ಊಟ ಮಾಡಿಲ್ಲ, ನಿದ್ದೆಗೆಟ್ಟಿದ್ದೇನೆ, ತಡೆಯೋಕೆ ಆಗ್ತಿಲ್ಲ... ಬಿಕ್ಕಿ ಬಿಕ್ಕಿ ಅತ್ತ ವೈಷ್ಣವಿ ಗೌಡ! ಸೀತಾರಾಮ ನಟಿಗೆ ಆಗಿದ್ದೇನು?

Published : Feb 12, 2025, 07:42 PM ISTUpdated : Feb 13, 2025, 10:17 AM IST
ಊಟ ಮಾಡಿಲ್ಲ, ನಿದ್ದೆಗೆಟ್ಟಿದ್ದೇನೆ, ತಡೆಯೋಕೆ ಆಗ್ತಿಲ್ಲ... ಬಿಕ್ಕಿ ಬಿಕ್ಕಿ ಅತ್ತ ವೈಷ್ಣವಿ ಗೌಡ! ಸೀತಾರಾಮ ನಟಿಗೆ ಆಗಿದ್ದೇನು?

ಸಾರಾಂಶ

ವೈಷ್ಣವಿ ಗೌಡ ಬಿಗ್‌ಬಾಸ್ ಟಾಸ್ಕ್‌ನಲ್ಲಿ ಸುಸ್ತಾಗಿ ಅತ್ತ ವಿಡಿಯೋ ವೈರಲ್ ಆಗಿದೆ. ಬಿಗ್‌ಬಾಸ್ ಸೀಸನ್ ೮ ರಲ್ಲಿ ಭಾಗವಹಿಸಿದ್ದ ವೈಷ್ಣವಿ, ೪ನೇ ಸ್ಥಾನ ಗಳಿಸಿದ್ದರು. ಈಗ ಸೀತಾರಾಮ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಅವರ ಬಿಗ್‌ಬಾಸ್‌ನ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಊಟ ಮಾಡಿಲ್ಲ, ನಿದ್ದೆಗೆಟ್ಟಿದ್ದೇನೆ, ತಡೆಯೋಕೆ ಆಗ್ತಿಲ್ಲ.. ಆದ್ರೂ 100 ಪರ್ಸೆಂಟ್​ ಕೊಡ್ತೇವೆ, ಆದರೆ ಸ್ಟಾರ್ಟ್​ ಆಗೋದಿದ್ರೆ ಇಮ್ಮೀಡಿಯೆಟ್​ ಸ್ಟಾರ್ಟ್​ ಆಗಬೇಕು... ಎಂದು ಸೀತಾರಾಮ ಸೀತಾ, ನಟಿ ವೈಷ್ಣವಿ ಗೌಡ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಫಿಲ್ಮಿ ಪ್ಯಾರಡೈಸ್​ ಈ ವಿಡಿಯೋ ಶೇರ್​ ಮಾಡಿಕೊಂಡಿದೆ. ಇದಿಷ್ಟನ್ನೇ ನೋಡಿದರೆ ನಟಿಯ ಅಭಿಮಾನಿಗಳು ದಿಗ್ಭ್ರಮೆಗೊಳ್ಳುವುದು ಗ್ಯಾರೆಂಟಿ, ನಟಿಗೆ ಏನಾಯ್ತು? ಅದೂ ಸೀತೆಯ ಮುಖ ನೋಡಿದವರು, ಇಲ್ಲಿ ನಟಿಯ ಮುಖ ನೋಡಿದ್ರೆ ಅಬ್ಬಾ ನಿಜಕ್ಕೂ ಈಕೆ ವೈಷ್ಣವಿ ಗೌಡ ಹೌದಾ ಎನ್ನುವ ಹಾಗೆ ಕಾಣಿಸುತ್ತದೆ. ಮೇಕಪ್​ ರಹಿತವಾಗಿರುವ ಈ ವಿಡಿಯೋದಲ್ಲಿ ನಟಿ ಯಾಕೆ ಅಷ್ಟೆಲ್ಲಾ ಬಿಕ್ಕಿ ಬಿಕ್ಕಿ ಅತ್ತರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅಷ್ಟಕ್ಕೂ ಈ ವಿಡಿಯೋ ಫುಲ್​ ನೋಡಿದರೆ ತಿಳಿಯುತ್ತದೆ, ಇದು ಬಿಗ್​ಬಾಸ್​ ಕ್ಲಿಪ್​ ಎನ್ನುವುದು. ಅದರಲ್ಲಿ ಟಾಸ್ಕ್​ ಒಂದರ ಸಮಯದಲ್ಲಿ, ವೈಷ್ಣವಿ ಫುಲ್​ ಸುಸ್ತಾಗಿದ್ದು ಹೀಗೆ ಹೇಳಿದ್ದಾರೆ. ಅಂದಹಾಗೆ,  ವೈಷ್ಣವಿ ಗೌಡ ಅವರು ಬಿಗ್​ಬಾಸ್​ನ  ಸೀಸನ್ 8ರಲ್ಲಿ ಭಾಗವಹಿಸಿದ್ದರು. ಅವರು ಟಾಪ್ 4ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.  ವೈಷ್ಣವಿ ಫಿನಾಲೆಗೆ ಹೋಗುತ್ತಾರೆ ಎಂದು ಅವರು ಫ್ಯಾನ್ಸ್​ ಅಂದುಕೊಂಡಿದ್ದರು. ಆದರೆ, ಅವರ ಎಲಿಮಿನೇಷನ್​ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಬಿಗ್​ಬಾಸ್​​ ಬಗ್ಗೆ ಮಾತನಾಡಿದ್ದ ವೈಷ್ಣವಿ, ಬಿಗ್ ಬಾಸ್ ಶೋ ನನ್ನಂಥವರಲ್ಲಿ ಅಲ್ಲ ಎಂದಿದ್ದರು ಹಲವರು. ಆದರೆ ಮನೆಯೊಳಕ್ಕೆ ಹೋದಾಗ ಅಲ್ಲಿ ನಾನು ನಾಟಕ ಮಾಡಲಿಲ್ಲ, ನಾನು ನಾನಾಗಿಯೇ ಇದ್ದೆ. ಆದರೆ ಹೊರಕ್ಕೆ ಬಂದ ಮೇಲೆ ಜನರ ಪ್ರೀತಿಯಿಂದ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ ಎಂದಿದ್ದರು. 4ನೇ ಸ್ಥಾನದಲ್ಲಿ ಇರೋದಕ್ಕೆ 3 ಲಕ್ಷ ರೂಪಾಯಿ ಹಣ ಸಿಕ್ಕಿದೆ ಎನ್ನಲಾಗಿತ್ತು. 

