ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಶಾಲಿನಿಗೆ ಸರ್ಪ್ರೈಸ್ ಕೊಟ್ಟ ಮಗಳು. ಕಣ್ಣೀರಿಟ್ಟ ನಿರೂಪಕಿ ವಿಡಿಯೋ ವೈರಲ್...
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಶಾಲಿನಿ ಸತ್ಯನಾರಾಯಣ್ ನಿರೂಪಣೆ ಮಾಡುತ್ತಿದ್ದಾರೆ. ಮದರ್ಸ್ ಡೇ ಸ್ಪೆಷಲ್ ದಿನ ಎಪಿಸೋಡ್‌ನಲ್ಲಿ ಶಾಲಿನಿ ಪುತ್ರಿ ಆಬಾ ಎಂಟ್ರಿ ಕೊಡುತ್ತಾಳೆ. ವಿಡಿಯೋ ಮೂಲಕ ತಾಯಿ ಬಗ್ಗೆ ಸಾಕಷ್ಟು ಒಳ್ಳೆ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ವಿಡಿಯೋ ನೋಡುತ್ತಿದ್ದಂತೆ ಶಾಲಿನಿ ಕಣ್ಣಂಚಿನಲ್ಲಿ ನೀರೂರುತ್ತಿತ್ತು.
'ನನ್ನ ಮಗಳ ಹೆಸರು ಆಬಾ ನಿಧಿ ಎಲ್ಲರಿಗೂ ಡಿಂಪು ಅಂತ ಪರಿಚಯ. ವಿಡಿಯೋದಲ್ಲಿ ಮಗಳು ಏನು ಮಾತನಾಡಿದ್ದಾರೆ ಅದನ್ನು ದಿನ ಮನೆಯಲ್ಲಿ ಹೇಳುತ್ತಿರುತ್ತಾಳೆ. ನನ್ನ ಜೀವನವನ್ನು ತುಂಬಾ ಸುಲಭ ಮಾಡಿರುವ ವ್ಯಕ್ತಿ ನನ್ನ ಮಗಳು. ಸಾಮಾನ್ಯವಾಗಿ ಮಕ್ಕಳು ತಂದೆ ತಾಯಿ ಬಳಿ ತುಂಬಾ ಹಠ ಮಾಡುತ್ತಾರೆ ಆದರೆ ನನ್ನ ಮಗಳು ಹಾಗೆ ಮಾಡಿಲ್ಲ ತುಂಬಾ ಸರಳವಾಗಿ ಜೀವನ ನಡೆಸಿಕೊಂಡು ಹೋಗಲು ಸಹಾಯ ಮಾಡುತ್ತಾಳೆ ನನ್ನ ಮಗಳು. ವೃತ್ತಿ ಜೀವನದಲ್ಲಿ ನಾನು ಮುಂದು ಬರೆಲು ಆಕೆಯ ದೊಡ್ಡ ಪಾತ್ರವಿದೆ. ಏಕೆಂದರೆ ಮಗಳು ತುಂಬಾ ಚಿಕ್ಕವ್ವಳಾಗಿದ್ದ ಕ್ಷಣದಿಂದ ತುಂಬಾ ಕೆಲಸ ಮಾಡುತ್ತಿರುವೆ ಹೀಗಾಗಿ ನನ್ನ ಕೆಲಸ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಈಗ ನನ್ನ ಮಗಳ ಜೊತೆ ಸ್ನೇಹಿತೆ ರೀತಿ ಇದ್ದೀನಿ ಆದರೂ ಅಮ್ಮನ ಬುದ್ಧಿ ಬಿಟ್ಟಿಲ್ಲ ಸ್ವಲ್ಪ ಸ್ಕ್ರಿಕ್ಟ್ ಆಗಿರುತ್ತೀನಿ. ವೇದಿಕೆ ಮೇಲೆ ನಾನು ಇಷ್ಟು ಮಾತನಾಡುತ್ತೀನಿ ಕಾಮಿಡಿ ಮಾಡುತ್ತೀನಿ ಆದರೆ ಮನೆಯಲ್ಲಿಲ ಸೈಲೆಂಟ್ ಆಗಿರುತ್ತೀನಿ ಏಕೆಂದರೆ ಮಗಳು ಹೆಚ್ಚಿಗೆ ಕೌಂಟರ್ ಕೊಡುತ್ತಾಳೆ ಕಾಮಿಡಿ ಮಾಡಿ ನನ್ನನ್ನು ನಗಿಸುತ್ತಲೇ ಇರುತ್ತಾಳೆ' ಎಂದು ಮಾತನಾಡುತ್ತಿದ್ದಂತೆ ಶಾಲಿನಿ ಭಾವುಕರಾಗುತ್ತಾರೆ.
ತಿಂಗಳಿಗೆ 1 ಲಕ್ಷ ದುಡಿಯೋ ಹುಡುಗ ಬೇಕು ಅನ್ನೋ ಹುಡ್ಗೀರ್ ಮೇಲೆ ಶಾಲಿನಿ ಗರಂ; ಯೋಗ್ಯತೆ ಬೇಡ್ವಾ?
