ಅಕ್ಕ-ತಂಗಿ ಜಗಳದಲ್ಲಿ 'ಅಮೃತಧಾರೆ'ಗೆ ಟಿಆರ್‌ಪಿ!

By Bhavani Bhat  |  First Published Aug 18, 2024, 2:26 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಅಕ್ಕ ಭೂಮಿಕಾ ಮತ್ತು ತಂಗಿ ಅಪೇಕ್ಷಾ ನಡುವೆ ಘರ್ಷಣೆ ಶುರುವಾಗಿದೆ. ಅತ್ತೆ ಶಕುಂತಳಾಳ ಕುತಂತ್ರದಿಂದಾಗಿ ಸಹೋದರಿಯರ ನಡುವೆ ಬಿರುಕು ಮೂಡಿದೆ. ಈ ಬೆಳವಣಿಗೆ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲವಾದರೂ, ಸೀರಿಯಲ್‌ನ ಟಿಆರ್‌ಪಿ ಹೆಚ್ಚಾಗುತ್ತಿದೆ.


ಈ ಸೀರಿಯಲ್ ಮಾಡೋರ ಗೋಳು ಒಂದೆರಡಲ್ಲ ನೋಡ್ರಿ. ವೀಕ್ಷಕರಾಗಿ ಕಾಮೆಂಟ್ ಮಾಡೋದು ಸುಲಭ. ಆದರೆ ಕೂತ್ಕೊಂಡು ಕಥೆ ಸೃಷ್ಟಿ ಮಾಡಿ ಅಂದ್ರೆ ಅದು ಅಷ್ಟು ಸುಲಭ ಅಲ್ಲ. ಎಲ್ಲ ಪಾತ್ರಗಳೂ ಖುಷ್ ಖುಷಿಯಾಗಿ, 'ನಮ್ಮ ಸಂಸಾರ, ಆನಂದ ಸಾಗರ' ಅಂತ ಹಾಡ್ಕೊಂಡಿದ್ರೆ ಸೀರಿಯಲ್ ನ ಯಾರು ನೋಡ್ತಾರೆ. ಅಲ್ಲೊಂದು ಕಾನ್‌ಫ್ಲಿಕ್ಟ್‌ ಬೇಕು, ಏನೇನೋ ಟ್ವಿಸ್ಟ್ ಬೇಕು, ಟರ್ನ್ಸ್‌ ಬೇಕು, ಅಳುವಿನ ನಡುವೆ ನಗು ತರ್ಬೇಕು ಏನೇನೆಲ್ಲ ಮಾಡ್ಬೇಕು. ಆಯ್ತು ಹೇಗೋ ತಲೆ ಓಡ್ಸಿ ಇದನ್ನೆಲ್ಲ ಮಾಡಿದ್ರು ಅಂತ ಇಟ್ಕೊಳ್ಳಿ, ವೀಕ್ಷಕರಿಂದ ಕಂಪ್ಲೇಂಟ್ ಬರೋದಕ್ಕೆ ಶುರು ಆಗುತ್ತೆ, ನೆಗೆಟಿವಿಟಿ ಜಾಸ್ತಿ ಇದೆ, ವಿಲನ್ ಕೆಟ್ಟೋಳಾದದ್ದು ಜಾಸ್ತಿಯಾಯ್ತು, ಹೀರೋಯಿನ್‌ಗೆ ಎಷ್ಟು ಕಷ್ಟ ಕೊಡ್ತೀರಿ ಇತ್ಯಾದಿ ಇತ್ಯಾದಿ. ಆದರೆ ಜೀ ಕನ್ನಡ ಸೀರಿಯಲ್‌ಗಳ ವಿಚಾರಕ್ಕೆ ಬಂದರೆ ಈ ವೀಕ್ಷಕರು ಬೇರೆಯದನ್ನೇ ಲೇಬಲ್‌ ಮಾಡಿ ಇದ್ದಾರೆ. ಮೊದಲನೇದು ಬರೀ ವಯಸ್ಸಾದವರ ಕಥೆನೇ ತರ್ತಾರೆ ಅಂತ. ಎರಡ್ನೇದು ಎಲ್ಲದರಲ್ಲೂ ಅಕ್ಕ ತಂಗಿ ಜಗಳವನ್ನೇ ತಂದಿಡ್ತೀರಿ ಅನ್ನೋದು.

