ಬಿಲಿಯನೇರ್ ಗೌತಮ್ ದಿವಾನ್‌ಗೆ ಕತ್ತಲೆ ಅಂದರೆ ಭಯ. ಅದಕ್ಕೆ ಸರಿಯಾಗಿ ದೇವ್ರೇ ರಾತ್ರಿ ಇಡೀ ಕರೆಂಟು ಬರದಿರಲಪ್ಪಾ ಅಂತ ಭೂಮಿಕಾ ಬೇಡ್ಕೊಳ್ತಿದ್ದಾಳೆ. ಯಾಕಿರಬಹುದು?
ಅಮೃತಧಾರೆ ಸೀರಿಯಲ್‌ನಲ್ಲಿ ಚೋಟು ಮೆಣಸಿನ ಕಾಯಿ ಥರ ಇರೋ ಭೂಮಿ, ಭೂಮಿ ಥರ ಗುಂಡಗಿರೋ ಡುಮ್ಮ ಸಾರ್ ಅರ್ಥಾತ್ ಗೌತಮ್ ದಿವಾನ್ ಅನಿವಾರ್ಯಕ್ಕೆ ಬಿದ್ದು ಮದುವೆ ಆಗಿದ್ದಾರೆ. ಇಬ್ಬರ ನಡುವೆ ಜಗಳ, ಕಿತಾಪತಿಗಳ ಬಳಿಕ ನಿಧಾನಕ್ಕೆ ರೊಮ್ಯಾನ್ಸ್ ಶುರುವಾಗಿದೆ. ಕತ್ತಲೆ ಕಂಡ್ರೆ ಭಯ ಪಡೋ ಗೌತಮ್‌ಗೆ ಕತ್ತಲಲ್ಲೇ ಪ್ರೇಮ ಪಾಠ ಮಾಡೋದಕ್ಕೆ ಹೊರಟಿದ್ದಾಳೆ ಭೂಮಿಕಾ. ಇದೀಗ ಡುಮ್ಮ ಸಾರ್‌ನ ದೇವ್ರೇ ಕಾಪಾಡ್ಬೇಕು ಅಂತಿದ್ದಾರೆ ಈ ಸೀರಿಯಲ್ ಫ್ಯಾನ್ಸ್.
ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದುರುತ್ತೆ. ವಾರದ ದಿನಗಳಲ್ಲಿ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಅಮೃತಧಾರೆ ಎನ್ನುವ ಹೊಸ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗ್ತಿದ್ದು, ಜನರಿಗೆ ಇಷ್ಟ ಆಗಿದೆ. ಅಮೃತಧಾರೆ ಧಾರಾವಾಹಿಗೆ ನಟಿಯಾಗಿ ಛಾಯಾಸಿಂಗ್ ಕಾಣಿಸಿಕೊಂಡಿದ್ದಾರೆ. ನಟರಾಗಿ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ನಾಯಕನ ಹೆಸರು ಗೌತಮ್ ದಿವಾನ್. ದೊಡ್ಡ ಬ್ಯುಸಿನೆಸ್ ಮ್ಯಾನ್. 45 ವರ್ಷ ಆಗಿದೆ. ನಾಯಕಿ ಹೆಸರು ಭೂಮಿಕಾ ಸದಾಶಿವ, 35 ವರ್ಷ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಸಾರಾ ಅಣ್ಣಯ್ಯ ಮಹಿಮಾ ಪಾತ್ರ ಮಾಡ್ತಿದ್ದಾರೆ. ಇವರು ಗೌತಮ್ ತಂಗಿ. ಮಹಿಮಾ ಭೂಮಿಕಾ ತಮ್ಮ ಜೀವನನ್ನು ಪ್ರೀತಿ ಮಾಡ್ತಾ ಗರ್ಭಿಣಿ ಆಗಿ ಅನಿವಾರ್ಯವಾಗಿ ಮದುವೆ ಆಗ್ತಾಳೆ. ಜೀವ ಹಾಗೂ ಮಹಿಮಾಗೋಸ್ಕರ ಗೌತಮ್ ಹಾಗೂ ಭೂಮಿಕಾ ಮದುವೆ ಆಗಿದ್ದಾರೆ.
ರಾಮನ ಮೇಲೆ ಸೀತಾಳ ಮನದಲ್ಲಿ ಪ್ರೀತಿ ಮೂಡಿಸುವಲ್ಲಿ ಸಕ್ಸಸ್ ಆದ್ರಾ ಕ್ರೇಜಿಸ್ಟಾರ್ ರವಿಚಂದ್ರನ್?
