ಇಬ್ಬರಿಗಾಗಿ ಇಡೀ ಊರಿನವರಿಗೆಲ್ಲಾ ಉಚಿತ ಪೆಟ್ರೋಲ್ ಹಂಚಿದ ಯುಟ್ಯೂಬರ್ ಹರ್ಷ!

By Suvarna News  |  First Published Mar 13, 2022, 11:24 AM IST

ಫಾಲೋವರ್ಸ್‌ ಜಗಳ ನೋಡಲಾಗದೆ ಫ್ರೀ ಪೆಟ್ರೋಲ್ ಕೊಡಿಸಿದ ಯುಟ್ಯೂಬರ್ ಹರ್ಷ. ಬಂದವರಿಗೆಲ್ಲಾ ದುಬಾರಿ ಗಿಫ್ಟ್‌ ಫ್ರೀ....


ಇದು ಡಿಜಿಟಲ್ ದುನಿಯಾ. ನಿಮ್ಮ ಬಳಿ ಸೋಷಿಯಲ್ ಮೀಡಿಯಾ ಅಕೌಂಟ್‌ ಇಲ್ಲ ಅಂದ್ರೆ ನೀವು ಈ ಭೂಮಿಗೆ ಸೇರಿದವರಲ್ಲ ಅನ್ನುವ ರೀತಿಯಲ್ಲಿ ನಿಮ್ಮ ಅಕ್ಕಪಕ್ಕದವರು ವರ್ತಿಸುವ ಸಾಧ್ಯತೆಗಳು ಹೆಚ್ಚಿದೆ. ಒಂದೊಂದು ಜನರೇಷನ್‌ವರಿಗೆ ಒಂದೊಂದು ಇಷ್ಟವಾಗುತ್ತದೆ ಆದರೆ ಕೆಲವು ವರ್ಷಗಳಿಂದ ಯುಟ್ಯೂಬರ್‌ಗಳ ಹಾವಳಿ ಹೆಚ್ಚಾಗಿದೆ. ಡಿಫರೆಂಟ್ ವಿತ್ ಕ್ರಿಯೇಟಿವಿಟಿ ವಿಡಿಯೋಗಳನ್ನು ಮಾಡಿ ಸಬ್‌ಸ್ಕ್ರೈಬರ್‌ಗಳನ್ನು ಹೆಚ್ಚು ಮಾಡಿಕೊಳ್ಳುವುದರಲ್ಲಿ ಅವರ ಗಮನವಿರುತ್ತದೆ. ಇದೇ ಮೋಡ್‌ನಲ್ಲಿದ್ದ ಹರ್ಷ ತಮ್ಮ ಇಬ್ಬರು ಫಾಲೋವರ್ಸ್‌ಗಾಗಿ ಇಡೀ ಊರಿಗೆ ಉಚಿತ ಪೆಟ್ರೋಲ್‌ ನೀಡಿ ಸಖತ್ ಫೇಮಸ್ ಆಗಿದ್ದಾರೆ. 

ಯುಟ್ಯೂಬರ್ ಹರ್ಷ ಮೂರ್ನಾಲ್ಕು ಭಾಷೆಗಳಲ್ಲಿ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ. ಹೀಗೆ ದಾರಿಯಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ಇಬ್ಬರು ಜಗಳವಾಡುವುದನ್ನು ನೋಡಿದ್ದಾರೆ. ಏಕೆಂದು ಪ್ರಶ್ನೆ ಮಾಡಲು ಹರ್ಷ ಕಾರು ನಿಲ್ಲಿಸಿದಾ ಅವರ ಸಬ್‌ಸ್ಕ್ರೈಬರ್‌ ಎಂದು ಪರಿಚಯವಾಗುತ್ತದೆ. ಇಬ್ಬರು ಪೆಟ್ರೋಲ್ ಹಣಕ್ಕಾಗಿ ಸಣ್ಣ ಜಗಳವನ್ನು ದೊಡ್ಡ ಜಗಳ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಯ್ಯೋ ನನ್ನ ಫಾಲೋವರ್ಸ್ ಒಂದು ಲೀಟರ್ ಪೆಟ್ರೋಲ್ ಹಣಕ್ಕೆ ಇಷ್ಟೊಂದು ದೊಡ್ಡ ಜಗಳ ಮಾಡುತ್ತಿದ್ದಾರೆ ಎಂದು ಬೇಸರ ಮಾಡಿಕೊಂಡು ಒಂದು ಪ್ಲ್ಯಾನ್ ಮಾಡುತ್ತಾರೆ. 

ಯಾಕೆ ಸಾವಿರ ಪದಕ್ಕೆ K ಎಂದು ಬಳಸ್ತಾರೆ ಗೊತ್ತಾ?

Tap to resize

Latest Videos

ಹರ್ಷ ಜಗಳ ನಡೆಯುತ್ತಿದ್ದ ಸ್ಥಳದ ಸುತ್ತಮುತ್ತವಿದ್ದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಮಾತನಾಡಿದ್ದಾರೆ. ಯಾರು ಆಫರ್‌ ಕೊಡುವುದಕ್ಕೆ ಒಪ್ಪಿಕೊಳ್ಳುತ್ತಾರೆ ಇಲ್ಲವಾದರೆ ಒಂದು ದಿನಕ್ಕೆ ಬಾಡಿಗೆ ಕೊಡುತ್ತಾರೆಂದು ವಿಚಾರಿಸಿದ್ದಾರೆ. ಜಗಳ ನಡೆದ ಸ್ಥಳಕ್ಕೆ ತುಂಬಾ ಹತ್ತಿರವಾದ ಪೆಟ್ರೋಲ್‌ ಬಂಕ್‌ನ ಒಂದು ದಿನಕ್ಕೆ ಬಾಡಿಗೆ ತೆಗೆದುಕೊಂಡು ಅಲ್ಲಿಗೆ ಬಂದ ತಮ್ಮ ಸಬ್‌ಸ್ಕ್ರೈಬರ್ಸ್‌ಗೆ ಉಚಿತ ಪೆಟ್ರೋಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಫುಲ್ ಟ್ಯಾಂಕ್ ಮಾಡಲಾಗುತ್ತಿತ್ತು ಆದರೆ ಜನರು ಹೆಚ್ಚಾದ ಕಾರಣ ಮಿತವಾಗಿ ಹಾಕಿದ್ದಾರೆ.

ಬಂಕ್‌ನಲ್ಲಿ ಕ್ರೌಡ್‌ ಹೆಚ್ಚಾದ ಕಾರಣ ಒಂದು ಗಂಟೆ ಹಾಕುವುದು ಮತ್ತೊಂದು ಗಂಟೆ ಬ್ರೇಕ್ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ವಿವಿಧ ಗೇಮ್‌ಗಳನ್ನು ಆಟವಾಡಿಸಿ ಅಲ್ಲಿದ್ದವರಿಗೆ ದುಬಾರಿ ಗಿಫ್ಟ್‌ಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ತಮ್ಮ ಯುಟ್ಯೂಬ್‌ ಸಬ್‌ಸ್ಕ್ರೈಬರ್‌ಗಳು 1 ಲಕ್ಷ ಹೆಚ್ಚಾಗಿದ್ದಾರೆ. ಸಬ್‌ಸ್ಕ್ರೈಬರ್‌ಗಳು ತಮ್ಮ ಎರಡೂ ಕೈಯಿಂದ ಎಷ್ಟು ಹಣ ಬಾಚಬಹುದೊ ಅದಷ್ಟು ಹಣವನ್ನು ಹರ್ಷ ಹಲವರಿಗೆ ನೀಡಿದ್ದಾರೆ. ಇದೆಲ್ಲಾ ನಡೆದು ಸಂಜೆ ಆಗಿದ್ದು ಆಗ ಆ ಇಬ್ಬರು ಹುಡುಗರಿಗೆ ತಮ್ಮಿಂದ ಎಲ್ಲರಿಗೂ ಫ್ರೀ ಪೆಟ್ರೋಲ್ ಕೊಡುತ್ತಿರುವ ವಿಚಾರ ತಿಳಿದು ಬಂಕ್ ಬಳಿ ಆಗಮಿಸಿದ್ದಾರೆ.

Rashmika Mandanna: ಯೂಟ್ಯೂಬ್​ ಚಾನೆಲ್ ಆರಂಭಿಸಿದ ಕೊಡಗಿನ ಕುವರಿ ರಶ್ಮಿಕಾ

ಆ ಇಬ್ಬರು ಹುಡುಗರ ಜೊತೆ ಮಾತನಾಡಿದ ಬಳಿಕ ಹರ್ಷ ಅವರಿಗೆ ದುಬಾರಿ ಗಿಫ್ಟ್‌ ಕೊಟ್ಟು 5 ಸ್ಟಾರ್ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದಾರೆ. ಮಾತುಕತೆ ನಡೆಯುತ್ತಿದ್ದ ವೇಳೆ ಇಬ್ಬರು ಮತ್ತೆ ಜಗಳ ಆಡಬಾರದು ಎಂದು ಪೆಟ್ರೋಲ್ ರಹಿತ ವಿದ್ಯುತ್ ಚಾಲಿತ ಬೈಕ್‌ನ ಗಿಫ್ಟ್‌ ಆಗಿ ನೀಡಿದ್ದಾರೆ.  ಈ ಸಂಪೂರ್ಣ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಹರ್ಷ ಪ್ರತಿಯೊಂದು ವಿಡಿಯೋ ವಿಭಿನ್ನವಾಗಿರುತ್ತದೆ. 20 ಲಕ್ಷ ರೂಪಾಯಿ ಕಾರನ್ನು ಚಿಲ್ಲರೆ ಹಣ ಕೊಟ್ಟು ಖರೀದಿಸಿದ್ದರು, ಈ ವಿಡಿಯೋ ನೋಡಿ ಅನೇಕ ಕಾರು ಕಂಪನಿಗಳು ಕರೆ ಮಾಡಿ ಉಚಿತವಾಗಿ ಕಾರು ನೀಡುವುದಾಗಿ ಆಫರ್ ಮಾಡಿದತ್ತಂತೆ. ಮತ್ತೊಂದು ವಿಡಿಯೋದಲ್ಲಿ ತಮ್ಮ ಸಬ್‌ಸ್ಕ್ರೈಬರ್‌ಗೆ ಮಾಲಿನಲ್ಲಿ ಏನು ಬೇಕಿದ್ದರೂ ತೆಗೆದುಕೊಳ್ಳುವಂತೆ ಹೇಳಿದ್ದರು. ಹೀಗೆ ಒಂದೊಂದೆ ವಿಭಿನ್ನ ವಿಡಿಯೋ ಅಪ್ಲೋಡ್ ಮಾಡಿ ಮನೋರಂಜಿಸುತ್ತಿರುತ್ತಾರೆ.
 

click me!