
ಕನ್ನಡತಿ ಸೀರಿಯಲ್ (Kannada serial) ಮೂಲಕ ಧಾರಾವಾಹಿ ವೀಕ್ಷಕರಿಗೆ ಪ್ರಿಯರಾದ ರಂಜನಿ ರಾಘವನ್ (Ranjani Raghavan), ಕಥೆ ಡಬ್ಬ ಹಾಗೂ ಸ್ವೈಪ್ ರೈಟ್ ಪುಸ್ತಕದ ಮೂಲಕ ಓದುಗರಿಗೆ ಹತ್ತಿರವಾಗಿದ್ದಾರೆ. ನಟನೆ, ಬರವಣಿಗೆ, ಹಾಡು ಸೇರಿದಂತೆ ಬಹುಮುಖ ಪ್ರತಿಭೆಯುಳ್ಳ ರಂಜನಿ ರಾಘವನ್ ಬರೆದಿರುವ ಪುಸ್ತಕಗಳನ್ನು ಖರೀದಿಸಲು ನಿಮಗೆ ಮತ್ತೊಂದು ಅವಕಾಶ ಸಿಗ್ತಿದೆ. ಅದೂ ವಿಧಾನಸೌಧದಲ್ಲಿ. ಯಸ್, ಇಂದಿನಿಂದ ವಿಧಾನಸೌಧ (Vidhana Soudha)ದಲ್ಲಿ ಪುಸ್ತಕ ಮೇಳ ನಡೆಯುತ್ತಿದೆ. ಫೆಬ್ರವರಿ 27ರಿಂದ ಮೂರರವರೆಗೆ ನಡೆಯಲಿರುವ ಪುಸ್ತಕ ಮೇಳದಲ್ಲಿ ರಂಜನಿ ರಾಘವನ್ ಬರೆದ ಪುಸ್ತಕ ಲಭ್ಯವಾಗಲಿದೆ.
ಸೋಶಿಯಲ್ ಮೀಡಿಯಾದಲ್ಲಿ ರಂಜನಿ ರಾಘವನ್ ಪುಸ್ತಕ ಮೇಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ವಿಧಾನಸೌಧಕ್ಕೆ ಸಾಮಾನ್ಯರು ಹೋಗೋದು ಸುಲಭವಲ್ಲ. ಆದ್ರೆ ಪುಸ್ತಕ ಮೇಳದಲ್ಲಿ ನಿಮಗೆ ಉಚಿತ ಅವಕಾಶ ಸಿಗ್ತಿದೆ. ಸಾರ್ವಜನಿಕರು ವಿಧಾನಸೌಧಕ್ಕೆ ಭೇಟಿ ನೀಡಲು ಇದೊಂದು ಒಳ್ಳೆಯ ಅವಕಾಶ. ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಪುಸ್ತಕ ಮೇಳ ಸಾರ್ವಜನಿಕರಿಗೆ ತೆರೆಯಲಿದೆ. ಇಲ್ಲಿ ನಾನಾ ಬಗೆಯ ಪುಸ್ತಕಗಳು ಲಭ್ಯವಿದೆ. ರಿಯಾಯಿತಿ ದರದಲ್ಲಿ ಪುಸ್ತಕ ಸಿಗೋದಲ್ಲದೆ, ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ ಎಂದು ರಂಜನಿ ಹೇಳಿದ್ದಾರೆ. ಅಲ್ಲದೆ ಈ ಮೇಳದಲ್ಲಿ ನಾನು ಬರೆದ ಪುಸ್ತಕವೂ ಇದ್ದು, ಇದು ನನಗೆ ಮತ್ತಷ್ಟು ವಿಶೇಷ ಎಂದಿದ್ದಾರೆ.
ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟ ಕಾವ್ಯಾ ಗೌಡ!
