ಚೈತ್ರಾ ಕುಂದಾಪುರ ಪಿತ್ತ ನೆತ್ತಿಗೇರಿಸಿದ ರಜತ್‌ ಮಾತು; 'ಏನ್‌ ಬಿಟ್ಟಿ ಬಿದ್ದಿದೀನಾ ನಾನು?'- ಫೈಯರ್‌ ಬ್ರ್ಯಾಂಡ್‌

Published : Feb 27, 2025, 02:47 PM ISTUpdated : Feb 27, 2025, 03:13 PM IST
ಚೈತ್ರಾ ಕುಂದಾಪುರ ಪಿತ್ತ ನೆತ್ತಿಗೇರಿಸಿದ ರಜತ್‌ ಮಾತು; 'ಏನ್‌ ಬಿಟ್ಟಿ ಬಿದ್ದಿದೀನಾ ನಾನು?'- ಫೈಯರ್‌ ಬ್ರ್ಯಾಂಡ್‌

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಚೈತ್ರಾ ಕುಂದಾಪುರ ಹಾಗೂ ರಜತ್‌ ಜಗಳವನ್ನು ವೀಕ್ಷಕರು ನೋಡಿದ್ದಾರೆ. ಈಗ ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿಯೂ ಈ ಜಗಳ ಮುಂದುವರೆದಿದೆ.   

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಮನೆಯಲ್ಲಿ ʼನನ್ನ ಬಾಸ್‌ ಚೈತ್ರಾ ಕುಂದಾಪುರʼ ಅಂತ ರಜತ್‌ ಅವರು ಹೇಳಿಕೊಂಡು ಕಾಲೆಳೆದಿದ್ದರು. ಚೈತ್ರಾ ಗುಣ ರಜತ್‌ಗೆ ಇಷ್ಟ ಆಗ್ತಾನೆ ಇರಲಿಲ್ಲ. ಸಾಕಷ್ಟು ಬಾರಿ ಈ ಜೋಡಿ ಕಿತ್ತಾಡಿಕೊಂಡಿದೆ. ಇನ್ನು ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಕೂಡ ಚೈತ್ರಾ ಎಂಟ್ರಿ ಕೊಟ್ಟ ಬಳಿಕ ರಜತ್‌ ʼಅಯ್ಯೋʼ ಎಂದಿದ್ದರು. ಈಗ ಇಂದಿನ ಎಪಿಸೋಡ್‌ನಲ್ಲಿ ಈ ಜೋಡಿ ಮತ್ತೆ ಗಂಭೀರವಾಗಿ ಜಗಳ ಆಡಿಕೊಂಡಿದೆ.

ಯಾಕೆ ಜಗಳ ಆಡಿಕೊಂಡ್ರು?
ಚೈತ್ರಾ ಅವರು ಆಟ ಆಡುತ್ತಿದ್ದರು. ಅದನ್ನು ನೋಡಿ ರಜತ್‌ ಕಾಮೆಂಟ್‌ ಮಾಡಿದ್ದಾರೆ. ರಜತ್‌ ಮಾತು ಚೈತ್ರಾ ಪಿತ್ತ ನೆತ್ತಿಗೇರಿಸಿದೆ. ರಜತ್‌ ಮಾತುಗಳನ್ನು ಕೇಳಿ ಚೈತ್ರಾ ಅವರು ಅರ್ಧಕ್ಕೆ ಆಟ ನಿಲ್ಲಿಸಿದ್ದಾರೆ. ಇವರಿಬ್ಬರನ್ನು ಉಳಿದ ಸ್ಪರ್ಧಿಗಳು ಸಮಾಧಾನಪಡಿಸಿದ್ದರೂ ಪ್ರಯೋಜನ ಆಗಿಲ್ಲ. ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿದ್ದು, ಇಂದು ಏನಾಗಲಿದೆ ಎಂದು ಕಾದು ನೋಡಬೇಕಿದೆ.

Boys v/s Girls ಶೋನಿಂದ ಮರೆಯಾಗಿದ್ದ Bigg Boss ಹನುಮಂತ ಮತ್ತೊಂದು ಭಾರೀ ಟ್ವಿಸ್ಟ್‌ ಕೊಟ್ರು! ಏನದು?

