ಸಿಸಿಟಿವಿ ವರ್ಕ್ ಆಗ್ತಿಲ್ಲ ಅಂತ ಗಾಬರಿ ಆಗಿದ್ದಾನೆ ಜಯಂತ್; ಜಾನು ಬುದ್ಧಿವಂತಿಕೆ ಸಹಾಯ ಮಾಡುತ್ತಾ?

Published : Feb 13, 2025, 08:24 AM ISTUpdated : Feb 13, 2025, 08:37 AM IST
ಸಿಸಿಟಿವಿ ವರ್ಕ್ ಆಗ್ತಿಲ್ಲ ಅಂತ ಗಾಬರಿ ಆಗಿದ್ದಾನೆ ಜಯಂತ್; ಜಾನು ಬುದ್ಧಿವಂತಿಕೆ ಸಹಾಯ ಮಾಡುತ್ತಾ?

ಸಾರಾಂಶ

ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಯಂತ್‌ನ ಸಿಸಿಟಿವಿ ಕ್ಯಾಮೆರಾಗಳ ಬಗ್ಗೆ ಜಾನುಗೆ ಅನುಮಾನ ಮೂಡಿದೆ. ಅಜ್ಜಿಯ ಮೇಲೆ ನಿಗಾ ಇಡಲು ಜಯಂತ್ ಮನೆಯಲ್ಲೂ ಕ್ಯಾಮೆರಾ ಅಳವಡಿಸಿದ್ದಾನೆ. ವಿದ್ಯುತ್ ಕೈಕೊಟ್ಟಾಗ, ಜಯಂತ್ ಸಿಸಿಟಿವಿ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಪರಿಶೀಲಿಸುವುದನ್ನು ಜಾನು ಗಮನಿಸುತ್ತಾಳೆ. ಜಯಂತ್‌ನ ಉದ್ದೇಶದ ಬಗ್ಗೆ ಜಾನುಗೆ ಸಂಶಯ ಹೆಚ್ಚಾಗುತ್ತದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯ ಕನ್ನಡಿಗರ ಮನಸ್ಸು ಗೆದ್ದಿದೆ. ತುಂಬು ಕುಟುಂಬದ ವಿಭಿನ್ನ ಕಥೆ ಇದಾಗಿದೆ. ಸಿದ್ಧೇಗೌಡ್ರು-ಭಾವನಾ, ಹರೀಶಾ- ಸಿಂಚನಾ, ಸಂತೋಷ್-ವೀಣಾ,ಲಕ್ಷ್ಮಿ- ಶ್ರೀನಿವಾಸ್ ಮತ್ತು ಜಯಂತ- ಜಾನು.....ಪ್ರತಿಯೊಂದು ಜೋಡಿಗೂ ಈ ಧಾರಾವಾಹಿಯಲ್ಲಿ ಪ್ರಮುಖ್ಯತೆ ನೀಡಲಾಗಿದೆ. ಆದರೆ ಜನರ ಗಮನ ಹೆಚ್ಚಿಗೆ ಸೆಳೆದಿರುವುದು ಜಯಂತ್ ಮತ್ತು ಜಾನು. ಇದೀಗ ನಡೆಯುತ್ತಿರುವ ಲೇಟೆಸ್ಟ್‌ ಅಪ್ಡೇಟ್ ಏನೆಂದರೆ....ಜಯಂತ್ ಮತ್ತು ಸಿಸಿಟಿವಿ.

ಹೌದು! ಅಜ್ಜಿಗೆ ತನ್ನ ಸತ್ಯ ಗೊತ್ತಾಗಿದೆ ಎಲ್ಲಿ ಎಚ್ಚರವಾಗಿಬಿಟ್ಟರೆ ತನ್ನ ಮತ್ತೊಂದು ಮುಖವನ್ನು ಬಯಲು ಮಾಡುತ್ತಾರೆ ಅನ್ನೋ ಭಯದಲ್ಲಿ ಜಯಂತ್ ದಿನ ಕಳೆಯುತ್ತಿದ್ದಾನೆ. ಹೀಗಾಗಿ ಇಷ್ಟು ದಿನ ಮನೆ ಹೊರಗೆ ಮಾತ್ರ ಇರುತ್ತಿದ್ದ ಸಿಸಿಟಿವಿಯನ್ನು ಮನೆಯೊಳಗೆ ಕೂಡ ಜಯಂತ್ ಅಳವಡಿಸಿದ್ದಾನೆ. ಅಜ್ಜಿಯನ್ನು ಜಯಂತ್ ತುಂಬಾ ಕಾಳಜಿ ಮಾಡುತ್ತಿದ್ದಾನೆ ಅಂದುಕೊಂಡಿದ್ದ ಜಾನು ಮನೆಯ ಪ್ರತಿಯೊಂದು ವಸ್ತುವಿನಲ್ಲಿ ಕ್ಯಾಮೆರಾ ನೋಡಿ ಶಾಕ್ ಆಗಿದ್ದಾಳೆ. ಜಯಂತ್‌ನ ಪ್ರಶ್ನೆ ಮಾಡಿದ್ದಾರೆ ತನ್ನ ಮೇಲೆ ಜೋರು ಮಾಡುತ್ತಾರೆ ಅಲ್ಲದೆ ಸತ್ಯ ಮುಚ್ಚಿಡುವ ಪ್ರಯತ್ನ ಮಾಡುತ್ತಾನೆ ಅನ್ನೋ ಆಲೋಚನೆಯಲ್ಲಿದ್ದಾಳೆ ಜಾನು. 

