ʼನನಗೆ ರಾಜೇಶ್ ಕೃಷ್ಣನ್ ಮೇಲೆ ಲವ್ ಆಗಿದೆʼ ಎಂದು ರಿಯಾಲಿಟಿ ಶೋನಲ್ಲಿ ಹೇಳಿ ರಮೋಲ ಅವರು ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ.
‘ನನಗೆ ರಾಜೇಶ್ ಕೃಷ್ಣನ್ ಸರ್ ಮೇಲೆ ಲವ್ ಆಗಿದೆ’ ಎಂದು ʼಸೀತಾರಾಮʼ ಧಾರಾವಾಹಿ ನಟಿ ರಮೋಲ ಅವರು ʼಭರ್ಜರಿ ಬ್ಯಾಚುಲರ್ಸ್ʼ ಹಾಗೂ ʼಸರಿಗಮಪʼ ಶೋ ಮಹಾಸಂಗಮದಲ್ಲಿ ಹೇಳಿದ್ದಾರೆ. ಬುಲೆಟ್ ರಕ್ಷಕ್ ಅವರು ರಮೋಲ ಜೊತೆ ʼತುಂಟ ತುಂಟʼ ಹಾಡಿಗೆ ಡ್ಯಾನ್ಸ್ ಮಾಡಿದರು. ಆಗ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ರಾಜೇಶ್ ಅವರು, ರಮೋಲ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.
ದೊಡ್ಡ ತಾರಾಗಣ ಭಾಗಿ!
ʼಭರ್ಜರಿ ಬ್ಯಾಚುಲರ್ಸ್ʼ, ʼಸರಿಗಮಪʼ ಶೋ ಮಹಾಸಂಗಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ರಾಜೇಶ್ ಕೃಷ್ಣನ್, ವಿ ರವಿಚಂದ್ರನ್, ನಟಿ ರಚಿತಾ ರಾಮ್ ಮುಂತಾದವರು ಭಾಗಿಯಾಗಿದ್ದರು. ಆ ವೇಳೆ ರಮೋಲ ಅವರು “ರಾಜೇಶ್ ಕೃಷ್ಣನ್ ಮೇಲೆ ಲವ್ ಆಗಿದೆ” ಎಂದು ಹೇಳಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಏಂಜೆಲ್‌ಗಳ ಬಿಗಿದಪ್ಪಿದ ಕ್ರೇಜಿಸ್ಟಾರ್ ರವಿಚಂದ್ರನ್: ನಾಟಿ ರವಿಮಾಮ ಎಂದ ಫ್ಯಾನ್ಸ್
ರಮೋಲ ಬೆಲ್ಲಿ ಡ್ಯಾನ್ಸ್!
ರಮೋಲ ಅವರು ಬೆಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಡ್ಯಾನ್ಸ್‌ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು. ಅದಾದ ನಂತರ ರಮೋಲ ಹಾಗೂ ರಾಜೇಶ್ ಕೃಷ್ಣನ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ನು ರಚಿತಾ ರಾಮ್, ರಾಜೇಶ್ ಕೃಷ್ಣನ್ ಕೂಡ ಒಟ್ಟಿಗೆ ನೃತ್ಯ ಮಾಡಿದ್ದಾರೆ.
ಯಾರು ಯಾರಿದ್ದಾರೆ?
ಅಂದಹಾಗೆ ʼಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ರಕ್ಷಕ್ ಬುಲೆಟ್, ಅಮೃತಾ, ರಮೋಲ, ಸುಕೃತಾ ನಾಗ್, ಸುನೀಲ್, ಪವಿ ಪೂವಪ್ಪ, ವಿಜಯಲಕ್ಷ್ಮೀ ಮುಂತಾದವರು ಭಾಗಿಯಾಗಿದ್ದಾರೆ. ಒಂದು ಎಪಿಸೋಡ್‌ನಿಂದ ಇನ್ನೊಂದು ಎಪಿಸೋಡ್‌ಗೆ ಭರ್ಜರಿ ಟ್ವಿಸ್ಟ್ ಇರುವ, ವಿಶಿಷ್ಟವಾದ ಕಾನ್ಸೆಪ್ಟ್ ಇರುವ ಟಾಸ್ಕ್ ನೀಡಲಾಗುತ್ತಿದೆ. ಸದ್ಯ ಈ ಶೋನ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ʼಸೀತಾರಾಮʼ ನಟಿ ರಮೋಲ ತಿಂಗಳು ಖರ್ಚಿನ ದುಡ್ಡಲ್ಲಿ ಕಾರ್ ತಗೋಬಹುದು! ಹುಡುಗನ ಕಥೆ ಗೋವಿಂದ ಎಂದ ನೆಟ್ಟಿಗರು!
ʼಸೀತಾರಾಮʼ ನಟಿ ರಮೋಲ
ʼಸೀತಾರಾಮʼ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರದಲ್ಲಿ ರಮೋಲ ಕಾಣಿಸಿಕೊಂಡಿದ್ದರು. ಈ ಹಿಂದೆ ʼಕನ್ನಡತಿʼ ಧಾರಾವಾಹಿಯಲ್ಲಿ ಸಾನಿಯಾ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ʼಬಿಗ್ ಬಾಸ್ ಮಿನಿ ಸೀಸನ್ʼ ಶೋನಲ್ಲಿಯೂ ಅವರು ಭಾಗವಹಿಸಿದ್ದರು.
ವಿವಾದಿತ ಡೈಲಾಗ್‌ಗೆ ಕ್ಷಮೆ ಕೇಳಿದ್ದ ರಕ್ಷಕ್!
ಬುಲೆಟ್ ರಕ್ಷಕ್ ಅವರು ʼಬುಲ್ ಬುಲ್ʼ ಸಿನಿಮಾದ ವಿವಾದಿತ ದೃಶ್ಯವನ್ನು ಇಲ್ಲಿ ರೀ ಕ್ರಿಯೇಟ್ ಮಾಡಿದ್ದರು. ಇದು ಕೂಡ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟುಹಾಕಿತ್ತು. ಅದಾದ ಬಳಿಕ ರಕ್ಷಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು.