Shabari Movie: ಕನ್ನಡದ ಬೆಳ್ಳಿತೆರೆ ಮೇಲೆ ಶಬರಿ ಆದ Raani Kannada Serial ಬಾಲನಟಿ ಧನ್ವಿ!

Published : Jul 04, 2026, 02:50 PM IST
Shabari Movie

ಸಾರಾಂಶ

Shabari Movie: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಾಲನಟಿ ಈಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಶಬರಿ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದು, ಟೀಸರ್‌ ರಿಲೀಸ್‌ ಆಗಿದೆ. 

ಒರಟ ಶ್ರೀ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಶಬರಿ' ಟೀಸರ್‌ ( Shabari Movie ) ರಿಲೀಸ್‌ ಆಗಿದೆ. `ಒರಟ', `ಕೋರ'ದಂಥ ಸಿನಿಮಾ ನಿರ್ದೇಶಕರೂ ಆಗಿದ್ದರು. ಲಹರಿ ವೇಲು ಈ ಟೀಸರ್‌ ರಿಲೀಸ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಾಣಿ ಧಾರಾವಾಹಿ ಖ್ಯಾತಿಯ ಬಾಲನಟಿ ಅಭಿನಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಭಾಗಿ

ಈ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು, ರಾಷ್ಟ್ರ ಪ್ರಶಸ್ತಿ ವಿಜೇತ ತಲೆದಂಡ ಸಿನಿಮಾ ನಿರ್ದೇಶಕ ಪ್ರವೀಣ್ ಕೃಪಾಕರ್, ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಕೂಡ ಭಾಗವಹಿಸಿದ್ದರು.

ಲಹರಿ ವೇಲು ಮಾತನಾಡಿ, 'ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿದ್ದಾರೆ. ತುಂಬ ಚೆನ್ನಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳೂ ಚೆನ್ನಾಗಿವೆ” ಎಂದಿದ್ದಾರೆ. ಅಂದಹಾಗೆ ನಿರ್ದೇಶಕ ಒರಟ ಶ್ರೀ ಆರಂಭದಲ್ಲಿಯೇ ಮಾಡಿಕೊಂಡ ಬಜೆಟ್‌ಗೆ ತಕ್ಕಂತೆ ಸಿನಿಮಾ ಮಾಡಿ ಮುಗಿಸಿದ್ದಾರೆ.

ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ?

ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರು ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಎ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ನಾಯಕ ನಟ ಸಮರ್ಥ್, ನಾಯಕಿ ಕೃತಿಕಾ ಗೌಡ, ರಾಣಿ ಸೀರಿಯಲ್ ಖ್ಯಾತಿ ಬಾಲನಟಿ ಧನ್ವಿ, ನೀನಾಸಂ ಅಶ್ವತ್, ಒರಟ ಶ್ರೀ, ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಒಂದು ಜೀಪು, ಪುಟ್ಟ ಹುಡುಗಿ ಜೊತೆಗೆ ಕೆಲವು ಅಂಶಗಳನ್ನು ಪ್ರೇಕ್ಷಕರೆದುರು ತೆರೆದಿಟ್ಟು, ನಿಜವಾದ ಶಬರಿ ಯಾರೆಂಬ ಕುತೂಹಲವನ್ನು ಚಿತ್ರತಂಡ ಕಾಯ್ದಿಟ್ಟುಕೊಂಡಿದೆ. ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿದ್ದು, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದೆ.

ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ರಾಣಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಧನ್ವಿ ಅವರೀಗ ಸಿನಿಮಾದಲ್ಲಿ ಕೂಡ ಸಖತ್‌ ಆಗಿ ನಟಿಸಿದ್ದಾರೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ಆಂಟಿ ಊಟ ಮಾಡೋದ್​ ಬಿಟ್ಟು ನನ್ನನ್ನೇ ಗುರಾಯಿಸ್ತಾ ಇದ್ರು: ಶಾಕಿಂಗ್​ ಘಟನೆ ನೆನೆದ Bhagyalakshmi ತನ್ವಿ
'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra