ಪದೇ ಪದೇ ಹುಡ್ಗಿ ಗೆಟಪ್ ಹಾಕೋದು ಯಾಕೆ?; ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಗಿಚ್ಚಿ ಗಿಲಿಗಿಲಿ ಧನರಾಜ್

Published : Jun 21, 2023, 02:14 PM ISTUpdated : Jun 21, 2023, 02:17 PM IST
ಪದೇ ಪದೇ ಹುಡ್ಗಿ ಗೆಟಪ್ ಹಾಕೋದು ಯಾಕೆ?; ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಗಿಚ್ಚಿ ಗಿಲಿಗಿಲಿ ಧನರಾಜ್

ಸಾರಾಂಶ

ಹುಡುಗನ ಪಾತ್ರಕ್ಕಿಂತ ಹೆಚ್ಚಾಗಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡ ಧನರಾಜ್. ಗಿಚ್ಚಿ ಗಿಲಿಗಿಲಿ ಜರ್ನಿ ಹಂಚಿಕೊಂಡ ಸೋಷಿಯಲ್ ಮೀಡಿಯಾ ಸ್ಟಾರ್....  

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ರೀಲ್ಸ್‌ ಹಾಗೂ ಯುಟ್ಯೂಬ್ ವಿಡಿಯೋಗಳ ಮೂಲಕ ಜನರನ್ನು ಮನೋರಂಜಿಸುತ್ತಿದ್ದ ಧನರಾಜ್ ಆಚಾರ್ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮ ಜರ್ನಿ ಬಗ್ಗೆ ಮೊದಲ ಸಲ ಹಂಚಿಕೊಂಡಿದ್ದಾರೆ. 

'ಕಲರ್ಸ್‌ ಕನ್ನಡ ಗಿಚ್ಚಿ ಗಿಲಿಗಿಲಿ ಸೀಸನ್ 1 ತಪ್ಪದೆ ಟಿವಿಯಲ್ಲಿ ನೋಡುತ್ತಿದ್ದೆ ಸ್ಪರ್ಧಿಗಳ ಕಾಮಿಡಿ ಸ್ಕಿಟ್ ಮಾಡುವ ರೀತಿ ಪ್ರತಿಯೊಂದನ್ನು ಎಂಜಾಯ್ ಮಾಡುತ್ತಿದ್ದೆ ಸಖತ್ ಡಿಫರೆಂಟ್ ಆಗಿ ಕಾಣಿಸುತ್ತಿತ್ತು. ನನ್ನನ್ನು ಶೋಗೆ ಕರೆದಾಗ ಖುಷಿಯಿಂದ ಹೋದೆ ಆದರೆ ಶೋ ನಡೆಯುವಾಗ ಕಷ್ಟ ಅನಿಸುತ್ತಿತ್ತು. ಟಿವಿಯಲ್ಲಿ ನೋಡಿದರೆ ಆರಾಮ್ ಅಗಿ ಮಾಡಬಹುದು ಅಂದುಕೊಂಡೆ ಅಲ್ಲಿ ಇರವ ಕಲಾವಿದರು ನಟ ರಾಕ್ಷಸರು ಕಾಂಪೀಟ್ ಮಾಡುವುದು ಕಷ್ಟ. ನಟನೆಗಿಂತ ನನಗೆ ಭಾಷೆ ಸಮಸ್ಯೆ ಆಗಿತ್ತು ನಾನು ಸ್ಲೋ ಆಗಿ ಏನು ಮಾತನಾಡಬೇಕು ಎಂದು ಯೋಚನೆ ಮಾಡಿ ಮಾತನಾಡುವ ವ್ಯಕ್ತಿ ಆದರೆ ಸ್ಕಿಟ್‌ನಲ್ಲಿ ಸ್ಪಿಡ್ ಬಯಸುತ್ತಾರೆ ಅದು ಕಷ್ಟವಾಗುತ್ತಿತ್ತು. ಯಾವಾಗ ನನಗೆ ಲೇಡಿ ಕ್ಯಾರೆಕ್ಟರ್‌ ಕೊಡಲು ಆರಂಭಿಸಿದರು ಅಲ್ಲಿಂದ ನನಗೆ ಗ್ರಿಪ್ ಸಿಗ್ತು ಧೈರ್ಯ ಬಂತು ನಟಿ ಶ್ರುತಿ ಮೇಡಂ ಹಾಗೂ ನಟ ಸಾಧು ಕೋಕಿಲ ಸರ್ ತುಂಬಾ ಸ್ಫೂರ್ತಿ ತುಂಬುತ್ತಾರೆ. ನಟನೆಯಲ್ಲಿ ಅನುಭವ ಇರುವ ವ್ಯಕ್ತಿಗಳು ನಮ್ಮ ನಟನೆ ನೋಡಿ ಅದರ ಬಗ್ಗೆ ಕಾಮೆಂಟ್ ಮಾಡಿದಾಗ ಸಿಗುವ ಎನರ್ಜಿ ಎಲ್ಲೂ ಸಿಗುವುದಿಲ್ಲ' ಎಂದು ಧನರಾಜ್ ಮಾತನಾಡಿದ್ದಾರೆ. 

ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!