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

  ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋನಲ್ಲೂ ಭಾಗವಹಿಸಿದ್ದರು.

ಇವರ ಖ್ಯಾತಿ ಹೆಚ್ಚಿದ್ದು ಬಿಗ್​ಬಾಸ್​ ಸೀಸನ್​ 8ನಲ್ಲಿ. ಇದರ ಬಳಿಕ ಸದ್ಯ ಈಗ ಸೀತಾರಾಮ ಸೀರಿಯಲ್​ನಲ್ಲಿ ಸೀತೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದರ ನಾಯಕ ರಾಮ್​ ಅರ್ಥಾತ್​ ಗಗನ್​ ಅವರ ಜೊತೆಗಿನ ಕೆಮೆಸ್ಟ್ರಿ ನೋಡುತ್ತಿರುವ ಅಭಿಮಾನಿಗಳು ಪದೇ ಪದೇ ವೈಷ್ಣವಿ ಅವರಿಗೆ ಈ ಜೋಡಿ ರಿಯಲ್​ ಆಗಿಯೂ ಮುಂದುವರೆಯಲಿ ಎಂದೇ ಹೇಳುತ್ತಿದ್ದಾರೆ. 

ಸೀತಾರಾಮ ಶೂಟಿಂಗ್​ ಸೆಟ್​ನಲ್ಲಿ ಬೇಲ್​ಪುರಿ ಮಜಾ: ಯಮ್ಮಿ ಯಮ್ಮಿ ಅಂತನೇ ಎಲ್ಲಾ ಖಾಲಿ ಮಾಡಿದ ತಾರೆಯರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!