ಸೀರಿಯಲ್​ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್​ ಹೇಳೇಬಿಟ್ರು!

By Suchethana D  |  First Published Oct 25, 2024, 2:33 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಜೀವ ಕಳೆದುಕೊಂಡಿರೋ ಸ್ನೇಹಾ ಅರ್ಥಾತ್​ ಸಂಜನಾ ಬುರ್ಲಿ ಶೂಟಿಂಗ್​ ಸಮಯದ ಒಂದು ಸೀಕ್ರೇಟ್​ ಹೇಳಿದ್ದಾರೆ. ಏನದು?
 


ಪುಟ್ಟಕ್ಕನ ಮಕ್ಕಳು ಸೀರಿಯಲ್ ಶುರುವಾಗಿ ಮೂರು ವರ್ಷವಾಗಿದೆ. ಈ ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಈಗ ಸೀರಿಯಲ್​ಗೆ ಪ್ರೇಕ್ಷಕರು ಎಂದೂ ನಿರೀಕ್ಷೆ ಮಾಡದ ಆಘಾತಕಾರಿ ಟ್ವಿಸ್ಟ್​ ಸಿಕ್ಕಿದೆ. ಅದೇನೆಂದರೆ ಸ್ನೇಹಾ ಪಾತ್ರ ಕೊನೆಗೊಂಡಿದೆ. ಈಗಷ್ಟೇ ಜಿಲ್ಲಾಧಿಕಾರಿಯಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರೋ ಸ್ನೇಹಾ, ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ಅನಿರೀಕ್ಷಿತ ತಿರುವು ಸೀರಿಯಲ್​ನಲ್ಲಿ ಯಾಕೆ ತಂದಿದ್ದಾರೆ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಚಿಂತೆ ಶುರುವಾಗಿದೆ. ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್​ ಬಿಡುವ ಕಾರಣದಿಂದ ಏನೇನೋ ಕಥೆ ತಿರುವು ಪಡೆದುಕೊಂಡಿತಾ ಎಂಬ ಪ್ರಶ್ನೆಯನ್ನೂ ಪ್ರೇಕ್ಷಕರು ಕೇಳುತ್ತಿದ್ದಾರೆ. ಮನೆಗೆ ಬಂದಿರುವ ಸ್ನೇಹಾಳಿಗೆ ಈ ಸ್ನೇಹಾ ಹೃದಯವನ್ನು ನೀಡುತ್ತಾಳೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಆದರೆ ಸೀರಿಯಲ್​ ಉದ್ದೇಶವನ್ನೇ ಬುಡಮೇಲು ಮಾಡಿರುವ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿಯೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಅದೇನೇ ಇರಲಿ, ಕಥೆ ಏನೇ ಇರಲಿ... ಅಸಲಿ ವಿಷಯಕ್ಕೆ ಬರುವುದಾದರೆ, ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಸೋಷಿಯಲ್​  ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದು, ಇದೀಗ ಯೂಟ್ಯೂಬ್​ನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಸೆಟ್​ ತೋರಿಸಿದ್ದಾರೆ. ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. 

Tap to resize

Latest Videos

undefined

ಪುಟ್ಟಕ್ಕನ ಮಗಳು ಸ್ನೇಹಾ ಹಾಟ್​ ಫೋಟೋಶೂಟ್​: ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್​ ಅನ್ನೋದಾ ಫ್ಯಾನ್ಸ್​?

ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಮಾಡುವ ಮನೆ ಹೇಗಿದೆ ಎಂಬ ಬಗ್ಗೆ ಸಂಜನಾ ತೋರಿಸಿದ್ದಾರೆ. ಇವರಿಗೆ ಜತೆಯಾಗಿದ್ದವರು ಸುಮಾ ಪಾತ್ರಧಾರಿ ಶಿಲ್ಪಾ. ಇಬ್ಬರೂ ಸೇರಿ ಮನೆ ಹೇಗಿದೆ ಎನ್ನುವ ಬಗ್ಗೆ ತೋರಿಸಿದ್ದು, ಸೀರಿಯಲ್​ ಕಲಾವಿದರನ್ನೂ ಮಾತನಾಡಿದ್ದಾರೆ. ಇದೇ ವೇಳೆ ಒಂದು ಸೀಕ್ರೇಟ್​ ಅನ್ನು ಸಂಜನಾ ತಿಳಿಸಿದ್ದಾರೆ. ಅದೇನೆಂದರೆ, ಸಂಜನಾ ಕಾಲೇಜಿಗೆ ಹೋಗುತ್ತಿದ್ದು, ಪ್ರಾಜೆಕ್ಟ್​ ವರ್ಕ್​, ಹೋಮ್​ ವರ್ಕ್​ ಎಲ್ಲಾ ಹೇಗೆ ಮ್ಯಾನೇಜ್​ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ದಿನಪೂರ್ತಿ ಶೂಟಿಂಗ್ ಸೆಟ್​ನಲ್ಲಿ ಇರುವಾಗ ಕಾಲೇಜು ವರ್ಕ್​ ಎಲ್ಲಾ ಮಾಡೋದು ಕಷ್ಟ. ಆದ್ದರಿಂದ ಈ ಸಮಯದಲ್ಲಿ ತಮಗೆ ಸಹಾಯ ಮಾಡ್ತಿದ್ದುದು ಶಿಲ್ಪಾ ಎಂದು ಹೇಳಿದ್ದಾರೆ. ಶಿಲ್ಪಾಗೂ, ಸಂಜನಾಗೂ ಇರುವ ಸಂಬಂಧ ಸಹ ಕಲಾವಿದರಾಗಿ ಮಾತ್ರ. ಇದರ ಹೊರತಾಗಿಯೂ ತಮಗೆ ಈ ಪರಿ ಸಹಾಯ ಮಾಡಿರುವ ಶಿಲ್ಪಾ ಕುರಿತು ಸಹನಾ ಹೊಗಳಿಕೆಯ ಮಾತನಾಡಿದ್ದಾರೆ. ತಮ್ಮ ಉಪನ್ಯಾಸಕರು ಇದನ್ನು ನೋಡಿದರೆ ಕಷ್ಟ ಎಂದೂ ಇದೇ ವೇಳೆ ಅವರು ತಮಾಷೆ ಮಾಡಿದ್ದಾರೆ. 

ಪುಟ್ಟಕ್ಕನ ಮಕ್ಕಳು ಸ್ನೇಹಾ ಭರ್ಜರಿ ರೀಲ್ಸ್​: ದೂರು ದಾಖಲಿಸಲು ಮುಂದಾದ ನೆಟ್ಟಿಗರು!

click me!