ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!

Published : Jun 21, 2023, 11:47 AM IST
ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!

ಸಾರಾಂಶ

 ಫೇಸ್‌ಬುಕ್‌ನಲ್ಲಿ ನಂಬರ್ ಶೇರ್, ವಾಟ್ಸಪ್ಸ್‌ನಲ್ಲಿ ಫುಲ್ ಚಾಟಿಂಗ್. ವೈರಲ್ ಆಯ್ತು ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ ಲವ್ ಸ್ಟೋರಿ...  

ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2 ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 2 ವಿನ್ನರ್ ಟ್ರೋಫಿ ಪಡೆದಿರುವ ಚಂದ್ರಪ್ರಭಾ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಷ್ಟಕ್ಕೂ ಚಂದ್ರಪ್ರಭಾ ವಯಸ್ಸು ಎಷ್ಟು ಚಂದ್ರಪ್ರಭಾ ಹೇಗೆ ಭಾರತಿ ಪ್ರಿಯಾ ಭೇಟಿ ಮಾಡಿದರು ಎಂದು ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

'ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ದೇವರ ದರ್ಶನ ಮಾಡಲು ಹೋಗಿ ದೇವರೆ ದರ್ಶನ ಆಯ್ತು. ಚೆನ್ನಾಗಿದ್ದಳು ಎಂದು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದೆ. ನನ್ನ ಹಾಡು ನೋಡಿ ಇಷ್ಟ ಪಟ್ಟು ಐ ಲೈಕ್‌ ಯು ಎಂದು ಹೇಳಿದ್ದಳು. ಮೊಬೈಲ್ ನಂಬರ್ ಸಿಕ್ಕಿದ್ದು ಫೇಸ್‌ ಬುಕ್‌ನಲ್ಲಿ ಆಮೇಲೆ ಆಗಿದ್ದು ಎಲ್ಲಾ ಮಾಮುಲಿ. ನನ್ನ ಹಾಡಿಗೆ ಅವರು ಸಿಕ್ಕಾಪಟ್ಟೆ ಫ್ಯಾನ್. ಅವರು ಲೈಕ್ ಸೆಂಡ್ ಮಾಡಿದ್ದರೂ ನಾನು ಲವ್ ಯು ಎಂದು ಹೇಳಿದೆ. ಅಣ್ಣ ಅಂತ ಹೇಳುತ್ತೀನಿ ಅಂದ್ರು ಬೇಡ ಅಂತ ಹೇಳಿ ಒತ್ತಾಯ ಮಾಡಿ ಲವ್ ಮಾಡಿಸಿದೆ. ಎಲ್ಲರೂ ರೇಗಿಸುತ್ತಿದ್ದರು ಅದನ್ನು ನೋಡಿ ನನ್ನ ವಯಸ್ಸಿನ ಮೇಲೆ ಆಕೆಗೆ ಡೌಟ್ ಆಯ್ತು ಅವರ ಅಪ್ಪ ಕೂಡ ಬೇಡ ಕಣ್ಣಮ್ಮ ಹುಡುಗ ನನ್ನ ವಯಸ್ಸು ಎಂದ ಹೇಳಿದರು. ಮದುವೆ ಮಾಡಿಕೊಳ್ಳೋಣ ಎಂದು ದಿನಾಂಕ ಕೂಡ ಫಿಕ್ಸ್ ಮಾಡಿಸಿದೆ ಆದರೆ ಅವರು ಬೇಡ ಎನ್ನುತ್ತಿದ್ದರು ಎಂದು ಐಡಿಯಾ ಮಾಡಿ. ಜನರು ಆಧಾರ್ ಕಾರ್ಡ್‌ ನಂಬುತ್ತಾರೆ ಅದಿಕ್ಕೆ ಸುಳ್ಳು ಆಧಾರ್ ಕಾರ್ಡ್ ಮಾಡಿಸಿದೆ. ನನಗೆ 25 ವರ್ಷ ಅಂತ ಸುಳ್ಳು ಮಾಡಿಸಿ ಅವರ ಅಪ್ಪನಿಗೆ ತೋರಿಸಿದೆ ಹೆಚ್ಚಿಗೆ ತೋರಿಸಿದರೆ ಚರ್ಚೆ ಆಗುತ್ತೆ ಅಂತ ರಪ್ ಅಂತ ಮದುವೆ ಮಾಡಿಕೊಂಡೆ. 

ಕೊನೆಗೂ ಮುಚ್ಚಿಟ್ಟ ಮದುವೆ ಬಗ್ಗೆ ಸತ್ಯ ಬಿಚ್ಚಿಟ್ಟ ಚಂದ್ರಪ್ರಭಾ; ಗಿಚ್ಚಿ ಗಿಲಿಗಿಲಿಯಲ್ಲಿ ಕಣ್ಣೀರಿಟ್ಟ ಜೋಡಿ!

