ನಟಿ ರಚಿತಾ ರಾಮ್ ಕಿಡ್ನ್ಯಾಪ್, ಏರ್‌ಪೋರ್ಟ್‌ನಲ್ಲಿ ಸಿಕ್ಕರು ನಟ ರವಿಚಂದ್ರನ್ ಮತ್ತು ಲಕ್ಷ್ಮಿ!

Suvarna News   | Asianet News
Published : Mar 12, 2022, 04:18 PM IST
ನಟಿ ರಚಿತಾ ರಾಮ್ ಕಿಡ್ನ್ಯಾಪ್, ಏರ್‌ಪೋರ್ಟ್‌ನಲ್ಲಿ ಸಿಕ್ಕರು ನಟ ರವಿಚಂದ್ರನ್ ಮತ್ತು ಲಕ್ಷ್ಮಿ!

ಸಾರಾಂಶ

 ವೈರಲ್ ಆಗುತ್ತಿದೆ ರಚಿತಾ ರಾಮ್ ಕಿಡ್ನ್ಯಾಪ್ ವಿಡಿಯೋ. ಮಕ್ಕಳ ಮಾಸ್ಟರ್ ಪ್ಲ್ಯಾನ್ ಹಿಂದಿರುವುದು ಯಾರು ಗೊತ್ತಾ?

ಕಳೆದ ತಿಂಗಳು ಕ್ರೇಜಿ ಸ್ಟಾರ್ ರವಿಂಚ್ರನ್ (Ravichandran) ಅಪಹರಣ ಆಗಿದ್ದ ವಿಡಿಯೋ ವೈರಲ್ ಆಗುತ್ತಿತ್ತು, ಈ ತಿಂಗಳು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅಪರಣ ಆಗಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಯಾರು ಈ ಸ್ಟಾರ್‌ಗಳನ್ನು ಅಪಹರಣ ಮಾಡುತ್ತಿರುವುದು ಎಂದು ಮಾಹಿತಿ ಹುಡುಕಿದಾಗ ಸಿಕ್ಕಿದ್ದು ಮಾಸ್ಟರ್ ಆನಂದ್ (Master Anand) ಆಂಡ್ ಗ್ಯಾಂಗ್. 

ಹೌದು! ಶೀಘ್ರದಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮ ಜ್ಯೂನಿಯರ್ (Drama Juniors) ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಮೊದಲು ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ನಿರೂಪಕ ಮಾಸ್ಟರ್ ಆನಂದ್ ಮತ್ತು ಮಕ್ಕಳು ರವಿಚಂದ್ರನ್‌ನ ಅಪಹರಣ ಮಾಡಿದ್ದರು ಈಗ ಅದೇ ಮಕ್ಕಳು ರಚಿತಾ ರಾಮ್‌ನ ಅಪಹರಣ ಮಾಡಿದ್ದಾರೆ. ಇನ್ನು ನಟಿ ಲಕ್ಷ್ಮಿ (Lakshmi) ಕೂಡಾ ತೀರ್ಪುಗಾರರಾಗಿ ಬರುತ್ತಿದ್ದಾರೆ.  ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂರು ತೀರ್ಪುಗಾರರು ಯಾರೆಂದು ರಿವೀಲ್ ಆಗಿದೆ.  

