ಎಲ್ಲರನ್ನು ಒಂದು ಮಾಡಿದ ಶಾರದಮ್ಮ; ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯಕ್ಕೆ ನಿಮ್ಮ ಅಭಿಪ್ರಾಯವೇನು?

Published : May 20, 2023, 04:05 PM IST
ಎಲ್ಲರನ್ನು ಒಂದು ಮಾಡಿದ ಶಾರದಮ್ಮ; ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯಕ್ಕೆ  ನಿಮ್ಮ ಅಭಿಪ್ರಾಯವೇನು?

ಸಾರಾಂಶ

ಕೊನೆಗೂ ಎಲ್ಲರನ್ನು ಒಂದು ಮಾಡಿದ ಧಾರಾವಾಹಿ. ಸೂಪರ್ ಹಿಟ್ ಧಾರಾವಾಹಿ ಅಂತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಜೀ ಕನ್ನಡ ವಾಹಿನಿಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮೇ 19 ಅಂತಿಮ ಸಂಚಿಕೆ ಪ್ರಸಾರ ಮಾಡಿದೆ. ಆರಂಭದಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದಿರುವ ಧಾರಾವಾಹಿ ನಡುವೆಯಲ್ಲಿ ಕೊಂಚ ಪಾತಾಳಕ್ಕೆ ಬಿತ್ತು ಆದರೆ ಅನು ಸಿರಿಮನೆ, ಜೇಂಡೆ, ಶಾರದಮ್ಮ, ಸುಬ್ಬು, ಪುಷ್ಪ ಪಾತ್ರ ಮೆರಗು ಹೆಚ್ಚಿಸಿತ್ತು. 

ಪಕ್ಕಾ ಮಿಡಲ್ ಕ್ಲಾಸ್ ಮನೆ ಹುಡುಗಿ ಸಿರಿವಂತ ವ್ಯಕ್ತಿಯನ್ನು ಮದುವೆಯಾಗಿ ತಮ್ಮ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ಎದುರಿಸುತ್ತಾಳೆ. ಅಮವಾಸೆ ದಿನ ನಿದ್ರೆಯಲ್ಲಿ ಬರುತ್ತಿದ್ದ ಕೆಟ್ಟ ಕನಸಿಗೆ ಹಿಂದಿನ ಜನ್ಮದಲ್ಲಿ ನಡೆದ ಘಟನೆ ಎಲ್ಲವೂ ಈ ಜನ್ಮದ ಮದುವೆಗೆ ಸಂಬಂಧಿಸಿತ್ತು ಎಂದು ತಿಳಿಯುತ್ತದೆ. ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ್ ನಟಿಸುತ್ತಿದ್ದರು ಆದರೆ ವೈಯಕ್ತಿ ವಿಚಾರಗಳಿಂದ ಅನಿರುದ್ಧ್ ಹೊರ ನಡೆದರು. ಅನಿರುದ್ಧ್ ಸ್ಥಾನಕ್ಕೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟರು. ಆರಂಭದಿಂದ ರಾಜನಂದಿನಿ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಇತ್ತು. ಆ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದು ನಟಿ ಸೋನು ಗೌಡ. ಅನು ಸಿರಿಮನೆ ಮತ್ತು ರಾಜನಂದಿನಿ ಕಾಂಬಿನೇಷನ್‌ ಕೆಲವು ಸಂಚಿಕೆಯ ಕ್ಯೂರಿಯಾಸಿಟಿ ಮತ್ತು ಟಿಆರ್‌ಪಿ ಹೆಚ್ಚಿಸಿತ್ತು. 