ಇದೊಂದು ಅನಿವಾರ್ಯಕ್ಕೆ ಬಿದ್ದು ಆದ ಮದುವೆ ಅನ್ನೋದು ಗೌತಮ್ ಮನಸ್ಸಲ್ಲಿ ಶುರು ಶುರುವಿಗೆ ಇತ್ತು. ಆದರೆ ಆತನಿಗೆ ಬರಬರುತ್ತಾ ಭೂಮಿಕಾಳ ನಿಜ ಸ್ವರೂಪ ತಿಳಿಯುತ್ತಿದೆ. ತಾನು ಕೈ ಹಿಡಿದಿರುವ ಹುಡುಗಿ ಎಂಥಾ ಸೆನ್ಸಿಟಿವ್ (Sensitive) ಅನ್ನೋದು ಅರಿವಾಗಿದೆ. ಒಳಗೊಳಗೇ ಆಕೆಯ ಬಗೆಗೆ ವಿಶೇಷ ಭಾವನೆ (Special Feeling) ಹುಟ್ಟಿದರೂ ಅದನ್ನು ಗೌತಮ್‌ಗೆ ತೋರಿಸಿಕೊಳ್ಳಲಾಗುತ್ತಿಲ್ಲ. ಆದರೆ ಭೂಮಿಗೆ ತಾನು ಹಂಬಲಿಸುತ್ತಿದ್ದ ವ್ಯಕ್ತಿ ಗೌತಮ್ ದಿವಾನ್ ಎಂಬುದು ಮನವರಿಕೆ ಆಗಿದೆ. ಬಹಳ ಹಿಂದೆ ಭೂಮಿಕಾ ವಾಶ್ ರೂಮ್‌ನಲ್ಲಿ ಅಳುತ್ತಿದ್ದಾಗ ಬಾಗಿಲ ಹೊರಗೆ ನಿಂತು ಸಂತೈಸುವ ಮಾತನ್ನು ವ್ಯಕ್ತಿಯೊಬ್ಬ ಹೇಳಿದ್ದ. ಅದು ಭೂಮಿಕಾಗಳ ಮನಸ್ಸು ಗೆದ್ದಿತ್ತು. ಆ ವ್ಯಕ್ತಿಗಾಗಿ ಅವಳು ಹಂಬಲಿಸುತ್ತಿದ್ದಳು. ಆದರೆ ಒಂದು ಸನ್ನಿವೇಶದಲ್ಲಿ ಗೌತಮ್ ದಿವಾನ್ ಆ ವ್ಯಕ್ತಿ ಅಂತ ತಿಳಿದು ತಾನು ಒಳಗೊಳಗೇ ಮೆಚ್ಚಿಕೊಂಡ ವ್ಯಕ್ತಿಯೇ ಲೈಪ್ ಪಾರ್ಟನರ್ (Life Partner) ಆಗಿ ಸಿಕ್ಕಿದ್ದಾರೆ ಅನ್ನೋದು ಭೂಮಿಗೆ ಗೊತ್ತಾಗಿದೆ. ಆ ಬಳಿಕ ಅವಳು ನಿಜಕ್ಕೂ ಗೌತಮ್‌ನನ್ನು ಪ್ರೇಮಿಸುತ್ತಿದ್ದಾಳೆ.
ಯಾವ್ಯಾವುದೋ ವಿಚಾರಕ್ಕೆ ಗೌತಮ್ ಹಾಗೂ ಭೂಮಿ ನಡುವೆ ಆಪ್ತ ಸನ್ನಿವೇಶ ಹುಟ್ಟಿಕೊಳ್ಳುತ್ತಿದೆ. ಅದರಲ್ಲೊಂದು ಕರೆಂಟ್ ಹೋಗೋದು. ಗೌತಮ್‌ಗೆ ಕತ್ತಲೆ ಅಂದರೆ ವಿಪರೀತ ಭಯ. ಆತ ಕರೆಂಟ್ ಹೋದರೆ ಜೀವ ಕೈಯಲ್ಲಿ ಹಿಡಿದು ಕೊಂಡಿರ್ತಾನೆ. ಈ ನಡುವೆ ಮನೆಯಲ್ಲಿ ಕರೆಂಟ್ ಹೋಗಿದೆ. ಅಂಥಾ ಬಿಲಿಯನೇರ್ ಮನೇಲೂ ಕರೆಂಟ್ ಹೋಗುತ್ತಾ? ಯುಪಿಎಸ್ ಇಲ್ವಾ ಅನ್ನೋ ವೀಕ್ಷಕರ ಪ್ರಶ್ನೆಗೆಲ್ಲ ಸೀರಿಯಲ್ ಟೀಮ್ ಬಳಿ ಉತ್ತರ ಇಲ್ಲ. ಆದರೆ ಈ ಕ್ಯೂಟ್ ಜೋಡಿಯ ರೊಮ್ಯಾಂಟಿಕ್ ಸೀನ್‌ಗಳನ್ನಂತೂ (Romantic Scene) ಈ ಸೀರಿಯಲ್ ನೋಡುವವರು ಇಷ್ಟ ಪಟ್ಟಿದ್ದಾರೆ. ಈ ಕೈಕೊಟ್ಟ ಕರೆಂಟ್ ದೆಸೆಯಿಂದ ಕೆಳಗೆ ಮಲಗುತ್ತಿದ್ದ ಭೂಮಿ ಡುಮ್ಮ ಸಾರ್ ಪಲ್ಲಂಗ ಏರಿದ್ದಾಳೆ. ಡುಮ್ಮ ಸಾರ್ ಮತ್ತು ಭೂಮಿ ಕೈ ಕೈ ಹಿಡಿದು ಸ್ವೀಟ್ ಡ್ರೀಮ್ಸ್ (Sweet Dreams) ಅಂತ ವಿಶ್ ಮಾಡ್ಕೊಂಡಿದ್ದಾರೆ. ಮುಂದೆ ರಿಯಲ್‌ನಲ್ಲಿ ಏನಾಗಬಹುದು, ಈ ಜೋಡಿಗೆ ಎಂಥಾ ಸಿಹಿ ಕನಸು ಬೀಳಬಹುದು ಎಂಬ ಕನವರಿಕೆಯಲ್ಲಿ ವೀಕ್ಷಕರಿದ್ದಾರೆ.
ಕಪ್ ಗೆಲ್ಲದ ಡ್ರೋನ್ ಪ್ರತಾಪ್: ಅರ್ಧ ಮೀಸೆ, ಅರ್ಧ ಗಡ್ಡ ಬೋಳಿಸಿದ ಅಭಿಮಾನಿ