ಬಿಗ್ ಬಾಸ್ ವಿನ್ನರ್ ಹಾಗೂ ಸ್ಯಾಂಡಲ್ವುಡ್ ನಟ ಶೈನ್ ಶೆಟ್ಟಿ ಈಗ ಏನು ಮಾಡ್ತಿದ್ದಾರೆ? ಬ್ಯುಸಿನೆಸ್, ಸಿನಿಮಾ ಇದ್ರಲ್ಲಿ ಯಾವುದು ಅವರ ಕೈ ಹಿಡಿದಿದೆ ಎಂಬೆಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ (Bigg Boss Kannada season 7 winner Shine Shetty) ಈಗೇನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡೋದಿದೆ. ಅದಕ್ಕೆಲ್ಲ ಶೈನ್ ಶೆಟ್ಟಿ ಉತ್ತರ ನೀಡಿದ್ದಾರೆ. ರ್ಯಾಪಿಡ್ ರಶ್ಮಿ (Rapid Rashmi) ಶೋನಲ್ಲಿ ಕಾಣಿಸಿಕೊಂಡಿದ್ದ ಶೈನ್ ಶೆಟ್ಟಿ, ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.
34ರಲ್ಲಿ ಎರಡಾದ್ರೂ ಇರ್ಬಾರದಾ? : ಶೈನ್ ಶೆಟ್ಟಿಗೆ ಇನ್ನೂ ಮದುವೆ ಆಗಿಲ್ಲ. ನೋಡೋಕೆ ಸ್ಮಾರ್ಟ್ ಆಗಿರುವ ಬುದ್ಧಿವಂತ ನಟ ಹಾಗೂ ಬ್ಯುಸಿನೆಸ್ ಮೆನ್ಗೆ ಯಾರೂ ಗರ್ಲ್ ಫ್ರೆಂಡ್ ಇಲ್ವಾ ಎಂಬ ಪ್ರಶ್ನೆ ಹುಡುಗಿಯರನ್ನು ಕಾಡುತ್ತದೆ. ರಶ್ಮಿ ಕೇಳಿದ ಒಂದು ಪ್ರಶ್ನೆಗೆ ಉತ್ತರ ನೀಡಿದ ಶೈನ್ ಶೆಟ್ಟಿ, 34ರಲ್ಲಿ ಎರಡಾದ್ರೂ ಇರ್ಬಾರದಾ ಎನ್ನುವ ಮೂಲಕ ಹಿಂಟ್ ನೀಡಿದ್ದಾರೆ. ನೀವು ಲವ್ ಲೆಟರ್ (Love Letter) ಬರೀತೀರಾ ಅಂತ ರಶ್ಮಿ ಕೇಳ್ದಾಗ, ಶೈನ್ ಶೆಟ್ಟಿ, ಅದನ್ನು ತೆಗೆದುಕೊಳ್ಳೋರು ಇದ್ದಾಗ ಬರೆಯುತ್ತಿದ್ದೆ ಎಂದಿದ್ದಾರೆ. ಈಗ ಬರೆಯುತ್ತಿಲ್ಲ ಯಾಕೆ ಅಂದ್ರೆ ತೆಗೆದುಕೊಳ್ಳೋರು ಇಲ್ಲ ಎಂದಿದ್ದಾರೆಯೇ ವಿನಃ, ಪ್ರೀತಿ ಮಾಡ್ತಿಲ್ಲ, ಪ್ರೇಮಿ ಇಲ್ಲ ಎಂದಿಲ್ಲ. ಇದನ್ನು ಕೇಳಿದ ಅಭಿಮಾನಿಗಳು, ಹುಡುಗಿ ಯಾರಿರಬಹುದು ಅಂತ ಗೆಸ್ ಮಾಡೋಕೆ ಶುರು ಮಾಡಿದ್ದಾರೆ.
ಮನೆಗೆ ಬಂದ ಮಗ ಧರ್ಮ ಕೀರ್ತಿರಾಜ್‌ಗೆ ಶಹಬ್ಬಾಸ್‌ಗಿರಿ ನೀಡಿದ ಕೀರ್ತಿರಾಜ್
ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿ ಮಾತು : ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಎದ್ದು ನಿಂತಿರುವ ಶೈನ್ ಶೆಟ್ಟಿ, ಬಿಗ್ ಬಾಸ್ ಗೆ ಧನ್ಯವಾದ ಹೇಳಿದ್ದಾರೆ. ಅಲ್ಲಿ ನಮಗೆ ಸಂಬಳ ಕೊಡ್ತಾರೆ. ನಮ್ಮ ಬಳಿ ಸಮಯ ಕೂಡ ಇರುತ್ತೆ. ಅದನ್ನು ನಾನು ಸದ್ಬಳಕೆ ಮಾಡ್ಕೊಂಡಿದ್ದೇನೆ. ನನ್ನ ಕೆಲಸ, ನನ್ನ ಬ್ಯುಸಿನೆಸ್, ನನ್ನ ಟ್ಯಾಲೆಂಟ್ ತೋರಿಸಿದ್ದೇನೆ. ಇದ್ರಿಂದ ನನಗೆ ಅನುಕೂಲವಾಗಿದೆ ಎನ್ನುವ ಮೂಲಕವೇ, ಸ್ಪರ್ಧಿಗಳು, ಬಿಗ್ ಬಾಸ್ ಮನೆಯನ್ನು ಹೇಗೆ ಬಳಸಿಕೊಳ್ಬೇಕು ಎಂಬುದನ್ನು ಶೈನ್ ಶೆಟ್ಟಿ ಹೇಳಿದ್ದಾರೆ.
