ಕೀರ್ತಿ - ಲಕ್ಷ್ಮಿ ರುದ್ರತಾಂಡವ, ಡಾನ್ಸ್ ಮೆಚ್ಚಿದ್ರೂ ವೀಕ್ಷಕರ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

Published : Apr 03, 2025, 12:34 PM ISTUpdated : Apr 03, 2025, 12:55 PM IST
ಕೀರ್ತಿ - ಲಕ್ಷ್ಮಿ ರುದ್ರತಾಂಡವ, ಡಾನ್ಸ್ ಮೆಚ್ಚಿದ್ರೂ ವೀಕ್ಷಕರ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

ಸಾರಾಂಶ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ವಾಹಿನಿಯು ಅಂತಿಮ ಅಧ್ಯಾಯದ ಪ್ರೋಮೋಗಳನ್ನು ಪ್ರಸಾರ ಮಾಡುತ್ತಿದೆ. ಕೀರ್ತಿ ಮತ್ತು ಲಕ್ಷ್ಮಿಯ ನೃತ್ಯ ಪ್ರಮುಖ ಆಕರ್ಷಣೆಯಾಗಿದೆ. ಧಾರಾವಾಹಿ ಮುಗಿಯುತ್ತಿರುವುದಕ್ಕೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀತಾಳ ಗಂಡ ಯಾರು, ಕೀರ್ತಿಯ ತಂದೆ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ. ಕೊನೆಯ ಎಪಿಸೋಡ್‌ನಲ್ಲಿ ಉತ್ತರ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

ಕಲರ್ಸ್ ಕನ್ನಡ (Colors Kannada) ದಲ್ಲಿ ಪ್ರಸಾರ ಆಗ್ತಿರುವ ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಶೀಘ್ರವೇ ಅಂತ್ಯಗೊಳ್ತಿದೆ. ಈಗಾಗಲೇ ವಾಹಿನಿ, ಅಂತಿಮ ಅಧ್ಯಾಯದ ಟ್ಯಾಗ್ ಲೈನ್ ಅಡಿಯಲ್ಲಿ ಸೀರಿಯಲ್ ಎಪಿಸೋಡ್ ಪ್ರಸಾರ ಮಾಡ್ತಿದೆ. ಕೊನೆಯ ಎಪಿಸೋಡ್ ಗಳು ಸಾಕಷ್ಟು ರೋಚಕವಾಗಿವೆ.  ಇಂದು ಲಕ್ಷ್ಮಿ ಹಾಗೂ ಕೀರ್ತಿಯ ಅಧ್ಬುತ ನೃತ್ಯ ನೋಡುವ ಅವಕಾಶ ವೀಕ್ಷಕರಿಗೆ ಸಿಗ್ತಿದೆ. ಕೀರ್ತಿ ಹಾಗೂ ಲಕ್ಷ್ಮಿ ರುದ್ರತಾಂಡವ ಮಾಡಿದ್ದು, ಎಪಿಸೋಡ್ ವೀಕ್ಷಣೆಗೆ ಅಭಿಮಾನಿಗಳು ಆಸಕ್ತಿ ತೋರಿದ್ದಾರೆ. ಆದ್ರೆ ಸೀರಿಯಲ್ ಮುಗಿತಿರೋದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ. ಅನೇಕ ಪ್ರಶ್ನೆ ಹಾಗೆ ಉಳಿದಿದ್ದು, ಅದಕ್ಕೆಲ್ಲ ಅಂತಿಮ ಎಪಿಸೋಡ್ ನಲ್ಲಿ ಉತ್ತರ ಸಿಗುತ್ತಾ ಕಾದು ನೋಡ್ಬೇಕು ಎಂದು ವೀಕ್ಷಕರು ಹೇಳಿದ್ದಾರೆ.

ಸದ್ಯ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಕಾವೇರಿ, ವೈಷ್ಣವ್ ಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾಳೆ. ಸಾಗರಿ ಜೊತೆ ವೈಷ್ಣವ್ ಡೇಟಿಂಗ್ ನಲ್ಲಿದ್ರೆ ಇತ್ತ ಚಿಂಗಾರಿ ಗಾಳಕ್ಕೆ ಬಿದ್ದಿದ್ದ ಲಕ್ಷ್ಮಿ ತಪ್ಪಿಸಿಕೊಂಡಿದ್ದಾಳೆ. ಲಕ್ಷ್ಮಿಯನ್ನು ರಕ್ಷಿಸಲು ಬಂದ ಕೀರ್ತಿ ಅಪಾಯದಲ್ಲಿದ್ದಾಳೆ. ಚಿಂಗಾರಿ ನೀಡಿದ ಏಟಿಗೆ ಕೀರ್ತಿ ತಲೆಗೆ ಗಾಯವಾಗಿದೆ. ರಕ್ತ ಸೋರುತ್ತಿರುವ ಕೀರ್ತಿಯನ್ನು ತಳ್ಳುವ ಗಾಡಿಯಲ್ಲಿ ಎಳೆದುಕೊಂಡು ಬಂದ ಲಕ್ಷ್ಮಿಗೆ ಕೀರ್ತಿ ರಕ್ಷಿಸಲು ಯಾವುದೇ ಆಸ್ಪತ್ರೆ ಕಾಣ್ತಿಲ್ಲ. ಎದುರಿಗೆ ಕಾಣುವ ದೇವಸ್ಥಾನಕ್ಕೆ ಬರುವ ಲಕ್ಷ್ಮಿ, ಎಲ್ಲ ಭಾರವನ್ನು ದೇವರ ಮೇಲೆ ಹಾಕಿ, ನೃತ್ಯ ಶುರು ಮಾಡ್ತಾಳೆ. ಲಕ್ಷ್ಮಿ ನೃತ್ಯದ ಮಧ್ಯೆ ಎಚ್ಚರಗೊಳ್ಳುವ ಕೀರ್ತಿ ಕೂಡ ಮೈಮರೆತು ನೃತ್ಯ ಮಾಡಿದ್ದಾಳೆ. 