ಪುಸ್ತಕ ಮೇಳ ಯಾವಾಗ ಶುರು? ಏನೆಲ್ಲ ಇರುತ್ತೆ? : ವಿಧಾನಸೌಧದಲ್ಲಿ ಫೆಬ್ರವರಿ 27 ಅಂದ್ರೆ ಇಂದು ನಾಲ್ಕು ಗಂಟೆಗೆ ಪುಸ್ತಕ ಮೇಳ ಉದ್ಘಾಟನೆಗೊಳ್ಳಲಿದೆ. ಆದ್ರೆ ಸಾರ್ವಜನಿಕರಿಗೆ ಫೆಬ್ರವರಿ 28ರಿಂದ ಪುಸ್ತಕ ಮೇಳಕ್ಕೆ ಪ್ರವೇಶ ಸಿಗಲಿದೆ. ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಸಾರ್ವಜನಿಕರು ಪುಸ್ತಕ ಮೇಳಕ್ಕೆ ಭೇಟಿ ನೀಡಬಹುದು. ಮಾರ್ಚ್ ಮೂರು ಕೊನೆ ದಿನವಾಗಿದ್ದು, ಅಂದು ರಾಜ್ಯಪಾಲರು ಹಾಗೂ ವಿಧಾನಮಂಡಲ ಉಭಯ ಸದನದ ಸದಸ್ಯರು ಭಾಗಿಯಾಗಲಿದ್ದಾರೆ.
ಪುಸ್ತಕ ಮೇಳದಲ್ಲಿ ಬರೀ ಪುಸ್ತಕ ಮಾತ್ರ ಲಭ್ಯವಿಲ್ಲ. ಎರಡು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಸಂವಿಧಾನ, ಮಕ್ಕಳ ಸಾಹಿತ್ಯ, ಕ್ರೀಡೆ, ಕೃತಕ ಬುದ್ದಿಮತ್ತೆ, ಚಲನಚಿತ್ರ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಸಂವಾದ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಈ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಪುಸ್ತಕ ಮೇಳ ನಡೆಯಲಿದೆ. ಫೆಬ್ರವರಿ 28ರಂದು ಸಂಜೆ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಭಾನುವಾರ ಸಂಜೆ ಅರ್ಜುನ್ ಜನ್ಯ ಹಾಗೂ ಸಾಧುಕೋಕಿಲ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪುಸ್ತಕ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಿ, ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿ ಮಾಡಬಹುದು. ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ ನಡೆಯುತ್ತಿರೋದು ಇದ್ರ ಇನ್ನೊಂದು ವಿಶೇಷ.
ರೊಮ್ಯಾನ್ಸ್ ಅಂದ್ರೆನೇ ದೂರ ಓಡ್ತಿದ್ದ ರಾಮಾಚಾರಿ…. ಕೊನೆಗೂ ಆಗ್ಬಿಟ್ಟ
ರಂಜನಿ ರಾಘವನ್ ಏನು ಮಾಡ್ತಿದ್ದಾರ? : ಪುಸ್ತಕ ಮೇಳದ ಬಗ್ಗೆ ಅಪ್ ಡೇಟ್ ನೀಡಿರುವ ನಟಿ ರಂಜನಿ ರಾಘವನ್ ಹೊಸ ಪುಸ್ತಕ ಬರೆದಿಲ್ವಾ, ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ಸದ್ಯ ರಂಜನಿ, ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಜನವರಿಯಲ್ಲಿ ಇಳಯರಾಜ ಜೊತೆ ಫೋಟೋ ಹಂಚಿಕೊಂಡಿದ್ದ ರಂಜನಿ, ಅದ್ರ ಬಗ್ಗೆ ಈಗ ಅಪ್ಡೇಟ್ ನೀಡಿದ್ದಾರೆ. ಕಥೆಯೊಂದನ್ನು ತೆರೆ ಮೇಲೆ ತರುವ ಪ್ರಯತ್ನ ನಡೆದಿದ್ದು, ಕನ್ನಡದ ಮಹಿಳಾ ನಿರ್ದೇಶಕಿಯಾಗ್ಬೇಕೆಂಬ ಆಸೆ ಇದೆ, ಅದಕ್ಕೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.