ಕೊನೆಗೂ ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿದ ಕಿಪಿ ಕೀರ್ತಿ; ಫ್ಯಾಮಿಲಿ ಸಪೋರ್ಟ್‌ ಇಲ್ಲ ಎಂದು ಬೇಸರ

ಆದರೆ ಇದೀಗ ಆಫೀಸ್‌ ಮುಗಿಸಿಕೊಂಡು ಜಯಂತ್ ಮನೆಗೆ ಬಂದಾಗ ಇಡೀ ಮನೆ ಲೈಟ್‌ ಆಫ್ ಆಗಿರುತ್ತದೆ. ಗಾಬರಿಯಲ್ಲಿ ಅಕ್ಕ ಪಕ್ಕ ನೋಡುತ್ತಲೇ ಏನ್ ಅಯ್ತು ಎಂದು ಜಯಂತ್ ಪ್ರಶ್ನಿಸುತ್ತಾಳೆ. ಆಗ ಕಳ್ಳರು ಬಂದ್ರೆ? ವಯಸ್ಸಾದವರು ಮನೆಯಲ್ಲಿದ್ದಾರೆ ಎಂದು ಮಾತು ಮರೆಸುತ್ತಾರೆ. ಆಗ ಕೂಡ ಸಿಸಿಟಿವಿ ಇರುವುದು ಗೊತ್ತಾಗಿದೆ ಎಂದು ಜಾನು ಸುಳಿವು ಕೊಟ್ಟರೂ ಜಯಂತ್ ಗಮನ ಮಾತ್ರ ಇದ್ದಿದ್ದು ಕರೆಂಟ್ ಮೇಲೆ. ಮೊದಲು ಚೆಕ್ ಮಾಡುತ್ತೀನಿ ಎಂದು ಬಾಗಿಲು ಬಳಿ ಹೋಗಿ ನೋಡಿದಾಗ ಫ್ಯೂಸ್ ಡ್ರಿಪ್ ಆಗಿರುವುದು ಕಾಣಿಸುತ್ತದೆ. ಅಯ್ಯೋ ಈ ಸಮಯದಲ್ಲಿ ಮನೆಗೆ ಯಾರಾದರೂ ಬಂದಿದ್ರಾ ಎಂದು ಜಯಂತ್‌ಗೆ ಮತ್ತೊಮ್ಮೆ ಅನುಮಾನ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ ಮಾಡಿಕೊಡುತ್ತೀನಿ ಎಂದು ಜಾನು ಎದ್ದು ಅಡುಗೆ ಮನೆ ಕಡೆ ಹೋದಾಗ ಜಯಂತ್ ಗಾಬರಿಯಲ್ಲಿ ಮೊಬೈಲ್ ನೋಡುವುದು ಕಂಡು ಬರುತ್ತದೆ. ಅಲ್ಲಿದೆ ಸಿಸಿಟಿವಿ ಕ್ಲಿಪ್‌ಗಳನ್ನು ಜಯಂತ್ ಮೊಬೈಲ್‌ನಲ್ಲಿ ನೋಡುತ್ತಿದ್ದಾರೆ ಅನ್ನೋ ಜಾನುಗೆ ತಿಳಿಯುತ್ತದೆ. 

ರಚಿತಾ ರಾಮ್‌ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯೋಕೆ ಬರಲ್ಲ..' ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ ಅಶ್ವಿನಿ ಗೌಡ
Bigg Boss Kannada: ಮೊದಲ ಬಾರಿ ಗಿಲ್ಲಿ ಬಾಯಲ್ಲಿ ರಕ್ಷಿತಾ ಹೆಸರು, ಭಾವುಕಳಾದ ವಂಶದ ಕುಡಿ