ್ ಆರಂಭವಾದ ದಿನದಲ್ಲಿ ಸಂಗೀತಾ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಕೋಟಿ ಕೊಟ್ಟರೂ ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂದಿದ್ದರು. ಈಗ ಅದೇ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿ 2ನೇ ರನರ್​ ಅಪ್​ ಆಗಿ ಮಿಂಚಿದ್ದಾರೆ.
 
ಸಂಗೀತಾ ಅವರ ಒಂದು ಗುಣ ಎಲ್ಲರೂ ಗಮನಿಸಿದ್ದು ಎಂದರೆ ಬೇಗ ಎಮೋಷನಲ್​ ಆದ್ರೂ, ಅದು ಎಂಥದ್ದೇ ಸನ್ನಿವೇಶ ಇದ್ದರೂ ಅಷ್ಟೇ ಬೇಗ ಕೂಲ್​ ಆಗಿ ಬಿಡುತ್ತಿದ್ದರು. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಂಗೀತಾ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಮೂಲಕ ತಮ್ಮ ಸ್ವಭಾವವನ್ನು ಪರಿಚಯಿಸಿದ್ದಾರೆ. ನಾನು ಬಾಲ್ಯದಿಂದಲೂ ಇದೇ ರೀತಿ ಸ್ಟ್ರಾಂಗೇ. ಇದಕ್ಕೆ ಕಾರಣ, ನಾನು ಇತರ ಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿದ್ದೆ. ಎಲ್ಲ ಹೆಣ್ಣುಮಕ್ಕಳು ಬಾರ್ಬಿ ಜೊತೆ ಆಡುತ್ತಿದ್ರೆ, ನಾನು ಮರದ ಮೇಲೆ ಮಾವಿನ ಕಾಯಿ ಹತ್ತಿ ಕೊಯ್ಯುತ್ತಿದ್ದೆ. ಅಲ್ಲಿ ಏಟು ಮಾಡಿಕೊಂಡರೂ ಯಾರಿಗೂ ಹೇಳ್ತಿರಲಿಲ್ಲ. ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದೆ. ಆಗಿನಿಂದಲೂ ನಾನು ಸ್ವಲ್ಪ ಸ್ಟ್ರಾಂಗೇ ಎಂದು ಹೇಳಿದರು.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ನಾನು ಸಹಜವಾಗಿ ಎಲ್ಲ   ಹೆಣ್ಣುಮಕ್ಕಳಂತೆ ಆಟವಾಡುತ್ತಿರಲಿಲ್ಲ. ನನ್ನ ಚಾಯ್ಸ್ ಏನಿದ್ದರೂ ಕಬಡ್ಡಿ, ಕೊಕ್ಕೋ ಆಗಿತ್ತು. ರೆಬಲಿಯಸ್​ ಆ್ಯಟಿಟ್ಯೂಡ್​ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಇವೆಲ್ಲಾ ಸಾಧ್ಯವಾಯಿತು ಎಂದು ಸಂಗೀತಾ ಹೇಳಿದ್ದಾರೆ. ಮನೆಯಲ್ಲಿಯಾದರೆ ಸಿಟ್ಟು ಬಂದರೆ, ಬೇಸರವಾದರೆ ಕಾರು ಹತ್ತಿಕೊಂಡು ಎಲ್ಲಿಯಾದರೂ ಹೋಗಿ ಬಿಡುತ್ತೇನೆ. ಆದ್ರೆ ಬಿಗ್​ಬಾಸ್​ ಮನೆಯಲ್ಲಿ ಎಲ್ಲಿಗೆ ಹೋಗುವುದು? ಅಷ್ಟಕ್ಕೂ ಮನೆಯೊಳಗಿನ ವಿಷಯಕ್ಕೆ ಬಂದಾಗ ಯಾರೂ ಶತ್ರುಗಳಲ್ಲ. ಎಲ್ಲರೂ ಆಟವಾಡಿ ಗೆಲ್ಲುವುದಕ್ಕೆ ಬಂದವರು. ಆದ್ದರಿಂದ ಎಲ್ಲರ ಮುಂದೆ ಅತ್ತು ವೀಕ್​ನೆಸ್​ ತೋರಿಸಿಕೊಳ್ಳುವುದು ಇಷ್ಟವಿರಲಿಲ್ಲ. ಅದಕ್ಕಾಗಿಯೇ ನೋವಾದರೂ ಬೇಗ ಸರಿ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ಅದೇ ರೀತಿ ಮೆಡಿಟೇಷನ್​ ಮಾಡುವ ಕಾರಣ, ಇಮೋಷನ್​ ಕಂಟ್ರೋಲ್​  ಮಾಡಿಕೊಳ್ಳಬೇಕು ಎಂದು ನನಗೆ ಹೇಳ್ತಾರೆ. ಮೆಡಿಟೇಷನ್​ ಮಾಡುವುದು ಎಮೋಷನ್​ ಕಂಟ್ರೋಲ್​ ಮಾಡಿಕೊಳ್ಳಲು ಅಲ್ಲ. ಯಾವುದೇ ಎಮೋಷನ್​ ಕಂಟ್ರೋಲ್ ಮಾಡಿಕೊಳ್ಳಬಾರದು. ಅದು ಎಕ್ಸ್​ಪ್ರೆಸ್​ ಆದರೇನೇ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ. 

ಅಷ್ಟಕ್ಕೂ ಸಂಗೀತಾ ಅವರಿಗೆ ಸೋಷಿಯಲ್​ ಮೀಡಿಯಾದಲ್ಲಿ ಸಪೋರ್ಟ್​ ತುಂಬಾ ಇತ್ತು. ಇವರೇ ಗೆಲ್ಲುತ್ತಾರೆ, ಗೆಲ್ಲಬೇಕು ಎನ್ನುವ ದೊಡ್ಡ ವರ್ಗವೇ ಇತ್ತು. ಇವರ ಪರವಾಗಿ ಸಾಕಷ್ಟು ವೋಟಿಂಗ್​ ಕೂಡ ನಡೆದಿದ್ದವು. ಬಿಗ್​ಬಾಸ್​ ಸ್ಪರ್ಧಿಗಳು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವಾಗ ಮೊಬೈಲ್​ ಫೋನ್​ ಬಳಸುವಂತಿಲ್ಲವಾದ್ದರಿಂದ ತಮ್ಮ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ಮಾಡಲು ಹಾಗೂ ತಮ್ಮ ಪರವಾಗಿ ವೋಟಿಂಗ್​ ಕೇಳಲು ಯಾರ ಬಳಿಯಾದರೂ ಹೇಳಿರುತ್ತಾರೆ. ಅದೇ ರೀತಿ ಸಂಗೀತಾ ಶೃಂಗೇರಿಯವರ ಬಿಗ್​ಬಾಸ್​ ಮನೆಯ ಸಂಪೂರ್ಣ ಜರ್ನಿಯ ಜವಾಬ್ದಾರಿ ಹೊತ್ತವರು ಅವರ ಅತ್ತಿಗೆ ಸುಚಿ. 

ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್​ಬಾಸ್​ ಸಂಗೀತಾ ಶೃಂಗೇರಿ

click me!