ಜೊತೆ ಜೊತೆಯಲಿ ಧಾರಾವಾಹಿ ಇಂದು ಮುಕ್ತಾಯ; ಅನು ಸಿರಿಮನೆ ಭಾವುಕ

ಮೇ 19ರಂದು ಜೊತೆ ಜೊತೆಯಲಿ ಧಾರಾವಾಹಿ ಅಂತಿಮ ಸಂಚಿಕೆಯಲ್ಲಿ ಶಾರದಮ್ಮ ಎಲ್ಲರನ್ನು ಒಂದು ಮಾಡಿದ್ದಾರೆ. ಗರ್ಭಪಾತ ಮಾಡಿಸಿರುವುದಾಗಿ ಅನು ಒಪ್ಪಿಕೊಂಡಿದ್ದಾರೆ, ಅದಾದ ನಂತರ ರಾಜನಂದಿನಿ ಮತ್ತು ಆರ್ಯವರ್ಧನ್ ದೂರವಾಗಲು ನಾನೇ ಕಾರಣ ಎಂದು ಜೇಂಡೆ ಒಪ್ಪಿಕೊಂಡರು, ಅಷ್ಟೇ ಅಲ್ಲದೆ ಅನು ಪದೇ ಪದೇ ತಪ್ಪು ನಿರ್ಧಾರ ತೆಗೆದುಕೊಳ್ಳಲು ಜೆಂಡೆ ಕಾರಣ ಎಂದು ಶಾರದಮ್ಮ ಸಾಭೀತು ಮಾಡಿದ್ದರು. ಜಲಂದರ್ ವರ್ಧನ್ ಗ್ರೂಪ್ಸ್‌ನಲ್ಲಿ ಕೆಲಸ ಮಾಡಬೇಕು ಅನ್ನೋ ರಾಜನಂದಿನಿ ಕನಸ್ಸಾಗಿತ್ತು ಹೀಗಾಗಿ ಸ್ವತಃ ಆರ್ಯನೇ ಜೈಲಿನಿಂದ ಜಲಂದರ್‌ಗೆ ಬೇಲ್‌ ಕೊಡಿಸಿ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟರು. ಹಣ ಆಸ್ತಿ ಸ್ಟೈಲ್ ಸ್ಟೇಟ್ಸ್‌ ಎಂದು ಮರೆಯುತ್ತಿದ್ದ ಮಾನಸಿ ಕುಟುಂಬ ಮುಖ್ಯ ಜೀವನ ಮುಖ್ಯ ಎಂದು ಸರಿ ದಾರಿ ಹಿಡಿದು. ಕುಟುಂಬದಲ್ಲಿ ಸುಖಃ ಕಂಡು ಶಾರದಮ್ಮ ನೆಮ್ಮದಿಯಾದರು. 

ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ

ಕೊನೆ ದಿನದ ಚಿತ್ರೀಕರಣ ಫೋಟೋವನ್ನು ನಟ ಹರೀಶ್ ರಾಜ್‌ ಅಪ್ಲೋಡ್ ಮಾಡಿದ್ದಾರೆ. 'ನಾವು ಸದಾ ಒಟ್ಟಾಗಿರುತ್ತೀವಿ. ಜೊತೆ ಜೊತೆಯಲ್ಲಿ ಧಾರಾವಾಹಿ ಕೊನೆ ದಿನದ ಎಪಿಸೋಡ್ ಚಿತ್ರೀಕರಣದ ಫೋಟೋ' ಎಂದು ಬರೆದುಕೊಂಡಿದ್ದಾರೆ. 'ಕೊನೆಗೂ ಚಿತ್ರೀಕರಣ ಮುಗಿಯಿತ್ತು ಎಂಡಿಂಗ್ ಸೂಪರ್ ಆಗಿತ್ತು. ಕಥೆ ಎನ್ ಎನೋ ಇತ್ತು ಪಾಸಿಟಿವ್ ಕೊನೆ ಕೊಟ್ಟಿದ್ದು ಖುಷಿ ಕೊಟ್ಟಿದೆ. ಸೀರಿಯಲ್ ಮುಗಿಯುತ್ತಿರುವುದಕ್ಕೆ ಬೇಸರವಾಗುತ್ತಿದೆ. ಪ್ರತಿಯೊಬ್ಬರು ಅದ್ಭುತವಾಗಿ ನಟಿಸುತ್ತಿದ್ದಾರೆ ಹರ್ಷ ಮತ್ತು ಮೀರ್ ತುಂಬಾ ಸಿಂಪಲ್' ಎಂದು ನೆಟ್ಟಿಗರ ಕಾಮೆಂಟ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?