ಸ್ಟೇಜ್ ಮೇಲೆ ನಾನು ಹೋದಾಗ ಡೈಲಾಗ್ ಮರೆಯುತ್ತಿದ್ದೆ ಎಷ್ಟು ಸಲ ಎಡವಟ್ಟು ಮಾಡಿರುವೆ ನನಗೆ ಗೊತ್ತಿಲ್ಲ ಹಾಗೆ ಮಾಡಿದರೂ ವೇದಿಕೆ ಮೇಲೆ ಎಂಜಾಯ್ ಮಾಡುತ್ತಾರೆ ಎಷ್ಟು ನೆನಪು ಮಾಡಿಕೊಂಡರೂ ಗೊತ್ತಾಗುತ್ತಿರಲಿಲ್ಲ. ವೇದಿಕೆ ಮೇಲೆ ಹೋದಾಗ ಅಲ್ಲಿನ ಲೈಟ್ ನೋಡಿ ಗಾಬರಿ ಆಗುತ್ತಿತ್ತು ಆರಂಭದಲ್ಲಿ ತುಂಬಾ ಕಷ್ಟ ಪಟ್ಟಿರುವೆ ಈವಾಗ ಧೈರ್ಯ ಬಂದಿದೆ. ಪ್ರತಿವಾರವೂ ವಿಭಿನ್ನ ರೀತಿಯಲ್ಲಿ ನಗಿಸಬೇಕು ಅಂದ್ರೆ ಕಷ್ಟವಾಗುತ್ತದೆ ಕಥೆ ಕಟ್ಟುವ ರೀತಿ ಡಿಫರೆಂಟ್ ಆಗಿರುತ್ತದೆ. ಸೋಷಿಯಲ್ ಮೀಡಿಯಾದ ಮುಂದೆ ಮಾಡುವ ಆಕ್ಟಿಂಗ್‌ಗೂ ಕ್ಯಾಮೆರಾ ಮುಂದೆ ಮಾಡುವ ಆಕ್ಟಿಂಗ್ ವಿಭಿನ್ನವಾಗಿರುತ್ತದೆ ಎಂದು ಧನರಾಜ್ ಹೇಳಿದ್ದಾರೆ. 

ಸರಿಗಮಪ ಅಶ್ವಿನ್ ಶರ್ಮಾ ನಿಶ್ಚಿತಾರ್ಥ; ಮಂಡಿಯೂರಿ ಪ್ರಪೋಸ್ ಮಾಡಿದ ಫೋಟೋ ವೈರಲ್!

ನಮ್ಮ ಪುತ್ತೂರಿನಲ್ಲಿ ತುಂಬಾ ಜನರು ಪ್ರೀತಿ ಕೊಡುತ್ತಿದ್ದಾರೆ. ಆರಂಭದಲ್ಲಿ ಯುಟ್ಯೂಬ್ ನೋಡುವವರು ಇದ್ದರು ಆದರೆ ಈಗ ವಯಸ್ಸಾದವರ ಪ್ರೀತಿಸುತ್ತಿದ್ದಾರೆ. ಫಿನಾಲೆಯಲ್ಲಿ ನಾನು ಭಾಗಿಯಾದ ಕ್ಷಣ ಚೆನ್ನಾಗಿತ್ತು ಆ ಕ್ಷಣ ಎಲ್ಲರೂ ಗೆದ್ದಿದ್ದೀವಿ. ಎಷ್ಟೋ ಲಕ್ಷ ಜನರ ನಡುವೆ ನಮಗೆ ಅವಕಾಶ ಸಿಕ್ಕಿರುವುದೇ ಗ್ರೇಟ್. ಚಂದ್ರಪ್ರಭ ಅವರಿಗೆ ವಿನ್ನರ್ ಟ್ರೋಫಿ ಪಡೆಯುವ ಅರ್ಹತೆ ಇತ್ತು. ರಿಯಲ್ ಲೈಫ್‌ನಲ್ಲಿ ಚಂದ್ರಪ್ರಭ ತುಂಬಾ ಸಿಂಪಲ್ ಆದರೆ ಸ್ಕಿಟ್‌ನಲ್ಲಿ ಫುಲ್ ಡಬಲ್ ಮೀನಿಂಗ್ ಮಾತನಾಡುತ್ತಾರೆ. ಸ್ಕಿಟ್ ಮುನ್ನ ನಿರಂಜನ್ ಸರ್ ಧೈರ್ಯ ಕೊಡುತ್ತಾರೆ ಮುಗಿದ ಮೇಲೆ ಎಲ್ಲಿ ತಪ್ಪಾಗಿದೆ ಎಂದು ಹೇಳುತ್ತಾರೆ ಎಂದಿದ್ದಾರೆ ಧನರಾಜ್ 

ಗಿಚ್ಚಿ ಗಿಲಿಗಿಲಿ ಸೀಸನ್ 2 ನಂತರ ಎರಡು ಸಿನಿಮಾಗಳಲ್ಲಿ ನಟಿಸಿರುವೆ. ಒಂದರಲ್ಲಿ ಪ್ರಮುಖ ಪಾತ್ರವಾಗಿದೆ. ಇದಾದ ಮೇಲೆ ನನ್ನ ಯುಟ್ಯೂಬ್ ಚಾನೆಲ್ ಹೊಂದಿರುವೆ ಅದನ್ನು ನೋಡಿಕೊಳ್ಳುತ್ತಿರುವೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ವಿಡಿಯೋ ಎಡಿಟ್ ಮಾಡಲು ಶುರು ಮಾಡುತ್ತಿದ್ದೆ ಎಂದು ಹೇಳಿದ್ದಾರೆ ಧನರಾಜ್. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