ಸದ್ಯಕ್ಕೀಗ ಈ ಕಂಪ್ಲೇಟ್‌ಗೆ ಬಲಿಪಶು ಆಗ್ತಿರೋ ಸೀರಿಯಲ್‌ 'ಅಮೃತಧಾರೆ'. ಈ ಸೀರಿಯಲ್‌ನಲ್ಲಿ ಈಗ ಅಕ್ಕ ಭೂಮಿಕಾ ಮತ್ತು ತಂಗಿ ಅಪೇಕ್ಷಾ ನಡುವೆ ಘನಘೋರ ಯುದ್ಧ ನಡೆಯುವ ಮುನ್ಸೂಚನೆ ಸಿಕ್ಕಿದೆ. ಇದರ ಹಿಂದಿರೋದು ಅತ್ತೆ ಶಕುಂತಳಾಳ ಮಸಲತ್ತು. ಶುರುವಿನಿಂದಲೇ ಈ ಶಕುಂತಳಾ ತನ್ನ ಕುತಂತ್ರದಿಂದಲೇ ಬದುಕುತ್ತಾ ಬಂದವಳು. ಆದರೆ ಇಲ್ಲೀವರೆಗೆ ಅವಳ ಕುತಂತ್ರಗಳೆಲ್ಲ ವರ್ಕೌಟ್ ಆಗಿಲ್ಲ. ಭೂಮಿಕಾ ಮತ್ತು ಅವಳ ಗಂಡ ಗೌತಮ್ ದಿವಾನ್ ನಡುವಿನ ಅಂಡರ್‌ಸ್ಟಾಂಡಿಂಗ್‌, ಅವರಿಬ್ಬರ ಮೆಚ್ಯೂರಿಟಿ ಅವಳ ಕುತಂತ್ರ ವರ್ಕೌಟ್ ಆಗದಂಗೆ ಮಾಡಿತ್ತು.

Tap to resize

Latest Videos

 ಆನೆ ದೊಡ್ಡದಾ ಇರುವೆ ದೊಡ್ಡದಾ? ನಿಮ್ ಗೆಸ್ ತಪ್ಪು, ಕರೆಕ್ಟ್ ಉತ್ರ ಸೀತಾರಾಮದ ಪ್ರಿಯಾ ಕೊಡ್ತಾರೆ ನೋಡಿ!

ಆದರೆ ಈಗ ಇಲ್ಲಿರೋದು ಇನ್ನೂ ಚಿಕ್ಕ ಹುಡುಗಿ ಅಪೇಕ್ಷಾ. ಅವಳಿಗೆ ಭೂಮಿಕಾಳ ಮೆಚ್ಯೂರಿಟಿ ಇಲ್ಲ. ತನ್ನ ಲೈಫು ಚೆನ್ನಾಗಿರಬೇಕು ಅನ್ನೋದಿದೆಯೇ ಹೊರತು ಪ್ರತಿಯೊಬ್ಬರ ಶೂ ಒಳಗೆ ಕಾಲಿಟ್ಟು ಅವರನ್ನು ಅರ್ಥ ಮಾಡಿಕೊಳ್ಳೋ ಮನಸ್ಥಿತಿ ಇಲ್ಲ. ಸೋ ಇಲ್ಲೊಂದು ಸನ್ನಿವೇಶದಲ್ಲಿ ಅತ್ತೆ ಶಕುಂತಳಾ ಭೂಮಿಕಾಳನ್ನು ಸಿಕ್ಕಿಸಿ ಹಾಕೋದ್ರಲ್ಲಿ ಸಫಲಳಾಗಿದ್ದಾಳೆ. ಭೂಮಿಕಾಳ ಬಳಿ ಅಪೇಕ್ಷಾ ಮದುವೆಯ ಬಗ್ಗೆ ಕನ್ವಿನ್ಸ್ ಮಾಡಲು ಟ್ರೈ ಮಾಡೋದನ್ನೇ ತನ್ನ ಕುತಂತ್ರಿ ತಮ್ಮನ ಮೂಲಕ ರೆಕಾರ್ಡ್‌ ಮಾಡಿಸಿದ್ದಾಳೆ.