ಸೈಕಲ್ ಏರಿದ ಭಾಗ್ಯಾ! ಕಾರ್ ಏನಾಯ್ತು? ಸುಷ್ಮಾಗೆ ಅವಮಾನ ಮಾಡ್ಬೇಡಿ ಎಂದ ವೀಕ್ಷಕರು

ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ, ಕೀರ್ತಿಗೆ ನೆನಪು ಮರುಕಳಿಸಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಇದನ್ನು ನೋಡಿದ ವೀಕ್ಷಕರು ಒಂದ್ಕಡೆ ಖುಷಿಯಾಗಿದ್ದಾರೆ. ಲಕ್ಷ್ಮಿ ಹಾಗೂ ಕೀರ್ತಿ ನೃತ್ಯ ನೋಡಲು ನಾವು ಕಾತುರರಾಗಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಅದೇ ವೇಳೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸುತ್ತಿರುವುದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ. ಸದ್ಯ ಕಲರ್ಸ್ ಕನ್ನಡದಲ್ಲಿ ಮುಗಿಸಬಹುದಾದದ ಅನೇಕ ಸೀರಿಯಲ್ ಇದೆ. ಆದ್ರೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಏಕೆ ಎಂದು ಫ್ಯಾನ್ಸ್ ಪ್ರಶ್ನೆ ಕೇಳಿದ್ದಾರೆ.

ವೀಕ್ಷಕರಿಗೆ ಸಿಗದ ಉತ್ತರ : ಸುಪ್ರೀತಾ ಗಂಡ ಯಾರು, ಕೀರ್ತಿ ಅಪ್ಪ ರಘುವೀರ್ ಯಾರು? ಇಬ್ಬರಿಗೂ ನಂಟಿದ್ಯಾ? ಸುಪ್ರೀತಾ ಹಿಂದಿನ ಕಥೆ ಏನು ಎಂಬುದನ್ನು ಈ ಸೀರಿಯಲ್ ನಲ್ಲಿ ತೋರಿಸಿಲ್ಲ. ಇಂಥ ಮಹತ್ವದ ವಿಷ್ಯ ಬಿಟ್ಟು, ಆ ಕಾವೇರಿ ಬಗ್ಗೆಯೇ ಕಥೆ ಹೆಣೆಯಲಾಗಿದೆ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೀರ್ತಿ ಹಾಗೂ ಲಕ್ಷ್ಮಿಯಂತಹ ಅಧ್ಬುತ ಕಲಾವಿದರು ಈ ಸೀರಿಯಲ್ ನಲ್ಲಿದ್ದಾರೆ. ಆದ್ರೆ ಕಾವೇರಿಯನ್ನೇ ಹೈಲೈಟ್ ಮಾಡಿದ್ದು ಏಕೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಕೀರ್ತಿ ಹಾಗೂ ಲಕ್ಷ್ಮಿಯನ್ನು ಮಿಸ್ ಮಾಡಿಕೊಳ್ತೇವೆ ಎಂದಿರುವ ವೀಕ್ಷಕರು, ವೈಷ್ಣವ್, ಲಕ್ಷ್ಮಿ ಹಾಗೂ ಕೀರ್ತಿ ಇಬ್ಬರನ್ನೂ ಮದುವೆ ಆಗಿ, ಇಬ್ಬರು ಹೆಂಡಿರ ಮುದ್ದಿನ ಗಂಡನಾಗ್ತಾನೆ ಎಂದು ಸೀರಿಯಲ್ ಕಥೆ ಹೇಳಿದ್ದಾರೆ.

ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ; ಫೋಟೋಗಳು ಇಲ್ಲಿವೆ!

ಲಕ್ಷ್ಮಿ ಬಾರಮ್ಮ ಸೀರಿಯಲ್ ಕೊನೆ ಎಪಿಸೋಡ್ ಯಾವಾಗ ಪ್ರಸಾರವಾಗಲಿದೆ ಎಂಬುದನ್ನು ವಾಹಿನಿ ಹೇಳಿಲ್ಲ. ಆದ್ರೆ ಅಂತಿಮ ಅಧ್ಯಾಯ, ತಪ್ಪದೇ ವೀಕ್ಷಣೆ ಮಾಡಿ ಎಂಬ ಪ್ರೋಮೋ ಹಾಕಿದೆ. ಅಂದ್ರೆ ಕೀರ್ತಿಗೆ ಹಳೆ ನೆನಪು ಬರ್ತಿದ್ದಂತೆ ಸೀರಿಯಲ್ ಮುಗಿಯುವ ಸಾಧ್ಯತೆ ಇದೆ. ಈ ಸೀರಿಯಲ್ ಹೀರೋಯಿನ್ಸ್ ಕರ್ಣ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಈ ಧಾರಾವಾಹಿಯನ್ನು ಮುಗಿಸಲಾಗ್ತಿದೆ ಎಂಬ ಮಾತಿದೆ. ಆದ್ರೆ ಈ ಯಾವ ಪ್ರಶ್ನೆಗೂ ಕಲರ್ಸ್ ಕನ್ನಡ ಉತ್ತರ ನೀಡಿಲ್ಲ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?