ಏನು ಸಂಭಾಷಣೆ ನಡೆಯಿತು? 
ರಜತ್‌ ಅವರು ‘ಬಿಗ್‌ ಬಾಸ್‌ ಮನೆಯಲ್ಲಿ ಆಡೋಕೆ ಚಾನ್ಸ್‌ ಇಲ್ಲ ಅಂತ ಚೈತ್ರಾ ಹೇಳುತ್ತಿದ್ದಳು. ಈಗ ಚಾನ್ಸ್‌ ಕೊಟ್ಟಿದ್ದೀವಿ. ಆಡಮ್ಮ. ನಿನ್ನತ್ರ ಆಗಲ್ಲ ಅಂತಾನೇ ಸೆಲೆಕ್ಟ್‌ ಮಾಡಿದ್ವಿ’ ಎಂದು ಹೇಳುತ್ತಿದ್ದಾರೆ. 

ತಿರುಗೇಟು ಕೊಟ್ಟ ಚೈತ್ರಾ
“ಎಲ್ಲದಕ್ಕೂ ಒಂದು ಲಿಮಿಟ್‌ ಇರತ್ತೆ, ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಆರೋಪ ಮಾಡ್ತಾ ಕೂರಬೇಡಿ.  ನಾನ್‌ ಬಿಟ್ಟಿ ಬಿದ್ದಿದ್ದೀನಾ? ತುಂಬ ಸಲ ಕೆಳಗಡೆ ಹಾಕಿ ಮಾತಾಡ್ತಿದ್ದಾರೆ” ಎಂದು ರಜತ್‌ ಅವರಿಗೆ ಚೈತ್ರಾ ತಿರುಗೇಟು ಕೊಟ್ಟಿದ್ದಾರೆ.

ಇನ್ನು ರಜತ್‌ ಅವರು “ಏನ್‌ ಮಾತಾಡಿದೆ ನಾನು, ಬಾಯಿ ಬಡ್ಕೋಬೇಡ” ಎಂದು ಹೇಳಿದ್ದಾರೆ. 

ದೊಡ್ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದ ಚೈತ್ರಾ ಕುಂದಾಪುರ... ಕೊನೆಗೂ ಟ್ರೋಲ್ ಹಿಂದಿನ ಸತ್ಯ ಬಿಚ್ಚಿಟ್ರು

ಬಿಗ್‌ ಬಾಸ್‌ ಮನೆಯಲ್ಲೂ ಜಗಳ! 
ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಮನೆಯಲ್ಲಿ ಚೈತ್ರಾ ನಾಟಕ ಮಾಡುತ್ತಾಳೆ, ಡವ್‌ ಮಾಡುತ್ತಾಳೆ. ವಾರಪೂರ್ತಿ ಒಂದೇ ಥರ ಇರ್ತಾಳೆ, ವೀಕೆಂಡ್‌ನಲ್ಲಿ ಲಿಪ್‌ಸ್ಟಿಕ್‌ ಹಾಕಲ್ಲ ಅಂತ ರಜತ್‌ ಹೇಳುತ್ತಿದ್ದರು. ಚೈತ್ರಾ ಇಲ್ಲಸಲ್ಲದ ಮಾತುಗಳನ್ನು ಹೇಳ್ತಾಳೆ, ಒಂದಕ್ಕೊಂದು ಲಿಂಕ್‌ ಮಾಡ್ತಾಳೆ, ನನಗೆ ಆ ಗುಣ ಇಷ್ಟ ಆಗಲ್ಲ. ಅವಳನ್ನು ಕಿರಿಕಿರಿ ಮಾಡೋಣ, ರೇಗಿಸೋಣ ಅಂತ ನಾನು ಬಾಸ್‌ ಎಂದು ಕರೆಯುತ್ತಿದ್ದೆ ಎಂದು ರಜತ್‌ ಹೇಳಿದ್ದಾರೆ. ಇವರಿಬ್ಬರ ಜಗಳ ಸ್ಪರ್ಧಿಗಳಿಗೂ, ವೀಕ್ಷಕರಿಗೂ ನಿಜಕ್ಕೂ ಫನ್‌ ಥರ ಕಾಣಿಸ್ತಿತ್ತು.

ಇನ್ನು ಮತ್ತೊಂದು ರಿಯಾಲಿಟಿ ಶೋನಲ್ಲಿ ಈ ಜಗಳ ಮುಂದುವರೆದಿದೆ. ಈ ಜಗಳ ಈಗ ಎಲ್ಲಿಗೆ ಹೋಗತ್ತೋ ಏನೋ! ಅಂದಹಾಗೆ ವಿನಯ್‌ ಗೌಡ ಅವರು ಬಾಯ್ಸ್‌ ಟೀಂ ಲೀಡರ್‌, ಶುಭಾ ಪೂಂಜಾ ಅವರು ಗರ್ಲ್ಸ್‌ ಟೀಂ ಲೀಡರ್‌ ಆಗಿದ್ದಾರೆ. ಅನುಪಮಾ ಗೌಡ ಅವರು ನಿರೂಪಕಿ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?