'ನಾನು ಏನು ಮಾತನಾಡಬೇಕು ಗೊತ್ತಾಗುತ್ತಿಲ್ಲ. ನಾನು ಜಸ್ಟ್ 13 ವರ್ಷದ ಹುಡುಗಿ. ಈಗಾಗಲೆ ನನಗೆ ಅನಿಸಿರುವುದನ್ನು ಹೇಳಿದ್ದೀನಿ ಆದರೂ ಮದರ್ಸ್ ಡೇ ಸ್ಪಷ್ಟ ಆಗಿ ನಾನು ನಿನಗೆ ಏನೋ ಬೇಕ್ ಮಾಡಿರುವೆ. ತುಂಬಾ ಸಿಂಪಲ್ ಆಗಿ ಬೇಕ್ ಮಾಡಿದ್ದೀನಿ. ಮಗ್ ಕೇಕ್ ಮಾಡಿರುವೆ' ಎಂದು ಸೂಪರ್ ಸ್ಟಾರ್ ವೇದಿಕೆ ಮೇಲೆ ಕೇಕ್ ತಂದಿದ್ದಾಳೆ ಮಗಳು. ದಿನ ಶಾಲಿನಿ ಟೀ ಕುಡಿಯುವ ಮಗ್‌ನಲ್ಲಿ ದಿಂಪೂ ಕೇಕ್ ಮಾಡಿದ್ದಾರೆ.
ಶಾಲಿನಿ ಮತ್ತು ಪುತ್ರಿ ವೇದಿಕೆ ಕಾಂಬಿನೇಷನ್ ನೋಡಿ ಅಲ್ಲಿದ್ದವರು ಟಾಸ್ಕ್ ನೀಡುತ್ತಾರೆ. ತಾಯಿ ಬಗ್ಗೆ ಮೂರು ಒಳ್ಳೆ ವಿಚಾರ ಹಾಗೂ ಒಂದು ದೂರು ಹೇಳಬೇಕು ಎಂದು. ದೂರಿನಿಂದ ಮಾತು ಆರಂಭಿಸಿದ ಡಿಂಪಿ 'ಅಮ್ಮ ಕೆಲಸದಿಂದ ಮನೆಗೆ ಬರುತ್ತಾರೆ ಬರುತ್ತಿದ್ದಂತೆ ನಿನ್ನ ರೂಮ್ ಗಲೀಜು ಆಗಿದೆ ಮೊದಲು ಕ್ಲೀನ್ ಮಾಡೋಣ ಅಂತೀಯಾ. ಅಲ್ಲಿಗೆ ನೀನು ಸುಮ್ಮನೆ ಇರುವುದಿಲ್ಲ ಮತ್ತೊಂದು ರೂಮ್‌ಗೆ ಹೋಗಿ ಅಲ್ಲೂ ಕ್ಲೀನ್ ಮಾಡುತ್ತೀನಿ ಇನ್ನು ಸಮಾಧಾನ ಆಗಿಲ್ಲ ಅಂದ್ರೆ ಎಲ್ಲಾ ಸ್ಟೋರೇಜ್ ರೂಮ್ ಕ್ಲೀನ್ ಮಾಡುತ್ತೀಯಾ. ಇದು ಒಳ್ಳೆಯ ವಿಚಾರನೇ ಆದರೆ ಕಂಪ್ಲೇಂಟ್ ಏನೆಂದರೆ ಒಂದು ಸಲ ಆದರೂ ಕ್ಲೀನ್ ಮಾಡದೆ ಮನೆಗೆ ಬಂದಾಗ ನೆಮ್ಮದಿಯಾಗಿ ಕುಳಿತುಕೊಳ್ಳಬೇಕು' ಎಂದು ಡಿಂಪಿ ಹೇಳುತ್ತಾಳೆ.
ಏನ್ರೀ ಸ್ಟೈಲ್ ನಿಮ್ದು; ಶಾಲಿನಿ ವಿಚಿತ್ರ ಬ್ಲೌಸ್ ನೋಡಿ ನೆಟ್ಟಿಗರು ಶಾಕ್
ಆನಂತರ ಮೂರು ಒಳ್ಳೆಯ ವಿಚಾರಗಳನ್ನು ಹೇಳಬೇಕು ಎಂದಾಗ 'ಸ್ಕೂಲ್‌ನಿಂದ ನಾನು ಸಿಟ್ಟು ಮಾಡಿಕೊಂಡು ಮನೆಗೆ ಬಂದಾಗ ಏನೋ ವಿಚಾರ ಮನಸ್ಸಿನಲ್ಲಿ ಇದೆ ಅದನ್ನು ಹೇಳಿಕೊಳ್ಳಬೇಕು ಅನ್ನೋದು ಅಮ್ಮನಿಗೆ ಅರ್ಥವಾಗುತ್ತದೆ. ಆಮ್ಮ ಕೇಳಿದ ಮೇಲೆ ಸಂಪೂರ್ಣವಾಗಿ ಹೇಳಿಕೊಂಡು ನೆಮ್ಮದಿಯಾಗಿರುತ್ತೀನಿ. ಎರಡನೇ ಪಾಯಿಂಟ್ ಏನೆಂದರೆ ದಿನವಿಡೀ ಅಳುತ್ತಾ ಏನಾದರೂ ಮಾಡುತ್ತಿದ್ದರೆ ನನ್ನ ಹಿಂದೆ ಅಮ್ಮ ಬಂದು ಏನಾಯ್ತು ಏನಾಯ್ತು ಎಂದು ಕೇಳುತ್ತಾರೆ ನನ್ನ ಮೂಡ್ ಬದಲಾಯಿಸುತ್ತಾರೆ. ಅಮ್ಮನ ಬಗ್ಗೆ ಏನಾದರೂ ಒಂದು ಸೀಕ್ರೆಟ್ ಹೇಳಬೇಕು ಅಂತಿದ್ದಾರೆ ...ಸೀಕ್ರೆಟ್ ಅಂದ್ಮೇಲೆ ಯಾಕೆ ಹೇಳಬೇಕು ಹೇಳುವುದಿಲ್ಲ' ಎಂದು ಡಿಂಪು ಮಾತನಾಡದ್ದಾಳೆ.