ಫೋನ್‌ ಇಲ್ಲ ಊಟ ಇಲ್ಲ ಹಣ ಇಲ್ಲ ಮಗ ತುಂಬಾ ಪರದಾಡಿದ್ದಾನೆ: ಗಿಲ್ಲಿ ನಟನ ಪರಿಸ್ಥಿತಿ ನೆನೆದು ಪೋಷಕರು ಕಣ್ಣೀರು!

Published : Oct 25, 2024, 03:10 PM ISTUpdated : Oct 25, 2024, 03:25 PM IST
ಫೋನ್‌ ಇಲ್ಲ ಊಟ ಇಲ್ಲ ಹಣ ಇಲ್ಲ ಮಗ ತುಂಬಾ ಪರದಾಡಿದ್ದಾನೆ: ಗಿಲ್ಲಿ ನಟನ ಪರಿಸ್ಥಿತಿ ನೆನೆದು ಪೋಷಕರು ಕಣ್ಣೀರು!

ಸಾರಾಂಶ

ಗಿಲ್ಲಿ ನಟರಾಜ್ ಬೆಂಗಳೂರಿಗೆ ಕಾಲಿಟ್ಟಾದ ಪಟ್ಟ ಕಷ್ಟವನ್ನು ನೆನೆದು ಪೋಷಕರು ಭಾವುಕರಾಗಿದ್ದಾರೆ. ಒಂದು ಹೊತ್ತು ಊಟಕ್ಕೆ ಏನು ಮಾಡಿದ್ದಾರೆ.   

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಕಾರ್ಯಕ್ರಮದಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವುದು ಗಿಲ್ಲಿ ನಟರಾಜ್‌ ಈ ಹಿಂದೆ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಆಗ ತಮ್ಮ ತಂದೆ ಕುಳ್ಳಯ್ಯ ಮತ್ತು ತಾಯಿ ಸಾವಿತಾ ಅವರನ್ನು ವೇದಿಕೆ ಮೇಲೆ ಕರೆದುಕೊಂಡು ಬಂದಿದ್ದರು. ವ್ಯವಸಾಯದ ಕುಟುಂಬದವರಾಗಿದ್ದು ಮೂವರು ಮಕ್ಕಳಿದ್ದಾರೆ, ಅಣ್ಣ ಅಕ್ಕ ಮತ್ತು ಗಿಲ್ಲಿ ನಟರಾಜ್. 

'ಚಿಕ್ಕ ವಯಸ್ಸಿನಿಂದ ನಮ್ಮನ್ನು ರೋಸಿದ್ದಾನೆ. 5ನೇ ಕ್ಲಾಸ್‌ನಲ್ಲಿ ಓದುತ್ತಿರುವಾಗ ಹುಡುಗರ ಗುಂಪು ಕಟ್ಟಿಕೊಂಡು ನೇರಳಮರ ಹತ್ತುವುದು ತೀಟೆ ಮಾಡುವುದು. ಅಂತು ಇಂತು 10ನೇ ಕ್ಲಾಸ್ ಮುಗಿಸಿಕೊಂಡು ಐಟಿಐ ಮಾಡಿ ಬೆಂಗಳೂರಿಗೆ ಹೋಗ ಅಲ್ಲಿ ಏನು ಮಾಡುತ್ತಿದ್ದ ಎಂದು ನನಗೆ ಗೊತ್ತಿರಲಿಲ್ಲ. ಸುಮಾರು 6 ತಿಂಗಳ ಕಾಲ ಎಲ್ಲೂ ಕಾಣಿಸಿಕೊಳ್ಳಲಿಲ್ಲ ಆಗ ಫೋನ್ ಕೂಡ ಇರಲಿಲ್ಲ ಹೀಗಾಗಿ ಏನು ಮಾಡುತ್ತಿದ್ದ ಎಲ್ಲಿ ಮಲಗುತ್ತಿದ್ದ ಅನ್ನೋ ಗೊತ್ತಿರಲಿಲ್ಲ. ನಾನು ತಲೆ ಕೆಡಿಸಿಕೊಂಡು ಓಡಾಡುತ್ತಿದ್ದ ಜನರು ಕೇಳುವರು ಎಲ್ಲಿ ಹೋದ ಮಗ ಅಂತ ನಾನು ಪೇಟೆ ಎಂದು ಹೇಳಿ ಸುಮ್ಮನಾಗುತ್ತಿದ್ದೆ. ಒಂದು ದಿನ ಊರಿಗೆ ಬಂದು ಜನ ನನ್ನ ಬಗ್ಗೆ ಮಾತನಾಡುತ್ತಿದ್ದಾರಂತೆ ಅಂತ ಕೇಳಿದ ಹೌದಪ್ಪ ಎಲ್ಲೋ ಹೋಗಿದ್ಯಾ ಹಾಗೆ ಹೀಗೆ ಅಂತಿದ್ದಾರೆ ಅಂದೆ ಅದಿಕ್ಕೆ ಸರಿ ಬಾ ಎಂದು ಜಮೀನು ಕಡೆ ಕರೆದುಕೊಂಡು ಹೋದಾ. 'ನೋಡಪ್ಪ ಯಾರು ಏನಾದರೂ ಅಂದುಕೊಳ್ಳಿ ನೀನು ತಲೆ ಕೆಡಿಸಿಕೊಂಡು ಕೂರ ಬೇಡ..ನಾನು ಯಾವತ್ತೂ ಕೆಟ್ಟವರ ಸಹವಾಸ ಮಾಡಿ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ' ಎಂದು ಹೇಳಿದ ಗಿಲ್ಲಿ ನಟ ತಂದೆಯ ತಲೆ ಮೇಲೆ ಕೈ ಇಟ್ಟು ಆಣೆ ಮಾಡುತ್ತಾರಂತೆ' ಎಂದು ಗಿಲ್ಲಿ ತಂದೆ ಮಾತನಾಡಿದ್ದಾರೆ.