ಈ ವೀಡಿಯೋವನ್ನು ಅಪೇಕ್ಷಾಗೆ ತೋರಿಸಿ ಭೂಮಿಕಾಗೆ ಅಪೇಕ್ಷಾ ಆ ಮನೆಗೆ ಸೊಸೆಯಾಗಿ ಬರೋದು ಇಷ್ಟ ಇಲ್ಲ. ಅದಕ್ಕಾಗಿ ಅವಳು ಅವಳ ಹಾಗೂ ಪಾರ್ಥನ ಸಂಬಂಧವನ್ನು ಹಾಳು ಮಾಡಲು ಪ್ರಯತ್ನ ಮಾಡ್ತಿದ್ದಾಳೆ ಎಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಈ ವೀಡಿಯೋ ನೋಡಿ ಕೆಂಡಾಮಂಡಲ ಆಗಿರೋ ಅಪೇಕ್ಷ ನೇರ ಅಕ್ಕನಿಗೆ ಇದನ್ನು ತೋರಿಸಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಇವರಿಬ್ಬರ ಸಂಬಂಧದಲ್ಲಿ ಅಂತರ, ಗ್ಯಾಪ್ ಕ್ರಿಯೇಟ್ ಆಗಿದೆ.

 ಅಮೃತಧಾರೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದ ವೀಕ್ಷಕರೇ ಈಗ ಸೀರಿಯಲ್‌‌ ಮುಗಿಸ್ಬಿಡಿ, ಕೈಮುಗಿತಿನಿ… ಅಂತಿರೋದು ಯಾಕೆ?

ಈ ಡೆವಲಪ್‌ಮೆಂಟ್ ಈ ಸೀರಿಯಲ್ ವೀಕ್ಷಕರಿಗೆ ಇಷ್ಟ ಆಗಿಲ್ಲ. ಇಲ್ಲೀವರೆಗೆ ಈ ಸೀರಿಯಲ್ ಪಾಸಿಟಿವ್ ಆಗಿ ಬರ್ತಿತ್ತು. ಈಗ ಮತ್ತದೇ ಅಕ್ಕ ತಂಗಿ ನಡುವಿನ ಜಗಳದ ಕಥೆಯೇ ರಿಪೀಟ್ ಆಗ್ತಿದೆ. ಇದಕ್ಕೆ ವೀಕ್ಷಕರು ಯದ್ವಾ ತದ್ವಾ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಮತ್ತದೇ ಹಳೇ ಅಕ್ಕ ತಂಗಿ ಕಥೆಗೆ ಬರ್ತಿದ್ದಾರೆ. ನಾವು ಈ ಸೀರಿಯಲ್‌ಅನ್ನೇ ನೋಡಲ್ಲ ಅಂತ ಹಿಡಿಶಾಪ ಹಾಕ್ತಿದ್ದಾರೆ. ಹಾಗಂತ ಇದು ಸೀರಿಯಲ್ ಟಿಆರ್‌ಪಿ ಮೇಲೇನೂ ಪರಿಣಾಮ ಬೀರಿಲ್ಲ. ಬದಲಿಗೆ ಟಿಆರ್‌ಪಿ ಹೆಚ್ಚಾಗ್ತನೇ ಇದೆ. ಸೋ ಪ್ರೋಮೋ ನೋಡಿ ಕಾಮೆಂಟ್ ಹಾಕೋರು ಟಿವಿಲಿ ಈ ಸೀರಿಯಲ್ ನೋಡಲ್ಲ ಅಂತ ಸೀರಿಯಲ್ ಟೀಮ್ ಇವ್ರ ಮಾತನ್ನು ಸೀರಿಯಲ್ ಆಗಿ ತಂಗಂಡಂಗಿಲ್ಲ.

ಒಟ್ಟಾರೆ ಅಕ್ಕ ತಂಗಿ ಮಧ್ಯೆ ಬೆಂಕಿ ಹಚ್ಚಿ ಚಳಿ ಕಾಯಿಸ್ಕೊಳ್ತಿರೋ ಶಕುಂತಳಾ ವೀಕ್ಷಕರ ಕೈಗೆ ಸಿಗದಂಗೆ ಓಡಾಡೋದು ಬೆಟರ್‌.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!