DKD ಸೆಮಿಫೈನಲ್ ಹಂಗಾಮ.. ಕುಣಿತದ ಕದನ. ಗಿಲ್ಲಿ ನಟನ ಮಸ್ತ್ ಕಾಮಿಡಿ.. ಗಗನ ಡ್ಯಾನ್ಸ್ ಮೋಡಿ.. ಈ ವಾರದ DKDಯಲ್ಲಿ ಭರ್ಜರಿ ಡ್ಯಾನ್ಸ್ ಧಮಾಕಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಸೆಮಿಫೈನಲ್ ನಡೀತಾ ಇದೆ. ಈ ಡ್ಯಾನ್ಸ್ ಕದನದಲ್ಲಿ ಗೆದ್ದು ಫೈನಲ್‌ಗೆ ಹೋಗಲು ಸಜ್ಜಾಗಿರೋ ಸ್ಪರ್ಧಿಗಳು ಒಂದಕ್ಕಿಂತ ಒಂದು ಮಸ್ತ್ ಪರ್ಪಾರ್ಮೆನ್ಸ್ ನೀಡಿದ್ದಾರೆ. ಗಿಲ್ಲಿಯ ಕಾಮಿಡಿಯಿಂದ ಶುರುವಾದ ಈ ವಾರದ DKD ಭರ್ಜರಿ ಡ್ಯಾನ್ಸ್ ಗಳಿಂದ ರಂಗೇರಿತು. ಬನ್ನಿ ಹಾಗಾದ್ರೆ DKD ಸ್ಪರ್ಧಿಗಳ ಪರ್ಫಾರ್ಮೆನ್ಸ್ ಹೇಗಿತ್ತು..? ಮತ್ತದಕ್ಕೆ ಜಡ್ಜಸ್ ಕೊಟ್ಟ ತೀರ್ಪು ಏನಿತ್ತು ಅನ್ನೋದನ್ನ ನೋಡೋಣ.
ಡಿಕೆಡಿಯಲ್ಲಿ ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ಕಂಠಿ-ಜಾಹ್ನವಿ ಜೋಡಿ.. ಒಂದಕ್ಕಿಂತ ಒಂದು ಅದ್ಭುತ ಪರ್ಫಾರ್ಮೆನ್ಸ್ ಕೊಟ್ಟುಕೊಂಡು ಬಂದಿರೋ ಈ ಜೋಡಿ ಈ ವಾರ ಸೆಮಿಫೈನಲ್ನಲ್ಲಿ ಕುಣಿತ ಅದ್ಭುತವಾಗಿತ್ತು. DKDಯ ಛೋಟಾ ಸ್ಪರ್ಧಿಗಳಾದ ಸುಮುಖ ಆಂಡ್ ಸಿಹಿ ಕೂಡ ವಾರ ವಾರವೂ ಅದ್ಭುತ ಪರ್ಫಾರ್ಮೆನ್ಸ್ ಕೊಡ್ತಾ ಬಂದಿದ್ದಾರೆ. ಈ ವಾರ ಅತಿಥಿಯಾಗಿ ಬಂದ ಜಸ್ಕರಣ್ ಸಿಂಗ್ ಎದುರು, ಅವರೇ ಹಾಡಿದ ದ್ವಾಪರ ಹಾಡಿಗೆ ನರ್ತಿಸಿದ ಸುಮುಖ್ & ಸಿಹಿ ಎಲ್ಲರಿಗೂ ಮೋಡಿ ಮಾಡಿದ್ರು.
'ಎಕ್ಸ್'ಗೆ ಎಕ್ಸ್ಪೆನ್ಸಿವ್ ಗಿಫ್ಟ್ ಕೊಟ್ಟಿದ್ರಂತೆ ಸಮಂತಾ;ಕಿಚ್ಚು ಹಚ್ಚಿದ ಸಮಂತಾ ಬೋಲ್ಡ್ ಸ್ಟೇಟ್ಮೆಂಟ್!
ಈ ವಾರದ ಡಿಕೆಡಿ ಶೋನಲ್ಲಿ ಎಲ್ಲವೂ ಒಂದಕ್ಕಿಂತ ಸಖತ್ ಪರ್ಫಾರ್ಮೆನ್ಸ್.. ಆದ್ರೆ ಕೊನೆಯಲ್ಲಿ ಶಶಾಂಕ್-ಪ್ರಿಯಾ ಕೊಟ್ಟ ಪರ್ಫಾರ್ಮೆನ್ಸ್ ಮಾತ್ರ ಅಮೋಘವಾಗಿತ್ತು. ಇನ್ನೂ ಅತಿಥಿಯಾಗಿ ಬಂದ ನಿಶಾ ಜೊತೆಗೆ ಗಿಲ್ಲಿ ಮಾಡಿದ ಕಾಮಿಡಿ ಕೂಡ ಎಲ್ಲರಿಗೂ ಮೋಡಿ ಮಾಡ್ತು. ತೀರ್ಪುಗಾರರ ಸ್ಥಾನದಲ್ಲಿ ಚಿನ್ನಿ ಮಾಸ್ಟರ್, ಡ್ರೀಮ್ ಗರ್ಲ್ ರಕ್ಷಿತಾ, ವಿಜಯ್ ರಾಘವೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇದ್ದಾರೆ. ಪ್ರಾಪಟಿ ಕಾಮಿಡಿ ಮಾಡುವ ಗಿಲ್ಲ ನಟನ ಪ್ರತಿಭೆಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಡ್ಯಾನ್ಸ್ ಮತ್ತು ಕಾಮಿಡಿ ಇರುವ ಈ ಶೋನ ಟಿಆರ್‌ಪಿ ಗಗನ ಮುಟ್ಟಿದೆ, ವೀಕೆಂಡ್ ಬಂದರೆ ಸಾಕು ಡಿಕೆಡಿ ಪ್ರೋಮೋ ಮತ್ತು ಶೋನ ಕರ್ನಾಟಕದ ಜನತೆ ತಪ್ಪದೆ ನೋಡುತ್ತಾರೆ.