ಹೆಣ್ಮಗು ಬೇಕು ಎಂದು ಪತ್ನಿಗೆ IVF ಮಾಡಿಸಿ ಪ್ರಾಣಾಪಾಯ ತಂದುಕೊಟ್ಟ ಹಾಸ್ಯ ನಟ; ಘಟನೆ

'ಮಗ ಟಿವಿಯಲ್ಲಿ ಬರ್ತಾನೆ ನೀನು ನೋಡಿದರೆ ನಿಕ್ಕರ್ ಮತ್ತು ಬನಿಯನ್ ಹಾಕೊಂಡು ಇರ್ತೀಯಾ ಯಾಕೆ ನೀನು ಬಟ್ಟೆ ಇಸ್ತ್ರಿ ಮಾಡಿಸಬಾರದು ಅಂತ ಜನರು ಆಡಿಕೊಂಡು ಮಾತನಾಡುತ್ತಾರೆ. ಅದರೆ ನಮ್ಮ ತಂದೆ ಕಾಲದಿಂದ ಬನಿಯನ್ ನಿಕ್ಕರ್ ಮತ್ತು ದೊಣ್ಣೆ ಅಷ್ಟೇ' ಎಂದು ಗಿಲ್ಲಿ ತಂದೆ ಹೇಳಿದ್ದಾರೆ.

ಮಗನ ಸ್ಕೂಲ್ ಮೀಟಿಂಗ್‌ನಲ್ಲಿ ಟೀಚರ್‌ಗೆ ಕ್ಲಾಸ್ ತೆಗೆದುಕೊಂಡ ದರ್ಶನ್; ಫೀಸ್‌ನ ಗಿಡದಿಂದ

'ನನ್ನ ಮಗ ಬೆಳೆದಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ಸರ್. ಬೆಳಗ್ಗೆ ಐಟಿಐ ಪರೀಕ್ಷೆ ಬರೆದು ಸಂಜೆ ಬೆಂಗಳೂರಿಗೆ ಹೋಗಿ ಹೋಗಿದ್ದಾನೆ. ಒಂದು ಫೋನ್‌ ಇಲ್ಲ, ಬಟ್ಟೆ ಇಲ್ಲ ಅಥವಾ ಕೈಯಲ್ಲಿ ಕಾಸು ಇಲ್ಲ ಸುಮ್ಮನೆ ಬಂದು ಬಿಟ್ಟಿದ್ದಾರೆ. ಅವನನ್ನು ನೆನಪಿಸಿಕೊಂಡು ತುಂಬಾ ಅತ್ತಿದ್ದೀನಿ.  ಬೆಂಗಳೂರಿಗೆ ಬಂದು ಕೆಲಸ ಕೇಳಿದಾಗ ಯಾರೂ ಕೆಲಸ ಕೊಟ್ಟಿಲ್ಲ ಹಾಗೆ ನಡೆದುಕೊಂಡು ರಸ್ತೆಯಲ್ಲಿ ಹೋಗುವಾಗ ಒಂದು ಮದುವೆ ಹಾಲ್ ಸಿಕ್ಕಿದೆ ಅಲ್ಲಿ ಊಟಕ್ಕೆ ಅಂತ ಹೋದಾಗ ಅಲ್ಲಿದ್ದ ಸೆಕ್ಯೂರಿಟಿ ಕುತ್ತಿಗೆ ಪಟ್ಟಿ ಹಿಡಿದು ರಸ್ತೆಗೆ ತಬ್ಬಿದ್ದಾರೆ. ಅಲ್ಲಿಂದ ನಡೆದುಕೊಂಡು ರಸ್ತೆಯಲ್ಲಿ ಬರುವಾಗ ಗಣೇಶ ಮೆರವಣಿಗೆ ಕರೆದುಕೊಂಡು ಹೋಗುತ್ತಿದ್ದರು ಅವರನ್ನು ಸೇರಿಕೊಂಡಿದ್ದಾರೆ ಅಲ್ಲಿ ಅಣ್ಣ ಊಟ ಕೊಡಿಸಿ ಎಂದು ಕೇಳಿದಾಗ ಅವರು ಊಟ ಕೊಡಿಸಿದ್ದಾರೆ ಅದಾದ ಮೇಲೆ ಸೈಕಲ್ ಅಂಗಡಿ ಅವರ ಬಳಿ ಕೆಲಸ ಕೇಳಿದ್ದಾನೆ. ಸ್ವಲ್ಪ ದಿನಗಳ ಕಾಲ ಅಲ್ಲೇ ಕೆಲಸ ಮಾಡಿಕೊಂಡು ಇದ್ದಾಗ ನಿಮ್ಮಂತ ದೊಡ್ಡವರು ಕರೆದು ಸೆಟ್‌ನಲ್ಲಿ ಕೆಲಸ ಕೊಡಿಸಿದ್ದಾರೆ' ಎಂದು ಗಿಲ್ಲಿ ನಟ ತಾಯಿ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!