ಮದುವೆ ಅಂದ್ಮೇಲೆ ನಮ್ಮ ಚಾನೆಲ್ ಅವ್ರು ನನ್ನ ತಂಡದ ಹುಡುಗರನ್ನು ಕರೆಯಬೇಕು ಆದರೆ ಅವರ ಬಂದರೆ ನನ್ನ ನಿಜವಾದ ವಯಸ್ಸು ರಿವೀಲ್ ಮಾಡುತ್ತಾರೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಬೆಳಗ್ಗೆ ದೇವಸ್ಥಾನದಲ್ಲಿ ಸ್ವಾಮೀಜಿ ಅವರಿಗೆ ಹೇಳಿ ಸಿಂಪಲ್ ಆಗಿ ಮದುವೆ ಮಾಡಿಸಿ ಆನಂತರ ರೀ-ಹರ್ಸಲ್‌ನಲ್ಲಿ ಭಾಗಿಯಾಗಿದೆ. ಯಾಕೆ ತಡವಾಗಿ ಬರುತ್ತಿರುವುದು ಎಂದು ಹೇಳಬೇಕು ಅಲ್ವಾ ಅದಿಕ್ಕೆ ನಮ್ಮ ಟೀಂ ಮತ್ತು ಮ್ಯಾನೇಜರ್‌ಗೆ ತೋರಿಸಿದೆ ಆಗ ಎಲ್ಲರೂ ನಂಬುವುದಕ್ಕೆ ಶುರು ಮಾಡಿದರು. ಇದುವರೆಗೂ ಮದುವೆ ಬಗ್ಗೆ ಎಲ್ಲಿಯೂ ಹಂಚಿಕೊಂಡಿಲ್ಲ ಹೀಗಾಗಿ ಯಾರೂ ನಂಬುತ್ತಿರಲಿಲ್ಲ ...ಮದುವೆ ಊಟ ಆದ್ಮೇಲೆ ಶೂಟಿಂಗ್' ಎಂದು ಖಾಸಗಿ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

'ಮದುವೆ ನಂತರ ಎಲ್ಲೂ ಪ್ರಯಾಣ ಮಾಡಲಿಲ್ಲ ಶೂಟಿಂಗ್ ಇತ್ತು ಸಮಯ ಸಿಕ್ಕಲ್ಲ ಆದಷ್ಟು ಬೇಗ ಪ್ಲ್ಯಾನ್ ಮಾಡಬೇಕು. ಈಗ ಫ್ಯಾಮಿಲಿ ಪವರ್ ಶುರುವಾಗುತ್ತಿರುವುದಕ್ಕೆ  ನಾನು ಫ್ರೀ ಇಲ್ಲ. ಇದೆಲ್ಲಾ ಆದ ಮೇಲೆ ಸಮಯ ಮಾಡಿಕೊಂಡು ನಿರ್ಧಾರ ಮಾಡಬೇಕು ಎಲ್ಲಿ ಹೋದರೂ ಒಂದೇ ಅದೇ ಲೈಟ್ ಆಫ್ ಮಾಡು ಬಾಗಿಲು ಹಾಕಿಕೊಳ್ಳುವುದು' ಎಂದು ಚಂದ್ರಪ್ರಭಾ ಹೇಳಿದ್ದಾರೆ.  

ಗುಟ್ಟಾಗಿ ಮದುವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಹೆಂಡ್ತಿ ಸುಂದರವಾಗಿದ್ರೂ ಮದ್ವೆ ಆಗಿಲ್ಲ ಅನ್ನೋದು ಯಾಕೆ?

'ರಿಯಲ್ ಲೈಫ್‌ನಲ್ಲಿ ನಾನು ಎಷ್ಟು ರೊಮ್ಯಾಂಟಿಕ್ ಎಂದು ಹೇಳಲು ಆಗಲ್ಲ. ಉದಾಹರಣೆ ಕೊಡಬೇಕು ಅಂದ್ರೆ ಹುಣಸೆ ಮರ 10 ವರ್ಷದಲ್ಲೂ ಅದೇ ಹಣ್ಣು ಅದೇ ರುಚಿ 60 ವರ್ಷ ಆದರೂ ಅದೇ ರುಚಿ ನೀಡುತ್ತದೆ ಹುಣಸೆ ಮರಕ್ಕೆ ವಯಸ್ಸಾಗಬಹುದು ಉಳಿ ಮುಪ್ಪಾಗುತ್ತಾ? ಆಗ ವಿಚಾರದಲ್ಲಿ ಹುಡುಗರು ಸದಾ ರೊಮ್ಯಾಂಟಿಕ್ ಆಗಿರುತ್ತಾರೆ. ಅದಿಕ್ಕೆ ಚೆನ್ನಾಗಿ ಡ್ರೈ ಪ್ರೋಟ್ಸ್‌ ತಿನ್ನಬೇಕು ಬಾದಾಮಿ ಗೋಡಂಬಿ ದ್ರಾಕ್ಷಿ ಜೇನು ತುಪ್ಪ ಹಸಿ ತರಕಾರಿ ಎಲ್ಲಾ ಚೆನ್ನಾಗಿ ತಿನ್ನುತ್ತೀನಿ ಆಗ ಸ್ಟೇಜ್ ಮೇಲೆ ಫುಲ್ ಆಕ್ಟಿವ್ ಆಗಿರಬಹುದು ಆಗ ಎಲ್ಲರೂ ಕಡಿಮೆ ವಯಸ್ಸಾಗಿದೆ ಅಂದುಕೊಳ್ಳುತ್ತಾರೆ' ಎಂದಿದ್ದಾರೆ ಚಂದ್ರಪ್ರಭಾ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗಲೂ ಸೋಷಿಯಲ್ ಮೀಡಿಯಾ ವಾರ್.. ಗಿಲ್ಲಿ ಬದಲು ರಕ್ಷಿತಾ ಗೆಲ್ಬೇಕಿತ್ತು ಅಂತ..! ಯಾಕೆ ಗೊತ್ತಾ?
BBK 12: ಬಿಗ್‌ಬಾಸ್‌ ಶೋಗೆ ಮತ್ತೆ ಸಂಕಷ್ಟ: ಫಿನಾಲೆ ಸಂದರ್ಭದಲ್ಲಿಯೇ ಹೋಯ್ತು ನೋಟಿಸ್