ಮನೆಯಿಂದ ಸ್ಟುಡಿಯೋಗೆ (Shooting studio) ಚಿತ್ರೀಕರಣಕ್ಕೆಂದು ತೆರಳುವುದಕ್ಕೆ ರಚಿತಾ ಡ್ರೈವರ್‌ಗೆ ಹೇಳುತ್ತಾರೆ. ಆದರೆ ಕಾರಿನಲ್ಲಿ ಆಗಲೇ ಕುಳಿತುಕೊಂಡಿರುವ ಮೂವರು ಮಕ್ಕಳು ಆಕೆಯನ್ನು ವಿಮಾನ ನಿಲ್ದಾಣಕ್ಕೆ (Airport) ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಏನು ಮಾಡಬೇಕು ಎಂದು ತಿಳಿಯದ ರಚಿತಾ ನಾನು ಕಿಡ್ನ್ಯಾಪ್ (Kidnap) ಆಗಿರುವೆ ಸಹಾಯ ಮಾಡಿ ಎಂದು ಕೇಳುತ್ತಾರೆ ಯಾವುದಕ್ಕೂ ಕೇರ್ ಮಾಡದ ಮಕ್ಕಳು  ರಚ್ಚುಗೆ ಒಂದು ವಿಮಾನದ ಟಿಕೆಟ್‌ (Flight ticket) ಕೈಗೆ ಕೊಟ್ಟು ಕಳುಹಿಸುತ್ತಾರೆ. ವಿಮಾನ ಹತ್ತಿದ ಬಳಿ ರಚ್ಚು ಅಲ್ಲಿ ರವಿಚಂದ್ರನ್‌ರನ್ನು ನೋಡುತ್ತಾಳೆ ಆಗ ಇದರ ಹಿಂದಿರುವ ಮಾಸ್ಟರ್ ಪ್ಲ್ಯಾನರ್ ಆನಂದ್ ಎಂದು ತಿಳಿದು ಬರುತ್ತದೆ. 

Rachita Ram ಸ್ಮೋಕ್ ಮಾಡೋದು ನೋಡಿ ಅಭಿಮಾನಿಗಳು ಬೆಚ್ಚು..!

ಮೊದಲ ಬಾರಿ ರಚಿತಾ ರಾಮ್ ಮತ್ತು ರವಿಚಂದ್ರನ್ ಇಬ್ಬರೂ ಮಕ್ಕಳ ಕಾರ್ಯಕ್ರಮಕ್ಕೆ ತೀಪುಗಾರರಾಗಿರುವುದು (Judge). ಹೀಗಾಗಿ ಅವರ ಮಕ್ಕಳ ಜೊತೆ ಹೇಗಿರಲಿದ್ದಾರೆ ಏನೆಲ್ಲಾ ಚಾಲೆಂಜ್ ಕೊಡುತ್ತಾರೆ ಎಂದು ನೋಡುವುದಕ್ಕೆ ಎಲ್ಲರೂ ವೇಟ್ ಮಾಡುತ್ತಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ (Vijay Raghavendra), ಮುಖ್ಯಮಂತ್ರಿ ಚಂದ್ರು (Mukyamantri Chandru) ಮತ್ತು ಲಕ್ಷ್ಮಿ ಅವರು ತೀರ್ಪುಗಾರರಾಗಿದ್ದರು. ಚಿನ್ನಾರಿ ಮುತ್ತ ಕಲರ್ಸ್‌ನಲ್ಲಿ (Colors Kannada) ಪ್ರಸಾರವಾಗುತ್ತಿರುವ ಡಾನ್ಸಿಂಗ್ ಚಾಂಪಿಯನ್ಸ್‌ನಲ್ಲಿ (Dancing Championship) ಜಡ್ಜ್‌ ಆಗಿದ್ದಾರೆ. ಈ ಹಿಂದೆ ನಡೆದ ಮೂರು ಸೀಸನ್‌ಗಳಿಗೆ ಮಾಸ್ಟರ್ ಆನಂದ್‌ ನಿರೂಪಣೆ ಮಾಡಿದ್ದರು, ಈಗಲೂ ಅವರೇ ಮಾಡಲಿದ್ದಾರೆ. 

ನಟ Ravichandran ಕಿಡ್ನಾಪ್, ಲೀಕ್ ಆದ ವಿಡಿಯೋ ವೈರಲ್!

2016ರಲ್ಲಿ ಆರಂಭವಾದ ಡ್ರಾಮಾ ಜ್ಯೂನಿಯರ್ಸ್‌ ಶೋ ಮೊದಲ ಸೀಸನ್‌ನ ಪುಟ್ಟರಾಜ್‌ ಹೂಗಾರ್‌ ವಿಜೇತರಾಗಿದ್ದರು. ಎರಡನೇ ಸೀಸನ್‌ನ ಅಮಿತ್ ಮತ್ತು ವಂಶಿ ಪಡೆದರು ಮತ್ತು ಮೂರನೇ ಸೀಸನ್‌ನಲ್ಲಿ ಸ್ವಾತಿ ಟ್ರೋಫಿ ಗೆದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!