ಸದ್ಯ ಏನ್ ಮಾಡ್ತಿದ್ದಾರೆ ಶೈನ್? : ತಮ್ಮ ಜೀವನದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಅವರು, ಈಗ ಹೊಸ ಕೆಲಸಕ್ಕೆ ಸಿದ್ಧವಾಗಿದ್ದಾರೆ. ಸೀರಿಯಲ್ ಬಿಟ್ಟಾಗ ಸಿನಿಮಾ ಕೈ ಹಿಡಿದಿರಲಿಲ್ಲ. ಮುಂದೆ ಬರುವ ಕಷ್ಟಗಳಿಗೆ ಸಿದ್ಧವಾಗಿಯೇ ಸೀರಿಯಲ್ ಬಿಟ್ಟಿದ್ದ ಶೈನ್ ಗೆ ಆರಂಭದಲ್ಲಿ ಸಿನಿಮಾ ಸಿಕ್ಕಿರಲಿಲ್ಲ. ನಾಳೆ, ನಾಡಿದ್ದು ಅಂತ ನಿರ್ಮಾಪಕರು ಮುಂದೂಡುತ್ತಿದ್ದ ಸಮಯದಲ್ಲಿ ಇದೆಲ್ಲ ಯಾಕೆ ಬೇಕಿತ್ತು ಎಂದಿದ್ದರು ಆಪ್ತರು. ಹುಡುಕಿದ್ರೆ ದೇವರೇ ಸಿಗ್ತಾರಂತೆ, ನನಗೆ ಕೆಲಸ ಸಿಗಲ್ವಾ ಎನ್ನುವ ಧೈರ್ಯದಲ್ಲೇ ಮುನ್ನುಗ್ಗಿದ್ದ ಶೈನ್ ಗೆ ತಳ್ಳುವ ಗಾಡಿ ಕೈ ಹಿಡಿದಿತ್ತು. ನಂತ್ರ ಬಿಗ್ ಬಾಸ್. ಸಣ್ಣ ತಳ್ಳುವ ಗಾಡಿಯಲ್ಲಿ ಶುರುವಾದ ಅವರ ಹೋಟೆಲ್ ಬ್ಯುಸಿನೆಸ್ (Hotel Business) ಈಗ ಗಲ್ಲಿ ಕಿಚನ್ ಗೆ ಬಂದು ನಿಂತಿದೆ. ಗಲ್ಲಿ ಕಿಚನ್ (Gully Kitchen) ಯಶಸ್ವಿಯಾಗಿ ನಡೆಯುತ್ತಿದ್ದು, ಶೈನ್ ಶೆಟ್ಟಿ, ಮೂರು ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಮಗನಿಗೆ 2 ತಿಂಗಳು ತುಂಬಿದ ಸಂಭ್ರಮದಲ್ಲಿ ಸ್ಪೆಷಲ್ ಫೋಟೊ ಹಂಚಿಕೊಂಡ ಕವಿತಾ ಗೌಡ -
ಉಡುಪಿಯ ಶೈನ್ ಶೆಟ್ಟಿ, ಮೀರಾ ಮಾಧವ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ಆಂಕರ್ ಆಗಿ ಕೆಲಸ ಶುರು ಮಾಡಿದ ಶೈನ್, ಕುಡ್ಲಾ ಕೆಫೆ ತುಳು ಸಿನಿಮಾದಲ್ಲಿ ನಟಿಸಿದ್ದರು. ಲಕ್ಷ್ಮಿ ಬಾರಮ್ಮ, ಅಸ್ತಿತ್ವ, ಜೀವನ ಯಜ್ಞ ಸೇರಿದಂತೆ ಅನೇಕ ಸೀರಿಯಲ್, ರಿಯಾಲಿಟಿ ಶೋ, ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಶೈನ್ ಶೆಟ್ಟಿ, ಬಿಗ್ ಬಾಸ್ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮರ್ಯಾದಾ ಪ್ರಶ್ನೆ, ನಿದ್ರಾದೇವಿ ಸೇರಿದಂತೆ ಸಿನಿಮಾದಲ್ಲಿ ಬ್ಯುಸಿ ಇರುವ ಅವರು ಡಿಫರೆಂಟ್ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ.