ನಾಗವಲ್ಲಿಯಾಗಿ ಬದಲಾದ ಚಿನ್ನು ಮರಿ ಅಜ್ಜಿನ ಮರೆತು ಹೋದ್ರಾ?; ವೀಕ್ಷಕರ ಚಿಂತೆ ಒಂದೆರಡಲ್ಲ...

Published : Feb 27, 2025, 03:06 PM ISTUpdated : Feb 27, 2025, 03:11 PM IST
 ನಾಗವಲ್ಲಿಯಾಗಿ ಬದಲಾದ ಚಿನ್ನು ಮರಿ ಅಜ್ಜಿನ ಮರೆತು ಹೋದ್ರಾ?; ವೀಕ್ಷಕರ ಚಿಂತೆ ಒಂದೆರಡಲ್ಲ...

ಸಾರಾಂಶ

ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಯಂತ್ ಇಟ್ಟ ಸಿಸಿಟಿವಿ ಅವನಿಗೆ ತಿರುಗುಬಾಣವಾಗಿದೆ. ಜಾನು, ಜಯಂತ್‌ನನ್ನು ಅನುಮಾನಿಸುತ್ತಿದ್ದಾಳೆ. ಜಯಂತ್‌ನ ನಡವಳಿಕೆಯಿಂದ ತಲೆ ಸುತ್ತಿ ಬಿದ್ದ ಜಾನು ಮಗುವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಾಳೆ. ಜಾನು ನಾಗವಲ್ಲಿಯಾಗಿ ಬದಲಾಗುತ್ತಾಳೆ. ಈ ಬದಲಾವಣೆಯಿಂದ ವೀಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಸೀರಿಯಲ್ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಜಯಂತ್ ಮತ್ತು ಜಾನು ಅಭಿನಯವನ್ನು ವೀಕ್ಷಕರು ಮೆಚ್ಚಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌ ಎದುರಾಗಿದೆ. ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಲು ಸ್ವತಃ ಜಯಂತ್‌ ಅನುಮಾನದಿಂದ ಇಟ್ಟ ಸಿಸಿಟಿವಿ ಆತನಿಗೆ ಮುಳುವಾಗಿದೆ. ಚಿನ್ನು ಮರಿ ಮೇಲೆ ಅನುಮಾನ ಪಡುತ್ತಿದ್ದ ಜಯಂತ್ ಕೇಸ್ ಈಗ ಉಲ್ಟಾ ಆಗಿದೆ...ಈಗ ಜಯಂತ್‌ನ ಜಾನು ಅನುಮಾನ ಪಡುವ ವಾತಾವರಣ ಸೃಷ್ಟಿಯಾಗಿದೆ. ಈ ಟ್ವಿಸ್ಟ್‌ಗಳನ್ನು ನೋಡಿ ವೀಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಜಯಂತ್ ನಾಟವನ್ನು ಮೊಬೈಲ್‌ನಲ್ಲಿ ನೋಡಿದ ಜಾನು ತಲೆ ಸುತ್ತಿ ಬಿದ್ದು ಮಗುವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆ ನೋವಿನಿಂದ ಹೊರ ಬರಲು ಕಷ್ಟ ಪಡುತ್ತಿದ್ದ ಜಾನು ಪೋಷಕರ ಮುಖ ನೋಡಿಕೊಂಡು ಸುಮ್ಮನಿದ್ದರು. ಯಾವಾಗ ಜಯಂತ್ ಮಾತನಾಡಿಸುವ ಪ್ರಯತ್ನ ಪಡುತಾನೆ ಆಗ ಚಿನ್ನು ಮರಿ ನಾಗವಲ್ಲಿಯಾಗಿ ಬದಲಾಗುತ್ತಾಳೆ. ಇಷ್ಟು ದಿನ ಸುಮ್ಮನಿದ್ದು ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದ ಜಾನು ಜಯಂತ್ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಈ ಟ್ರಾನ್ಸ್‌ಫಾರ್ಮೆಷನ್‌ ನೋಡಿ ಜಯಂತ್‌ಗೆ ಭಯ ಆಯ್ತೋ ಇಲ್ವೋ ಗೊತ್ತಿಲ್ಲ ಆದರೆ ವೀಕ್ಷಕರು ಮಾತ್ರ ಭಯ ಪಟ್ಟುಕೊಂಡಿದ್ದಾರೆ. ಗಂಗಾ ನಾಗವಲ್ಲಿ ಆಗಲ್ಲ ನಮ್ಮ ಜಾನು ನಿಜಕ್ಕೂ ನಾಗವಲ್ಲಿ ಎಂದು ಹಾಸ್ಯ ಮಾಡಿದ್ದಾರೆ. ಅಲ್ಲದೆ ಜಯಂತ್ ಮತ್ತು ಜಾನು ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. 

ಸ್ವಂತ ದುಡಿಮೆಯಲ್ಲಿ ಚಿನ್ನದ ನೆಕ್‌ಲೆಸ್‌ ಖರೀದಿಸಿದ ಧನುಶ್ರೀ; ರಸ್ತೆ ಬದಿಯಲ್ಲಿ ಕಣ್ಣೀರಿಟ್ಟ ಅಮ್ಮ-ಮಗಳು

ನಿಮ್ಮಿಬ್ಬರ ಜಗಳದಿಂದ ಅಜ್ಜಿ ಇದಾರ ಹೋದ್ರಾ?,ಯಾವ ಸಿರಿಯಲ್ ಅಲ್ಲೂ ಕೂಡ ಮಗು ನಾ ಹುಟ್ಟೋಕು ಮುಂಚೆನೆ ಸಾಯ್ತೀರಾ ಅಲ್ವಾ ಯಾಕೆ. ಈ ಕರ್ಮಕ್ಕೆ ಪ್ರಗ್ನೆಂಟ್ ಅಂತ ಮಾಡಿ ಸೀರಿಯಲ್ ನ ಮುಂದಕ್ಕೆ ಎಳೆತೀರ ಅಟ್ ಲಿಸ್ಟ ಯಾವು ಒಂದು ಧಾರವಾಹಿ ಆದರೂ ಮಗು ಆಗೂ ತರ ಮಾಡಿ ಡೈರೆಕ್ಟರ್ ಸರ್, ಬಡವರ ಮನೆ ಹೆಣ್ಣು ಮಕ್ಕಳು ಆಗೇ ಗಂಡನ ಮನೇಲಿ ಎಷ್ಟ್ ಸಮಸ್ಯೆ ಬಂದ್ರು ತಂದೆ ತಾಯಿ ಮುಂದೆ ತೋರಿಸಲ್ಲ, ಎಲ್ಲ ಸರಿ ಆದ್ರೆ ಪಾಪು ಕಳ್ಕೊಂಡೂರು ಇಷ್ಟು ಬೇಗ atara speed ಆಗಿ ಓಡಾಡಲ್ಲ, ಬನ್ನಿ ಬನ್ನಿ ಜನರೇ ಜಾನವಿ ನಾಗವಲ್ಲಿಯಾಗಿ ಬದಲಾಗುವುದನ್ನು ನೋಡಿ ಎಂದು ನೆಗೆಟಿವ್ ಸಖತ್ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ಸ್ಟಾರ್ ನಟಿಯ ಗಂಡ ಅಗಲಿ 5 ವರ್ಷ ಆಗಿಲ್ಲ ಆಗಲೇ ಸಿರಿವಂತ ಅಂಕಲ್‌ಗಳಿಂದ ಬಂದು ಮದುವೆ ಪ್ರಪೋಸಲ್!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!