ಒಳ್ಳೆ ವ್ಯಕ್ತಿ ಅನಿಸಿಕೊಳ್ಳುವ ತೆವಲು ನನಗಿಲ್ಲ; ದುರಹಂಕಾರಿ ಎಂದವರಿಗೆ ಗಟ್ಟಿಮೇಳ ನಟ ವೇದಾಂತ್‌ ಉತ್ತರ!

Published : Jun 21, 2023, 03:39 PM IST
ಒಳ್ಳೆ ವ್ಯಕ್ತಿ ಅನಿಸಿಕೊಳ್ಳುವ ತೆವಲು ನನಗಿಲ್ಲ; ದುರಹಂಕಾರಿ ಎಂದವರಿಗೆ ಗಟ್ಟಿಮೇಳ ನಟ ವೇದಾಂತ್‌ ಉತ್ತರ!

ಸಾರಾಂಶ

 ರಿಯಲ್ ಲೈಫ್‌ನಲ್ಲಿ ವೇದಾಂತ್‌ಗೆ ಸಿಕ್ಕಾಪಟ್ಟೆ attitude. ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್ ಮಾಡುವವರಿಗೆ ಉತ್ತರ ಕೊಟ್ಟ ನಟ....

ಜೀ ಕನ್ನಡ ವಾಹಿನಿಯಲ್ಲಿ 1000ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಪ್ರಸಾರ ಮಾಡಿ ಈಗಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಗಟ್ಟಿಮೇಳ ಧಾರಾವಾಹಿ. ಪ್ರಮುಖ ಪಾತ್ರಧಾರಿ ವೇದಾಂತ್ ಉರ್ಫ್‌ ರಕ್ಷ್‌ ರೀಲ್ ಲೈಫ್ ರೀತಿ ರಿಯಲ್ ಲೈಫ್‌ನಲ್ಲೂ ಸಿಕ್ಕಾಪಟ್ಟೆ ಕಿರಿಕ್, ದುರಹಂಕಾರ,ಜನರನ್ನು ಚೆನ್ನಾಗಿ ಮಾತನಾಡಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ ಮತ್ತು ಟ್ರೋಲ್‌ಗಳು ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ರಕ್ಷ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.   

'ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುವುದಿಲ್ಲ ಆದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ನಮ್ಮ ಜೀ ವಾಹಿನಿ ಪೇಜ್‌ನಲ್ಲಿ ಅವಾರ್ಡ್‌ಗಳ ಫೋಟೋ, ಧಾರಾವಾಹಿ ವಿಡಿಯೋ ಹಾಕಿದಾಗ ಜನರು ಕಾಮೆಂಟ್ ಮಾಡುವುದು ಬೇಸರ ಆಗುತ್ತೆ. 2 ಸಾವಿರ ಕಾಮೆಂಟ್‌ನಲ್ಲಿ 1900 ಕಾಮೆಂಟ್ ಪಾಸಿಟಿವ್ ಆಂಡ್ ಸಪೋರ್ಟಿಂಗ್ ಆಗಿರುತ್ತದೆ ಆಗ ವಾಹಿನಿಯವರು ಹೇಳುತ್ತಾರೆ ದ್ವೇಷ ಸಿಟ್ಟು ಅಥವಾ ನೆಗೆಟಿವ್ ಮೆಸೇಜ್ ಕಡಿಮೆ ಬರುವುದು ನಿಮಗೆ ಎಂದು. ಫ್ಯಾನ್ಸ್‌ಗಳು ಅಷ್ಟು ಪ್ರೀತಿ ಕೊಟ್ಟು ನನ್ನನ್ನು ಮೇಲೆ ಇಟ್ಟಿದ್ದಾರೆ. ರಕ್ಷ್‌ಗೆ ದುರಹಂಕಾರ ಅಂತ ಯಾರಾದರೂ ಹೇಳಿದರೆ ಮೊದಲು ವ್ಯಕ್ತಿಗಳನ್ನು ಮೊದಲು ಭೇಟಿ ಮಾಡಿ ಆನಂತರ ಜಡ್ಜ್‌ ಮಾಡಿ.ಈಗ ಒಬ್ಬ ವ್ಯಕ್ತಿಯನ್ನು ತಿಳಿದುಕೊಳ್ಳಬೇಕು ಅಂದ್ರೆ ಮೊದಲು ಅವರನ್ನು ಭೇಟಿ ಮಾಡಿ ಪರೋಕ್ಷವಾಗಿ ಭೇಟಿ ಮಾಡಿ ಮಾತನಾಡಿ ಆಗ ಸತ್ಯ ಗೊತ್ತಾಗುತ್ತದೆ' ಎಂದು ರಕ್ಷ್ ಮಾತನಾಡಿದ್ದಾರೆ.

ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!

'ಇಂಡಸ್ಟ್ರಿಯಲ್ಲಿ ಸುಮ್ಮನೆ ಕಾಮೆಂಟ್ ಮಾಡುತ್ತಾರೆ ಆ ನಟ ಹೀಗೆ ಈ ನಟ ಹಾಗೆ ಎಂದು ನಿಜ ಹೇಳಬೇಕು ಅಂದ್ರೆ ಹಾಗೆ ಏನೂ ಇರುವುದಿಲ್ಲ. ಒಬ್ಬ ನೆಗೆಟಿವ್ ಬರೆದರೆ ಮೂರ್ನಾಲ್ಕು ಜನ ಪಾಸಿಟಿವ್ ಬರೆಯುತ್ತಾರೆ. ಯಾರನ್ನು ಖುಷಿ ಪಡಿಸುವುದಕ್ಕೆ ನಾನು ಬದುಕುವುದಿಲ್ಲ ತುಂಬಾ ಕಷ್ಟ ಪಟ್ಟು ಕೆಲಸ ಮಾಡಬೇಕು ಅಂದುಕೊಂಡಿರುವೆ, ಫ್ಯಾಮಿಲಿ ಲೈಫ್ ಚೆನ್ನಾಗಿರ ಬೇಕು ಫ್ಯಾಮಿಲಿ ಚೆನ್ನಾಗಿ ನೋಡಿಕೊಳ್ಳಬೇಕು ಅಂದುಕೊಂಡಿರುವೆ ಮತ್ತೊಬ್ಬರಿಂದ ಒಳ್ಳೆ ವ್ಯಕ್ತಿ ಅನಿಸಿಕೊಳ್ಳಬೇಕು ಅನ್ನೋ ತೆವಲು ನನಗಿಲ್ಲ. ಎಷ್ಟು ಜನರನ್ನು ಮೆಚ್ಚಿಸಲು ಸಾಧ್ಯ? ಪರ್ಸನಲ್ ಆಗಿ ಗೊತ್ತಿಲ್ಲ ಅಂದ್ರೆ ಕಾಮೆಂಟ್ ಮಾಡಬೇಡಿ' ಎಂದು ರಕ್ಷ್ ಹೇಳಿದ್ದಾರೆ. 

ಪದೇ ಪದೇ ಹುಡ್ಗಿ ಗೆಟಪ್ ಹಾಕೋದು ಯಾಕೆ?; ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಗಿಚ್ಚಿ ಗಿಲಿಗಿಲಿ ಧನರಾಜ್

ನಿರ್ಮಾಣ ಕಷ್ಟ ಅಥವಾ ನಟನೆ ಕಷ್ಟ?

'ಖಂಡಿತಾ ನಿರ್ಮಾಣ ಮಾಡುವುದು ತುಂಬಾನೇ ಕಷ್ಟವಾಗುತ್ತದೆ ಅಂದುಕೊಂಡಷ್ಟು ಸುಲಭವಲ್ಲ. ಪ್ರೊಡಕ್ಷನ್ ಅಂದ್ರೆ ಕೇವಲ ಹಣವಲ್ಲ ಪ್ರತಿಯೊಂದು ಕೆಲಸ ಪ್ರತಿಯೊಬ್ಬರನ್ನು ಬ್ಯಾಲೆನ್ಸ್ ಮಾಡುವುದು ಬೇಕಿದ್ದರೆ ಒಂದು ಸಿನಿಮಾವನ್ನು ಮೂರ್ನಾಲ್ಕು ತಿಂಗಳುಗಳ ಕಾಲ ನಿರ್ಮಾಣ ಮಾಡಬಹುದು 6 ತಿಂಗಳು ಕಲಾವಿದರ ಡೇಟ್ ಸಿಗುವುದಿಲ್ಲ ಮ್ಯಾನೇಜ್ ಮಾಡಬಹುದು ಪ್ರತಿ ದಿನ ವರ್ಷಗಳ ಕಾಲ ಪ್ರತಿಯೊಬ್ಬರ ದಿನಾಂಕ ಮ್ಯಾನೇಜ್ ಮಾಡಬೇಕು ಅನೇಕರ ಭಿನ್ನಾಭಿಪ್ರಾಯ ಮ್ಯಾನೇಜ್ ಮಾಡಬೇಕು ಇದರಲ್ಲಿ ಮಾರಲ್ ಜವಾಬ್ದಾರಿಗಳು ಹೆಚ್ಚಿರುತ್ತದೆ' ಎಂದಿದ್ದಾರೆ ರಕ್ಷ್‌. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?