
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ಆಫೀಸ್‌ನಲ್ಲಿ ಗೌತಮ್ ತಲೆ ಸುತ್ತಿ ಬಿದ್ದಿದ್ದಾನೆ. ಇದನ್ನು ನೋಡಿ ಆನಂದ್ ಚಿಂತಾಕ್ರಾಂತನಾಗಿದ್ದಾನೆ. ಈ ವಿಷಯವನ್ನು ಅವನು ಭೂಮಿಕಾಗೂ ಕೂಡ ತಿಳಿಸಿದ್ದಾನೆ. ಭೂಮಿಕಾ ಕೂಡ ಪತಿಯ ಆರೋಗ್ಯಕ್ಕೆ ಏನಾದರೂ ಆಗಿರಬಹುದಾ ಎಂದು ಅವಳು ಆಲೋಚನೆ ಮಾಡಿದ್ದಾಳೆ.
ಅಮೃತಧಾರೆ ಧಾರಾವಾಹಿಯ 1000 ಎಪಿಸೋಡ್ ಪ್ರಸಾರ ಆಗಿದೆ. ಜಗದ್ಧಾತ್ರಿ ಧಾರಾವಾಹಿ ಆರಂಭ ಆಗಲಿದ್ದು, ಈ ಸೀರಿಯಲ್ ಜಾಗಕ್ಕಾಗಿ ಇನ್ನೊಂದು ಧಾರಾವಾಹಿ ಜಾಗ ಮಾಡಿಕೊಡಬೇಕಿದೆ. ಹೀಗಾಗಿ ಅಮೃತಧಾರೆ ಸೀರಿಯಲ್ ಅಂತ್ಯ ಆಗಬಹುದಾ ಎಂಬ ಪ್ರಶ್ನೆ ಎದ್ದಿದೆ. ಗೌತಮ್‌ಗೆ ಏನಾದರೂ ಮಾರಣಾಂತಿಕ ಕಾಯಿಲೆ ಬಂದು ಅವನು, ಸಾಯಬಹುದಾ? ಅತವಾ ಇನ್ನಾವುದೋ ಕಾಯಿಲೆ ವಿರುದ್ಧ ಹೋರಾಟ ಮಾಡಬಹುದಾ ಎಂಬ ಪ್ರಶ್ನೆ ಕಾಡ್ತಿದೆ.
ಎಲ್ಲ ಚೆನ್ನಾಗಿರುವಾಗ ಗೌತಮ್‌ಗೆ ಅನಾರೋಗ್ಯ ಎಂದು ಯಾಕೆ ಸೇರಿಸಿದರು ಎನ್ನೋದು ಮಾತ್ರ ಆಶ್ಚರ್ಯದಿಂದ ಕೂಡಿದೆ. ಒಟ್ಟಿನಲ್ಲಿ ಈ ಸೀರಿಯಲ್ ಅಂತ್ಯಕ್ಕೆ ಬಂದಿದೆಯಾ? ಹೀಗಾಗಿ ಈ ರೀತಿ ಟ್ವಿಸ್ಟ್ ಕೊಡ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಡೈರಿಯನ್ನು ಗೌತಮ್ ಓದಿದ್ದಾನೆ, ಇದನ್ನು ಪುಸ್ತಕ ರೂಪದಲ್ಲಿ ಇಳಿಸಿದರೆ ಚೆಂದ ಎಂದು ಗೌತಮ್ ಯೋಚನೆ ಮಾಡಿದ್ದಾನೆ. ಹೀಗಾಗಿ ಅವನು ಪತ್ನಿಗೆ ಸರ್ಪ್ರೈಸ್ ನೀಡಲು ತಯಾರಿ ಮಾಡಿಕೊಂಡಿದ್ದಾನೆ. ಒಟ್ಟಿನಲ್ಲಿ ಎಲ್ಲ ತಯಾರಿ ಕೂಡ ಆಗುತ್ತಿದೆ.
ಇನ್ನೊಂದು ಕಡೆ ಶಕುಂತಲಾ, ಜಯದೇವ್ ಇಬ್ಬರೂ ಒಂದಾಗಿದ್ದಾರೆ. ಗೌತಮ್ ಒಳ್ಳೆಯತನ ಶಕುಂತಲಾಗೆ ಅರ್ಥ ಆಗುತ್ತಿಲ್ಲ. ಜಯದೇವ್ ಮಾತ್ರ ಅವನ ಬುದ್ಧಿ ಬಿಡಲ್ಲ. ಒಟ್ಟಿನಲ್ಲಿ ಇವರಿಬ್ಬರು ಸೇರಿಕೊಂಡು ಗೌತಮ್‌ಗೆ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.